1. ಸಂಸದರ ಸಭೆಯಲ್ಲಿ ಸಿದ್ದರಾಮಯ್ಯ- ಪ್ರಹ್ಲಾದ್ ಜೋಶಿ ಜಟಾಪಟಿ; ಮೋದಿಯನ್ನು ಎಳೆಯಬೇಡಿ ಎಂದ ಜೋಶಿ
ನವ ದೆಹಲಿ: ಕಾವೇರಿ ನೀರು ಹಂಚಿಕೆ (Cauvery dispute) ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರದ ಸಚಿವರು, ಸರ್ವ ಪಕ್ಷ ಸಂಸತ್ ಸದಸ್ಯರ ಸಭೆಯಲ್ಲಿ (All parties MPs meet) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ನಡುವೆ ಜಟಾಪಟಿ ನಡೆಯಿತು. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರೆ ಜೋಶಿ ಅವರು ಪ್ರಧಾನಿಯನ್ನು ಎಳೆಯಬೇಡಿ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಮೋದಿ ಮಧ್ಯಪ್ರವೇಶಕ್ಕೆ ಮನವಿ, CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಸಿಎಂ ಸಿದ್ದರಾಮಯ್ಯ
ಕಾವೇರಿ ಪರ ಧ್ವನಿ ಎತ್ತಿದ ಸ್ಟಾರ್ ನಟರು; ದರ್ಶನ್, ಸುದೀಪ್ ಹೇಳಿದ್ದೇನು?
2. ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್; 454 ಸಂಸದರ ಬೆಂಬಲ!
ನವದೆಹಲಿ: ಹೊಸ ಸಂಸತ್ ಭವನದಲ್ಲಿ (New Parliament Building) ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಲೋಕಸಭೆಯು ಬುಧವಾರ (Lok Sabha) ಮಹಿಳಾ ಮೀಸಲು (ನಾರಿ ಶಕ್ತಿ ವಂದನ್ ಅಧಿನಿಯಮ್) ವಿಧೇಯಕಕ್ಕೆ (Women’s Reservation Bill) ತನ್ನ ಒಪ್ಪಿಗೆಯನ್ನು ನೀಡಿದೆ. ಈ ಮಹಿಳಾ ಮೀಸಲು ಜಾರಿಯಾದ ಬಳಿಕ ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ದೊರೆಯಲಿದೆ. ಇದಕ್ಕೊ ಮೊದಲು ಎರಡು ದಿನಗಳ ಕಾಲ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಈ ಮಹಿಳಾ ಮೀಸಲು ವಿಧೇಯಕ ಕುರಿತು ವ್ಯಾಪಕ ಚರ್ಚೆ ನಡೆಸಿದವು. ಮಹಿಳಾ ಮೀಸಲು ವಿಧೇಯಕದ ಪರ 454 ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ವಿರುದ್ಧ ಮತ ಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಎಸ್ಸಿ, ಎಸ್ಟಿ, ಒಬಿಸಿ ಮೀಸಲಿಗೆ ಸೋನಿಯಾ ಪಟ್ಟು! ಮುಸ್ಲಿಮರಿಗೆ ಮೀಸಲಿಲ್ಲ ಎಂದ ಇರಾನಿ
3. ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್ ಪಾಲಿಟಿಕ್ಸ್; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ವರುಣ ಕ್ಷೇತ್ರದಲ್ಲಿ (Varuna Assembly Constituency) ಕುಕ್ಕರ್ ಹಂಚಿಕೆ (Cooker Distribution) ಆಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈ ಬಗ್ಗೆ ಇರುವ ಆರೋಪಕ್ಕೆ ಇದು ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಅಲ್ಲದೆ, ಪ್ರತಿಪಕ್ಷ ಬಿಜೆಪಿ ಈ ಸಂಬಂಧ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದೆ. ಇನ್ನು ಗ್ಯಾರಂಟಿ ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು (Congress Government) ವಜಾ ಮಾಡುವಂತೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೀಗ ಗಿಫ್ಟ್ ಪಾಲಿಟಿಕ್ಸ್ (Gift Politics) ಸಾಕಷ್ಟು ಸದ್ದು ಮಾಡುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಗಿಫ್ಟ್ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ
4. ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ
ನವದೆಹಲಿ: “ಭಾರತ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ಕೊಡದಿರಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದೇ ಮಾತಿಗೆ ಕುಪಿತಗೊಂಡಿರುವ ಕೆನಡಾದ ಉಪಟಳಗಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಕೆನಡಾದಲ್ಲಿರುವ ಭಾರತದ ರಾಯಭಾರಿಯ ಉಚ್ಚಾಟನೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾ ರಾಯಭಾರಿಯ ಉಚ್ಚಾಟನೆ ಸೇರಿ ಕೆನಡಾ ಕೃತ್ಯಗಳಿಗೆ ಸರಿಯಾದ ಪ್ರತ್ಯುತ್ತರ (India Canada Row) ನೀಡುತ್ತಿದೆ. ಈಗ ಕೆನಡಾದ ಟ್ರಾವೆಲ್ ಅಡ್ವೈಸರಿಗೆ ಪ್ರತಿಯಾಗಿ ಭಾರತ ಕೂಡ ಕೆನಡಾದಲ್ಲಿರುವ ಭಾರತೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಟ್ರಾವೆಲ್ ಅಡ್ವೈಸರಿ (Travel Advisory) ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. 3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಈ ಸರ್ಕಾರ ಉಳಿಯಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮೂರು ಡಿಸಿಎಂ ಹುದ್ದೆ ಸೃಷ್ಟಿಯ (Three Deputy CM posts created) ಅನಿವಾರ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಇದರ ಅಗತ್ಯತೆ ಇದೆ. ಒಂದು ವೇಳೆ ಕಡಿಮೆ ಲೋಕಸಭಾ ಸ್ಥಾನವನ್ನು ಗೆದ್ದರೆ ರಾಜ್ಯದಲ್ಲಿ ಅಭದ್ರ ಸರ್ಕಾರ ಉಂಟಾಗುತ್ತದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಈ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಒಳರಾಜಕೀಯದಲ್ಲಿ (Congress Politics) ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಏಕ ದಿನ ವಿಶ್ವ ಕಪ್ನ ಅಧಿಕೃತ ಗೀತೆ ಬಿಡುಗಡೆ; ಇಲ್ಲಿದೆ ಹಾಡಿನ ಸಂಪೂರ್ಣ ವಿವರ
ಈ ಸುದ್ದಿಯನ್ನೂ ಓದಿ: ವಿಶ್ವ ಕಪ್ಗೆ ಭಾರತ ತಂಡದ ಜೆರ್ಸಿ ಅನಾವರಣ; ಏನೇನು ಬದಲಾವಣೆಗಳಿವೆ?
ನ್ಯೂಯಾರ್ಕ್ ನಗರದಲ್ಲಿ ಭಾರತ- ಪಾಕ್ ಟಿ20 ವಿಶ್ವ ಕಪ್ ಪಂದ್ಯ, ಅದ್ಯಾಕೆ ಅಲ್ಲಿ?
7. ಹಾಲಶ್ರೀ ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ; ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತಾ?
8. ಅಂಬಾನಿ ಮನೆಯ ಗಣೇಶ ಪೂಜೆಯಲ್ಲಿ ಸೆಲೆಬ್ರಿಟಿಗಳ ದಂಡು ; ಶಾರುಖ್ ಪ್ರಮುಖ ಆಕರ್ಷಣೆ
9. ದೇಶದಲ್ಲಿ 500 ಕೋಟಿ ರೂ. ದಾಟಿದ ಜವಾನ್ ಕಲೆಕ್ಷನ್; ಕೆಜಿಎಫ್ 2 ದಾಖಲೆ ಉಡೀಸ್
10. ಪಾಕ್ ಭಿಕ್ಷೆ ಬೇಡುತ್ತಿದ್ದರೆ ಭಾರತ ಚಂದ್ರಯಾನ ಕೈಗೊಂಡಿದೆ; ನವಾಜ್ ಷರೀಫ್ ಅಳಲು
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ