IND VS PAK | ಟ್ವೀಟ್​ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದು ಯಾರಿಗೆ? - Vistara News

Latest

IND VS PAK | ಟ್ವೀಟ್​ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದು ಯಾರಿಗೆ?

ಮೊಹಮ್ಮದ್​ ಶಮಿ ಮತ್ತು ಶೋಯೆಬ್ ಅಖ್ತರ್ ನಡುವಿನ ಟ್ವೀಟ್​ ಸಮರವನ್ನು ಇಲ್ಲಿಗೆ ಕೊನೆಗೊಳಿಸಿ ಮುಂದಿನ ದಿನಗಳಲ್ಲಿ ಮತ್ತೆ ಮುಂದುವರಿಸಬಾರದು ಎಂದು ಪಾಕಿಸ್ತಾನದ ಮಾಜಿ ದಿಗ್ಗಜ ವಾಸಿಂ ಅಕ್ರಂ ಮನವಿ ಮಾಡಿದ್ದಾರೆ.

VISTARANEWS.COM


on

washim
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಾಗೂ ಭಾರತ ಕ್ರಿಕೆಟ್​(IND VS PAK) ತಂಡದ ವೇಗಿ ಮೊಹಮ್ಮದ್ ಶಮಿ ಟ್ವೀಟ್ ಕಿತ್ತಾಟ ಕುರಿತಾಗಿ ಪಾಕಿಸ್ತಾನದ ಮಾಜಿ ದಿಗ್ಗಜ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದು, ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ವಿನಂತಿಸಿದ್ದಾರೆ. ಜತೆಗೆ ಉಭಯ ರಾಷ್ಟ್ರದ ಕ್ರಿಕೆಟ್​ ಅಭಿಮಾನಿಗಳು ಶಾಂತ ರೀತಿಯ ವರ್ತನೆ ತೋರಬೇಕೆಂದು ಮನವಿ ಮಾಡಿದ್ದಾರೆ.

ಆಸ್ಟ್ರೇಲಿಯಾ ಆತಿಥ್ಯದಲ್ಲಿ ನವೆಂಬರ್ 13ರಂದು ಮೆಲ್ಬೋರ್ನ್​ನಲ್ಲಿ ನಡೆದ ಟಿ20 ವಿಶ್ವ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲು ಕಂಡಿತ್ತು. ಪಾಕಿಸ್ತಾನ ಸೋಲುತಿದ್ದಂತೆ ಟೀಮ್​ ಇಂಡಿಯಾ ಅಭಿಮಾನಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಪ್ರೀಮಿಗಳ ನಡುವೆ ಟ್ವೀಟರ್​ನಲ್ಲಿ ಹಲವಾರು ತಿಕ್ಕಾಟ ನಡೆದಿದೆ. ಈ ವೇಳೆ ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಶೋಯೆಬ್ ಅಖ್ತರ್ ಟ್ವೀಟ್‌ಗೆ ಉತ್ತರಿಸುವ ಮೂಲಕ ಮತ್ತಷ್ಟು ಕಿಡಿ ಹೊತ್ತಿಸಿದರು. ಇದೀಗ ಈ ಟ್ವೀಟ್​ ಸಮರದ ಕುರಿತು ಮಾತನಾಡಿದ ವಾಸಿಂ ಅಕ್ರಂ ಈ ತಿಕ್ಕಾಟವನ್ನು ಕೊನೆಗೊಳಿಸುವಂತೆ ಶಮಿ ಮತ್ತು ಅಖ್ತರ್​ಗೆ ಮನವಿ ಮಾಡಿದ್ದಾರೆ.

“ಐಸಿಸಿಯಂತಹ ದೊಡ್ಡ ಟೂರ್ನಿಗಳಲ್ಲಿ ಸೋತಾಗ ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳು ಗಾಯಕ್ಕೆ ಉಪ್ಪು ಸವರುವ ಬದಲು ತಟಸ್ಥವಾಗಿರಿ. ‘ನಾವು ಆದಷ್ಟು ತಟಸ್ಥವಾಗಿರಲು ಬಯಸುತ್ತೇವೆ. ಭಾರತೀಯರು ಸಾಕಷ್ಟು ದೇಶಭಕ್ತರು ಎಂಬುದು ತಿಳಿದಿದೆ. ನಾವು ಕೂಡ ನಮ್ಮ ದೇಶದ ಕುರಿತು ಅಭಿಮಾನವನ್ನು ಹೊಂದಿದ್ದೇವೆ. ಸೋಲು ಗೆಲುವು ಎನ್ನುವುದು ಕ್ರೀಡೆಯ ಎಂದು ಭಾಗ. ರಾಜತಾಂತ್ರಿಕವಾಗಿ ಉಭಯ ದೇಶಗಳ ಮಧ್ಯೆ ಹಲವಾರು ಸಮಸ್ಯೆಗಳಿದ್ದರು, ನಾವು ಕ್ರಿಕೆಟಿಗರು ಮತ್ತು ಒಂದೇ ಕುಟುಂಬದವರು. ಆದ್ದರಿಂದ ಆಟಗಾರರೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು” ಎಂದು ವಾಸಿಂ ಅಕ್ರಂ ಅವರು ಶಮಿ ಮತ್ತು ಅಖ್ತರ್​ ಟ್ವೀಟ್​ ವಾರ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಫೈನಲ್​ನಲ್ಲಿ ಪಾಕಿಸ್ತಾನ ಸೋತ ಬಳಿಕ ಮೊಹಮ್ಮದ್​ ಶಮಿ “ಕ್ಷಮಿಸು ಸಹೋದರ, ಇದನ್ನೇ ಕರ್ಮ ಎಂದು ಕರೆಯುವುದು” ಎಂದು ಶೋಯೆಬ್‌ ಅಖ್ತರ್‌ ಅವರ ಟ್ವೀಟ್‌ಗೆ ಟ್ಯಾಗ್‌ ಮಾಡಿದ್ದರು. ಬಳಿಕ ಶಮಿ ಮತ್ತು ಅಖ್ತರ್​ ಅವರ ಈ ಟ್ವೀಟ್‌ ನಾನಾ ರೀತಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ | MS Dhoni | ಐಸಿಸಿ ಕಪ್​ ಗೆಲ್ಲಲು ಮಹೇಂದ್ರ ಸಿಂಗ್​ ಧೋನಿ ನೆರವು ಬಯಸಿದ ಬಿಸಿಸಿಐ; ವರದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತ ವೀರ್ ಸಾವರ್ಕರ್ (Veer Savarkar) ಅವರ ಕುರಿತು ನಾವು ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿರುತ್ತೇವೆ. ಆದರೆ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಇನ್ನೂ ಹಲವಾರು ಸಂಗತಿಗಳಿವೆ. ಇಂದು ಮೇ 28 ಅವರ ಜನ್ಮದಿನ. ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ ಹೇಗಿತ್ತು, ಅವರ ಜೀವನದಲ್ಲಿನ ಮಹತ್ವದ ಘಟ್ಟಗಳೇನು ಎಂಬುದರ ಮೇಲಿನ ನೋಟ ಇಲ್ಲಿದೆ.

VISTARANEWS.COM


on

By

Veer Savarkar
Koo

ಮಹಾರಾಷ್ಟ್ರದ ನಾಸಿಕ್‌ನ (nasik) ಭಾಗ್‌ಪುರ ಗ್ರಾಮದಲ್ಲಿ 1883ರ ಮೇ 28ರಂದು ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದ ವೀರ್ ಸಾವರ್ಕರ್ (Veer Savarkar) 1966ರ ಫೆಬ್ರವರಿ 26 ರಂದು ಮುಂಬಯಿನಲ್ಲಿ (mumbai) ಉಪವಾಸ ವ್ರತ ಕೈಗೊಂಡು ಕೊನೆಯುಸಿರೆಳೆದರು. ಈ ನಡುವೆ ಅವರ ಬದುಕಿನ ಪಯಣ ಸಂಪೂರ್ಣವಾಗಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ (freedom fight) ಮೀಸಲಾಗಿತ್ತು.

ಸಾವರ್ಕರ್ ಅವರ ಪೂರ್ಣ ಹೆಸರು ವಿನಾಯಕ ದಾಮೋದರ್ ಸಾವರ್ಕರ್. ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ, ವಕೀಲ, ಸಮಾಜ ಸುಧಾರಕ ಮತ್ತು ಹಿಂದುತ್ವದ ಪ್ರತಿಪಾದಕರಾಗಿದ್ದರು.

ತಂದೆಯ ಹೆಸರು ದಾಮೋದರಪಂತ್ ಸಾವರ್ಕರ್ ಮತ್ತು ತಾಯಿ ರಾಧಾಬಾಯಿ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಸಾವರ್ಕರ್ ಅವರು ಹಿರಿಯ ಸಹೋದರ ಗಣೇಶ್ (ಬಾಬಾರಾವ್) ಅವರಿಂದ ಬಲವಾಗಿ ಪ್ರಭಾವಿತರಾಗಿದ್ದರು.

ಮಹಾರಾಷ್ಟ್ರದ ಪುಣೆಯ ಫರ್ಗುಸನ್ ಕಾಲೇಜಿನಿಂದ ಕಲಾ ಪದವಿ ಪಡೆದ ಅವರು ವಕೀಲ, ರಾಜಕಾರಣಿ, ಬರಹಗಾರ ಮತ್ತು ಕಾರ್ಯಕರ್ತನಾಗಿ ಹೆಸರು ಗಳಿಸಿದ್ದರು.

ವೀರ ಸಾವರ್ಕರ್ ತಮ್ಮ ಜೀವನದ ಹಲವು ವರ್ಷಗಳನ್ನು ಜೈಲುವಾಸದಲ್ಲಿ ಕಳೆದಿದ್ದರು. ಅವರನ್ನು ಬ್ರಿಟಿಷರು ಸೆಲ್ಯುಲಾರ್ ಜೈಲು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ಥಳಾಂತರಿಸಿದ್ದರು.


ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ

ಶೌರ್ಯಕ್ಕೆ ಹೆಸರುವಾಸಿಯಾಗಿದ್ದ ಸಾವರ್ಕರ್ ಗೆ ಇದರಿಂದಲೇ ವೀರ್ ಸಾವರ್ಕರ್ ಎಂಬ ಹೆಸರು ಪಡೆದರು. ಕ್ರಾಂತಿಕಾರಿ ಯುವಕರಾಗಿದ್ದ ಅವರು ಚಿಕ್ಕವರಿದ್ದಾಗ ‘ಮಿತ್ರ ಮೇಳ’ ಎಂಬ ಯುವ ಸಮೂಹವನ್ನು ಆಯೋಜಿಸಿದ್ದರು. ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರಂತಹ ಮೂಲಭೂತ ರಾಜಕೀಯ ನಾಯಕರಿಂದ ಸ್ಫೂರ್ತಿ ಪಡೆದಿದ್ದರು.

ಇಂಗ್ಲೆಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಲು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರು ಸಹಾಯ ಮಾಡಿದರು. ಸಾವರ್ಕರ್ ಅಲ್ಲಿ ‘ಗ್ರೇಸ್ ಇನ್ ಲಾ ಕಾಲೇಜ್’ ಗೆ ಸೇರಿಕೊಂಡು ‘ಇಂಡಿಯಾ ಹೌಸ್’ ನಲ್ಲಿ ಆಶ್ರಯ ಪಡೆದರು. ಇದು ಉತ್ತರ ಲಂಡನ್‌ನಲ್ಲಿ ವಿದ್ಯಾರ್ಥಿಗಳ ನಿವಾಸವಾಗಿತ್ತು. ಲಂಡನ್‌ನಲ್ಲಿ, ವೀರ್ ಸಾವರ್ಕರ್ ಅವರು ತಮ್ಮ ಸಹ ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ‘ಫ್ರೀ ಇಂಡಿಯಾ ಸೊಸೈಟಿ’ ಎಂಬ ಸಂಘಟನೆಯನ್ನು ರಚಿಸಿದರು.

1857ರ ದಂಗೆಯ ರೀತಿಯಲ್ಲಿ ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯವನ್ನು ಪಡೆಯಲು ಗೆರಿಲ್ಲಾ ಯುದ್ಧದ ಬಗ್ಗೆ ಯೋಚಿಸಿದರು. ಅವರು ಬರೆದ “ಭಾರತೀಯ ಸ್ವಾತಂತ್ರ್ಯದ ಯುದ್ಧದ ಇತಿಹಾಸ” ಎಂಬ ಪುಸ್ತಕವನ್ನು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಬಹಳಷ್ಟು ಭಾರತೀಯರನ್ನು ಪ್ರೇರೇಪಿಸಿತು. ಈ ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿದ್ದರೂ ಹಲವಾರು ದೇಶಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸಿತು.


ಜೈಲು ಶಿಕ್ಷೆ ಏಕೆ?

ವೀರ್ ಸಾವರ್ಕರ್ ಅವರ ಹಿರಿಯ ಸಹೋದರ ಮಿಂಟೋ-ಮಾರ್ಲೆ ರಿಫಾರ್ಮ್ ಎಂದು ಕರೆಯಲ್ಪಡುವ ‘ಇಂಡಿಯನ್ ಕೌನ್ಸಿಲ್ ಆಕ್ಟ್ 1909’ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೀರ್ ಸಾವರ್ಕರ್ ಅವರು ಅಪರಾಧದ ಸಂಚು ಹೂಡಿದ್ದಾರೆ ಎಂದು ಆರೋಪಿಸಿ ಅವರನ್ನು ಪ್ಯಾರಿಸ್ ನಲ್ಲಿ ಬಂಧಿಸಿ 50 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಅಲ್ಲಿಂದ ಅವರನ್ನು ಮುಂಬಯಿಗೆ ಕರೆದುಕೊಂಡು ಬಂದು 1911ರ ಜುಲೈ 4ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಕಾಲಾಪಾನಿ ಎಂದು ಪ್ರಸಿದ್ಧವಾದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಯಿತು.

ಅಲ್ಲೂ ಅವರ ರಾಷ್ಟ್ರೀಯ ಸ್ವಾತಂತ್ರ್ಯದ ಉತ್ಸಾಹ ಮುಂದುವರೆಯಿತು. ಅವರು ತಮ್ಮ ಸಹ ಕೈದಿಗಳಿಗೆ ಓದಲು ಮತ್ತು ಬರೆಯಲು ಕಲಿಸಲು ಪ್ರಾರಂಭಿಸಿದರು. ಜೈಲಿನಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆದರು.

ಜೈಲಿನಲ್ಲಿ ಇದ್ದು ಮಾಡಿದ ಕೆಲಸ ಅಮೋಘ

ಜೈಲಿನಲ್ಲಿದ್ದಾಗ ಅವರು ಹಿಂದುತ್ವ ಎಂಬ ಸೈದ್ಧಾಂತಿಕ ಕರಪತ್ರವನ್ನು ಬರೆದರು. ಈ ಕರಪತ್ರದಲ್ಲಿ ಅವರು ಹಿಂದೂವನ್ನು ‘ಭಾರತವರ್ಷ’ (ಭಾರತ) ದ ದೇಶಭಕ್ತ ಮತ್ತು ಹೆಮ್ಮೆಯ ನಿವಾಸಿ ಎಂದು ವಿವರಿಸಿದರು. ಇದು ಹಲವಾರು ಹಿಂದೂಗಳ ಮೇಲೆ ಪ್ರಭಾವ ಬೀರಿತ್ತು.

ಸ್ವಯಂ ಘೋಷಿತ ನಾಸ್ತಿಕರಾಗಿದ್ದ ಅವರು 1924ರ ಜನವರಿ 6ರಂದು ಜೈಲಿನಿಂದ ಬಿಡುಗಡೆಯಾದರು.
1937ರಲ್ಲಿ ವೀರ್ ಸಾವರ್ಕರ್ ಅವರು ‘ಹಿಂದೂ ಮಹಾಸಭಾ’ದ ಅಧ್ಯಕ್ಷರಾದರು. ಮತ್ತೊಂದೆಡೆ ಮತ್ತು ಅದೇ ಸಮಯದಲ್ಲಿ ಮುಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ಆಡಳಿತವನ್ನು ‘ಹಿಂದೂ ರಾಜ್’ ಎಂದು ಘೋಷಿಸಿದರು. ಇದು ಈಗಾಗಲೇ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಿತು.

ಇದನ್ನೂ ಓದಿ: Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಸಾವರ್ಕರ್ ಕುರಿತ ಚಲನಚಿತ್ರ

ವೀರ್ ಸಾವರ್ಕರ್ ಅವರ ಕುರಿತು 1996ರಲ್ಲಿ ಪ್ರಿಯದರ್ಶನ್ ಅವರು ಮಲಯಾಳಂ ನಲ್ಲಿ ಕಾಲಾ ಪಾನಿ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇದರಲ್ಲಿ ಅನ್ನು ಕಪೂರ್ ಅವರು ವೀರ್ ಸಾವರ್ಕರ್ ಅವರ ಪಾತ್ರವನ್ನು ಮಾಡಿದ್ದರು. ವೀರ್ ಸಾವರ್ಕರ್ ಜೀವನ ಚರಿತ್ರೆಯನ್ನು ಸುಧೀರ್ ಫಡ್ಕೆ ಮತ್ತು ವೇದ್ ರಾಹಿ ಅವರು ರಚಿಸಿದ್ದು, ಈ ಚಿತ್ರದಲ್ಲಿ ಶೈಲೇಂದ್ರ ಗೌರ್ ವೀರ್ ಸಾವರ್ಕರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ವೀರ್ ಸಾವರ್ಕರ್ ಬರೆದ ಪುಸ್ತಕಗಳು

1857ಚೆ ಸ್ವತಂತ್ರ್ಯ ಸಮರ್, ಹಿಂದೂಪಾದಪಾತ್ಶಾಹಿ, ಹಿಂದುತ್ವ, ಜಾತ್ಯೋಛೇದಕ್ ನಿಬಂಧ, ಮೊಪ್ಲ್ಯಾಂಚೆ ಬಂದಾ, ಮಾಝಿ ಜನ್ಮತೇಪ್, ಕಾಲೆ ಪಾನಿ, ಶತ್ರುಚ್ಯಾ ಶಿಬಿರಾತ್, ಲಂಡನ್ಚಿ ಬತಾಮಿಪತ್ರೆ, ಅಂದಮಾಂಚ್ಯಾ ಅಂಧೇರಿತುನ್, ವಿದ್ಯಾನ ನಿಷ್ಠ ನಿಬಂಧ, ಜೋಸೆಫ್ ಮಜ್ಜಿನಿ, ಹಿಂದೂರಾಷ್ಟ್ರ ದರ್ಶನ, ಹಿಂದುತ್ವಚೆ ಪಂಚಪ್ರಾಣ, ಕಮಲಾ, ಸಾವರ್ಕಾರಾಂಚ್ಯಾ ಕವಿತಾ, ಸನ್ಯಾಸ್ತಾ ಖಡ್ಗ್ ಇತ್ಯಾದಿ.

Continue Reading

ಕೃಷಿ

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ರಾಯಚೂರಿನ ಗುಡಿಪಾಡು ಆಂಜನೇಯ (Success Story) ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಲ್ಲಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿ ಈಗ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಾವು ಮಾರಾಟದ ಇವರ ಸಕ್ಸೆಸ್ ಸ್ಟೋರಿ ಇಲ್ಲಿದೆ.

VISTARANEWS.COM


on

By

Success Story
Koo

ಕೃಷಿ ಕೆಲಸಗಳಲ್ಲಿ ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ಬುದ್ದಿವಂತಿಕೆಯೂ ಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ರೈತನೊಬ್ಬ (Success Story) ಸಾಬೀತು ಮಾಡಿದ್ದಾನೆ. ಈ ರೈತ ಬೇರೆಯಾರೂ ಅಲ್ಲ ನಮ್ಮ ಕರ್ನಾಟಕದವರೇ (karnataka) ಆಗಿದ್ದಾರೆ. ಮಾವಿನ ಕೃಷಿ (Mango Cultivation) ಮಾಡಿ ರಾಯಚೂರಿನ (Raichur) ಗುಡಿಪಾಡು ಆಂಜನೇಯ (Gudipadu Anjaneya) ಅವರು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಗುಡಿಪಾಡು ಆಂಜನೇಯ ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಾಗುತ್ತಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು.

Success Story

ತೋಟಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹಣ್ಣು, ತರಕಾರಿ, ಹೂವು, ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ವಿಜ್ಞಾನ ಮತ್ತು ಕಲೆಯನ್ನು ಕಲಿತು ಆನ್‌ಲೈನ್ ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಂಜನೇಯ ಅವರು ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮಾವಿನ ತಳಿಗಳಲ್ಲಿ ಪ್ರಮುಖವಾದವು ಬನಗನಪಲ್ಲಿ, ಮಲ್ಲಿಕಾ ಮತ್ತು ಕೇಸರಿ ಮಾವುಗಳು. ಇವರು ತಮ್ಮ ಮಾವಿನ ಹಣ್ಣುಗಳ ಮಾರಾಟ ಜಾಲವನ್ನು ರಾಯಚೂರಿನ ಹೊರಗೂ ವಿಸ್ತರಿಸಿದ್ದಾರೆ. ಬೆಂಗಳೂರಿನ ಜಯನಗರ, ವೈಟ್‌ಫೀಲ್ಡ್ ಮತ್ತು ಲಾಲ್ ಬಾಗ್‌ನ ಎಂಇಎಸ್ ಮೈದಾನದಲ್ಲಿ ಮಾವು ಮೇಳದಲ್ಲಿ ಪಾಲ್ಗೊಂಡಿರುವ ಇವರು, ಆನ್ ಲೈನ್ ಮೂಲಕ ರಾಜ್ಯದ ಮೂಲೆಮೂಲೆ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಿಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ರೂಪಿಸುವ ಗುರಿ ಹೊಂದಿರುವ ಅವರು ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ.

ಸಾಕಷ್ಟು ಶ್ರಮ

ಆಂಜನೇಯ ತಮ್ಮ ವ್ಯವಹಾರದ ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಗ್ರಾಹಕರ ವಿಳಾಸವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರತಿಯೊಂದು ಹಂತವನ್ನು ಅನುಸರಿಸಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿದ್ದರು. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು, ಆಂಜನೇಯ ಅವರು ಮೋಸಂಬಿ ಮತ್ತು ನಿಂಬೆಯನ್ನು ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು.

Mango Breeds

ಆನ್ ಲೈನ್ ಪೋರ್ಟಲ್ ಪ್ರಾರಂಭ

ಬಳಿಕ ಆಂಜನೇಯ ಅವರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ಅಂಚೆ ಇಲಾಖೆಯ ಸಹಯೋಗದೊಂದಿಗೆ ತಮ್ಮ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಪ್ರಾರಂಭಿಸಿರುವ ಕರ್ ಸಿರಿ ಮ್ಯಾಂಗೋಸ್ (https://www.karsirimangoes.karnataka.gov.in) ವೆಬ್‌ಸೈಟ್ 2022ರಲ್ಲಿ ವಿವಿಧ ಬಗೆಯ ಹಣ್ಣುಗಳಿಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಈ‌ ವೆಬ್ ಸೈಟ್ ಮೂಲಕವೇ ಈ ರೈತ ಮಾವು ಮಾರಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

ಇದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುತ್ತದೆ. ಹಣ್ಣುಗಳ ಚಿತ್ರಗಳು ಮತ್ತು ಹೆಸರುಗಳ ಜೊತೆಗೆ ವೆಬ್‌ಸೈಟ್ ಮಾವಿನ ಸರಬರಾಜಿಗೆ ಕಾರಣರಾದ ರೈತರ ಹೆಸರು ಮತ್ತು ಸಂಖ್ಯೆಗಳನ್ನು ಸಹ ಪ್ರದರ್ಶಿಸುತ್ತದೆ. ಮಾವು ಬೆಳೆಗಾರರಿಗೆ ಈ ವೆಬ್‌ಸೈಟ್ ಆಶಾದಾಯಕವಾಗಿದೆ. ಇದನ್ನು ಬಳಸಿಕೊಂಡೇ ಆಂಜನೇಯ ಅವರು ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿದ್ದಾರೆ.

Continue Reading

ದೇಶ

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಪ್ರಕೃತಿಯ ನಡುವೆ ವಿಶ್ರಾಂತಿ ಬಯಸುವವರಿಗೆ ಮುನ್ನಾರ್ (Munnar Tour) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಾರಾಂತ್ಯದ ವಿಹಾರದ ಆಯ್ಕೆಗಳನ್ನು ನೀಡುತ್ತವೆ. ಮುನ್ನಾರ್ ಪ್ರದೇಶದಲ್ಲಿ (Munnar Tour) ಕೆಲವು ಗುಪ್ತ ನಿಧಿಗಳಿದ್ದು ಅವುಗಳನ್ನು ಹುಡುಕಿಕೊಂಡು ಹೊರಟರೆ ಬದುಕಿನಲ್ಲಿ ಮತ್ತೊಮ್ಮೆ ಚೈತನ್ಯವನ್ನು ತುಂಬಿಕೊಂಡು ಮರಳಬಹುದು. ಮುನ್ನಾರ್ ಕುರಿತ ವಿಸ್ತೃತ ಪರಿಚಯ ಇಲ್ಲಿದೆ.

VISTARANEWS.COM


on

By

Munnar Tour
Koo

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Continue Reading

ಪ್ರಮುಖ ಸುದ್ದಿ

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Vijayapura News: ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

VISTARANEWS.COM


on

Vijayapura news
Koo

ವಿಜಯಪುರ : ತಮ್ಮ ಮಗಳನ್ನು ಮದುವೆಯಾಗಲು ಬಂದ ಆಕೆಯ ಪ್ರಿಯಕರನ ಮೇಲೆ ಪೋಷಕರೇ ಪೆಟ್ರೋಲ್​ ಹಾಕಿ ಸುಟ್ಟಿರುವ ಪ್ರಕರಣವೊಂದು ವಿಜಯಪುರ ಜಿಲ್ಲೆಯ (Vijayapura News) ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಅದರೆ, ಯುವತಿಯ ಪೋಷಕರು ಇದನ್ನು ನಿರಾಕರಿಸಿದ್ದು ಮಗಳನ್ನು ಕೊಡದಿರಲು ನಿರ್ಧರಿಸಿದ ನಮ್ಮನ್ನು ಸುಡಲು ಯುವಕ ಪೆಟ್ರೋಲ್ ತಂದಿದ್ದ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ರಾಹುಲ್​ ರಾಮನಗೌಡ ಬಿರಾದಾರ ಸುಟ್ಟ ಗಾಯಗಳು ಹಾಗೂ ಮಾರಕಾಸ್ತ್ರಗಳ ಪೆಟ್ಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯುವತಿಯ ಮನೆಯ ನಾಲ್ವರು ಆಸ್ಪತ್ರೆ ಸೇರಿದ್ದಾರೆ. ಘಟನೆ ಬಗ್ಗೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಆಸ್ಪತ್ರೆ ಸೇರಿರುವ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ಅವರ ಕುಟುಂಬಸ್ಥರು ಆತನ ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ಕನ್ಯೆ ಕೇಳಲು ಹೋದ ನಮ್ಮಣ್ಣನಿಗೆ ಬೆಂಕಿ ಹಾಕಿ ಸುಟ್ಟು ರಾಡ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಐಶ್ವರ್ಯ ಸೇರಿದಂತೆ ಅವರ ಕುಟುಂಬಸ್ಥರು ಮದುವೆಗೆ ಒಪ್ಪದ ನಮ್ಮನ್ನು ಸುಡಲು ರಾಹುಲ್ ಯತ್ನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಶೇಕಡಾ 70ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಹುಲ್​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?

ರಾಹುಲ್ ರಾಮನಗೌಡ ಬಿರಾದಾರ ಅವರು ಐಶ್ವರ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ವರ್ಷದಿಂದ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಅಂತೆಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದ ಯುವತಿಯ ಪೋಷಕರು ಹುಡುಗನ ಮನೆಯವರಿಗೆ ಬರಲು ಹೇಳಿದ್ದರು. ಅವರು ಅಲ್ಲಿಗೆ ಹೋಗಿದ್ದಾಗ ಯುವತಿ ಮದುವೆ ನಿರಾಕರಿಸಿದ್ದಳು. ಆತನ ಗುಣ ಸರಿ ಇಲ್ಲ, ಹೀಗಾಗಿ ನಾನು ಮದ್ವೆಯಾಗಲ್ಲ ಎಂದು ಹೇಳಿದ್ದಳು. ಹುಡುಗಿ ಮದುವೆ ನಿರಾಕರಣೆ ಮಾಡಿದ್ದಾಳೆ ಎಂದು ರಾಹುಲ್ ಮನೆಯವರು ವಾಪಸ್ ಹೋಗಿದ್ದರು.

ಪ್ರೀತಿಸಿದ ಹುಡುಗಿಯೇ ಸಿಗಬೇಕು ಹಠ ಹಿಡಿದು ರಾಹುಲ್​ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಅಲ್ಲದೆ, ಮದುವೆಯಾಗದೇ ಹೋದರೆ ತಾವಿಬ್ಬರು ಜತೆಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದ. ಫೋಟೋ ಬೆದರಿಕೆಗೆ ತಣ್ಣಾಗಾದ ಯುವತಿಯ ಕುಟುಂಬಸ್ಥರು ಆಕೆ ಒಪ್ಪಿದರೆ ಲಗ್ನ ಮಾಡಿ ಕೊಡುವುದಾಗಿ ರಾಜಿ ಮಾಡಿ ಕಳುಹಿಸಿದ್ದರು. ಆ ಬಳಿಕವೂ ವಿವಾದ ಮುಂದುವರಿದಿತ್ತು. ಅಲ್ಲದೆ, ಹಲವು ಬಾರಿ ರಾಜಿ ಪಂಚಾಯತಿ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

ಸೋಮವಾರ ಮತ್ತೆ ರಾಹುಲ್ ಬಿರಾದಾರ ಐಶ್ವರ್ಯಾ ಮನೆಗೆ ಮತ್ತೆ ಹೋಗಿದ್ದ. ಈ ವೇಳೆ ಮತ್ತೆ ಮಾತುಕತೆ ನಡೆದಿದೆ. ಐಶ್ವರ್ಯಾ ಪೋಷಕರ ಪ್ರಕಾರ ಆತ ಮಾತುಕತೆಗೆ ಬರುವಾಗ ಪೆಟ್ರೋಲ್ ತಂದಿದ್ದ. ಅದನ್ನು ನಮ್ಮ ಮೇಲೆ ಹಾಕಿ ಸುಡಲು ಯತ್ನಿಸಿದ್ದ. ಆದರೆ, ಯುವಕನ ಪೋಷಕರು ಹೇಳುವ ಪ್ರಕಾರ ಐಶ್ವರ್ಯಾ ಅವರ ಪೋಷಕರು ರಾಹುಲ್ ಕೈಯಲ್ಲಿದ್ದ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಕೊಡದೇ ಹೋದಾಗ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಬಳಿಕ ಮೊದಲೇ ತಂದಿಟ್ಟಿದ್ದ ಪೆಟ್ರೋಲ್​ನಿಂದ ಸುಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್.ನಾಯಕ ಅವರು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಘಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್6 mins ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ8 mins ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ18 mins ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ31 mins ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

namaz in road mangalore
ದಕ್ಷಿಣ ಕನ್ನಡ34 mins ago

Namaz: ಸಾರ್ವಜನಿಕ ನಮಾಜ್‌ ನಿಲ್ಲಿಸದಿದ್ದರೆ ಹನುಮಾನ್‌ ಚಾಲೀಸಾ ಪಠನ: ವಿಹಿಂಪ ಎಚ್ಚರಿಕೆ

Veer Savarkar
ದೇಶ41 mins ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ43 mins ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Umar Khalid
ದೇಶ47 mins ago

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Physical Abuse
ಚಿಕ್ಕಬಳ್ಳಾಪುರ49 mins ago

Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Veer Savarkar flyover
ಕರ್ನಾಟಕ1 hour ago

Veer Savarkar flyover: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ; ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ23 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌