Site icon Vistara News

IPL 2022| ಇವತ್ತು RR v/s DC: ಹಿಂದಿನ ಪಂದ್ಯ ಸೋತ ಅಂಗಳದಲ್ಲೇ ಗೆಲ್ಲುವ ಸವಾಲು ದಿಲ್ಲಿ ತಂಡಕ್ಕೆ

IPL 2022: ಐಪಿಎಲ್‌ನ 2022ನೇ ಆವೃತ್ತಿಯ 58ನೇ ಪಂದ್ಯ ಗುರುವಾರ(ಮೇ 11) ಮುಂಬೈನ ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ದಿಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡ ಇಂದು ಮುಖಾಮುಖಿಯಾಗಿಲದೆ. ಡಿಸಿ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ ಹಾಗೂ ಆರ್‌ಆರ್‌ ತಂಡವು 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಹತ್ವವಾಗಿದೆ. ಹಾಗಾಗಿ ಗೆಲ್ಲಲೂ ಎರಡೂ ತಂಡ ಪೈಪೋಟಿಗೆ ಸಿದ್ಧವಾಗಿದೆ.

ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಅವಕಾಶ ಯಾವ ತಂಡಕ್ಕೆ ಹೆಚ್ಚಿದೆ?

ಡಿ.ಸಿ ತಂಡ ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ 91 ರನ್‌ಗಳ ಭಾರಿ ಸೋಲು ಕಂಡಿತ್ತು. ಆ ಪಂದ್ಯವೂ ಇದೇ ಡಿ.ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಸೋಲು ಡಿ.ಸಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದ ತಂಡದ ಆತ್ಮವಿಶ್ವಾಸ ಕಡಿಮೆಯಾಗಿರಬಹುದು ಆದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿರುವ ಅನಿವಾರ್ಯತೆ ಹುಟ್ಟಿಸಿದೆ.

ಪ್ಲೇ-ಆಫ್‌ ತಲುಪಬೇಕಾದರೆ ಡಿ.ಸಿ ತನ್ನ ಮುಂದಿನ ಎಲ್ಲಾ ಪಂದ್ಯವನ್ನೂ ಗೆಲ್ಲೇಬೇಕಾಗಿರುವ ಅನಿವಾರ್ಯತೆಯಿದೆ. ಇಂದಿನ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದೇ ಹೋದಲ್ಲಿ ಡಿ.ಸಿ ತನ್ನ ಪ್ಲೇ-ಆಫ ಕನಸನ್ನು ಕೈಬಿಡಬೇಕಾಗಬಹುದು. 10 ಅಂಕಗಳನ್ನು ಪಡೆದಿರುವ ಡಿ.ಸಿ ಇಂದು ಗೆದ್ದರೆ 12 ಅಂಕಗಳನ್ನು ಪಡೆಯುತ್ತದೆ. ಆದರೆ, ಅಂಕಪಡ್ತಿಯ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಆದರೆ ರಾಜಸ್ಥಾನ ತಂಡ ಕಳೆದ ಪಂಜಾಬ್‌ ವಿರುದ್ಧದ ಮ್ಯಾಚ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ ಇಂದಿನ ಪಂದ್ಯವನ್ನೂ ಗೆಲ್ಲುವ ಉತ್ಸಾಹದಲ್ಲಿದೆ. ತಂಡದ ಜಾಸ್‌ ಬಟ್ಲರ್‌ ಈವರೆಗೆ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ಭರವಸೆಯ ಬ್ಯಾಟರ್‌ ಆಗಿದ್ದಾರೆ. ಹಾಗೂ ಉತ್ತಮ ಬೌಲಿಂಗ್‌ ಲೈನ್‌ ಅಪ ಈ ತಂಡಕ್ಕೆ ಶಕ್ತಿ.

ಇಂದಿನ ಮ್ಯಾಚ್‌ ವಿವರ ಇಲ್ಲಿದೆ. ಲಿಂಕ್‌ ಒತ್ತಿ.

ಡಿ.ಸಿ & ಆರ್‌.ಆರ್‌ ಮುಖಾಮುಖಿ:

ಒಟ್ಟು 25 ಪಂದ್ಯಗಳಲ್ಲಿ ರಾಜಸ್ಥಾನ್‌ ಹಾಗೂ ದಿಲ್ಲಿ ರಂಡ ಮುಖಾಮುಖಿಯಾಗದೆ.
ಗೆಲುವು:
ರಾಜಸ್ಥಾನ- 13
ಡಿ.ಸಿ- 12
ಐಪಿಲ್‌ 2021ರಲ್ಲಿ
ಆರ್‌.ಆರ್-‌ 1
ಡಿ.ಸಿ.- 1

ಅಂಕಪಟ್ಟಿ:

ಪಿಚ್‌ ರೆಕಾರ್ಡ್:‌

ಡಿ.ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಈ ಬಾರಿ ಒಟ್ಟು 16 ಪಂದ್ಯಗಳು ಜರುಗಿದೆ. ರನ್‌ ಚೇಸ್‌ ಮಾಡುವ ತಂಡವೇ ಅನೇಕ ಬಾರಿ ಇಲ್ಲಿ ಪಂದ್ಯ ಗೆದ್ದಿದೆ. ಆದರೆ ಕೆಲವೊಮ್ಮೆ ಬೃಹತ್‌ ಟಾರ್ಗೆಟ್‌ ನೀಡಿದ ತಂಡವೂ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಚೆನ್ನೈ ಹಾಗೂ ಡಿ.ಸಿ ತಂಡದ ಪಂದ್ಯದಲಿ ಚೆನ್ನೈ 208 ರನ್‌ ಟಾರ್ಗೆಟ್‌ ನೀಡಿ, ಡಿ.ಸಿ ತಂಡವನ್ನು 117ಕ್ಕೆ ಆಲ್‌ ಔಟ್‌ ಮಾಡಿತ್ತು.
ಹಾಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹಾಗೂ, ಮೊದಲು ಬ್ಯಾಟಿಂಗ್‌ ಮಾಡುವ ತಂಡ ದೊಡ್ಡ ಟಾರ್ಗೆಟ್‌ ನೀಡುವುದ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಆರ್‌.ಆರ್‌ ತಂಡ ಈವರೆಗೆ ಶಿಸ್ತಿನ ಆಟವನ್ನು ಆಡುತ್ತಾ ಬಂದಿದೆ. ತಂಡದಲ್ಲಿ ಸಮತೋಲನವನ್ನೂ ಕಾಪಾಡಿಕೊಂಡಿದೆ. ಹಾಗಾಗಿ, ಆರ್‌.ಆರ್‌ ತಂಡಕ್ಕೆ ಗೆಲ್ಲುವ ಅವಕಾಶಗಳು ಜಾಸ್ತಿಯಿದೆ. ಇನ್ನು ಡಿ.ಸಿ ತಂಡ ಮಾಡು ಇಲ್ಲವೇ ಮಡಿ ಎಂಬಂತೆ ಇಂದು ಆಟವಾಡಿದರೆ ಗೆಲ್ಲಲೂಬಹುದು.

ಇದನ್ನೂ ಓದಿ: IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್

Exit mobile version