Site icon Vistara News

IPL 2023: ಮುಂಬೈ,ಗುಜರಾತ್​ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್​ ವಿಳಂಬ; ಪಂದ್ಯ ರದ್ದಾದರೆ ಯಾರು ಫೈನಲ್​ಗೆ?

Narendra Modi Stadium, Ahmedabad

ಅಹಮದಾಬಾದ್​: ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟನ್ಸ್​ ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಡಾಟ್​ ವಿಳಂಬಗೊಂಡಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ಸಂಪೂರ್ಣವಾಗಿ ರದ್ದಾದರೆ ಆಗ ಯಾವ ತಂಡ ಫೈನಲ್​ ಪ್ರವೇಶಿಸಲಿದೆ ಎಂಬ ಮಾಹಿತಿ ಇಲ್ಲಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಉಭಯ ತಂಡಗಳ ಈ ಮಹತ್ವದ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಸದ್ಯ ಮಳೆ ಸಂಪೂರ್ಣವಾಗಿ ನಿಂತಿದ್ದು, ಕೊಂಚ ಸಮಯದ ಬಳಿಕ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಪಂದ್ಯ ನಡೆಯುವ ಮಧ್ಯೆ ಮಳೆ ಬಂದರೆ ಓವರ್​ ಕಡಿ ಅಥವಾ ಸೂಪರ್​ ಓವರ್​ ಮೂಲಕ ಫಲಿತಾಂಶಕ್ಕಾಗಿ ಪಂದ್ಯ ನಡೆಸಲಾಗುತ್ತದೆ. ಆದರೆ ಮಳೆಯಿಂದ ಈ ಪಂದ್ಯ ಎರಡು ಇನಿಂಗ್ಸ್​ ನಡೆಯದೇ ಹೋದರೆ ಮೀಸಲು ದಿನ ಇಲ್ಲವಾದ ಕಾರಣ ಲೀಗ್​ನಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್​ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ IPL 2023: ಟೂರ್ನಿಯಿಂದ ಹೊರಬಿದ್ದರೂ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡ ಆರ್​ಸಿಬಿ ನಾಯಕ

ಮಳೆಯಿಂದ ಪಂದ್ಯ ರದ್ದಾದರೆ ಗುಜರಾತ್​ ಟೈಟನ್ಸ್​ ತಂಡ ನೇರವಾಗಿ ಫೈನಲ್​ಗೆ ಪ್ರವೇಶ ಪಡೆಯಲಿದೆ. ಏಕೆಂದರೆ ಲೀಗ್​ ಹಂತದಲ್ಲಿ ಗುಜರಾತ್​ ಅಗ್ರಸ್ಥಾನದಲ್ಲಿತ್ತು. ಮೇ 28ರಂದು ನಡೆಯುವ ಫೈನಲ್​ನಲ್ಲಿ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಟ ನಡೆಸಲಿದೆ. ಫೈನಲ್​ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ ಪಡಿಸಿದರೆ ಆಗ ಮೀಸಲು ದಿನ ಇರಲಿದೆ.

ಮೇಲ್ನೋಟಕ್ಕೆ ಮುಂಬೈ ಮತ್ತು ಗುಜರಾತ್‌ ಸಮಬಲದ ತಂಡಗಳಾಗಿ ಗೋಚರಿಸುತ್ತಿವೆ. ಎರಡೂ ತಂಡಗಳ ನಾಯಕತ್ವ ಬಲಿಷ್ಠವಾಗಿದೆ. ಆಯ್ಕೆ ಪ್ರಕ್ರಿಯೆ ಸಮತೋಲನದಿಂದ ಕೂಡಿದೆ. ಕೊನೆಯ ನಿಮಿಷದ ತನಕ ಹೋರಾಡುವ ಕೆಚ್ಚು ಎರಡೂ ತಂಡಗಳ ವೈಶಿಷ್ಟ. ಹೀಗಾಗಿ ಸ್ಪರ್ಧೆ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.

ಗುಜರಾತ್​ ತಂಡ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತರೂ, ತವರಿನಲ್ಲಿ ಬಲಿಷ್ಠವಾಗಿದೆ. ಪಾಂಡ್ಯ ಪಡೆ ಇಲ್ಲಿ ಈವರೆಗೆ 8 ಪಂದ್ಯಗಳನ್ನು ಆಡಿದ್ದು 5 ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ತವರಿನ ಲಾಭ ಗುಜರಾತ್​ ತಂಡಕ್ಕಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಶುಭಮನ್​ ಗಿಲ್​ ಅವರು ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಅವರು ಸತತ ಶತಕ ಬಾರಿಸಿ ಸದ್ಯ 722 ರನ್​ ಗಳಿಸಿದ್ದಾರೆ. ಅವರು ಮುಂಬೈ ವಿರುದ್ಧ 8 ರನ್​ ಗಳಿಸಿದರೆ ಫಾಫ್​ ಡು ಪ್ಲೆಸಿಸ್​ ಅವರನ್ನು ಹಿಂದಿಕ್ಕಿ ಈ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

Exit mobile version