ಕ್ರಿಕೆಟ್
IPL 2023: ಮುಂಬೈ,ಗುಜರಾತ್ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ; ಪಂದ್ಯ ರದ್ದಾದರೆ ಯಾರು ಫೈನಲ್ಗೆ?
ಅಹಮದಾಬಾದ್ನಲ್ಲಿ ಮಳೆಯಾಗುತ್ತಿದ್ದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದ ಟಾಸ್ ವಿಳಂಬಗೊಂಡಿದೆ.
ಅಹಮದಾಬಾದ್: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಡಾಟ್ ವಿಳಂಬಗೊಂಡಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ಸಂಪೂರ್ಣವಾಗಿ ರದ್ದಾದರೆ ಆಗ ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬ ಮಾಹಿತಿ ಇಲ್ಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿರುವ ಉಭಯ ತಂಡಗಳ ಈ ಮಹತ್ವದ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಸದ್ಯ ಮಳೆ ಸಂಪೂರ್ಣವಾಗಿ ನಿಂತಿದ್ದು, ಕೊಂಚ ಸಮಯದ ಬಳಿಕ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಪಂದ್ಯ ನಡೆಯುವ ಮಧ್ಯೆ ಮಳೆ ಬಂದರೆ ಓವರ್ ಕಡಿ ಅಥವಾ ಸೂಪರ್ ಓವರ್ ಮೂಲಕ ಫಲಿತಾಂಶಕ್ಕಾಗಿ ಪಂದ್ಯ ನಡೆಸಲಾಗುತ್ತದೆ. ಆದರೆ ಮಳೆಯಿಂದ ಈ ಪಂದ್ಯ ಎರಡು ಇನಿಂಗ್ಸ್ ನಡೆಯದೇ ಹೋದರೆ ಮೀಸಲು ದಿನ ಇಲ್ಲವಾದ ಕಾರಣ ಲೀಗ್ನಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ IPL 2023: ಟೂರ್ನಿಯಿಂದ ಹೊರಬಿದ್ದರೂ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡ ಆರ್ಸಿಬಿ ನಾಯಕ
ಮಳೆಯಿಂದ ಪಂದ್ಯ ರದ್ದಾದರೆ ಗುಜರಾತ್ ಟೈಟನ್ಸ್ ತಂಡ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಏಕೆಂದರೆ ಲೀಗ್ ಹಂತದಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿತ್ತು. ಮೇ 28ರಂದು ನಡೆಯುವ ಫೈನಲ್‌ನಲ್ಲಿ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಟ ನಡೆಸಲಿದೆ. ಫೈನಲ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ ಪಡಿಸಿದರೆ ಆಗ ಮೀಸಲು ದಿನ ಇರಲಿದೆ.
ಮೇಲ್ನೋಟಕ್ಕೆ ಮುಂಬೈ ಮತ್ತು ಗುಜರಾತ್ ಸಮಬಲದ ತಂಡಗಳಾಗಿ ಗೋಚರಿಸುತ್ತಿವೆ. ಎರಡೂ ತಂಡಗಳ ನಾಯಕತ್ವ ಬಲಿಷ್ಠವಾಗಿದೆ. ಆಯ್ಕೆ ಪ್ರಕ್ರಿಯೆ ಸಮತೋಲನದಿಂದ ಕೂಡಿದೆ. ಕೊನೆಯ ನಿಮಿಷದ ತನಕ ಹೋರಾಡುವ ಕೆಚ್ಚು ಎರಡೂ ತಂಡಗಳ ವೈಶಿಷ್ಟ. ಹೀಗಾಗಿ ಸ್ಪರ್ಧೆ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.
ಗುಜರಾತ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತರೂ, ತವರಿನಲ್ಲಿ ಬಲಿಷ್ಠವಾಗಿದೆ. ಪಾಂಡ್ಯ ಪಡೆ ಇಲ್ಲಿ ಈವರೆಗೆ 8 ಪಂದ್ಯಗಳನ್ನು ಆಡಿದ್ದು 5 ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ತವರಿನ ಲಾಭ ಗುಜರಾತ್ ತಂಡಕ್ಕಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಶುಭಮನ್ ಗಿಲ್ ಅವರು ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಅವರು ಸತತ ಶತಕ ಬಾರಿಸಿ ಸದ್ಯ 722 ರನ್ ಗಳಿಸಿದ್ದಾರೆ. ಅವರು ಮುಂಬೈ ವಿರುದ್ಧ 8 ರನ್ ಗಳಿಸಿದರೆ ಫಾಫ್ ಡು ಪ್ಲೆಸಿಸ್ ಅವರನ್ನು ಹಿಂದಿಕ್ಕಿ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಕ್ರಿಕೆಟ್
ICC World Cup 2023: ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ
ಐಸಿಸಿ ಏಕದಿನ ವಿಶ್ವ ಕಪ್ ಟೂರ್ನಿಯ ವೇಳಾಪಟ್ಟಿ ಜೂನ್ 10, ಶನಿವಾರ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಲಂಡನ್: ಭಾರತದ ಆತಿಥ್ಯದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವ ಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಐಸಿಸಿ ಮೂಲಗಳ ಪ್ರಕಾರ ಜೂನ್ 10 ಶನಿವಾರ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಲಂಡನ್ನಲ್ಲಿ ನಡೆಯುತ್ತಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿದೆ. ಈ ಪಂದ್ಯ ವೀಕ್ಷಣೆಗೆ ಬಿಸಿಸಿಐ ಅಧಿಕಾರಿಗಳು ಮತ್ತು ಐಸಿಸಿ ಅಧಿಕಾರಿಗಳು ಲಂಡನ್ನಲ್ಲಿ ಸೇರಿದ್ದಾರೆ. ಇದೇ ವೇಳೆ ಸಭೆ ನಡೆಸಿ ಏಕದಿನ ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳನ್ನು ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಶನಿವಾರ ಇದು ಅಧಿಕೃತ ಪ್ರಕಟನೆ ಮೂಲಕ ಹೊರಬೀಳಲಿದೆ ಎನ್ನಲಾಗಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಈ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ.
ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಪಾಕಿಸ್ತಾನದ ಹೆಚ್ಚಿನ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆಯಲಿದೆ. ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಪಾಕಿಸ್ತಾನ ತಂಡ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಡುವುದಿಲ್ಲ ಎಂದು ಹೇಳಿದೆ. ಅಂತಿಮ ಪಟ್ಟಿ ಹೇಗೆ ಇರಲಿದೆ ಎಂದು ಶನಿವಾರ ಉತ್ತರ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ World Cup 2023: ಈ ಸ್ಟೇಡಿಯಂನಲ್ಲಿ ಪಾಕ್ ತಂಡ ಭಾರತ ವಿರುದ್ಧ ವಿಶ್ವ ಕಪ್ ಆಡಲ್ಲವಂತೆ!
48 ಪಂದ್ಯಗಳು
ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಅಕ್ಟೋಬರ್-ನವೆಂಬರ್ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಅಭ್ಯಾಸ ನಡೆಸುವ ತಾಣಗಳನ್ನು ಬಿಸಿಸಿಐ ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ವರದಿ ಮಾಡಿದೆ.
ಕ್ರಿಕೆಟ್
WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಔಟಾದ ತಕ್ಷಣ ಡಗೌಟ್ನಲ್ಲಿ ಆಹಾರ ಸೇವಿಸಿದ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಆದರೆ ಅವರು ಔಟ್ ಆಗಿರುವ ವಿಚಾರವನ್ನು ಹೊರತುಪಡಿಸಿ ಬೇರೆಯೇ ಕಾರಣಕ್ಕೆ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ದಿನದಾಟದ ವೇಳೆ ವಿರಾಟ್ ಅವರು 14 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಪೆವಿಲಿಯನ್‌ಗೆ ತೆರಳಿದ ವಿರಾಟ್ ಕೊಹ್ಲಿ ಯಾವುದೇ ಚಿಂತೆ ಇಲ್ಲದವರಂತೆ ಇಶಾನ್ ಕಿಶನ್ ಮತ್ತು ಗಿಲ್ ಜತೆ ಹರಾಟೆ ಹೊಡೆಯುತ್ತಾ ಆಹಾರ ಸೇವಿಸಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಕೊಹ್ಲಿಯ ಈ ವರ್ತನೆ ಕಂಡ ಅನೇಕ ಟೀಮ್ ಇಂಡಿಯಾದ ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟ್ ಪಂಡಿತರು ಟೀಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ತೀಕ್ಷ್ಣ ಮಾತುಗಳಿಂದ ಟ್ರೋಲ್ ಮಾಡಿದ್ದಾರೆ. ಐಪಿಎಲ್ನಲ್ಲಿ ಪಂದ್ಯ ಸೋತಾಗ ಕಣ್ಣೀರು ಸುರಿಸುವ ನೀವು ಭಾರತ ತಂಡಕ್ಕೆ ಆಡುವಾಗ ಮಾತ್ರ ಈ ರೀತಿ ಮಾಡುತ್ತೀರಿ ಇದರ ಅರ್ಥ ನೀವು ಹಣಕ್ಕಾಗಿ ಆಡುತ್ತೀರಿ, ದೇಶಕಾಕ್ಕಾಗಿ ಅಲ್ಲ ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ WTC Final 2023: ಇನಿಂಗ್ಸ್ ಹಿನ್ನಡೆ ಭಯದಲ್ಲಿ ಟೀಮ್ ಇಂಡಿಯಾ
Seriousness of Virat Kohli for IPL vs India#INDvAUS pic.twitter.com/4CKM9LK80K
— Ctrl C Ctrl Memes (@Ctrlmemes_) June 8, 2023
ತಂಡ ಸಂಕಷ್ಟದಲ್ಲಿದ್ದರೂ ನೀವು ಈ ರೀತಿ ಆನಂದದಲ್ಲಿರುವುದನ್ನು ಕಾಣುವಾಗ ಭಾರತ ತಂಡಕ್ಕಿಂತ ನಿಮಗೆ ಐಪಿಎಲ್ ಟೂರ್ನಿಯೇ ಹೆಚ್ಚಾದಂತೆ ಕಾಣುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗ ಟ್ರೋಲ್ ಮಾಡಿದ್ದಾರೆ. ಇನ್ನಿ ಕೆಲವರು ಅರೇ ನೀವು ತಿನ್ನುತ್ತಿರುವ ಆಹಾರ ಯಾವುದು? ಎಂದು ಪ್ರಶ್ನೆ ಮಾಡುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.
Never compare great Sachin Tendulkar with money makers like Virat Kohli#INDvAUS pic.twitter.com/ML58p3jdxc
— Ctrl C Ctrl Memes (@Ctrlmemes_) June 8, 2023
ಎಷ್ಟ್ರೇ ಸಾಧನೆ ಮಾಡಿದ್ದರೂ ಹಣಕ್ಕೆ ಆಸೆಪಡುವ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಜತೆ ಯಾವತ್ತೂ ಹೋಲಿ ಮಾಡಬೇಡಿ ಎಂದು ನೆಟ್ಟಿಗೊರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕೊಹ್ಲಿಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಲವು ಕಾರಣಕ್ಕೆ ಟ್ರೋಲ್ ಆಗುತ್ತಿದೆ.
Live News
WTC Final 2023: ಭಾರತ-ಆಸೀಸ್ ಮೂರನೇ ದಿನದಾಟದ ಹೈಲೆಟ್ಸ್
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟದ ಹೈಲೆಟ್ಸ್ ಇಲ್ಲಿದೆ.
ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟದ ಹೈಲೆಟ್ಸ್ ಇಲ್ಲಿದೆ.
ಕ್ರಿಕೆಟ್
Wrestlers Protest: ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ವದ ತಿರುವು
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದಾಗಿ ಕೇಸು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ ಟರ್ನ್ ಹೊಡೆದಿದ್ದಾರೆ.
ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿದೆ. ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಜೂನ್ 15ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್ ಹೊಡೆದಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿರುವುದಾಗಿ ಅಪ್ರಾಪ್ತ ಬಾಲಕಿಯ ತಂದೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಜತೆಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಬಾಲಕಿಯ ತಂದೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಇಷ್ಟು ದಿನ ಎಲ್ಲ ಮಹತ್ವದ ಟೂರ್ನಿಯನ್ನು ಬಹಿಷ್ಕರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಸೇರಿ ಹಲವು ಕುಸ್ತಿಪಟುಗಳ ಹೋರಾಟ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಪ್ರಕರಣ ದಾಖಲಿಸಲು ಕಾರಣವೇನು?
ಬ್ರಿಜ್ ಭೂಷಣ್ ವಿರುದ್ಧ ಈ ಸುಳ್ಳು ಪ್ರಕರಣ ದಾಖಲಿಸಲು ಪ್ರಮುಖ ಕಾರಣ ಏನೆಂಬುದನ್ನು ಕೂಡ ಬಾಲಕಿಯ ತಂದೆ ಹೇಳಿದ್ದಾರೆ. 2022ರಲ್ಲಿ ಲಕ್ನೋದಲ್ಲಿ ನಡೆದಿದ್ದ ಏಷ್ಯನ್ ಅಂಡರ್-17 ಚಾಂಪಿಯನ್‌ಶಿಪ್ ಟ್ರಯಲ್ಸ್ನ ಫೈನಲ್‌ನಲ್ಲಿ ಸೋತ ಬಳಿಕ ತನ್ನ ಮಗಳಿಗೆ ಭಾರತೀಯ ತಂಡಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ರೆಫ್ರಿಯ ತಪ್ಪು ನಿರ್ಧಾರಗಳಿಂದಾಗಿ ಮಗಳು ಫೈನಲ್‌ನಲ್ಲಿ ಸೋಲು ಕಾಣಬೇಕಾಯಿತು. ಇದಕ್ಕೆ ಬ್ರಿಜ್ ಭೂಷಣ್ ಅವರೇ ಕಾರಣ. ಮಗಳ ಒಂದು ವರ್ಷದ ಪರಿಶ್ರಮ ನೀರುಪಾಲಾಯಿತು ಎಂಬ ಕಾರಣಕ್ಕೆ ನಾನು ಬ್ರಿಜ್ ಭೂಷಣ್ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಕೈಗೊಂಡೆ ಎಂದು ಬಾಲಕಿಯ ತಂದೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ Wrestlers Protest: ಜೂನ್ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು
ರೆಫ್ರಿ ತಪ್ಪಿಗೆ ಬ್ರಿಜ್ಭೂಷಣ್ ಮೇಲೇಕೆ ಕೋಪ?
ರೆಫ್ರಿ ಮಾಡಿದ ತಪ್ಪಿಗೆ ಬ್ರಿಜ್ ಭೂಷಣ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಬಾಲಕಿಯ ತಂದೆ, ರೆಫರಿಯನ್ನು ನಿಯೋಜಿಸಿದವರು ಯಾರು? ಅದು ಫೆಡರೇಶನ್, ಫೆಡರೇಶನ್ ಮುಖ್ಯಸ್ಥರು ಯಾರು? ಬ್ರಿಜ್ ಭೂಷಣ್. ಹೀಗಾಗಿ ಅವರ ಮೇಲೆ ನಾನು ದ್ವೇಷ ಸಾಧಿಸಲು ಮುಂದಾದೆ ಎಂದರು. ಇದೇ ವೇಳೆ ಪಿಟಿಐ ಸಂದರ್ಶಕ, ನೀವು ನೀಡಿದ ದೂರಿನ ಮೇರೆಗೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ತನಿಖೆ ನಡೆಯುತ್ತಿದೆ. ಈಗ ಏಕೆ ನೀವು ನಿಮ್ಮ ನಿರ್ಧಾರ ಬದಲಾಯಿದ್ದೀರ ಎಂಬ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಕೋರ್ಟ್‌ನಲ್ಲಿ ಸತ್ಯ ಹೇಗಾದರೂ ಹೊರಬರುತ್ತದೆ ಎಂದು ನನಗೆ ತಿಳಿದಿದೆ. ಆದರೆ ಇದೀಗ ಅಲ್ಲಿಗೆ ಹೋಗುವಾ ಮೊದಲೇ ಸತ್ಯ ಬಹಿರಂಗಗೊಂಡರೆ ಉತ್ತಮ ಎಂದು ನನಗೆ ಅನಿಸಿತು ಇದೇ ಕಾರಣಕ್ಕೆ ನಾನು ನನ್ನ ತಪ್ಪನ್ನು ಒಪ್ಪಿಕೊಂಡೆ ಎಂದರು.
ಒಂದು ಸೋಲಿಗೆ ಈ ನಿರ್ಧಾರ ಏಕೆ?
ಕೇವಲ ಒಂದು ಪಂದ್ಯದ ಸೋಲಿಗಾಗಿ ನೀವು ಇಷ್ಟು ಕೀಳು ಮಟ್ಟದ ಆರೋಪ ಹೊರಿಸಲು ಕಾರಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಕುಸ್ತಿಪಟುವಿನ ತಂದೆ, ಇದು ನಿಮಗೆ ಕೇವಲ ಒಂದು ಸೋಲಾಗಿ ಕಾಣಬಹುದು. ಆದರೆ ಇದು ಒಂದು ವರ್ಷದ ಕಠಿಣ ಪರಿಶ್ರಮ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಷ್ಟಪಟ್ಟು ಪುನರಾಗಮನ ಮಾಡುತ್ತಿರುವ ಮಗುವಿನ ನೋವು ಒಬ್ಬ ತಂದೆಗೆ ಮಾತ್ರ ಗೊತ್ತು. ನನ್ನ ಮಗಳ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆ ಒಂದು ಪಂದ್ಯದ ಸೋಲಿನಿಂದ 4 ಅಂತಾರಾಷ್ಟ್ರೀಯ ಟೂರ್ನಿ ಕೈತಪ್ಪಿತು. ಇದೆಲ್ಲವನ್ನು ಕಂಡ ನಾನು ಅಂತಿಮವಾಗಿ ಈ ನಿರ್ಧಾರವನ್ನು ಕೈಗೊಂಡೆ ಎಂದು ಹೇಳಿದರು.
ದೂರು ಹಿಂಪಡೆಯಲು ಕಾರಣವೇನು?
ತಮ್ಮ ತಪ್ಪನ್ನು ಮತ್ತು ದೂರು ಹಿಂಪಡೆಯುವ ಕುರಿತು ಸ್ಪಷ್ಟನೆ ನೀಡಿರುವ ಕುಸ್ತಿಪಟುವಿನ ತಂದೆ, ತನ್ನ ಮಗಳ ಸೋಲಿನ ಬಗ್ಗೆ ನ್ಯಾಯಯುತ ತನಿಖೆಗೆ ಸರ್ಕಾರ ಭರವಸೆ ನೀಡಿದೆ. ಹಾಗಾಗಿ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಹೇಳಿದರು.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ24 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ದೇಶ17 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!