ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಾಗೂ ಭಾರತ ಕ್ರಿಕೆಟ್(IND VS PAK) ತಂಡದ ವೇಗಿ ಮೊಹಮ್ಮದ್ ಶಮಿ ಟ್ವೀಟ್ ಕಿತ್ತಾಟ ಕುರಿತಾಗಿ ಪಾಕಿಸ್ತಾನದ ಮಾಜಿ ದಿಗ್ಗಜ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದು, ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ವಿನಂತಿಸಿದ್ದಾರೆ. ಜತೆಗೆ ಉಭಯ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳು ಶಾಂತ ರೀತಿಯ ವರ್ತನೆ ತೋರಬೇಕೆಂದು ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನವೆಂಬರ್ 13ರಂದು ಮೆಲ್ಬೋರ್ನ್ನಲ್ಲಿ ನಡೆದ ಟಿ20 ವಿಶ್ವ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲು ಕಂಡಿತ್ತು. ಪಾಕಿಸ್ತಾನ ಸೋಲುತಿದ್ದಂತೆ ಟೀಮ್ ಇಂಡಿಯಾ ಅಭಿಮಾನಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಪ್ರೀಮಿಗಳ ನಡುವೆ ಟ್ವೀಟರ್ನಲ್ಲಿ ಹಲವಾರು ತಿಕ್ಕಾಟ ನಡೆದಿದೆ. ಈ ವೇಳೆ ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಶೋಯೆಬ್ ಅಖ್ತರ್ ಟ್ವೀಟ್‌ಗೆ ಉತ್ತರಿಸುವ ಮೂಲಕ ಮತ್ತಷ್ಟು ಕಿಡಿ ಹೊತ್ತಿಸಿದರು. ಇದೀಗ ಈ ಟ್ವೀಟ್ ಸಮರದ ಕುರಿತು ಮಾತನಾಡಿದ ವಾಸಿಂ ಅಕ್ರಂ ಈ ತಿಕ್ಕಾಟವನ್ನು ಕೊನೆಗೊಳಿಸುವಂತೆ ಶಮಿ ಮತ್ತು ಅಖ್ತರ್ಗೆ ಮನವಿ ಮಾಡಿದ್ದಾರೆ.
“ಐಸಿಸಿಯಂತಹ ದೊಡ್ಡ ಟೂರ್ನಿಗಳಲ್ಲಿ ಸೋತಾಗ ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳು ಗಾಯಕ್ಕೆ ಉಪ್ಪು ಸವರುವ ಬದಲು ತಟಸ್ಥವಾಗಿರಿ. ‘ನಾವು ಆದಷ್ಟು ತಟಸ್ಥವಾಗಿರಲು ಬಯಸುತ್ತೇವೆ. ಭಾರತೀಯರು ಸಾಕಷ್ಟು ದೇಶಭಕ್ತರು ಎಂಬುದು ತಿಳಿದಿದೆ. ನಾವು ಕೂಡ ನಮ್ಮ ದೇಶದ ಕುರಿತು ಅಭಿಮಾನವನ್ನು ಹೊಂದಿದ್ದೇವೆ. ಸೋಲು ಗೆಲುವು ಎನ್ನುವುದು ಕ್ರೀಡೆಯ ಎಂದು ಭಾಗ. ರಾಜತಾಂತ್ರಿಕವಾಗಿ ಉಭಯ ದೇಶಗಳ ಮಧ್ಯೆ ಹಲವಾರು ಸಮಸ್ಯೆಗಳಿದ್ದರು, ನಾವು ಕ್ರಿಕೆಟಿಗರು ಮತ್ತು ಒಂದೇ ಕುಟುಂಬದವರು. ಆದ್ದರಿಂದ ಆಟಗಾರರೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು” ಎಂದು ವಾಸಿಂ ಅಕ್ರಂ ಅವರು ಶಮಿ ಮತ್ತು ಅಖ್ತರ್ ಟ್ವೀಟ್ ವಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಪಾಕಿಸ್ತಾನ ಸೋತ ಬಳಿಕ ಮೊಹಮ್ಮದ್ ಶಮಿ “ಕ್ಷಮಿಸು ಸಹೋದರ, ಇದನ್ನೇ ಕರ್ಮ ಎಂದು ಕರೆಯುವುದು” ಎಂದು ಶೋಯೆಬ್ ಅಖ್ತರ್ ಅವರ ಟ್ವೀಟ್‌ಗೆ ಟ್ಯಾಗ್ ಮಾಡಿದ್ದರು. ಬಳಿಕ ಶಮಿ ಮತ್ತು ಅಖ್ತರ್ ಅವರ ಈ ಟ್ವೀಟ್ ನಾನಾ ರೀತಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ | MS Dhoni | ಐಸಿಸಿ ಕಪ್ ಗೆಲ್ಲಲು ಮಹೇಂದ್ರ ಸಿಂಗ್ ಧೋನಿ ನೆರವು ಬಯಸಿದ ಬಿಸಿಸಿಐ; ವರದಿ