Site icon Vistara News

IPL 2023: ಬಹುನಿರೀಕ್ಷಿತ ಐಪಿಎಲ್​ ಟೂರ್ನಿಗೆ ಕ್ಷಣಗಣನೆ; ಈ ಬಾರಿ ಟೂರ್ನಿಯ ಮಾದರಿ ಹೇಗಿದೆ?

IPL 2023: Countdown to the much-awaited IPL tournament; How is the format of the tournament this time?

IPL 2023: Countdown to the much-awaited IPL tournament; How is the format of the tournament this time?

ಅಹಮದಾಬಾದ್​: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್(IPL 2023)​ 16ನೇ ಆವೃತ್ತಿಗೆ ಇಂದು(ಶುಕ್ರವಾರ ಮಾರ್ಚ್​ 31) ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಚಾಲನೆ ದೊರೆಯಲಿದೆ. ಮುಂದಿನ 2 ತಿಂಗಳು ದೇಶದಲ್ಲಿ ಕ್ರಿಕೆಟ್‌ ಹಬ್ಬದ ವಾತಾವರಣ ಇರಲಿದೆ. ಈ ಬಾರಿಯ ಟೂರ್ನಿ ಕೆಲ ನೂತನ ನಿಯಮಗಳಿಂದ ಸುದ್ದಿಯಾಗಿದೆ. ಈ ನಿಯಗಳು ಯಾವುದು ಮತ್ತು ಈ ಬಾರಿಯ ವಿಶೇಷತೆಗಳೇನು ಎಂಬ ಸಂಪೂರ್ಣ ಮಾಹಿತಿ ಇಂತಿದೆ.

ಪಂದ್ಯಗಳ ಮಾದರಿ

ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ಬಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅಂದರೆ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಇದೇ ಮಾದರಿ ಇತರ ತಂಡಗಳಿಗೂ ಈ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ.

ಇದನ್ನೂ ಓದಿ IPL 203 : ಐಪಿಎಲ್​ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ

ಇಂಪ್ಯಾಕ್ಟ್ ಪ್ಲೇಯರ್‌

ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್‌ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಈ ಬಾರಿ ಐಪಿಎಲ್​ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್​ ಇಲೆವನ್​ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್‌ ಆರಂಭಕ್ಕೂ ಮುನ್ನ, ಒಂದು ಓವರ್‌ ಮುಗಿದ ಮೇಲೆ, ವಿಕೆಟ್‌ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.

ಇದನ್ನೂ ಓದಿ IPL 2023: ಅಹಮದಾಬಾದ್​ನಲ್ಲಿ ಭಾರಿ ಮಳೆ; ಚೆನ್ನೈ-ಗುಜರಾತ್​ ಪಂದ್ಯ ಅನುಮಾನ

ವೈಡ್‌, ನೋಬಾಲ್‌ಗ‌ಳೂ ಡಿಆರ್‌ಎಸ್‌

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಜಾರಿಗೆ ತರಲಾಗಿದ್ದ ವೈಡ್‌, ನೋಬಾಲ್‌ ಡಿಆರ್‌ಎಸ್‌ ನಿಯಮವನ್ನು ಈ ಬಾರಿಯ ಐಪಿಎಲ್​ನಲ್ಲಿಯೂ ಅಳವಡಿಸಲಾಗಿದೆ. ಅಂಪೈರ್​ಗಳು ನೀಡಿದ ವೈಡ್‌, ನೋಬಾಲ್‌ ಕರೆಗಳನ್ನು ಡಿಆರ್‌ಎಸ್‌ ಮೂಲಕ ಈಗ ಆಟಗಾರರಿಗೆ ಪ್ರಶ್ನಿಸಬಹುದಾಗಿದೆ.

ಈ ಹಿಂದೆ ಟಾಸ್​ಗೂ ಮುನ್ನ ಪ್ಲೇಯಿಂಗ್​ ಇಲೆವೆನ್​ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಇದೀಗ ತಂಡಗಳ ನಾಯಕರು ಟಾಸ್‌ ಹಾರಿಸುವಾಗ 11 ಆಟಗಾರರ ಅಂತಿಮಪಟ್ಟಿಯನ್ನು ನೀಡಬೇಕಾಗಿಲ್ಲ. ಟಾಸ್‌ ಫ‌ಲಿತಾಂಶ ನೋಡಿಕೊಂಡು ಬಳಿಕ 11ರ ಪಟ್ಟಿಯನ್ನು ಪ್ರಕಟಿಸಬಹುದು.

ಗುವಾಹಟಿಯಲ್ಲಿ 2 ಪಂದ್ಯ

ಫುಟ್ಬಾಲ್​ ಕ್ರೀಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಅಸ್ಸಾಂನ ಗುವಾಹಟಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳು​ ನಡೆಯಲಿವೆ. ಈ ಮೂಲಕ ಇಲ್ಲಿನ ಫುಟ್ಬಾಲ್​ ಅಭಿಮಾನಿಗಳಿಗೆ ಕ್ರಿಕೆಟ್‌ನಲ್ಲೂ ಆಸಕ್ತಿ ಹುಟ್ಟಿಸಲು ಬಿಸಿಸಿಐ ಮುಂದಾಗಿದೆ. ಗುವಾಹಟಿಯಲ್ಲಿ ಈ ಬಾರಿ ಎರಡು ಪಂದ್ಯಗಳು ನಡೆಯಲಿದೆ. ರಾಜಸ್ಥಾನ ರಾಯಲ್ಸ್‌ನ ಎರಡು ತವರಿನ ಪಂದ್ಯಗಳು ಅಸ್ಸಾಂ ಕ್ರಿಕೆಟ್‌ ಅಸೋಸಿಯೇಶನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

Exit mobile version