Site icon Vistara News

IPL 2022| ಹೇಗಿದೆ ಹೊಸ ಕ್ಯಾಪ್ಟನ್‌ಗಳ ಆಟ?

IPL2022: ಈ ಬಾರಿಯ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿ ನಾಲ್ಕು ಹೊಸ ಕ್ಯಾಪ್ಟನ್‌ಗಳು ತಂಡದ ಜವಾಬ್ಧಾರಿ ಹೊರಲು ಸಿದ್ಧರಾಗಿದ್ದರು. ಆದರೆ ಅವರು ಈವರೆಗೆ ತಂಡದ ನೇತೃತ್ವವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಲ್ಲಿವರೆಗೆ ಯಶಸ್ವಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಪಂದ್ಯಗಳ ಅಂಕಪಟ್ಟಿ ಇಲ್ಲಿದೆ.

ಹಾರ್ದಿಕ್‌ ಪಾಂಡ್ಯ- Gujrat Titans

ತಂಡದ ಸ್ಥಾನ: 1/10
ಪಂದ್ಯ: 7
ಗೆಲುವು: 6

ಗುಜರಾತ್‌ ಟೈಟಾನ್ಸ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ. ಈವರೆಗೆ ಆಡಿರುವ ಒಟ್ಟು 7 ಪಂದ್ಯಗಳಲ್ಲಿ 6 ರಲ್ಲಿ ಗೆಲವು ಸಾಧಿಸಿ ಮುನ್ನುಗ್ಗುತ್ತಿರುವ ತಂಡ. ಇದು ಗುಜರಾತ್‌ ತಂಡದ ನೇತೃತ್ವ ವಹಿಸಿರುವ ಹಾರ್ದಿಕ್‌ ಪಾಂಡ್ಯ ಅವರ ಯಶಸ್ಸು ಎಂದು ಹೇಳಬಹುದು. ಹಾರ್ದಿಕ್‌ ಹಿರಿಯ ಆಟಗಾರರೊಂದಿಗೆ ಆಡಿದ ಅನುಭವವನ್ನು ಹೊಂದಿದ್ದು ಒಂದು ತಂಡದ ಮುಂದಾಳತ್ವದ ಜವಾಬ್ದಾರಿ ಇದೇ ಮೊದಲ ಬಾರಿಗೆ ವಹಿಸಿದ್ದು. ಅಲ್ಲದೆ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಕೂಡ ಶೈನ್‌ ಆಗಿದ್ದಾರೆ. ಈವರೆಗೆ ಒಟ್ಟು 6 ಇನ್ನಿಂಗ್ಸ್‌ನಲ್ಲಿ 295 ರನ್‌ಗಳಿಸಿದ್ದಾರೆ ಹಾಗೂ 73.75 ಆವರೇಜ್‌ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಹಾರ್ದಿಕ್‌ ಈಗ ಮೂರನೇ ಸ್ಥಾನದಲ್ಲಿ ಬ್ಯಾಟ್‌ ಮಾಡುತ್ತಿದಾರೆ.

‌ಅವರ ಹೊಸ ಪ್ರಯೋಗಗಳು ತಂಡದ ಯಶಸ್ಸಿಗೆ ಕಾರಣ ಆಗಿರಬಹುದು. ಡೇವಿಡ್‌ ಮಿಲ್ಲರ್‌ನಂತಹ ಹಿರಿಯ ಆಟಗಾರರ ಸಹಕಾರರದಿಂದ ತಂಡವನ್ನು ಸಮರ್ಪಕವಾಗಿ ಮುನ್ನೆಡೆಸುತ್ತಿದ್ದಾರೆ

ಫಾಫ್‌ ಡು ಪ್ಲೆಸಿಸ್- Royal Challengers Bangalore

ತಂಡದ ಸ್ಥಾನ: 5/10
ಆಡಿದ ಒಟ್ಟು ಪಂದ್ಯ: 8
ಗೆಲುವು: 5

ಫಾಫ್‌ ಡು ಪ್ಲೆಸಿಸ್‌ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್‌ಶಿಪ್‌ ಮಾಡುತ್ತಿದಾರೆ ಆದರೆ ಅವರಿಗೆ ನಾಯಕತ್ವದ ಅನುಭವವಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ತಂಡದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಐಪಿಎಲ್‌ನಲ್ಲಿ ಅವರು ಹೇಗೆ ನೀಭಾಯಿಸಬಹುದು ಎಂಬ ಪ್ರಶ್ನೆಯಿತ್ತು. ಈ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದು ಹಿರಿಯ ಆಟಗಾರ ಕ್ಯಾಪ್ಟನ್‌ ಕೂಲ್‌ ಮುಂದಾಳತ್ವದಲ್ಲಿ ಪಳಗಿದವರು. ಈವರೆಗೂ ಕಪ್‌ ಗೆಲ್ಲದ ಆರ್‌ಸಿಬಿ ತಂಡವನ್ನು ಈಬಾರಿ ಐಪಿಎಲ್‌ನಲ್ಲಿ ಗೆಲುವಿನತ್ತ ಕೊಂಡೊಯ್ಯುವಲ್ಲಿ ಫಾಫ್‌ ಯಶಸ್ವಿ ಆಗುತ್ತಾರೆಯೇ ಎಂಬ ಕುತೂಹಲವಿತ್ತು. ತಂಡದ ಇತರ ಆಟಗಾರರು ಸಮರ್ಪಕ ಆಟ ಪ್ರದರ್ಶಿಸದಿದ್ದಾಗ ತಂಡಕ್ಕೆ ನೆರವಾಗಿದ್ದರು. ಆರ್‌ಸಿಬಿ ತಂಡದಲ್ಲಿ ದಿನೇಶ್‌ ಕಾರ್ತಿಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಶಹ್‌ಭಾಜ್‌ ಅಹ್ಮದ್‌ ಫಾಫ್‌ ಡು ಪ್ಲೆಸಿಸ್‌ಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಸಾಥ್‌ ನೀಡಿದ್ದಾರೆ. ತಂಡದ ಬೌಲರ್ಸ್‌ ಕೂಡ ಈವರೆಗೆ ಉತ್ತಮ ಆಟವಾಡಿದ್ದಾರೆ.

ಫಾಫ್ ಡು ಪ್ಲೆಸಿಸ್‌ 8 ಪಂದ್ಯಗಳಲ್ಲಿ 255 ರನ್‌ಗಳಿಸಿ 31.25 ಸರಾಸರಿ ಹೊಂದಿದ್ದಾರೆ. ಲಖನೌ ತಂಡದ ವಿರುದ್ಧ 96 ರನ್‌ ಬಾರಿಸಿ ಅದ್ಭುತ ಆಟವಾಡಿದ್ದರು. ಆದರೆ ಹೈದ್ರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅತಿ ಕಡಿಮೆ ರನ್‌ಗೆ ತಂಡ ಆಲ್‌ ಔಟ್‌ ಆಗಿತ್ತು. ಈವರೆಗೆ ತಂಡವು ಸಮಾಧಾನಕರ ಆಟವನ್ನು ಪ್ರದರ್ಶಿಸುತ್ತಿದೆ.

ಫಾಫ್‌ ಡು ಪ್ಲೆಸಿಸ್‌ಗೆ ಅನುಭವೀ ಕ್ಯಾಪ್ಟನ್‌ ವಿರಾಟ್‌ ಹಾಗೂ ದಿನೇಶ್‌ ಕಾರ್ತಿಕ್‌ ಬೆನ್ನೆಲುಬಾಗಿ ನಿಂತು ಸಪೋರ್ಟ್‌ ಮಾಡುತಿದ್ದಾರೆ.

ಮಯಾಂಕ್‌ ಅಗರ್‌ವಾಲ್‌ – Punjab Kings

ತಂಡದ ಸ್ಥಾನ: 8/10
ಪಂದ್ಯ: 7
ಗೆಲುವು: 3

ಪಂಜಾಬ್‌ ತಂಡದಲ್ಲಿ ಅನೇಕ ಅನುಭವೀ ಆಟಗಾರರಿದ್ದಾರೆ. ತಂಡಕ್ಕೆ ಅನೀಲ್‌ ಕುಂಬ್ಳೆ ಕೋಚ್‌ ಆಗಿದ್ದು ತಂಡದ ಬಲ ಹೆಚ್ಚಿಸಿದೆ. ಶಿಖರ್‌ ಧವನ್‌, ಜಾನಿ ಬೇರ್‌ಸ್ಟೋ ಒಡಿಯನ್‌ ಸ್ಮಿತ್‌ ಹೀಗೆ ಹಲವು ದಿಗ್ಗಜರು ಪಂಜಾಬ್‌ ತಂಡಕ್ಕೆ ನೆರವಾಗಿದ್ದಾರೆ. ಆದರೆ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಪಂಜಾಬ್‌ ತಂಡ ವಿಫಲವಾಗುತ್ತಿದೆ. ತಂಡದ ನಾಯಕ ಮಯಾಂಕ್‌ ಅಗರ್‌ವಾಲ್‌ ಒಳ್ಳೆಯ ಸಾಮರ್ಥ್ಯ ಹೊಂದಿರುವ ಆಟಗಾರ ಆದರೆ ಈ ಬಾರಿ ಐಪಿಎಲ್‌ನಲ್ಲಿ ಈವರೆಗೆ ಆಡಿದ 6 ಪಂದ್ಯಗಳಲ್ಲಿ 118 ರನ್‌ ಮಾತ್ರ ಗಳಿಸಿದ್ದಾರೆ. ಪಂಜಾಬ್‌ ತಂಡ ಪ್ಲೇ ಆಫ್‌ ತಲುಪಬಹುದೇ? ಎಂದು ಕಾದುನೊಡಬೇಕಿದೆ.

ರವೀಂದ್ರ ಜಡೇಜಾ – Chennai Super Kings

ಸ್ಥಾನ: 9/10
ಪಂದ್ಯ- 7
ಗೆಲುವು: 2

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್‌ ಧೋನಿ ಕೆಳಗಿಳಿದ ಮೇಲೆ ಅವರ ಸ್ಥಾನವನ್ನು ರವೀಂದ್ರ ಜಡೇಜಾ ತುಂಬಿದ್ದಾರೆ. ರವೀಂದ್ರ ಜಡೇಜಾ ಭಾರತ ತಂಡದ ಭರವಸೆಯ ಆಟಗಾರ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಜಡೇಜಾ ಅವರಿಗೆ ಅವರೇ ಸಾಟಿ ಎನ್ನುವಂತೆ ಆಡುವ ಆಟಗಾರ. ಹಾಗಾಗಿ ಅವರೇ ನಾಯಕತ್ವ ಸ್ಥಾನಕ್ಕೆ ಸೂಕ್ತ ಎಂದು ಆಯ್ಕೆ ಮಾಡಲಾಯಿತು. ಆದರೆ, ಜಡೇಜಾ ಈ ದೊಡ್ಡ ಜವಾಬ್ಧಾರಿಯನ್ನು ಹೊರುವಲ್ಲಿ ಸಿದ್ಧರಿರಲ್ಲವೇ ಎಂಬ ಅನುಮಾನ ಕಾಡುತ್ತದೆ.

ಈವರೆಗೆ ಆಡಿದ 7 ಪಂದ್ಯಗಳಲ್ಲಿ ಜಡೇಜಾ 91 ರನ್‌ ಮಾತ್ರ ಗಳಿಸಿದ್ದಾರೆ ಹಾಗೂ 18.20 ಸರಾಸರಿ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ಇನ್ನೂ ಉತ್ತಮ ಆಟ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವವರು ಈವರೆಗೆ 24 ಓವರ್‌ ಮಾಡಿ 5 ವಿಕೆಟ್‌ ಪಡೆದಿದ್ದಾರೆ. ಜಡೆಜಾ ಅವರಿಂದ ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಅವರ ಅಭಿಮಾನಿಗಳು ಹಾಗೂ ತಂಡದವರು ಹೊಂದಿದ್ದಾರೆ. ನಾಯಕತ್ವಕ್ಕೆ ಹೊಸಬರಾದ ಜಡೇಜಾ ಅವರಿಗೆ ಧೋನಿ ಸಂಪೂರ್ಣ ಮಾರ್ಗದರ್ಶನ ಮಾಡುತ್ತಿರುವಂತೆ ಕಾಣುತ್ತದೆ. ಆದರೆ ಈ ಹಿಂದೆ ಜಡೆಜಾ ಅವರೇ ಹೇಳಿದಂತೆ ಅವರು ಇನ್ನೂ ಕ್ಯಾಪ್ಟನ್ಸಿ ಕಲಿಯುತ್ತದ್ದಾರೆಯೇ? ಧೋನಿ ಇನ್ನೊಂದು ವರ್ಷ ತಂಡದ ನಾಯಕರಾಗಿ ಮುಂದುವರಿಯಬೇಕಿತ್ತಾ? ಎಂಬ ಗೊಂದಲ ಅಭಿಮಾನಿಗಳಿಗೆ ಉಂಟಾಗಿದೆ.

ಇದನ್ನೂ ಓದಿ: IPL 2022 | ದುಬಾರಿ ದುಡ್ಡಿಗೆ ಮಾರಾಟವಾದವರು ಹೇಗೆ ಆಡಿದರು ನೋಡಿ !

Exit mobile version