VISTARA TOP 10 NEWS : ಸಂಸದರ ಸಭೆಯಲ್ಲಿ ಸಿದ್ದು- ಜೋಶಿ ಜಟಾಪಟಿ, ಮಹಿಳಾ ಮೀಸಲು ವಿಧೇಯಕ ಪಾಸ್​ ಇತರ ದಿನದ ಪ್ರಮುಖ ಸುದ್ದಿಗಳು - Vistara News

ಕ್ರೀಡೆ

VISTARA TOP 10 NEWS : ಸಂಸದರ ಸಭೆಯಲ್ಲಿ ಸಿದ್ದು- ಜೋಶಿ ಜಟಾಪಟಿ, ಮಹಿಳಾ ಮೀಸಲು ವಿಧೇಯಕ ಪಾಸ್​ ಇತರ ದಿನದ ಪ್ರಮುಖ ಸುದ್ದಿಗಳು

VISTARA TOP 10 NEWS : ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆ ಕೇಂದ್ರದ ಸಚಿವರು, ಸರ್ವ ಪಕ್ಷ ಸಂಸತ್ ಸದಸ್ಯರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ನಡುವೆ ಜಟಾಪಟಿ ನಡೆದೆ. ಇದೂ ಸೇರಿದಂತೆ ಇನ್ನೂ ಹಲವು ಸುದ್ದಿಗಳಿವೆ.

VISTARANEWS.COM


on

Top 10 news today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. ಸಂಸದರ ಸಭೆಯಲ್ಲಿ ಸಿದ್ದರಾಮಯ್ಯ- ಪ್ರಹ್ಲಾದ್‌ ಜೋಶಿ ಜಟಾಪಟಿ; ಮೋದಿಯನ್ನು ಎಳೆಯಬೇಡಿ ಎಂದ ಜೋಶಿ
ನವ ದೆಹಲಿ: ಕಾವೇರಿ ನೀರು ಹಂಚಿಕೆ (Cauvery dispute) ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರದ ಸಚಿವರು, ಸರ್ವ ಪಕ್ಷ ಸಂಸತ್ ಸದಸ್ಯರ ಸಭೆಯಲ್ಲಿ (All parties MPs meet) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ನಡುವೆ ಜಟಾಪಟಿ ನಡೆಯಿತು. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರೆ ಜೋಶಿ ಅವರು ಪ್ರಧಾನಿಯನ್ನು ಎಳೆಯಬೇಡಿ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : ಮೋದಿ ಮಧ್ಯಪ್ರವೇಶಕ್ಕೆ ಮನವಿ, CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಸಿಎಂ ಸಿದ್ದರಾಮಯ್ಯ
ಕಾವೇರಿ ಪರ ಧ್ವನಿ ಎತ್ತಿದ ಸ್ಟಾರ್‌ ನಟರು; ದರ್ಶನ್‌, ಸುದೀಪ್‌ ಹೇಳಿದ್ದೇನು?

2. ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್; 454 ಸಂಸದರ ಬೆಂಬಲ!
ನವದೆಹಲಿ: ಹೊಸ ಸಂಸತ್ ಭವನದಲ್ಲಿ (New Parliament Building) ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಲೋಕಸಭೆಯು ಬುಧವಾರ (Lok Sabha) ಮಹಿಳಾ ಮೀಸಲು (ನಾರಿ ಶಕ್ತಿ ವಂದನ್ ಅಧಿನಿಯಮ್) ವಿಧೇಯಕಕ್ಕೆ (Women’s Reservation Bill) ತನ್ನ ಒಪ್ಪಿಗೆಯನ್ನು ನೀಡಿದೆ. ಈ ಮಹಿಳಾ ಮೀಸಲು ಜಾರಿಯಾದ ಬಳಿಕ ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ದೊರೆಯಲಿದೆ. ಇದಕ್ಕೊ ಮೊದಲು ಎರಡು ದಿನಗಳ ಕಾಲ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಈ ಮಹಿಳಾ ಮೀಸಲು ವಿಧೇಯಕ ಕುರಿತು ವ್ಯಾಪಕ ಚರ್ಚೆ ನಡೆಸಿದವು. ಮಹಿಳಾ ಮೀಸಲು ವಿಧೇಯಕದ ಪರ 454 ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ವಿರುದ್ಧ ಮತ ಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : ಎಸ್ಸಿ, ಎಸ್ಟಿ, ಒಬಿಸಿ ಮೀಸಲಿಗೆ ಸೋನಿಯಾ ಪಟ್ಟು! ಮುಸ್ಲಿಮರಿಗೆ ಮೀಸಲಿಲ್ಲ ಎಂದ ಇರಾನಿ

3. ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್‌ ಪಾಲಿಟಿಕ್ಸ್‌; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ವರುಣ ಕ್ಷೇತ್ರದಲ್ಲಿ (Varuna Assembly Constituency) ಕುಕ್ಕರ್‌ ಹಂಚಿಕೆ (Cooker Distribution) ಆಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈ ಬಗ್ಗೆ ಇರುವ ಆರೋಪಕ್ಕೆ ಇದು ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಅಲ್ಲದೆ, ಪ್ರತಿಪಕ್ಷ ಬಿಜೆಪಿ ಈ ಸಂಬಂಧ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದೆ. ಇನ್ನು ಗ್ಯಾರಂಟಿ ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವನ್ನು (Congress Government) ವಜಾ ಮಾಡುವಂತೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೀಗ ಗಿಫ್ಟ್‌ ಪಾಲಿಟಿಕ್ಸ್‌ (Gift Politics) ಸಾಕಷ್ಟು ಸದ್ದು ಮಾಡುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಗಿಫ್ಟ್‌ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ

4. ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ
ನವದೆಹಲಿ: “ಭಾರತ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ಕೊಡದಿರಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದೇ ಮಾತಿಗೆ ಕುಪಿತಗೊಂಡಿರುವ ಕೆನಡಾದ ಉಪಟಳಗಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಕೆನಡಾದಲ್ಲಿರುವ ಭಾರತದ ರಾಯಭಾರಿಯ ಉಚ್ಚಾಟನೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾ ರಾಯಭಾರಿಯ ಉಚ್ಚಾಟನೆ ಸೇರಿ ಕೆನಡಾ ಕೃತ್ಯಗಳಿಗೆ ಸರಿಯಾದ ಪ್ರತ್ಯುತ್ತರ (India Canada Row) ನೀಡುತ್ತಿದೆ. ಈಗ ಕೆನಡಾದ ಟ್ರಾವೆಲ್‌ ಅಡ್ವೈಸರಿಗೆ ಪ್ರತಿಯಾಗಿ ಭಾರತ ಕೂಡ ಕೆನಡಾದಲ್ಲಿರುವ ಭಾರತೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಟ್ರಾವೆಲ್‌ ಅಡ್ವೈಸರಿ (Travel Advisory) ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. 3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಈ ಸರ್ಕಾರ ಉಳಿಯಲ್ಲ: ಕೆ.ಎನ್.‌ ರಾಜಣ್ಣ ಸ್ಫೋಟಕ ಹೇಳಿಕೆ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ (Congress Government) ಮೂರು ಡಿಸಿಎಂ ಹುದ್ದೆ ಸೃಷ್ಟಿಯ (Three Deputy CM posts created) ಅನಿವಾರ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಇದರ ಅಗತ್ಯತೆ ಇದೆ. ಒಂದು ವೇಳೆ ಕಡಿಮೆ ಲೋಕಸಭಾ ಸ್ಥಾನವನ್ನು ಗೆದ್ದರೆ ರಾಜ್ಯದಲ್ಲಿ ಅಭದ್ರ ಸರ್ಕಾರ ಉಂಟಾಗುತ್ತದೆ ಎಂದು ಸಚಿವ ಕೆ.ಎನ್.‌ ರಾಜಣ್ಣ (Minister KN Rajanna) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಈ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಒಳರಾಜಕೀಯದಲ್ಲಿ (Congress Politics) ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. ಏಕ ದಿನ ವಿಶ್ವ ಕಪ್​ನ ಅಧಿಕೃತ ಗೀತೆ ಬಿಡುಗಡೆ; ಇಲ್ಲಿದೆ ಹಾಡಿನ ಸಂಪೂರ್ಣ ವಿವರ
ಈ ಸುದ್ದಿಯನ್ನೂ ಓದಿ: ವಿಶ್ವ ಕಪ್​ಗೆ ಭಾರತ ತಂಡದ ಜೆರ್ಸಿ ಅನಾವರಣ; ಏನೇನು ಬದಲಾವಣೆಗಳಿವೆ​​?
ನ್ಯೂಯಾರ್ಕ್​ ನಗರದಲ್ಲಿ ಭಾರತ- ಪಾಕ್​ ಟಿ20 ವಿಶ್ವ ಕಪ್ ಪಂದ್ಯ, ಅದ್ಯಾಕೆ ಅಲ್ಲಿ?

7. ಹಾಲಶ್ರೀ ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ; ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತಾ?

8. ಅಂಬಾನಿ ಮನೆಯ ಗಣೇಶ ಪೂಜೆಯಲ್ಲಿ ಸೆಲೆಬ್ರಿಟಿಗಳ ದಂಡು ​; ಶಾರುಖ್​ ಪ್ರಮುಖ ಆಕರ್ಷಣೆ

9. ದೇಶದಲ್ಲಿ 500 ಕೋಟಿ ರೂ. ದಾಟಿದ ಜವಾನ್‌ ಕಲೆಕ್ಷನ್‌; ಕೆಜಿಎಫ್‌ 2 ದಾಖಲೆ ಉಡೀಸ್

10. ಪಾಕ್‌ ಭಿಕ್ಷೆ ಬೇಡುತ್ತಿದ್ದರೆ ಭಾರತ ಚಂದ್ರಯಾನ ಕೈಗೊಂಡಿದೆ; ನವಾಜ್‌ ಷರೀಫ್‌ ಅಳಲು
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ವೈರಲ್ ನ್ಯೂಸ್

Deepfake Video: ಶುಬ್ ಮನ್ ಗಿಲ್ ಅನ್ನು ದೂಷಿಸಿದ ವಿರಾಟ್; ಡೀಪ್ ಫೇಕ್ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿಯ ಡೀಪ್ ಫೇಕ್ ವಿಡಿಯೋದಲ್ಲಿ (Deepfake Video) ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.

VISTARANEWS.COM


on

By

Deepfake Video
Koo

ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ (Indian cricket team batsman) ಶುಬ್ ಮನ್ ಗಿಲ್ (Shubman Gill) ಅವರನ್ನು ವಿರಾಟ್ ಕೊಹ್ಲಿ (Virat Kohli) ದೂಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social food) ಭಾರಿ ವೈರಲ್ ಆಗಿದೆ. ಆದರೆ ಇದು ಡೀಪ್ ಫೇಕ್ ವಿಡಿಯೋ (Deepfake Video) ಎನ್ನಲಾಗಿದ್ದರೂ ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿಯು ಈ ಡೀಪ್ ಫೇಕ್ ವಿಡಿಯೋದಲ್ಲಿ ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯು ಮಾತನಾಡುತ್ತಾ, ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ಕೃತಕ ಬುದ್ಧಿಮತ್ತೆಯ ತಪ್ಪು ಬಳಕೆ ಮತ್ತು ಅದು ಹೇಗೆ ಅಪಾಯಕಾರಿ ಎಂಬುದರ ಕುರಿತು ಕಳವಳ ವ್ಯಕ್ತಪಡಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಗಮನ ಸೆಳೆದಿರುವ ಎಡಿಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿಯು, ನಾನು ಗಿಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರು ನಿಸ್ಸಂದೇಹವಾಗಿ ಪ್ರತಿಭಾವಂತರು. ಆದರೆ ಭರವಸೆಯನ್ನು ತೋರಿಸುವುದು ಮತ್ತು ದಂತಕಥೆಯಾಗುವುದರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದ್ದಾರೆ.


ಇದಲ್ಲದೆ, ಎಡಿಟ್ ಮಾಡಿರುವ ವಿಡಿಯೋದಲ್ಲಿ ನಾಯಕ ಗಿಲ್ ಅವರ ತಂತ್ರದ ಬಗ್ಗೆ ಕೊಹ್ಲಿ ಮಾತನಾಡುವುದನ್ನು ಕಾಣಬಹುದು. ಗಿಲ್ ಅವರ ತಂತ್ರವು ಘನವಾಗಿದೆ. ಆದರೆ ನಾವೇ ಮುಂದೆ ಹೋಗಬಾರದು. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ.. ಒಬ್ಬನೇ ವಿರಾಟ್ ಕೊಹ್ಲಿ.

ಈ ವಿಡಿಯೋವನ್ನು ಆಗಸ್ಟ್ 27 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 4,000 ಹೆಚ್ಚು ಲೈಕ್‌ಗಳನ್ನು ಹೊಂದಿದೆ. ಅನೇಕ ಜನರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Duleep Trophy: ದುಲೀಪ್​ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್

ಒಬ್ಬ ಬಳಕೆದಾರ, ಜನರು ಎಷ್ಟೇ ಸೊಕ್ಕಿನವರಾಗಿರಬಹುದು ಆದರೆ ಅವರು ಇದನ್ನು ಎಂದಿಗೂ ಹೇಳುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು , ನೀವು ಎಐ ಎಂದು ಹೇಳದಿದ್ದರೆ, ನಾನು ಶೇ. 95ರಷ್ಟು ನಂಬುತ್ತಿದ್ದೆ ಎಂದಿದ್ದಾರೆ.

ನಾನು ಅರೆ ನಿದ್ದೆಯಲ್ಲಿದ್ದೇನೆ ಮತ್ತು ವಿರಾಟ್ ಈ ರೀತಿ ಮಾತನಾಡುವುದಿಲ್ಲ ಮತ್ತು ಇದು ಅವರ ಧ್ವನಿಯೂ ಅಲ್ಲ ಎಂದು ನನಗೆ ಇನ್ನೂ ತಿಳಿದಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Continue Reading

ಕ್ರೀಡೆ

Duleep Trophy: ದುಲೀಪ್​ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್

Duleep Trophy: ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

VISTARANEWS.COM


on

Duleep Trophy
Koo

ಮುಂಬಯಿ: ದುಲೀಪ್​ ಟ್ರೋಫಿ(Duleep Trophy) ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(mohammed siraj) ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜಾ(Ravindra Jadeja) ಅವರನ್ನು ಭಾರತ ‘ಬಿ’ ತಂಡದಿಂದ ಬಿಡುಗಡೆ ಮಾಡಲಾಗಿದೆ.

ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ಬದಲಿಗೆ ಮಧ್ಯಪ್ರದೇಶದ ಮಧ್ಯಮ ವೇಗಿ ಗೌರವ್ ಯಾದವ್ ಭಾರತ ‘ಸಿ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರನನ್ನ ಹೆಸರಿಸಲಾಗಿಲ್ಲ. ಜಡೇಜಾ ದುಲೀಪ್ ಟ್ರೋಫಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿ ಬಳಿಕ ಬಾಂಗ್ಲಾದೇಶ ಟೆಸ್ಟ್​ ಸರಣಿಗೆ ಮುಂಚಿತವಾಗಿ ಭಾರತ ಶಿಬಿರಕ್ಕೆ ತೆರಳಬೇಕಿತ್ತು. ಆದರೆ ಬಿಸಿಸಿಐ ಅವರಿಗೆ ಕೊನೆಯ ಕ್ಷಣದಲ್ಲಿ ವಿಶ್ರಾಂತಿ ನೀಡಿದೆ. ಭಾರತ ‘ಎ’ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದರೆ, ‘ಡಿ’ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.

ಭಾರತ ‘ಎ’ ತಂಡ


ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ , ಶಾಶ್ವತ್ ರಾವತ್.

ಭಾರತ ‘ಬಿ’ ತಂಡ


ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿ.ಕೀ), ಮುಷೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ (ಫಿಟ್‌ನೆಸ್‌ ಟೆಸ್ಟ್‌ ಅವಲಂಬನೆ), ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಆವಸ್ತಿ, ಎನ್ ಜಗದೀಸನ್ (ವಿ.ಕೀ)

ಇದನ್ನೂ ಓದಿ Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

ಭಾರತ ‘ಸಿ’ ತಂಡ


ಋತುರಾಜ್ ಗಾಯಕ್ವಾಡ್​ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಗೌರವ್ ಯಾದವ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಂಡೆ, ಆರ್ಯನ್‌ ಜುಯೆಲ್‌ (ವಿ.ಕೀ), ಸಂದೀಪ್ ವಾರಿಯರ್.

ಭಾರತ ‘ಡಿ’ ತಂಡ

ಶ್ರೇಯಸ್ ಅಯ್ಯರ್​ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ (ವಿಕೆಟ್‌ ಕೀಪರ್), ಸೌರಭ್ ಕುಮಾರ್.

Continue Reading

ಕ್ರೀಡೆ

IPL 2025: ಮುಂಬೈ ಇಂಡಿಯನ್ಸ್​ಗೆ ನೂತನ ನಾಯಕ; ಪೋಸ್ಟರ್​ ಬಿಡುಗಡೆ ಮಾಡಿದ ಫ್ರಾಂಚೈಸಿ

IPL 2025: ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

VISTARANEWS.COM


on

Jasprit Bumrah
Koo

ಮುಂಬಯಿ: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ಮುಂಬರುವ ಐಪಿಎಲ್​ ಆವೃತ್ತಿಗೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಲು ಮುಂದಾಗಿದೆ. ಇದರ ಸುಳಿವನ್ನು ಸ್ವತಃ ಫ್ರಾಂಚೈಸಿಯೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟುಕೊಟ್ಟಿದೆ. ಹೌದು, ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದಂತಿದೆ. ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದೆ. ಹೀಗಾಗಿ ಬುಮ್ರಾ ನಾಯಕನಾಗುವುದು ಖಚಿತ ಎನ್ನುವಂತಿದೆ. ಇದಕ್ಕೆ ಅಧಿಕೃತ ಮುದ್ರೆಯೊಂದು ಬೀಳಲು ಮಾತ್ರ ಬಾಕಿ ಇದೆ.

ಕಳೆದ ಬಾರಿ ರೋಹಿತ್​ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ(Hardik Pandya)ಗೆ ನಾಯಕತ್ ಪಟ್ಟ ನೀಡಲಾಗಿತ್ತು. ಆದರೆ, ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಎಂದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯ ನಾಯಕನಾಗುವ ಬಗ್ಗೆ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಫ್ರಾಂಚೈಸಿಯೇ ಅವರನ್ನು ಸಮಾಧಾನಪಡಿಸಿತ್ತು. ಇದೀಗ ಬುಮ್ರಾ ಅವರನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಬುಮ್ರಾ ಕಾರ್ಯವೈಖರಿ ಬಗ್ಗೆಯೂ ಸಹ ಆಟಗಾರರಿಗೆ ಸಮಧಾನವಿದೆ. ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

ಜಸ್​ಪ್ರೀತ್​ ಬುಮ್ರಾ ಅವರು ಇದುವರೆಗೆ 133 ಐಪಿಎಲ್​ ಆಡಿದ್ದು 165 ವಿಕೆಟ್​ ಕೆಡವಿದ್ದಾರೆ. 2013ರಲ್ಲಿ ಮುಂಬೈ ತಂಡದ ಪರ ಐಪಿಎಲ್​ ಪದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ ಮುಂಬೈ ಪರವೇ ಆಡುತ್ತಿದ್ದಾರೆ.

ಇದನ್ನೂ ಓದಿ IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

ಸೂರ್ಯಕುಮಾರ್​ ಯಾದವ್​ಗೆ ಹಾಲಿ ಚಾಂಪಿಯನ್​ ಕೆಕೆಆರ್(KKR)​ ತಂಡದಿಂದ ನಾಯಕತ್ವದ ಆಫರ್​ ಬಂದಿದೆ ಎಂದು ವರದಿಯಾಗಿದೆ. ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್​ ಚಾಂಪಿಯನ್​ ಕೂಡ ಆಗಿತ್ತು. ಗೌತಮ್​ ಗಂಭೀರ್​ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್​ ಕೆಕೆಆರ್​ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್​ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

Continue Reading

ಕ್ರೀಡೆ

Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

Natasa Stankovic: ನತಾಶಾ ಅವರ ಈ ಪೋಸ್ಟ್ ನೋಡುವಾಗ ಪಾಂಡ್ಯ ಅವರು ನತಾಶ ಜತೆಗೆ ಸರಿಯಾಗಿ ಸಂವಹನ ಮತ್ತು ಅವರನ್ನು ಕೇರ್​ ಮಾಡುತ್ತಿರಲಿಲ್ಲ ಎನ್ನುವಂತಿದೆ.

VISTARANEWS.COM


on

Natasa Stankovic
Koo

ಲಂಡನ್​: ಜುಲೈನಲ್ಲಿ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ(Hardik Pandya) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಆದರೆ, ಈ ಜೋಡಿಯ ವಿಚ್ಛೇದನಕ್ಕೆ ಏನು ಕಾರಣವಿರಬಹುದೆಂದು ಎಂಬ ಬಗ್ಗೆ ನಿರಂತರ ಊಹಾಪೋಹಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಇದೀಗ ನತಾಶ ಅವರೇ ತಮ್ಮ ವಿಚ್ಛೇದನಕ್ಕೆ ಕಾರಣ ಏನೆಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಮಾಡಿರುವ ನತಾಶ, “ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿ ಎನ್ನುವುದು ಬೇಡಿಕೆಯ ವಸ್ತು ಆಗಬಾರದು. ಪ್ರೀತಿ ಎನ್ನುವುದು ರಕ್ಷಣೆ ನೀಡಬೇಕು. ನಿಜವಾದ ಪ್ರೀತಿ ಎಂದಿಗೂ ಸುಳ್ಳಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Natasa Stankovic : ‘ಹೊಸ ಹೆಸರನ್ನು ಪಡೆಯುತ್ತಿದ್ದೇನೆ’; ಕುತೂಹಲ ಮೂಡಿಸಿದ ನತಾಶಾ ಸ್ಟಾಂಕೊವಿಕ್​ ಹೊಸ ಪೋಸ್ಟ್​​​

ನತಾಶಾ ಅವರ ಈ ಪೋಸ್ಟ್ ನೋಡುವಾಗ ಪಾಂಡ್ಯ ಅವರು ನತಾಶ ಜತೆಗೆ ಸರಿಯಾಗಿ ಸಂವಹನ ಮತ್ತು ಅವರನ್ನು ಕೇರ್​ ಮಾಡುತ್ತಿರಲಿಲ್ಲ ಎನ್ನುವಂತಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ಅವರ ಕೆಲ ನಡುವಳಿಕೆ ಕೂಡ ಇಷ್ಟವಾಗದೇ ಅದನ್ನು ಸರಿಪಡಿಸಿಕೊಳ್ಳಲು ಹೇಳಿದ್ದರೂ ಪಾಂಡ್ಯ ಇದನ್ನು ಪಾಲಿಸಲು ನಿರಾಕರಿಸಿರಬಹುದು ಇದೇ ಕಾರಣಕ್ಕೆ ಇವರಿಬ್ಬರು ಬೇರೆಯಾದರು ಎನ್ನುವಂತಿದೆ.

ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿತ್ತು. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು ಎಂದು ಆಪ್ತ ಮೂಲಗಳು ತಿಳಿಸಿತ್ತು. ಇದೀಗ ನತಾಶ ಕೂಡ ಪ್ರೀತಿಯ ಬಗ್ಗೆ ಬರೆದುಕೊಂಡಿರುವುದನ್ನು ನೋಡುವಾಗ ಆಪ್ತ ಮೂಲಗಳು ನೀಡಿದ ಮಾಹಿತಿ ಸತ್ಯ ಎನ್ನುವಂತಿದೆ.


ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದಾರೆ.

Continue Reading
Advertisement
Actor darshan
ಪ್ರಮುಖ ಸುದ್ದಿ9 ಗಂಟೆಗಳು ago

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

KEA UGCET 2024
ಬೆಂಗಳೂರು10 ಗಂಟೆಗಳು ago

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

ಚಿಕ್ಕೋಡಿ10 ಗಂಟೆಗಳು ago

Physical Abuse: ಬಾಲಕಿಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದಿದ್ದ ನೀಚನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌

BBMP plans to make arrangements for food in areas where stray dogs do not get food
ಬೆಂಗಳೂರು11 ಗಂಟೆಗಳು ago

Street Dogs : ಬೀದಿನಾಯಿಗಳ ಹಸಿವು ನೀಗಿಸಲು ಮುಂದಾದ ಬಿಬಿಎಂಪಿ; ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ

Cm Siddaramaiah
ಬೆಂಗಳೂರು11 ಗಂಟೆಗಳು ago

CM Siddaramaiah : ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

Mahalaya Amavasya on Gandhi Jayanti Poultry Association demands withdrawal of ban on sale of meat
ಬೆಂಗಳೂರು12 ಗಂಟೆಗಳು ago

Mahalaya Amavasya 2024: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ; ಮಾಂಸ ಮಾರಾಟ ನಿಷೇಧ ಹಿಂಪಡೆಯುವಂತೆ ಒತ್ತಾಯ

Road Accident
ಬೆಂಗಳೂರು13 ಗಂಟೆಗಳು ago

Road Accident : ಆಟೋಗೆ ಲೋಡ್‌ ತುಂಬಿದ್ದ ಲಾರಿ ಡಿಕ್ಕಿ; ಚಾಲಕನ ನಿದ್ರೆ ಮಂಪರಿಗೆ ಜೀವ ಬಿಟ್ಟಳು ಯುವತಿ

Techie robbery plans to delete her photo video from lovers mobile phone
ಬೆಂಗಳೂರು14 ಗಂಟೆಗಳು ago

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Hopcoms store loses charm in Bengaluru
ಬೆಂಗಳೂರು15 ಗಂಟೆಗಳು ago

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

fire accident
ಬೆಂಗಳೂರು ಗ್ರಾಮಾಂತರ16 ಗಂಟೆಗಳು ago

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌