ಬೆಂಗಳೂರು: ವಿಶ್ವಕಪ್ನ ಮಹಾ ಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಭಾನುವಾರ ನಡೆಯುವ ಫೈನಲ್(India vs Australia Final) ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ(IND vs AUS) ಪ್ರಶಸ್ತಿಗಾಗಿ ಹೋರಾಟ ನಡಸಲಿದೆ. ಇಲ್ಲಿ ಯಾರೇ ಗೆದ್ದರೂ ಮುಂದಿನ 4 ವರ್ಷಗಳ ಕಾಲ ವಿಶ್ವ ಚಾಂಪಿಯನ್ ಪಟ್ಟವನ್ನು ಹೊತ್ತುಕೊಳ್ಳಲಿದ್ದಾರೆ. ಈ ತಂಡ ಯಾವುದು ಎನ್ನುವುದು ಸದ್ಯದ ಕುತೂಹಲ. ಇದಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವಕಪ್ ಅಂಕಿ ಅಂಶದ ಹಿನ್ನೋಟವೊಂದು ಇಲ್ಲಿದೆ.
ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಯಾವುದೆಂದು ಕೇಳಿದರೆ ಇದಕ್ಕೆ ಸಿಗುವ ಉತ್ತರ ಆಸ್ಟ್ರೇಲಿಯಾ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ಎಂಟನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. ಭಾರತದಕ್ಕೆ ಇದು ನಾಲ್ಕನೇ ಫೈನಲ್ ಪಂದ್ಯ ಈ ಹಿಂದೆ ಆಡಿದ ಮೂರು ಫೈನಲ್ಗಳಲ್ಲಿ ಕೇವಲ 2 ಗಲುವು ಒಲಿದಿದೆ. ಒಂದು ಸೋಲು ಕಂಡಿದ್ದು ಆಸೀಸ್ ವಿರುದ್ಧವೇ.
ಇದನ್ನೂ ಓದಿ ಫೈನಲ್ನಲ್ಲಿ ಆಸೀಸ್ 2 ವಿಕೆಟ್‌ಗೆ 450, ಭಾರತ 65ಕ್ಕೆ ಆಲೌಟ್: ಭವಿಷ್ಯ ನುಡಿದ ಮಿಚೆಲ್ ಮಾರ್ಷ್
ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಮುಖಾಮುಖಿ
48 ವರ್ಷಗಳ ಇತಿಹಾಸವುಳ್ಳ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳು ಇದುವರೆ 13 ಸಲ ಎದುರಾಗಿದೆ. ಇದರಲ್ಲಿ ಭಾರತ 5, ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆದ್ದಿದೆ. ನಾಕೌಟ್ ಹಂತದಲ್ಲಿ 3 ಬಾರಿ ಮುಖಾಮುಖಿ ಆಗಿದ್ದು, ಭಾರತ ಒಮ್ಮೆ ಮಾತ್ರ ಗೆದ್ದಿದ್ದರೆ. 2 ಸಲ ಸೋಲು ಕಂಡಿದೆ. ಈ ಬಾರಿ ಫೈನಲ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ.
2003ರಲ್ಲಿ ಮೊದಲ ಫೈನಲ್ ಮುಖಾಮುಖಿ
2003ರ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಭಾರತ ಮತ್ತು ಆಸೀಸ್ 2 ಬಾರಿ ಮುಖಾಮುಖಿಯಾಗಿತ್ತು. ಲೀಗ್ ಹಂತದಲ್ಲಿ ಮತ್ತು ಫೈನಲ್ ಪಂದ್ಯದಲ್ಲಿ. ಆದರೆ ಇಲ್ಲಿ ಎರಡರಲ್ಲೂ ಭಾರತ ಸೋಲು ಕಂಡಿತ್ತು. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 50 ಓವರ್ಗೆ ಕೇವಲ 2 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿತ್ತು. 360 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು. ಸ್ಟಾರ್ ಆಟಗಾರರಾಗಿದ್ದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಬ್ಯಾಟಿಂಗ್ ವೈಫಲ್ಯ ಕಂಡದದು ಸೋಲಿಗೆ ಪ್ರಮುಖ ಕಾರಣವಾಯಿತು. ಭಾರತ 125 ರನ್‌ಗಳಿಂದ ಸೋಲು 2ನೇ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.
2011ರ ಕ್ವಾರ್ಟರ್ ಫೈನಲ್ನಲ್ಲಿ ಭಾರತಕ್ಕೆ ಗೆಲುವು
2003ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ 2011ರ ವಿಶ್ವಕಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಸಚಿನ್ ತೆಂಡೂಲ್ಕರ್(53), ಗೌತಮ್ ಗಂಭೀರ್(50) ಮತ್ತು ಯುವರಾಜ್ ಸಿಂಗ್(57*) ಅವರ ಅರ್ಧಶತಕದ ಸಾಹಸದಿಂದ 47.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಭಾರತ ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಆಸೀಸ್ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತ್ತು.
ಇದನ್ನೂ ಓದಿ ವಿಶ್ವ ಕಿರೀಟಕ್ಕೆ ಇನ್ನೊಂದೆ ಹೆಜ್ಜೆ; ಭಾರತದ 10 ಗೆಲುವಿನ ಸಿಹಿ ಮುತ್ತು ಹೇಗಿತ್ತು?
2015ರ ವಿಶ್ವಕಪ್ನಲ್ಲಿ ಸೇಡು ತೀರಿಸಿಕೊಂಡ ಆಸೀಸ್
2011ರ ಕ್ವಾರ್ಟರ್ ಫೈನಲ್ ಸೋಲನ್ನು ಆಸ್ಟ್ರೇಲಿಯಾ 2015 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ತೀರಿಸಿಕೊಂಡಿತು. ಹಾಲಿ ಚಾಂಪಿಯನ್ ಆಗಿದ್ದ ಭಾರತವನ್ನು ಸೆಮಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ 95 ರನ್‌ಗಳಿಂದ ಮಣಿಸಿ ಫೈನಲ್ ಪ್ರವೆಶಿಸಿತ್ತು. ಅಲ್ಲದೆ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಂಕರಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 328 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಭಾರತ 46.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಕಾತರದಿಂದ ಕಾಯುತ್ತಿದೆ.