IPL2022 : ಐಪಿಎಲ್ 2022ರ ಪ್ಲೇ ಆಫ್ ಶುರುವಾಗಲು ಇನ್ನು ಕೇವಲ 5 ಪಂದ್ಯಗಳು ಮಾತ್ರ ಬಾಕಿ ಇವೆ. ಪ್ಲೇ ಆಫ್ ತಲುಪಲು ಎಲ್ಲಾ ತಂಡಗಳು ಬಿರುಸಿನ ಸೆಣಸಾಟ ನಡೆಸುತ್ತಿವೆ. ಯಾವ ಯಾವ ತಂಡಗಳು ಪ್ಲೇ ಆಫ್ ತಲುಪಬಹುದು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗಿದೆ.
ಇನ್ನು ಉಳಿದ 5 ಪಂದ್ಯಗಳಲ್ಲಿ ಯಾವ ತಂಡ ಗೆಲ್ಲುವುದರಿಂದ ಯಾವ ತಂಡಕ್ಕೆ ನಷ್ಟ, ಹಾಗೂ ಹಾಗೂ ಯಾವ ತಂಡ ಸೋಲುವುದರಿಂದ ಯಾವ ತಂಡಕ್ಕೆ ಲಾಭ ಎಂಬ ಮಾಹಿತಿ ಇಲ್ಲಿ ಪ್ರಸ್ತುತ ಪಡಿಸಲಾಗಿದೆ.
ಸಾಧ್ಯತೆಗಳು ಹೀಗಿವೆ:
1. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪಂದ್ಯದಿಂದ ಹೊರಹೋಗುವುದು ಖಚಿತವಾಗಿದೆ. ಹಾಗೂ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲಿದ್ದು, ಪ್ಲೇ ಆಫ್ ತಲುಪುವುದು ನಿಶ್ಚಿತ.
2. Sunrisers Hyderabad
ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮಂಗಳವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದರಿಂದ ಪ್ಲೇ ಆಫ್ ತಲುಪುವ ಸಾಧ್ಯತೆ 12.5%ರಷ್ಟು ಹೆಚ್ಚಿದೆ.
ಎಸ್.ಆರ್.ಎಚ್ ತಂಡ ಇನ್ನು ತನ್ನ ಕೊನೆಯ ಪಂದ್ಯವನ್ನು ಗೆಲ್ಲಬೇಕು ಹಾಗೂ ಆರ್.ಸಿ.ಬಿ. ತಂಡ ಜಿ.ಟಿ. ತಂಡದ ವಿರುದ್ಧ ಸೋಲಬೇಕು. ಆಗ ಎಸ್.ಆರ್.ಎಚ್ ಪ್ಲೇ ಆಫ್ ತಲುಪಬಹುದು.
3. kolkata knight riders
ಕೆಕೆಆರ್ ತಂಡಕ್ಕೂ ಪ್ಲೇ ಆಫ್ ತಲುಪಲು 12.5%ರಷ್ಟು ಅವಕಾಶವಿದೆ.
ಕೆಕೆಆರ್ ಪ್ಲೇ ಆಫ್ ತಲುಪಬೇಕೆಂದರೆ; ಮೊದಲಿಗೆ ಲಖನೌ ವಿರುದ್ಧದ ಪಂದ್ಯವನ್ನು ಕೊಲ್ಕತ್ತಾ ಗೆಲ್ಲಬೇಕು. ನಂತರ, ಆರ್‌ಸಿಬಿ ಹಾಗೂ ಜಿಟಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಬೇಕು. ಅಲ್ಲದೆ, ದಿಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವಿರುದ್ಧ ಗೆಲ್ಲಬೇಕು.
4. Punjab Kings
ಮೊದಲ ನಾಲ್ಕು ಸ್ಥಾನದಲ್ಲಿ ಸೇರಲು ಪಂಜಾಬ್ ತಂಡಕ್ಕೂ 12.5%ರಷ್ಟು ಅವಕಾಶವಿದೆ.
ಪಂಜಾಬ್ ಪ್ಲೇ ಆಫ್ ತಲುಪಬೇಕೆಂದರೆ ಎಸ್.ಆರ್.ಎಚ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲ್ಲಬೇಕು. ಆರ್‌ಸಿಬಿ ವಿರುದ್ಧ ಗುಜರಾತ್ ಗೆಲ್ಲಬೇಕು ಹಾಗೂ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಗೆಲ್ಲಬೇಕು.
ಪ್ರಸ್ತುತ ಅಂಕಪಟ್ಟಿ ಹೀಗಿದೆ: ನೋಡಲು ಇಲ್ಲಿ ಒತ್ತಿ.
5. Delhi Capitals
ದಿಲ್ಲಿ ಕ್ಯಾಪಿಟಲ್ಸ್‌ಗೆ ಪ್ಲೇ ಆಫ್ ತಲುಪಲು ಹೆಚ್ಚಿನ ಅವಕಾಶವಿದೆ. ಸುಮಾರು 75%ರಷ್ಟು ಸಾಧ್ಯತೆ ಈ ತಂಡಕ್ಕಿದೆ.
ಮುಂಬೈ ವಿರುದ್ಧದ ಮುಂದಿನ ಪಂದ್ಯದಲ್ಲಿ ದಿಲ್ಲಿ ಗೆಲ್ಲಬೇಕು. ನಂತರ, ಕೊಲ್ಕತ್ತಾ ಹಾಗೂ ಚೆನ್ನೈ ತಂಡಗಳು ಲಖನೌ ಹಾಗೂ ರಾಜಸ್ಥಾನ್ ವಿರುದ್ಧ ಗೆದ್ದರೆ, ಡಿ.ಸಿ ತಂಡ 16 ಅಂಕ ಪಡೆದು 2ನೇ ಸ್ಥಾನಕ್ಕೆ ಏರುತ್ತದೆ. ಹಾಗೂ ಸುಲಭವಾಗಿ ಪ್ಲೇ ಆಫ್ ತಲುಪಬಹುದು.
ಅಕಸ್ಮಾತ್ ಡಿ.ಸಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋತರೂ ಪ್ಲೇ ಆಫ್ ತಲುಪುವ ಅವಕಾಶವಿದೆ. ಗುಜರಾತ್ ತಂಡ ಆರ್‌ಸಿಬಿ ವಿರುದ್ಧ ಗೆದ್ದರೆ ಡಿ.ಸಿ ತಂಡಕ್ಕೆ ಅವಕಾಶವಿದೆ.
6. Royal Challengers Bangalore
ಆರ್‌ಸಿಬಿ ಪ್ಲೇ ಆಫ್ ತಲುಪಲು ಡಿ.ಸಿ ತಂಡಕ್ಕಿರುವಷ್ಟೇ ಅವಕಾಶವಿದೆ. 75%ರಷ್ಟು ಅವಕಾಶವಿದೆ.
ಆರ್‌ಸಿಬಿ ಪ್ಲೇ ಆಫ್ ತಲುಪಲು ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕು. ಕೊಲ್ಕತ್ತಾ ಹಾಗೂ ಚೆನ್ನೈ ತಂಡದ ವಿರುದ್ಧ ಲಖನೌ ಹಾಗೂ ರಾಜಸ್ಥಾನ್ ತಂಡ ಸೋಲಬೇಕು. ಆಗ ಅರ್‌ಸಿಬಿ 16 ಅಂಕ ಪಡೆದು ಸುಲಭವಾಗಿ ಪ್ಲೇ ಆಫ್ ತಲುಪುತ್ತದೆ. ಇನ್ನು ತನ್ನ ಕೊನೆಯ ಪಂದ್ಯವನ್ನು ಸೋತರೂ 4ನೇ ಸ್ಥಾನದಲ್ಲಿ ಉಳಿದು ಪ್ಲೇ ಆಫ್ ತಲುಪುವ ಅವಕಾಶವಿದೆ.
7. Rajasthan Royals
ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೇನ್ನೈ ವಿರುದ್ಧ ಗೆದ್ದು, ಕೆಕೆಆರ್ ತಂಡ ಲಖನೌ ವಿರುದ್ಧ ಸೋತರೆ 18 ಅಂಕ ಪಡೆಯುತ್ತದೆ. ಹಾಗೂ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರುತ್ತದೆ. ಇನ್ನು ಚೆನ್ನೈ ವಿರುದ್ಧ ಸೋತರೆ, ಆರ್‌ಸಿಬಿ ಅಥವಾ ಡಿ.ಸಿ ಜತೆ ಮೂರನೇ ಸ್ಥಾನದಲ್ಲಿ ಸೇರಬಹುದು. ಆಗ ಹೆಚ್ಚಿನ ನೆಟ್ ರನ್ ರೆಟ್ ಹೊಂದಿರುವ ತಂಡ ಪ್ಲೇ ಆಫ್ ತಲುಪುತ್ತದೆ.
8. Lucknow Super Giants
ಎಲ್‌ಎಸ್‌ಜಿ ತಂಡಕ್ಕೂ ಯಾವುದೇ ಭಯವಿಲ್ಲ. ಸುಲಭವಾಗಿ ಪ್ಲೇ ಆಫ್ ತಲುಪುವ ಅವಕಾಶವಿದೆ. ಮುಂದಿನ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ನಿಶ್ಚಿತ. ಮುಂದಿನ ಪಂದ್ಯದಲ್ಲಿ ಸೋತರೆ ನೆಟ್ ರನ್‌ರೇಟ್ ಹೆಚ್ಚಿರುವ ಆಧಾರದ ಮೇಲೆ ಪ್ಲೇ ಆಫ್ ತಲುಪುವ ಸಾಧ್ಯತೆ ಲಖನೌ ತಂಡಕ್ಕೆ ಹೆಚ್ಚಿದೆ.
ಇದನ್ನೂ ಓದಿ: IPL 2022 | ಐಪಿಎಲ್‌ನಲ್ಲಿ ಹಿಟ್ ವಿಕೆಟ್ ಆಗಿದ್ದು ಸಾಯಿ ಸುದರ್ಶನ್ ಮೊದಲಿಗರಲ್ಲ: ಇಲ್ಲಿದೆ ಪಟ್ಟಿ