Site icon Vistara News

IPL 2023 : ಸತತವಾಗಿ ಸುರಿದ ಮಳೆ, ಐಪಿಎಲ್​ ಫೈನಲ್ ಮೀಸಲು ದಿನಕ್ಕೆ ಮುಂದೂಡಿಕೆ

IPL 2023 Final

#image_title

ಅಹಮದಾಬಾದ್​: ಐಪಿಎಲ್​ 16ನೇ ಆವೃತ್ತಿಯ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ. ಮೇ 29 ಸೋಮವಾರ ಮೀಸಲು ದಿನ. ಅಂದು ಪೂರ್ಣ 20 ಓವರ್​ಗಳ ಪಂದ್ಯ ನಡೆಯುವ ನಿರೀಕ್ಷೆಯಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಗುಜರಾತ್​ ಟೈಟನ್ಸ್​ ತಂಡಗಳ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ಆಯೋಜನೆಗೊಂಡಿತ್ತು. ಆದರೆ, ರಾತ್ರಿ 11 ಗಂಟೆಯವರೆಗೂ ಮಳೆ ನಿರಂತರವಾಗಿ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿ ಸೂಚಿಸಿದರು.

ಐಪಿಎಲ್​ನ 16 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಋತುವಿನ ಚಾಂಪಿಯನ್​ ತಂಡವನ್ನು ನಿರ್ಧರಿಸಲು ಮೀಸಲು ದಿನದ ಮೊರೆ ಹೋಗಲಾಯಿತು. ಸೋಮವಾರವೂ ಮಳೆ ಸುರಿಯುವ ಮುನ್ಸೂಚನೆಯಿದ್ದು , ಅದು ನಿಜವಾದರೆ ಚಾಂಪಿಯನ್​ಗಳ ನಿರ್ಧಾರ ಮತ್ತಷ್ಟು ಕ್ಲಿಷ್ಟವಾಗಬಹುದು.

ಭಾನುವಾರ ಸಂಜೆ ಸಂಜೆ 7 ರಿಂದ ರಾತ್ರಿ 11 ರವರೆಗೆ ಅಭಿಮಾನಿಗಳು, ಆಟಗಾರರು, ಕ್ರಿಕೆಟ್​​ ತಜ್ಞರು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ರಾತ್ರಿ 9 ಗಂಟೆಗೆ ಒಂದು ಬಾರಿ ಮಳೆ ನಿಂತಾಗಲೂ ಪಂದ್ಯ ನಡೆಯುವ ಸೂಚನೆ ದೊರೆಯಿತು. ಪಿಚ್​​ಗೆ ಹೊದಿಸಲಾಗಿದ್ದ ಟಾರ್ಪಾಲ್​ ಕವರ್​ಗಳನ್ನು ಹೊರಕ್ಕೆ ತೆಗೆಯಲಾಗಿತ್ತು. ಆಟಗಾರರೂ ವಾರ್ಮ್​ಅಪ್​ಗಾಗಿ ಮೈದಾನಕ್ಕೆ ಇಳಿದಿದ್ದರು. ಈ ಸಕಾರಾತ್ಮಕ ವಾತಾವರಣ ಹಚ್ಚು ಹೊತ್ತು ಇರಲಿಲ್ಲ. ತುಂತುರು ಮಳೆ ದೊಡ್ಡ ದೊಡ್ಡ ಹನಿಯಾಗಿ ಪರಿವರ್ತನೆಗೊಂಡಿತು. ನಾಲ್ಕು ಗಂಟೆಗಳ ದೀರ್ಘ ಕಾಯುವಿಕೆ ಬಳಿಕ ಮುಂದೂಡಿಕೆ ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ : IPL 2023 : ಎರಡನೇ ಮಗಳು ಹುಟ್ಟಿದ ಸಂತಸ ಹಂಚಿಕೊಂಡ ಅಂಬಾಟಿ ರಾಯುಡು

ರಾತ್ರಿ 10:30 ರ ಸುಮಾರಿಗೆ ಮೀಸಲು ದಿನದ ಸಾಧ್ಯತೆಯ ಚರ್ಚೆ ಆರಂಭಗೊಂಡಿತ್ತು. ಫೀಲ್ಡ್​ ಅಂಪೈರ್​​ಗಳಾದ ನಿತಿನ್ ಮೆನನ್ ಮತ್ತು ರಾಡ್ ಟಕರ್ ಅವರು ಪರಿಸ್ಥಿತಿಗಳನ್ನು ಉದ್ದೇಶಿಸಿ ಮಾತನಾಡಿ, ಇಷ್ಟೊಂದು ಮಳೆಯಾದರೆ ಆಟವಾಡಿಸಲು ಮೈದಾನ ಅನುಕೂಲಕರವಾಗಿರುವುದಿಲ್ಲ ಎಂದು ಹೇಳಿದರು. ಈ ವೇಳೆಯೇ ಮುಂದೂಡಿಕೆ ನಿರ್ಧಾರವಾಯಿತು.

ರಾತ್ರಿ 9 ಗಂಟೆ ಸುಮಾರಿಗೆ ಮಳೆ ಕಡಿಮೆಯಾದಾಗ, ಪರಿಷ್ಕೃತ ಆಟದ ಪರಿಸ್ಥಿತಿಗಳನ್ನು ವಿವರಿಸಲಾಯಿತು. ಒಂದು ವೇಳೆ ರಾತ್ರಿ 9.35ಕ್ಕೆ ಮುಂಚಿತವಾಗಿ ಫೈನಲ್ ಪಂದ್ಯ ಆರಂಭವಾಗಿದ್ದರೆ 20 ಓವರ್​ಗಳ ಪೂರ್ಣ ಪಂದ್ಯ ನಡೆಯುತ್ತಿತ್ತು. ರಾತ್ರಿ 9:45 ಕ್ಕೆ ಪ್ರಾರಂಭವಾಗಿದ್ದರೆ ತಲಾ 19 ಓವರ್​ಗಳ ಪಂದ್ಯ ನಡೆಯುತ್ತಿತ್ತು. ರಾತ್ರಿ 10 ಗಂಟೆಗಾಧರೆ 17 ಓವರ್​ಗಳ ಪಂದ್ಯ ಮತ್ತು ರಾತ್ರಿ 10:15 ಮತ್ತು 10:30 ರವರೆ ಪ್ರತಿ ತಂಡಕ್ಕೆ 15 ಓವರ್​ಗಳ ಪಂದ್ಯ ನಡೆಸುವ ತೀರ್ಮಾನ ಕೈಗೊಳ್ಳಲಾಗಿತ್ತು. 12:06ಕ್ಕೆ ಆರಂಭಗೊಂಡಿದ್ದರೆ ಐದು ಓವರ್​ಗಳ ಶೂಟೌಟ್ ಮೂಲಕ ವಿಜೇತರ ನಿರ್ಧಾರವಾಗುತ್ತಿತ್ತು. ಅಚ್ಚರಿ ಎಂಬಂತೆ ರಾತ್ರಿ 10:50ಕ್ಕೆ ಮಳೆ ನಿಂತಿತು. ಆದರೆ, ಅಧಿಕಾರಿಗಳ ಆಸಕ್ತಿ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡುವುದಾಗಿತ್ತು.

ಮೀಸಲು ದಿನ (ಅಂದರೆ ಮೇ 29) ರದ್ದಾದರೆ, ಗುಜರಾತ್ ಟೈಟಾನ್ಸ್ ಐಪಿಎಲ್ 2023 ರ ಚಾಂಪಿಯನ್ ಆಗಲಿದೆ, ಏಕೆಂದರೆ ಗುಂಪು ಹಂತದ ನಂತರ ಚೆನ್ನೈ ಸೂಪರ್ ಕಿಂಗ್ಸ್ (2) ಗಿಂತ ಹೆಚ್ಚಿನ (1) ಸ್ಥಾನವನ್ನು ಗಳಿಸಿತ್ತು.

Exit mobile version