IPL2022 | ಯಾವ ತಂಡ ಪ್ಲೇ-ಆಫ್‌ ತಲುಪಬಹುದು? - Vistara News

ಐಪಿಎಲ್ 2024

IPL2022 | ಯಾವ ತಂಡ ಪ್ಲೇ-ಆಫ್‌ ತಲುಪಬಹುದು?

IPL2022: ಯಾವ ತಂಡ ಗೆಲ್ಲುವುದರಿಂದ ಯಾವ ತಂಡಕ್ಕೆ ನಷ್ಟ, ಹಾಗೂ ಹಾಗೂ ಯಾವ ತಂಡ ಸೋಲುವುದರಿಂದ ಯಾವ ತಂಡಕ್ಕೆ ಲಾಭ ಎಂಬ ಮಾಹಿತಿ ಇಲ್ಲಿ ಪ್ರಸ್ತುತ ಪಡಿಸಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

IPL2022 : ಐಪಿಎಲ್‌ 2022ರ ಪ್ಲೇ ಆಫ್‌ ಶುರುವಾಗಲು ಇನ್ನು ಕೇವಲ 5 ಪಂದ್ಯಗಳು ಮಾತ್ರ ಬಾಕಿ ಇವೆ. ಪ್ಲೇ ಆಫ್‌ ತಲುಪಲು ಎಲ್ಲಾ ತಂಡಗಳು ಬಿರುಸಿನ ಸೆಣಸಾಟ ನಡೆಸುತ್ತಿವೆ. ಯಾವ ಯಾವ ತಂಡಗಳು ಪ್ಲೇ ಆಫ್‌ ತಲುಪಬಹುದು ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳಿಗಿದೆ.

ಇನ್ನು ಉಳಿದ 5 ಪಂದ್ಯಗಳಲ್ಲಿ ಯಾವ ತಂಡ ಗೆಲ್ಲುವುದರಿಂದ ಯಾವ ತಂಡಕ್ಕೆ ನಷ್ಟ, ಹಾಗೂ ಹಾಗೂ ಯಾವ ತಂಡ ಸೋಲುವುದರಿಂದ ಯಾವ ತಂಡಕ್ಕೆ ಲಾಭ ಎಂಬ ಮಾಹಿತಿ ಇಲ್ಲಿ ಪ್ರಸ್ತುತ ಪಡಿಸಲಾಗಿದೆ.‌

IPL2022

ಸಾಧ್ಯತೆಗಳು ಹೀಗಿವೆ:

1. ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗಾಗಲೇ ಪಂದ್ಯದಿಂದ ಹೊರಹೋಗುವುದು ಖಚಿತವಾಗಿದೆ. ಹಾಗೂ ಗುಜರಾತ್‌ ಟೈಟಾನ್ಸ್‌ ಮೊದಲ ಸ್ಥಾನದಲಿದ್ದು, ಪ್ಲೇ ಆಫ್ ತಲುಪುವುದು ನಿಶ್ಚಿತ.

2. Sunrisers Hyderabad
ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ ಮಂಗಳವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದರಿಂದ ಪ್ಲೇ ಆಫ್‌ ತಲುಪುವ ಸಾಧ್ಯತೆ 12.5%ರಷ್ಟು ಹೆಚ್ಚಿದೆ.
ಎಸ್‌.ಆರ್‌.ಎಚ್‌ ತಂಡ ಇನ್ನು ತನ್ನ ಕೊನೆಯ ಪಂದ್ಯವನ್ನು ಗೆಲ್ಲಬೇಕು ಹಾಗೂ ಆರ್‌.ಸಿ.ಬಿ. ತಂಡ ಜಿ.ಟಿ. ತಂಡದ ವಿರುದ್ಧ ಸೋಲಬೇಕು. ಆಗ ಎಸ್‌.ಆರ್‌.ಎಚ್‌ ಪ್ಲೇ ಆಫ್‌ ತಲುಪಬಹುದು.

3. kolkata knight riders
ಕೆಕೆಆರ್‌ ತಂಡಕ್ಕೂ ಪ್ಲೇ ಆಫ್‌ ತಲುಪಲು 12.5%ರಷ್ಟು ಅವಕಾಶವಿದೆ.
ಕೆಕೆಆರ್‌ ಪ್ಲೇ ಆಫ್‌ ತಲುಪಬೇಕೆಂದರೆ; ಮೊದಲಿಗೆ ಲಖನೌ ವಿರುದ್ಧದ ಪಂದ್ಯವನ್ನು ಕೊಲ್ಕತ್ತಾ ಗೆಲ್ಲಬೇಕು. ನಂತರ, ಆರ್‌ಸಿಬಿ ಹಾಗೂ ಜಿಟಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಬೇಕು. ಅಲ್ಲದೆ, ದಿಲ್ಲಿ ಕ್ಯಾಪಿಟಲ್ಸ್‌ ತಂಡ ಮುಂಬೈ ವಿರುದ್ಧ ಗೆಲ್ಲಬೇಕು.

4. Punjab Kings
ಮೊದಲ ನಾಲ್ಕು ಸ್ಥಾನದಲ್ಲಿ ಸೇರಲು ಪಂಜಾಬ್‌ ತಂಡಕ್ಕೂ 12.5%ರಷ್ಟು ಅವಕಾಶವಿದೆ.
ಪಂಜಾಬ್‌ ಪ್ಲೇ ಆಫ್‌ ತಲುಪಬೇಕೆಂದರೆ ಎಸ್‌.ಆರ್‌.ಎಚ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಗೆಲ್ಲಬೇಕು. ಆರ್‌ಸಿಬಿ ವಿರುದ್ಧ ಗುಜರಾತ್‌ ಗೆಲ್ಲಬೇಕು ಹಾಗೂ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಗೆಲ್ಲಬೇಕು.

ಪ್ರಸ್ತುತ ಅಂಕಪಟ್ಟಿ ಹೀಗಿದೆ: ನೋಡಲು ಇಲ್ಲಿ ಒತ್ತಿ.

5. Delhi Capitals
ದಿಲ್ಲಿ ಕ್ಯಾಪಿಟಲ್ಸ್‌ಗೆ ಪ್ಲೇ ಆಫ್‌ ತಲುಪಲು ಹೆಚ್ಚಿನ ಅವಕಾಶವಿದೆ. ಸುಮಾರು 75%ರಷ್ಟು ಸಾಧ್ಯತೆ ಈ ತಂಡಕ್ಕಿದೆ.
ಮುಂಬೈ ವಿರುದ್ಧದ ಮುಂದಿನ ಪಂದ್ಯದಲ್ಲಿ ದಿಲ್ಲಿ ಗೆಲ್ಲಬೇಕು. ನಂತರ, ಕೊಲ್ಕತ್ತಾ ಹಾಗೂ ಚೆನ್ನೈ ತಂಡಗಳು ಲಖನೌ ಹಾಗೂ ರಾಜಸ್ಥಾನ್‌ ವಿರುದ್ಧ ಗೆದ್ದರೆ, ಡಿ.ಸಿ ತಂಡ 16 ಅಂಕ ಪಡೆದು 2ನೇ ಸ್ಥಾನಕ್ಕೆ ಏರುತ್ತದೆ. ಹಾಗೂ ಸುಲಭವಾಗಿ ಪ್ಲೇ ಆಫ್‌ ತಲುಪಬಹುದು.
ಅಕಸ್ಮಾತ್‌ ಡಿ.ಸಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋತರೂ ಪ್ಲೇ ಆಫ್‌ ತಲುಪುವ ಅವಕಾಶವಿದೆ. ಗುಜರಾತ್‌ ತಂಡ ಆರ್‌ಸಿಬಿ ವಿರುದ್ಧ ಗೆದ್ದರೆ ಡಿ.ಸಿ ತಂಡಕ್ಕೆ ಅವಕಾಶವಿದೆ.

6. Royal Challengers Bangalore
ಆರ್‌ಸಿಬಿ ಪ್ಲೇ ಆಫ್‌ ತಲುಪಲು ಡಿ.ಸಿ ತಂಡಕ್ಕಿರುವಷ್ಟೇ ಅವಕಾಶವಿದೆ. 75%ರಷ್ಟು ಅವಕಾಶವಿದೆ.
ಆರ್‌ಸಿಬಿ ಪ್ಲೇ ಆಫ್‌ ತಲುಪಲು ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕು. ಕೊಲ್ಕತ್ತಾ ಹಾಗೂ ಚೆನ್ನೈ ತಂಡದ ವಿರುದ್ಧ ಲಖನೌ ಹಾಗೂ ರಾಜಸ್ಥಾನ್‌ ತಂಡ ಸೋಲಬೇಕು. ಆಗ ಅರ್‌ಸಿಬಿ 16 ಅಂಕ ಪಡೆದು ಸುಲಭವಾಗಿ ಪ್ಲೇ ಆಫ್‌ ತಲುಪುತ್ತದೆ. ಇನ್ನು ತನ್ನ ಕೊನೆಯ ಪಂದ್ಯವನ್ನು ಸೋತರೂ 4ನೇ ಸ್ಥಾನದಲ್ಲಿ ಉಳಿದು ಪ್ಲೇ ಆಫ್‌ ತಲುಪುವ ಅವಕಾಶವಿದೆ.

7. Rajasthan Royals
ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೇನ್ನೈ ವಿರುದ್ಧ ಗೆದ್ದು, ಕೆಕೆಆರ್‌ ತಂಡ ಲಖನೌ ವಿರುದ್ಧ ಸೋತರೆ 18 ಅಂಕ ಪಡೆಯುತ್ತದೆ. ಹಾಗೂ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರುತ್ತದೆ. ಇನ್ನು ಚೆನ್ನೈ ವಿರುದ್ಧ ಸೋತರೆ, ಆರ್‌ಸಿಬಿ ಅಥವಾ ಡಿ.ಸಿ ಜತೆ ಮೂರನೇ ಸ್ಥಾನದಲ್ಲಿ ಸೇರಬಹುದು. ಆಗ ಹೆಚ್ಚಿನ ನೆಟ್‌ ರನ್‌ ರೆಟ್‌ ಹೊಂದಿರುವ ತಂಡ ಪ್ಲೇ ಆಫ್‌ ತಲುಪುತ್ತದೆ.

8. Lucknow Super Giants
ಎಲ್‌ಎಸ್‌ಜಿ ತಂಡಕ್ಕೂ ಯಾವುದೇ ಭಯವಿಲ್ಲ. ಸುಲಭವಾಗಿ ಪ್ಲೇ ಆಫ್‌ ತಲುಪುವ ಅವಕಾಶವಿದೆ. ಮುಂದಿನ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ನಿಶ್ಚಿತ. ಮುಂದಿನ ಪಂದ್ಯದಲ್ಲಿ ಸೋತರೆ ನೆಟ್‌ ರನ್‌ರೇಟ್‌ ಹೆಚ್ಚಿರುವ ಆಧಾರದ ಮೇಲೆ ಪ್ಲೇ ಆಫ್‌ ತಲುಪುವ ಸಾಧ್ಯತೆ ಲಖನೌ ತಂಡಕ್ಕೆ ಹೆಚ್ಚಿದೆ.

ಇದನ್ನೂ ಓದಿ: IPL 2022 | ಐಪಿಎಲ್‌ನಲ್ಲಿ ಹಿಟ್‌ ವಿಕೆಟ್‌ ಆಗಿದ್ದು ಸಾಯಿ ಸುದರ್ಶನ್‌ ಮೊದಲಿಗರಲ್ಲ: ಇಲ್ಲಿದೆ ಪಟ್ಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

IPL 2024 : ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​ ಆರ್​ಆರ್​ ತಂಡವನ್ನು ಸೇರಿಕೊಂಡಿದ್ದರೆ ಅಲ್ಲಾ ಘಜನ್ಫರ್​​ ಕೆಕೆಆರ್​ ತಂಡಕ್ಕೆ ಮೂಲ ಬೆಲೆ 20 ಲಕ್ಷ ರೂಪಾಯಿಯೊಂದಿಗೆ ಸೇರಿಕೊಂಡಿದ್ದಾರೆ.

VISTARANEWS.COM


on

Rajasthan Royals
Koo

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (Rajasathan Royals) ಕ್ರಮವಾಗಿ ಮುಜೀಬ್ ಉರ್ ರೆಹಮಾನ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಹೊಸ ಆಟಗಾರರನ್ನು ಘೋಷಿಸಿವೆ. ಇಬ್ಬರೂ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಫೆಬ್ರವರಿ 23, 2024 ರಂದು ಎಡ ಪ್ರಾಕ್ಸಿಮಲ್ ಕ್ವಾಡ್ರಿಸೆಪ್ಸ್ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪ್ರಸಿದ್ಧ್ ಕೃಷ್ಣ ಐಪಿಎಲ್ 2024 ರಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಈ ತಿಂಗಳ ಆರಂಭದಲ್ಲಿ ದೃಢಪಡಿಸಿತ್ತು.

ಬೌಲರ್ ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತನ್ನ ಪುನಶ್ಚೇತನವನ್ನು ಪುನರಾರಂಭಿಸಲಿದ್ದಾರೆ ಎಂದು ಮಂಡಳಿ ತಿಳಿಸಿತ್ತು. ಗಾಯದಿಂದಾಗಿ ಪ್ರಸಿದ್ಧ್ ಕೃಷ್ಣ ಸತತ ಎರಡನೇ (IPL 2024) ಐಪಿಎಲ್ ಋತುವಿನಿಂದ ಹೊರಗುಳಿಯುವಂತಾಗಿದೆ. ಅವರು ಇಡೀ ಐಪಿಎಲ್ 2023 ರಿಂದ ಹೊರಗುಳಿದಿದ್ದರು. ಐಪಿಎಲ್ 2022 ರಲ್ಲಿ, ಅವರು 19 ವಿಕೆಟ್​​ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2008 ರ ನಂತರ ಮೊದಲ ಬಾರಿಗೆ ಫೈನಲ್ಸ್​ಗೆ ಅರ್ಹತೆ ಪಡೆಯಲು ಸಹಾಯ ಮಾಡಿದ್ದರು.

ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟಿರುವುದರಿಂದ ಆರ್​ಆರ್​​ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅನುಭವಿ ಸ್ಪಿನ್ನರ್ ಆಗಿರುವ ಮಹಾರಾಜ್ ಇನ್ನೂ ಐಪಿಎಲ್​​ನಲ್ಲಿ ಆಡಿಲ್ಲ. 27 ಟಿ20, 44 ಏಕದಿನ ಹಾಗೂ 50 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 237 ವಿಕೆಟ್ ಕಬಳಿಸಿದ್ದಾರೆ. 130 ಟಿ20 ಪಂದ್ಯಗಳಲ್ಲಿ 130 ವಿಕೆಟ್ ಪಡೆದಿದ್ದಾರೆ. ಆರ್​ಆರ್​​ ಅವರನ್ನು ಮೂಲ ಬೆಲೆ 50 ಲಕ್ಷ ರೂ.ಗೆ ಖರೀದಿಸಿದೆ.

ಇದನ್ನೂ ಓದಿ: Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

ಮತ್ತೊಂದೆಡೆ, ಕೆಕೆಆರ್ ಮುಜೀಬ್ ಉರ್ ರೆಹಮಾನ್ ಬದಲಿಗೆ ಅವರ ಸಹ ಆಟಗಾರ ಅಲ್ಲಾ ಘಜನ್ಫರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಜೀಬ್ ಅವರ ಬಲ ಫಲಾಂಕ್ಸ್ ನಲ್ಲಿ ಉಳುಕು ಆಗಿದ್ದು ಅವರೂ ಆಡುತ್ತಿಲ್ಲ. ಕಳೆದ ಹರಾಜಿನಲ್ಲಿ ಕೆಕೆಆರ್ ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತ್ತು.

ವಿಶ್ವದ ಪ್ರಮುಖ ಟಿ 20 ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ಮುಜೀಬ್ 2021 ರಿಂದ ಐಪಿಎಲ್​ನಲ್ಲಿ ಆಡಿಲ್ಲ. ಅವರು 2018 ರಲ್ಲಿ ಪಂಜಾಬ್ ಕಿಂಗ್ಸ್ ಪರ ಐಪಿಎಲ್​​​ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ, ಅವರು 11 ಪಂದ್ಯಗಳಲ್ಲಿ 14 ವಿಕೆಟ್​ ಉರುಳಿಸಿದ್ದರು. 7 ಕ್ಕಿಂತ ಕಡಿಮೆ ಎಕಾನಮಿ ರೇಟ್ ಅನ್ನು ಕಾಯ್ದುಕೊಂಡಿದ್ದರು.

ಅಲ್ಲಾ ಘಜನ್ಫರ್ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಘಝಾನ್ಫರ್ ಈವರೆಗೆ 3 ಟಿ 20 ಮತ್ತು 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದೆ.

Continue Reading

ಐಪಿಎಲ್ 2024

IPL 2024 Points Table: ಮುಂಬೈ ವಿರುದ್ಧ ಹೈದರಾಬಾದ್‌ ಗೆದ್ದ ಬಳಿಕ ಅಂಕಪಟ್ಟಿ ಹೇಗಿದೆ?

IPL 2024 Points Table: ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಅಂಕಪಟ್ಟಿಯಲ್ಲಿ ಮೇಲೇರಿದೆ. ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದರ ಅಂಕಪಟ್ಟಿ ಹೀಗಿದೆ.

VISTARANEWS.COM


on

SRH
Koo

ಹೈದರಾಬಾದ್:‌ ರನ್‌ಗಳ ಸುರಿಮಳೆಯೇ ಸುರಿದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು 31 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 2024ರ ಐಪಿಎಲ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಸತತ ಎರಡನೇ ಸೋಲು ಕಂಡ ಮುಂಬೈ ಇಂಡಿಯನ್ಸ್‌ ತಂಡವು 9ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಹಾಗೂ ಹೈದರಾಬಾದ್‌ ಪಂದ್ಯದ ಬಳಿಕ ಅಂಕಪಟ್ಟಿ (IPL 2024 Points Table) ಹೇಗಿದೆ? ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ರಾಜಸ್ಥಾನ್​ ರಾಯಲ್ಸ್1102 (+1.000)
ಸನ್​ರೈಸರ್ಸ್​ ಹೈದರಾಬಾದ್​2112 (+0.675)
ಕೋಲ್ಕೊತಾ ನೈಟ್‌ ರೈಡರ್ಸ್1102(+200)
ಪಂಜಾಬ್‌ ಕಿಂಗ್ಸ್2112‌ (+0.025)
ಆರ್‌ಸಿಬಿ2112 (-0.180)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್1010 (-0.925)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಹೈದರಾಬಾದ್‌ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು ಮುಂಬೈ ಪರ 200ನೇ ಪಂದ್ಯದಲ್ಲಿ ಆಡಲಿಳಿದ ಮಾಜಿ ನಾಯಕ ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ, ಉಭಯ ಆಟಗಾರರ ಈ ಬ್ಯಾಟಿಂಗ್​ ಜೋಶ್​ ಹೆಚ್ಚು ಹೊತ್ತು ಸಾಗಲಿಲ್ಲ. ಅಬ್ದುಲ್​ ಸಮದ್​ ಅವರಿಂದ ಒಂದು ಜೀವದಾನ ಪಡೆದರೂ ಕೂಡ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ಪರ ಅಗರ್ವಾಲ್(11)​ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗಮನಸೆಳೆದರು. ಅದರಲ್ಲೂ 2ನೇ ವಿಕೆಟ್​ಗೆ ಜತೆಯಾದ ಅಭಿಷೇಕ್​ ಶರ್ಮಾ ಮತ್ತು ಆರಂಭಕಾರ ಟ್ರಾವಿಸ್​ ಹೆಡ್​ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟಕ್ಕೆ ಮುಂಬೈ ​7 ಓವರ್​ ಆಗುವ ಮುನ್ನವೇ 100ರ ಗಡಿ ದಾಟಿತು.

ತಿಲಕ್​ ವರ್ಮಾ(64) ಮತ್ತು ನಮನ್ ಧೀರ್(30) ರನ್​ ಗಳಿಸಿದರು. ಬಳಿಕ ಬಂದ ನಾಯಕ ಹಾರ್ದಿಕ್​ ಪಾಂಡ್ಯ(24) ಹಾಗೂ ಟಿಮ್​ ಡೇವಿಡ್(42*)​ ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೈದರಾಬಾದ್​ ಪರ ನಾಯಕ ಕಮಿನ್ಸ್​ ಹಾಗೂ ಉನಾದ್ಕತ್​ ತಲಾ 2 ವಿಕೆಟ್​ ಪಡೆದರು.

ಬೌಲರ್​ಗಳನ್ನು ಚಿಂದಿ ಮಾಡಿದ ಹೆಡ್​-ಅಭಿಷೇಕ್

ವಿಶ್ವಕಪ್​ ಹೀರೊ ಟ್ರಾವಿಸ್​ ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿತು. ಹೆಡ್​ 24 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು. ಅಭಿಷೇಕ್​ ಶರ್ಮಾ 23 ಎಸೆತ ಎದುರಿಸಿ 7 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 63 ರನ್​ ಕಲೆಹಾಕಿದರು. ಈ ಮೊತ್ತ ಬಾರಿಸಲು ಅವರು ಎದುರಿಸಿದ್ದು ಕೇವಲ 23 ಎಸೆತ. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಹೆಡ್​ ಮತ್ತು ಅಭಿಷೇಕ್​ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.

ಇದನ್ನೂ ಓದಿ: MI vs SRH: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್​’; ಮುಂಬೈಗೆ ಸತತ 2ನೇ ಸೋಲು

ಸಿಡಿದ ಕ್ಲಾಸೆನ್

ಕಳೆದ ಕೆಕೆಆರ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಹೆನ್ರಿಚ್​ ಕ್ಲಾಸೆನ್​ ಈ ಪಂದ್ಯದಲ್ಲಿಯೂ ಸಿಡಿದು ನಿಂತರು. ಕ್ರೀಸ್​ಗಿಳಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟ ಅವರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಇವರಿಗೆ ಏಡನ್​ ಮಾರ್ಕ್ರಮ್​ ಕೂಡ ಉತ್ತಮ ಸಾಥ್​ ನೀಡಿದರು. ತಾನೇನು ಕಮ್ಮಿ ಇಲ್ಲ ಎನ್ನುವಂತೆ ಕ್ಲಾಸೆನ್ ಕೂಡ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮುಂಬೈ ಪರ ಜಸ್​​ಪ್ರೀತ್​ ಬುಮ್ರಾ ಅವರನ್ನು ಬಿಟ್ಟು ಉಳಿದೆಲ್ಲ ಬೌಲರ್​ಗಳು ದುಬಾರಿಯಾದರು. ನಾಯಕ ಪಾಂಡ್ಯ ಒಂದು ವಿಕೆಟ್​ ಕಿತ್ತರೂ ಕೂಡ 46 ರನ್​ ಬಿಟ್ಟುಕೊಟ್ಟರು.‌

ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಅವರಂತೂ ಸರಿಯಾಗಿ ರನ್​ ಹೊಡೆಸಿಕೊಂಡರು. 4 ಓವರ್​ ಎಸೆದು 66 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್​ ಪಿಯೂಷ್ ಚಾವ್ಲಾ ಕೇವಲ 2 ಓವರ್​ಗೆ 34 ರನ್​ ಚಚ್ಚಿಸಿಕೊಂಡರು. ಕ್ಲಾಸೆನ್​ 34 ಎಸೆತದಿಂದ ಅಜೇಯ 80 ರನ್​ ಬಾರಿಸಿದರು. ಸಿಡಿದ್ದು 7 ಸಿಕ್ಸರ್​ ಮತ್ತು 4 ಬೌಂಡರಿ. ಮಾರ್ಕ್ರಮ್ ಕೂಡ 42 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

IPL 2024: ಗೆಳೆಯ ಕೊಹ್ಲಿಗೆ ‘ಬಿಸ್ಕತ್’ ಎಂದು ಶುಭ ಹಾರೈಸಿದ ಎಬಿಡಿ ವಿಲಿಯರ್ಸ್

IPL 2024: ಎಬಿಡಿ ವಿಲಿಯರ್ಸ್(AB de Villiers) ತಮ್ಮ ನೆಚ್ಚಿನ ಗೆಳೆಯ ವಿರಾಟ್​ ಕೊಹ್ಲಿಗೆ(Virat Kohli) ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇನ್​ಸ್ಟಾಗ್ರಾಂನಲ್ಲೂ ಕೊಹ್ಲಿ ಜತೆಗಿನ ಫೋಟೋ ಹಂಚಿಕೊಂಡು ‘ಗುಡ್ ಲಕ್ ಮೈ ಬಿಸ್ಕತ್’ ಎಂದು ಶುಭಕೋರಿದ್ದಾರೆ.

VISTARANEWS.COM


on

AB de Villiers
Koo

ಚೆನ್ನೈ: ಇಂದು ನಡೆಯುವ 17ನೇ ಆವೃತ್ತಿಯ ಐಪಿಎಲ್​(IPL 2024) ಉದ್ಘಾಟನ ಪಂದ್ಯದಲ್ಲಿ ಆರ್​ಸಿಬಿ(RCB) ಮತ್ತು ಸಿಎಸ್​ಕೆ(CSK) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡದ ಮಾಜಿ ಆಟಗಾರನಾಗಿರುವ ಎಬಿಡಿ ವಿಲಿಯರ್ಸ್(AB de Villiers) ತಮ್ಮ ನೆಚ್ಚಿನ ಗೆಳೆಯ ವಿರಾಟ್​ ಕೊಹ್ಲಿಗೆ(Virat Kohli) ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇನ್​ಸ್ಟಾಗ್ರಾಂನಲ್ಲೂ ಕೊಹ್ಲಿ ಜತೆಗಿನ ಫೋಟೋ ಹಂಚಿಕೊಂಡು ‘ಗುಡ್ ಲಕ್ ಮೈ ಬಿಸ್ಕತ್’ ಎಂದು ಶುಭಕೋರಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್​ ಕುಚಿಕು ಗೆಳೆಯರು. ಕೊಹ್ಲಿಯ ಯಾವುದೇ ಸಾಧನೆ ಇರಲಿ ಮೊದಲು ಹಾರೈಸುವುದು ವಿಲಿಯರ್ಸ್​. ಕೊಹ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಾಗ ಅವರ ಬಗೆಗಿನ ಟೀಕೆಯನ್ನು ಎಬಿಡಿ ಖಂಡಿಸುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸುತ್ತಿದ್ದರು.

“ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ. ಏಕೆಂದರೆ ಅವರು ಆಡುವ ಬೇಳೆ ಹಲವು ಬಾರಿ ಇತರ ತಂಡದ ಆಟಗಾರರೊಂದಿಗೆ ಕಿರಿಕ್​ ಮಾಡಿದ್ದರು. ಆದರೆ ದಿನಕಳೆದಂತೆ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು. ಅವರ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಅವರೊಬ್ಬ ಅದ್ಭುತ ವ್ಯಕ್ತಿ ಜತೆಗೆ ಉತ್ತಮ ಕ್ರಿಕೆಟಿಗ” ಎಂದು ಎಬಿಡಿ ಹಿಂದೊಮ್ಮೆ ಅನ್​ಬಾಕ್ಸ್​ ಆರ್​ಸಿಬಿ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದನ್ನೂ ಓದಿ IPL 2024: 10 ವರ್ಷದ ಐಪಿಎಲ್​ ಜರ್ನಿಯ ಭಾವನಾತ್ಮಕ ವಿಡಿಯೊ ಹಂಚಿಕೊಂಡ ಹಾರ್ದಿಕ್​ ಪಾಂಡ್ಯ

ಆರ್​ಸಿಬಿ ಈ ಬಾರಿ ಕಪ್​ ಗೆಲ್ಲಲಿದೆ!


ಆರ್​ಸಿಬಿ ತಂಡ ಈ ಬಾರಿ ಕಪ್​ ಬರ ನೀಗಿಸಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ. ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಬಿಡಿ, ಯಾವುದೇ ಅನುಮಾನ ಬೇಡ ಈ ಸಲ ಕಪ್ ನಮ್ದೇ… ಈ ಬಾರಿ ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸ್ಮೃತಿ ಮಂಧಾನಾ ನೇತೃತ್ವದ ಮಹಿಳಾ ಆರ್​ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಇದೇ ಹುರುಪಿನಲ್ಲಿರುವ ಪುರುಷರ ತಂಡವೂ ಕೂಡ ಕಪ್​ ಗೆಲ್ಲಲೇ ಬೇಕೆನ್ನುವ ಹಠಕ್ಕೆ ಬಿದ್ದಿದೆ ಎಂದರು.

ಎಬಿಡಿ ವಿಲಿಯರ್ಸ್ ಭವಿಷ್ಯ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಏಕೆಂದರೆ ಎಬಿಡಿ ಈ ಹಿಂದೆ ಹೇಳಿದ ಹಲವು ಭವಿಷ್ಯಗಳು ನಿಜವಾಗಿದೆ. 2022ರಲ್ಲಿ ಹಾರ್ದಿಕ್​ ಪಾಂಡ್ಯ ಸಾರಥ್ಯದ ಗುಜರಾತ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂದು ಎಬಿಡಿ ಹೇಳಿದ್ದರು. ಅದರಂತೆ ಪಾಂಡ್ಯ ಕಪ್​ ಗೆದ್ದಿದ್ದರು. ಕಳೆದ ವರ್ಷ ಕೂಡ ಗುಜರಾತ್ ಫೈನಲ್​ ತಲುಪಲಿದೆ ಎಂದು ಹೇಳಿದ್ದರು. ಇದು ಕೂಡ ನಿಜವಾಗಿತ್ತು. ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಲಿದೆ ಎಂದಿದ್ದಾರೆ. ಅವರ ಭವಿಷ್ಯ ನಿಜವಾಗಲಿದೆಯಾ? ಎಂದು ಕಾದು ನೋಡಬೇಕಿದೆ.

Continue Reading

ಬೆಂಗಳೂರು

Namma Metro : ಮಾ.24ರಂದು ಮೆಟ್ರೋ ಓಡಾಟ ಬೆಳಗ್ಗೆ 4:30ಕ್ಕೆ ಆರಂಭ; ಐಪಿಎಲ್‌ ಪಂದ್ಯದಂದು ಸಮಯ ವಿಸ್ತರಣೆ

Namma Metro : ಮಾ.24ರಂದು ಹಾಫ್‌ ಮ್ಯಾರಥಾನ್‌ ಹಾಗೂ ಐಪಿಎಲ್‌ ಟಿ-20 ಪಂದ್ಯಗಳು ಇರುವುದರಿಂದ ಮೆಟ್ರೋ ರೈಲು ಓಡಾಟದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.

VISTARANEWS.COM


on

By

Namma metro rail running time extended
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು (Namma Metro) ಓಡಾಟದ ಸಮಯವನ್ನು ಬಿಎಂಆರ್‌ಸಿಎಲ್‌ ವಿಸ್ತರಣೆ ಮಾಡಿದೆ. ಮಾ.24ರ ಭಾನುವಾರದಂದು ಬೆಂಗಳೂರಿನ ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಡದಿ ಹಾಫ್ ಮ್ಯಾರಥಾನ್‌ ಆಯೋಜಿಸಲಾಗಿದೆ. ಮ್ಯಾರಥಾನ್‌ಗೆ ನೂರಾರು ಮಂದಿ ಭಾಗವಹಿಸುವ ಕಾರಣಕ್ಕೆ ಬಿಎಂಆರ್‌ಸಿಎಲ್‌ ತನ್ನ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಮತ್ತು ಇಂಟರ್‌ಚೇಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಮೆಜೆಸ್ಟಿಕ್‌ನಿಂದ ಭಾನುವಾರ ಬೆಳಗ್ಗೆ 07:00 ಗಂಟೆ ಬದಲಾಗಿ ಬೆಳಗ್ಗೆ 04:30 ರಿಂದಲೇ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಐಪಿಎಲ್‌ ಪಂದ್ಯದಂದು ಕೊನೆ ರೈಲು 11.30ಕ್ಕೆ ವಿಸ್ತರಣೆ

ಇನ್ನೂ ಬೆಂಗಳೂರಿನಲ್ಲಿ ಟಾಟಾ ಐಪಿಎಲ್‌ ಟಿ-20 (TATA IPL T-20) ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಬೆಂಗಳೂರಲ್ಲಿ ಮೊದಲ ಪಂದ್ಯ ಮಾ. 25, 29 ಹಾಗೂ ಏ.2ರಂದು ಪಂದ್ಯಾವಳಿ ನಡೆಯಲಿದೆ. ಆ ದಿನದಂದು ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: Tumkur Tragedy : ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!

ಪೇಪರ್‌ ಟಿಕೆಟ್‌ ಮಾರಾಟ

ಇನ್ನೂ ಪಂದ್ಯದ ದಿನಗಳಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ. ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ ( QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Accident Case
ತುಮಕೂರು3 mins ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

shani louk photo hamas terrorists
ವಿದೇಶ17 mins ago

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Rahul Gandhi And Sonia Gandhi
ದೇಶ19 mins ago

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Karimani Malika Ninalla play by violinist Aneesh Vidyashankar
ವೈರಲ್ ನ್ಯೂಸ್37 mins ago

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karnataka Weather
ಮಳೆ47 mins ago

Karnataka Weather: 28 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ತಾಪಮಾನ; ಇನ್ನೊಂದು ವಾರ ಕಾದ ಕೆಂಡ

Sanjiv Bhatt
ದೇಶ50 mins ago

Sanjiv Bhatt: ಡ್ರಗ್ಸ್‌ ಕೇಸ್;‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ 20 ವರ್ಷ ಜೈಲು!

Kaptaan KL is keeping
ಕ್ರೀಡೆ51 mins ago

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

Lok Sabha Election 2024 Yathindra Siddaramaiah calls Amit Shah a goonda BJP says No maturity
Lok Sabha Election 202451 mins ago

Lok Sabha Election 2024: ಅಮಿತ್‌ ಶಾ ರೌಡಿ, ಗೂಂಡಾ ಎಂದ ಯತೀಂದ್ರ ಸಿದ್ದರಾಮಯ್ಯ; ಮೆಚ್ಯುರಿಟಿ, ಬುದ್ಧಿ ಇಲ್ಲವೆಂದ ಬಿಜೆಪಿ

Aadujeevitham box office
ಮಾಲಿವುಡ್1 hour ago

Aadujeevitham Box Office: ಮೊದಲ ದಿನವೇ ಒಳ್ಳೆಯ ಗಳಿಕೆ ಕಂಡ ‘ʻಆಡು ಜೀವಿತಂ’!

gold rate today
ಚಿನ್ನದ ದರ1 hour ago

Gold Rate Today: ಆಕಾಶಕ್ಕೇ ಏರಿದ ಚಿನ್ನದ ಬೆಲೆ! ಇಂದಿನ ಧಾರಣೆ ಹೀಗಿದೆ ನೋಡಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202423 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌