IND-PAK | ಭಾರತ- ಪಾಕ್‌ ಪಂದ್ಯಕ್ಕೆ ಅನುವು ಮಾಡಿಕೊಡುವನೇ ವರುಣ ದೇವ? - Vistara News

T20 ವಿಶ್ವಕಪ್

IND-PAK | ಭಾರತ- ಪಾಕ್‌ ಪಂದ್ಯಕ್ಕೆ ಅನುವು ಮಾಡಿಕೊಡುವನೇ ವರುಣ ದೇವ?

ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ (IND-PAK ) ನಡುವಿನ ರವಿವಾರದ ಮುಖಾಮುಖಿಗೆ ಮಳೆ ಅಡ್ಡಿಯಾಗಲಿದ್ದು ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

VISTARANEWS.COM


on

indo pack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್‌: ಟಿ೨೦ ವಿಶ್ವ ಕಪ್‌ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ (IND-PAK ) ನಡುವಿನ ಭಾನುವಾರದ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಮೆಲ್ಬೋರ್ನ್‌ನಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಈ ಹೈವೋಲ್ಟೆಜ್‌ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗುವುದು ಬಹುತೇಕ ಖಚಿತ ಎಂಬಂತ್ತಿದೆ.

ಮೆಲ್ಬೋರ್ನ್‌ನಲ್ಲಿ ಶನಿವಾರವೂ ಧಾರಾಕಾರ ಮಳೆ ಸುರಿದಿದ್ದು. ಉಭಯ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಇತ್ತಂಡಗಳ ಆಟಗಾರರು ಕೇವಲ ಜಿಮ್‌ನಲ್ಲಿಯೇ ವರ್ಕ್‌ಔಟ್‌ ಮಾಡಿ ದಿನ ಕಳೆದರು.

ಇದೀಗ ಭಾನುವಾರ ಅಂದರೆ ಭಾರತ-ಪಾಕ್‌ ಪಂದ್ಯ ಆರಂಭವಾಗುವ ವೇಳೆಗೆ ಶೇಕಡ ೮೦ ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯದ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ೧.೩೦ಕ್ಕೆ ಆರಂಭವಾಗಲಿದೆ. ೨.೨ ಮಿಲಿ ಮೀಟರ್‌ ಮಳೆಯಾಗಲಿದೆ ಎಂಬುದಾಗಿಯೂ ಹೇಳಲಾಗಿದೆ. ಮಧ್ಯಾಹ್ನದ ಬಳಿಕವೇ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಮಳೆ ಬರದಿರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಭಾರತ- ಪಾಕ್‌ ನಡುವಿವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಅಭಿಮಾನಿಗಳು ಮೆಲ್ಬೋರ್ನ್‌ ನಗರಕ್ಕೆ ಬಂದಿದ್ದು ಎಲ್ಲ ಹೋಟೆಲ್‌ ರೋಮ್‌ಗಳು ಮತ್ತು ಟಿಕೇಟ್‌ಗಳು ಬಿಕರಿಯಾಗಿವೆ. ಈ ಪಂದ್ಯದ ಎಲ್ಲ ನಿರೀಕ್ಷೆಗಳು ಇದೀಗ ವರುಣದೇವನ ಕೈಯಲ್ಲಿದೆ.

ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಆಡಲೇಬೇಡಿ!; ಓವೈಸಿ ಹೇಳಿಕೆಯ ಹಿಂದಿನ ಮರ್ಮವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

ಕೆಎಂಎಫ್‌ ಈಗಾಗಲೇ ಟೆಂಡರ್‌ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ.

VISTARANEWS.COM


on

Nandini takes battle with Amul to cricket field, pitches for T20 WC team sponsorship
Koo

ಬೆಂಗಳೂರು: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಕರ್ನಾಟಕ ಹಾಲು ಮಹಾ ಮಂಡಳಿ(KMF) ಕೆಲವು ತಂಡದ ಪ್ರಾಯೋಜಕತ್ವ ಪಡೆಯುವ ಗುರಿ ಇಟ್ಟುಕೊಂಡಿದೆ. ಈ ಮೂಲಕ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲು ರೆಡಿಯಾಗಿದೆ. ಅಮೂಲ್‌(Amul) ಸಂಸ್ಥೆಯು 2011ರಿಂದಲೂ ಅಫಫ್ಘಾನಿಸ್ತಾನ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸೇರಿದಂತೆ ಕೆಲ ತಂಡಗಳ ಪ್ರಾಯೋಜತ್ವಗಳನ್ನು ಪಡೆದಿದೆ. ಇದೀಗ ಕೆಎಂಎಫ್‌ ಕೂಡಾ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟು ನಂದಿನಿ(nandini milk) ಲೋಗೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

ಕೆಎಂಎಫ್‌ ಈಗಾಗಲೇ ಟೆಂಡರ್‌ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ. ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಹಾಕಲು ಕೆಎಂಎಫ್(Karnataka Milk Federation) ಮುಂದಾಗಿದೆ. ಏಪ್ರಿಲ್‌ನಲ್ಲಿ ಟೆಂಡರ್‌ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ.

ಇದನ್ನೂ ಓದಿ T20 World Cup 2024: ಈ ಮೊಬೈಲ್‌ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ

Continue Reading

ಕ್ರೀಡೆ

ಭಾರತ-ಪಾಕ್​ ಟಿ20 ವಿಶ್ವಕಪ್​ ನಡೆಯುವ ಸ್ಟೇಡಿಯಂ ನಿರ್ಮಾಣದ ವಿಡಿಯೊ ಹಂಚಿಕೊಂಡ ಐಸಿಸಿ

ನ್ಯೂಯಾರ್ಕ್‌ನಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯಗಳಿಗಾಗಿ ನಿರ್ಮಿಸಲಾಗುತ್ತಿರುವ ವಿಶೇಷ ವ್ಯವಸ್ಥೆಯ ಸ್ಟೇಡಿಯಂನ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

VISTARANEWS.COM


on

Nassau County International Cricket Stadium
Koo

ನ್ಯೂಯಾರ್ಕ್: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ. ಇದೀಗ ನ್ಯೂಯಾರ್ಕ್‌ನಲ್ಲಿ ನಡೆಯುವ ಪಂದ್ಯಗಳಿಗಾಗಿ ನಿರ್ಮಿಸಲಾಗುತ್ತಿರುವ ವಿಶೇಷ ವ್ಯವಸ್ಥೆಯ ಸ್ಟೇಡಿಯಂನ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ನ್ಯೂಯಾರ್ಕ್​ನಲ್ಲಿ ತಲೆ ಎತ್ತಿದ ಈ ಸ್ಟೇಡಿಯಂಗೆ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium) ಎಂದು ಕರೆಯಲಾಗಿದೆ. ಅಚ್ಚರಿ ಎಂದರೆ ಈ ಸ್ಟೇಡಿಯಂ ಅನ್ನು ನಿರ್ಮಾಣ ಮಾಡಿದ್ದೇ ಭಾರತ ಮತ್ತು ಪಾಕಿಸ್ತಾನ ಎದುರಿನ ಪಂದ್ಯಕ್ಕಾಗಿ. ಜೂನ್ 9 ರಂದು ಈ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ(IND vs PAK) ಕಣಕ್ಕಿಳಿಯಲಿದೆ.

ಐಸಿಸಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಜನವರಿ 11ರಿಂದ ಆರಂಭವಾದ ಕೆಲಸದಿಂದ ಹಿಡಿದು ಸದ್ಯ ಮಾರ್ಚ್​ 4ರ ತನಕದ ಸಾಗಿದ ಎಲ್ಲ ಕಾರ್ಯ ವೈಕರಿಯ ದೃಶ್ಯಗಳನ್ನು ಕಾಣಬಹುದಾಗಿದೆ. ಕೆಲಸ ಇನ್ನೂ ಸಾಗುತ್ತಿದೆ ಎಂದು ಐಸಿಸಿ ಈ ವಿಡಿಯೊಗೆ ಕ್ಯಾಪ್ಷನ್​ ನೀಡಿದೆ. ನ್ಯೂಯಾರ್ಕ್ ಕ್ರೀಡಾಂಗಣವು ಇನ್ನೆರಡು ತಿಂಗಳೊಳಗೆ ಎದ್ದು ನಿಲ್ಲಲಿದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಉಳಿದಿರುವ ಕೆಲಸ ಬರದಿಂದ ಸಾಗುತ್ತಿದೆ.

ಇದನ್ನೂ ಓದಿ ICC Test Rankings: ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಜೈಸ್ವಾಲ್

ತಾತ್ಕಾಲಿಕ ಕ್ರೀಡಾಂಗಣ


34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ. ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ. ಜೂನ್​ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್​ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ.

Continue Reading

ಕ್ರೀಡೆ

T20 World Cup 2024: ಈ ಮೊಬೈಲ್‌ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​

2023ರ ಏಕದಿನ ವಿಶ್ವಕಪ್​ ಟೂರ್ನಿಯಂತೆಯೇ ಈ ಬಾರಿಯ ಟಿ20 ವಿಶ್ವಕಪ್​ನ ಎಲ್ಲ​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ

VISTARANEWS.COM


on

Koo

ಮುಂಬಯಿ: ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್(T20 World Cup 2024) ಟೂರ್ನಿ ಜೂನ್​ನಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.  ಪಂದ್ಯಾವಳಿ ಜೂನ್ 2 ರಿಂದ ಆರಂಭಗೊಂಡು ಜೂನ್​ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಇನ್ನು ಸರಿ ಸುಮಾರು 3 ತಿಂಗಳು ಬಾಕಿ ಇರುವಾಗಲೇ ಡಿಸ್ನಿ ಹಾಟ್​ಸ್ಟಾರ್(Hotstar) ಕ್ರಿಕೆಟ್​ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.

2023ರ ಏಕದಿನ ವಿಶ್ವಕಪ್​ ಟೂರ್ನಿಯಂತೆಯೇ ಈ ಬಾರಿಯ ಟಿ20 ವಿಶ್ವಕಪ್​ನ ಎಲ್ಲ​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್(disney+ hotstar) ಘೋಷಿಸಿದೆ. ಆದರೆ ಈ ಸೌಲಭ್ಯ ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರ ಸಿಗಲಿದೆ.

ಇದನ್ನೂ ಓದು WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

T20 ವಿಶ್ವಕಪ್

T20 World Cup 2024:​ ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್​ ಅಭಿಮಾನಿಗಳು

ಮುಂದಿನ ವರ್ಷ ನಡೆಯುವ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಬಿಡುಗಡೆ ಮಾಡಿದೆ.

VISTARANEWS.COM


on

2024 t20 world cup
Koo

ದುಬೈ: 2024ರಲ್ಲಿ ನಡೆಯುವ ಪ್ರತಿಷ್ಠಿತ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಗುರುವಾರ ಬಿಡುಗಡೆ ಮಾಡಿದೆ. ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಐಸಿಸಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಲೋಗೋ ಮತ್ತು ಇದರ ಉದ್ದೇಶವನ್ನು ತಿಳಿಸಿದೆ.

ಸದ್ಯದ ಮಾಹಿತಿ ಪ್ರಕಾರ ಪುರುಷರ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ ಎನ್ನಲಾಗಿದೆ. ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಸಲಾಗುತ್ತದೆ. ಆದರೆ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿಕೊಂಡ ಕಾರಣದಿಂದ ಪಂದ್ಯಾವಳಿಯಲ್ಲಿ ಸ್ಥಾನಪಡೆದಿದೆ.

ಹೊಸ ಲೋಗೋದ ಸಂದೇಶವೇನು?

ಹೊಸ ಲೋಗೋ ಹಿಂದಿನ ಉದ್ದೇಶವನ್ನು ಐಸಿಸಿ ವಿಡಿಯೊ ಮುಲಕ ತಿಳಿಸಿದ್ದು, ಟಿ20 ಕ್ರಿಕೆಟ್‌ನ ಶಕ್ತಿಯನ್ನು ಪ್ರತಿಬಿಂಬಿಸುವ ಮೂಲಕ ಬ್ಯಾಟ್, ಬಾಲ್ ಮತ್ತು ಶಕ್ತಿಯ ಸೃಜನಶೀಲ ಮಿಶ್ರಣವಾಗಿರುವ ಸಂಕೇತ ಎಂದು ಐಸಿಸಿ ಹೇಳಿದೆ. ಟಿ20 ಸ್ವರೂಪದಲ್ಲಿ ವೇಗವಾಗಿ ಬದಲಾಗುತ್ತಿರುವ ಆಟವನ್ನು ಲೋಗೋ ಪ್ರತಿಬಿಂಬಿಸುವಂತಿದೆ. ಟೂರ್ನಿಯ ಆತಿಥೇಯ ರಾಷ್ಟ್ರದ ಟೆಕಶ್ಚರ್ ಮತ್ತು ಪ್ಯಾಟರ್ನ್‌ ಒಳಗೊಂಡಿದೆ. ಐಸಿಸಿ ತನ್ನ ಟ್ವಿಟರ್​ನಲ್ಲಿ ಬ್ಯಾಟ್​,ಬಾಲ್​ ಮತ್ತು ಎನರ್ಜಿ ಎಂದು ಬರೆದುಕೊಂಡು ಈ ಲೋಗೋವನ್ನು ಪ್ರಕಟಿಸಿದೆ.

ಇದನ್ನೂ ಓದಿ ICC T20 World Cup 2024 : ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಉಗಾಂಡ ತಂಡ

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಟಿ20 ವಿಶ್ವಕಪ್ 2024 ನಡೆಯುವ ಸ್ಥಳಗಳು

  • ಆಂಟಿಗುವಾ ಮತ್ತು ಬಾರ್ಬುಡಾ
  • ಬಾರ್ಬಡೋಸ್
  • ಡೊಮಿನಿಕಾ (ಹೊರತೆಗೆಯಲಾಗಿದೆ)
  • ಗಯಾನಾ
  • ಸೇಂಟ್ ಲೂಸಿಯಾ
  • ಟ್ರಿನಿಡಾಡ್ ಮತ್ತು ಟೊಬಾಗೊ
  • ಸೇಂಟ್ ವಿನ್ಸೆಂಟ್ & ದಿ ಗ್ರೆನಡೀನ್ಸ್
  • ಡಲ್ಲಾಸ್
  • ಫ್ಲೋರಿಡಾ
  • ನ್ಯೂಯಾರ್ಕ್

ಭಾರತ-ಪಾಕ್ ಪಂದ್ಯಕ್ಕೂ ಸಿದ್ಧವಾಗಿಲ್ಲ ಕ್ರೀಡಾಂಗಣ

ಇನ್ನು ಏಳು ತಿಂಗಳು ಬಾಕಿ ಇರುವಾಗ ಭಾರತ ಮತ್ತು ಪಾಕ್ ಪಂದ್ಯಕ್ಕೆ ಇನ್ನೂ ಸ್ಥಳ ಸಿದ್ಧಗೊಂಡಿಲ್ಲ . ಬ್ರಾಂಕ್ಸ್ನ ವ್ಯಾನ್ ಕಾರ್ಟ್ಲ್ಯಾಂಡ್ ಪಾರ್ಕ್ ಮೂಲ ಸ್ಥಳವಾಗಿತ್ತು. ಐಸಿಸಿ ಮತ್ತು ಸ್ಥಳೀಯ ಸಂಘಟನಾ ಸಮಿತಿಯು ಸ್ಥಳೀಯರಿಂದ ವಿರೋಧವನ್ನು ಎದುರಿಸಿತು. ಆದ್ದರಿಂದ, ನಸ್ಸಾವು ಕೌಂಟಿಯ ಐಸೆನ್ಹೋವರ್ ಪಾರ್ಕ್ ಅನ್ನು ಹೊಸ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಇನ್ನೂ ಯಾವುದೇ ಕ್ರಿಕೆಟ್ ಕ್ರೀಡಾಂಗಣ ಸಜ್ಜುಗೊಂಡಿಲ್ಲ. ಕೇವಲ ಏಳು ತಿಂಗಳುಗಳು ಮಾತ್ರ ಉಳಿದಿವೆ. ಮುಂಬರುವ ದಿನಗಳಲ್ಲಿ ಕಠಿಣ ಚಳಿಗಾಲವು ಬರುವ ಕಾರಣ ಕ್ರೀಡಾಂಗಣವನ್ನು ಯಾವ ರೀತಿ ಸಜ್ಜು ಮಾಡುತ್ತಾರೆ ಎಂಬ ಕೌತುಕ ಇನ್ನೂ ಉಳಿದಿದೆ.

Continue Reading
Advertisement
Varun Gandhi
ಪ್ರಮುಖ ಸುದ್ದಿ9 mins ago

Varun Gandhi: ಸಂಸದ ಅಲ್ಲದಿದ್ದರೂ ನಿಮ್ಮ ಮಗ; ಜನಕ್ಕೆ ಟಿಕೆಟ್‌ ವಂಚಿತ ವರುಣ್‌ ಗಾಂಧಿ ಭಾವುಕ ಪತ್ರ!

supreme court CJI DY chandrachud
ಪ್ರಮುಖ ಸುದ್ದಿ17 mins ago

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

40 per cent commission advertisement against BJP and Summons to CM Siddaramaiah and DCM DK Shivakumar
ರಾಜಕೀಯ21 mins ago

40 percent commission: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು; ಸಿಎಂ, ಡಿಸಿಎಂಗೆ ಸಮನ್ಸ್‌

Murder case Family Dispute
ಬೆಂಗಳೂರು ಗ್ರಾಮಾಂತರ24 mins ago

Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ

Bengaluru News air pressure pipe
ಬೆಂಗಳೂರು1 hour ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 hour ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Actor Darshan at Matinee Movie Team
ಸ್ಯಾಂಡಲ್ ವುಡ್2 hours ago

Actor Darshan: ಸತೀಶ್ ನೀನಾಸಂ-ರಚಿತಾ `ಮ್ಯಾಟ್ನಿ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್!

Drone Prathap prayag
ಸ್ಯಾಂಡಲ್ ವುಡ್2 hours ago

Drone Prathap: ಬಿಗ್ ಬಾಸ್ ಸ್ಪರ್ಧಿ ಪ್ರತಾಪನ ʻಡ್ರೋನ್‌ʼ ಇನ್ಮುಂದೆ ಹಾರಲ್ಲ! ಕಳ್ಳಾಟ ಬಯಲು!

Bhagwant Mann
ದೇಶ2 hours ago

Bhagwant Mann: 50ನೇ ವಯಸ್ಸಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್ ಮಾನ್;!

kuwj awards
ಕರ್ನಾಟಕ2 hours ago

KUWJ Awards: ಕಾರ್ಯನಿರತ ಪತ್ರಕರ್ತರ ಸಂಘದ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ: ಪುರಸ್ಕೃತರ ಪಟ್ಟಿ ಇಲ್ಲಿದೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 hour ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20243 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ10 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌