Site icon Vistara News

IND vs WI | ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಭಾರತದ ಮುಂದಿನ ಸರಣಿ, ಶಿಖರ್‌ ಧವನ್‌ಗೆ ಕ್ಯಾಪ್ಟನ್‌ ಪಟ್ಟ

ನವ ದೆಹಲಿ: ಜುಲೈ 22ರಿಂದ ಪ್ರಾರಂಭವಾಗಲಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್‌ (IND vs WI) ನಡುವಿನ ಏಕದಿನ ಸರಣಿಗೆ ಭಾರತ ತಂಡದವನ್ನು ಬಿಸಿಸಿಐ ಪ್ರಕಟಿಸಿದೆ. ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳು ಜರುಗಲಿವೆ.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಘಟಾನುಘಟಿ ಆಟಗಾರರನ್ನು ಕೈಬಿಡಲಾಗಿದೆ. ವಿರಾಟ್‌ ಕೋಹ್ಲಿ, ರೋಹಿತ್‌ ಶರ್ಮಾ, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌ ಹಾಗೂ ಜಸ್ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಈ ಸರಣಿ ನಡೆಯಲಿದೆ. ಶಿಖರ್‌ ಧವನ್‌ ಭಾರತ ತಂಡದ ನಾಯಕರಾಗಿ ಈ ಸರಣಿಯ ನೇತೃತ್ವವನ್ನು ವಹಿಸಲಿದ್ದು, ರವೀಂದ್ರ ಜಡೇಜ ಉಪನಾಯಕರಾಗಿದ್ದಾರೆ.

‌ತಂಡ ಹೀಗಿರಲಿದೆ

ಶಿಖರ್‌ ಧವನ್(ನಾಯಕ), ರವೀಂದ್ರ ಜಡೇಜಾ(ಉಪ ನಾಯಕ), ಋತುರಾಜ್‌ ಗಾಯಕ್ವಾಡ್‌, ಶುಬ್ಮನ್‌ ಗಿಲ್‌, ದೀಪಕ್‌ ಹೂಡ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಇಶನ್‌ ಕಿಷನ್‌(ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್)‌, ಶಾರ್ದುಲ್‌ ಠಾಕುರ್‌, ಯುಜ್ವೇಂದ್ರ ಚಾಹಲ್‌, ಅಕ್ಷರ್‌ ಪಟೇಲ್‌, ಅವೇಶ್‌ ಖಾನ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ ಸಿರಾಜ್‌, ಹರ್ಷದೀಪ್‌ ಸಿಂಗ್

ಪಂದ್ಯ ಯಾವಾಗ:

ಮೊದಲ ಪಂದ್ಯ: ಜುಲೈ 22, 2022
ಎರಡನೇ ಪಂದ್ಯ: ಜುಲೈ 24, 2022
ಮೂರನೇ ಪಂದ್ಯ: ಜುಲೈ 27, 2022

ಇದನ್ನೂ ಓದಿ: England Tour : ಭಾರತಕ್ಕೆ 7 ವಿಕೆಟ್‌ ಸೋಲು

Exit mobile version