IPL 2022 : 60 ದಿನಗಳ ರೋಚಕ ಪಂದ್ಯಗಳ ಬಳಿಕ ಈಗ ಪ್ಲೇ ಆಫ್ ತಲುಪುವ ತಂಡಗಳ ಪಟ್ಟಿ ಅಂಒತಿಮಗೊಂಡಿದೆ. ತ್ರಿಶಂಕು ಪರಿಸ್ಥತಿಯಲ್ಲಿದ್ದ ಆರ್‌ಸಿಬಿ ತಂಡದ ಲಕ್ ಈಗ ಬದಲಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಗೆದ್ದಿರುವ ಕಾರಣದಿಂದ ಆರ್‌ಸಿಬಿ ಪ್ಲೇ ಆಫ್ ತಲುಪಲು ಸಾಧ್ಯವಾಗಿದೆ.
ಪ್ಲೇ ಆಫ್‌ಗೇರಿದ ತಂಡಗಳು:
- ಗುಜಾರತ್ ಟೈಟಾನ್ಸ್
- ರಾಜಸ್ಥಾನ್ ರಾಯಲ್ಸ್
- ಲಖನೌ ಸೂಪರ್ ಜೈಂಟ್ಸ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು
ನಿಟ್ಟುಸಿರು ಬಿಟ್ಟ ಆರ್‌ಸಿಬಿ!
ಆರ್‌ಸಿಬಿ ತಂಡವು ತನ್ನ ಕೊನೆಯ ಮ್ಯಾಚ್ ಗುಜರಾತ್ ವಿರುದ್ಧ ಗೆದ್ದರೂ ಪ್ಲೇ ಆಫ್ ತಲುಪುವುದು ಖಚಿತವಾಗಿರಲಿಲ್ಲ. ಆರ್‌ಸಿಬಿ ಪ್ಲೇ ಆಫ್ ತಲುಪಬೇಕಿದ್ದರೆ, ಮುಂಬೈ ಹಾಗು ದಿಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲ್ಲಲೇಬೆಕಾದ ಅನಿವಾರ್ಯತೆಯಿತ್ತು. ಮುಂಬೈ ತಂಡ ದಿಲ್ಲಿ ವಿರುದ್ಧ ಅದ್ಭುತ ಗೆಲುವು ಸಾಧಸಿಸುವುದರಿಂದ ಆರ್‌ಸಿಬಿ ಅಭಿಮಾನಿಗಳು ಮುಂಬೈ ತಂಡಕ್ಕೆ ಧನ್ಯವಾದ ತಿಳಿಸುವಂತಾಗಿದೆ.
ಮುಂಬೈ ತಂಡದ ಗೆಲುವಿಗಾಗಿ ಸಕಲ ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆಗೆ ಫಲ ಸಿಕ್ಕಿರುವ ಕಾರಣಕ್ಕೆ ಸಂತಸದಲ್ಲಿದ್ದಾರೆ.
ಪ್ಲೇ ಆಫ್‌ನಲ್ಲಿ ಯಾರ ವಿರುದ್ಧ ಯಾರು?
ಕ್ವಾಲಿಫೈಯರ್ 1: ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್
ಮೇ 24ರಂದು ಮೊದಲನೇ ಸ್ಥಾನದಲ್ಲಿರುವ ಗುಜರಾತ್ ಹಾಗೂ 2ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ತಲುಪುವುದು ಖಚಿತ. ಸೋತಿರುವ ತಂಡಕ್ಕೆ ಮತ್ತೊಂದು ಅವಕಾಶವಿರುತ್ತದೆ.
ಎಲಿಮಿನೇಟರ್ 1: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಖನೌ ಸೂಪರ್ ಜೈಂಟ್ಸ್
ಮೆ 25ರಂದು ಈ ನಿರ್ಣಾಯಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಸರಣಿಯಿಂದ ಹೊರಹೋಗುತ್ತದೆ. ಹಾಗೂ ಗೆಲ್ಲುವ ತಂಡ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸುತ್ತದೆ.
ಕ್ವಾಲಿಫೈಯರ್ 2:
ಮೇ 27ರಂದು ಈ ಪಂದ್ಯ ನಡೆಯಲಿದೆ. ಎಲಿಮಿನೆಟರ್ 1 ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಟ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡಗಳ ನಡುವೆ ಜಟಾಪಟಿ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಅದು ಮುಂದೆ ಫೈನಲ್ ತಲುಪುತ್ತದೆ.
ಫೈನಲ್:
ಕ್ವಾಲಿಫೈಯರ್ 1 ಹಾಗೂ ಕ್ವಾಲಿಫೈಯರ್ 2 ಪಂದ್ಯಗಳಲ್ಲಿ ಗೆದ್ದಿರುವ ತಂಡ IPL 2022 ಆವೃತ್ತಿಯ ಕಪ್‌ಗಾಗಿ ಆಟವಾಡಲಿದೆ. ಗೆದ್ದವರಿಗೆ ಚಾಂಪಿಯನ್ ಪಟ್ಟ. ಯಾರಿಗೆ ಕಿರೀಟ ಎಂಬುದು ಮೇ 29ರಂದು ನಿರ್ಣಯವಾಗಲಿದೆ.
ಇದನ್ನೂ ಓದಿ: IPL 2022: ಬೆಂಗಳೂರು ಭವಿಷ್ಯ ನಿರ್ಧಾರ ಇಂದು: ನೀಲಿ ಬಣ್ಣಕ್ಕೆ ತಿರುಗಿದ RCB