Site icon Vistara News

IND-PAK | ಭಾರತ- ಪಾಕ್‌ ಪಂದ್ಯಕ್ಕೆ ಅನುವು ಮಾಡಿಕೊಡುವನೇ ವರುಣ ದೇವ?

indo pack

ಮೆಲ್ಬೋರ್ನ್‌: ಟಿ೨೦ ವಿಶ್ವ ಕಪ್‌ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ (IND-PAK ) ನಡುವಿನ ಭಾನುವಾರದ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಮೆಲ್ಬೋರ್ನ್‌ನಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಈ ಹೈವೋಲ್ಟೆಜ್‌ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗುವುದು ಬಹುತೇಕ ಖಚಿತ ಎಂಬಂತ್ತಿದೆ.

ಮೆಲ್ಬೋರ್ನ್‌ನಲ್ಲಿ ಶನಿವಾರವೂ ಧಾರಾಕಾರ ಮಳೆ ಸುರಿದಿದ್ದು. ಉಭಯ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಇತ್ತಂಡಗಳ ಆಟಗಾರರು ಕೇವಲ ಜಿಮ್‌ನಲ್ಲಿಯೇ ವರ್ಕ್‌ಔಟ್‌ ಮಾಡಿ ದಿನ ಕಳೆದರು.

ಇದೀಗ ಭಾನುವಾರ ಅಂದರೆ ಭಾರತ-ಪಾಕ್‌ ಪಂದ್ಯ ಆರಂಭವಾಗುವ ವೇಳೆಗೆ ಶೇಕಡ ೮೦ ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯದ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ೧.೩೦ಕ್ಕೆ ಆರಂಭವಾಗಲಿದೆ. ೨.೨ ಮಿಲಿ ಮೀಟರ್‌ ಮಳೆಯಾಗಲಿದೆ ಎಂಬುದಾಗಿಯೂ ಹೇಳಲಾಗಿದೆ. ಮಧ್ಯಾಹ್ನದ ಬಳಿಕವೇ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಮಳೆ ಬರದಿರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಭಾರತ- ಪಾಕ್‌ ನಡುವಿವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಅಭಿಮಾನಿಗಳು ಮೆಲ್ಬೋರ್ನ್‌ ನಗರಕ್ಕೆ ಬಂದಿದ್ದು ಎಲ್ಲ ಹೋಟೆಲ್‌ ರೋಮ್‌ಗಳು ಮತ್ತು ಟಿಕೇಟ್‌ಗಳು ಬಿಕರಿಯಾಗಿವೆ. ಈ ಪಂದ್ಯದ ಎಲ್ಲ ನಿರೀಕ್ಷೆಗಳು ಇದೀಗ ವರುಣದೇವನ ಕೈಯಲ್ಲಿದೆ.

ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಆಡಲೇಬೇಡಿ!; ಓವೈಸಿ ಹೇಳಿಕೆಯ ಹಿಂದಿನ ಮರ್ಮವೇನು?

Exit mobile version