IPL2022: Mumbai Indians ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಈ ಐಪಿಎಲ್‌ನಿಂದ ಹೊರ ಉಳಿಯುತ್ತಾರೆ ಎಂದು ಮುಂಬೈ ತಂಡ ಅಧಿಕೃತವಾಗಿ ತಿಳಿಸಿದೆ. ಎಡಗೈ ಪಟ್ಟು ಮಾಡಿಕೊಂಡಿರುವ ಸೂರ್ಯಕುಮಾರ್ ಐಪಿಎಲ್‌ನ ಮುಂದಿನ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ಕೊಲ್ಕತ್ತಾ ತಂಡದ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿದುಬಂದಿತ್ತು. ಈ ಕಾರಣದಿಂದ ಮುಂಬೈ ತಂಡಕ್ಕೆ ಬಾರಿ ಪ್ರಮಾಣದಲ್ಲಿ ಹಿನ್ನಡೆ ಉಂಟಾಗಿತ್ತು. ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ಭರವಸೆಯ ಬ್ಯಾಟರ್. ಮುಂಬೈ ತಂಡ ಉತ್ತಮ ರನ್ ಸ್ಕೋರ್ ಮಾಡಲು ಸೂರ್ಯಕುಮಾರ್ ಯಾದವ್ ಅವರ ಕೊಡುಗೆ ಪ್ರಮುಖವಾಗಿತ್ತು. ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟ ಉಂಟುಮಾಡಿತ್ತು.
ಮೇ 6ರಂದು ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಎಡಗೈಗೆ ಪೆಟ್ಟುಮಾಡಿಕೊಂಡಿದ್ದರು. ಈ ಕಾರಣದಿಂದ ಸೂರ್ಯಕುಮಾರ್ ಐಪಿಎಲ್‌ನಿಂದ ಹೊರ ಉಳಿದಿದ್ದಾರೆ.
ಈವರೆಗೆ ಸೂರ್ಯಕುಮಾರ್:
ಸೂರ್ಯಕುಮಾರ್ ಯಾದವ್ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು 303 ರನ್ ಸ್ಕೋರ್ ಮಾಡಿದ್ದಾರೆ. 3 ಅರ್ಧಶತಕ ಬಾರಿಸಿ 43.29 ಸರಾಸರಿ ಕಾಪಡಿಕೊಂದ್ದಾರೆ.
ಆರಂಭದ ಎರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಭಾಗಿಯಾಗಿರಲಿಲ್ಲ, ಆದರೆ ನಂತರದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಸಿದ್ದರು. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಸೂರ್ಯಕುಮಾರ್ ಸಾಮಾನ್ಯ ಆಟವಾಡಿದ್ದು, ತಮ್ಮ ಫಾರ್ಮ್ ಕಳೆದುಕೊಂಡಂತೆ ಕಂಡಿದ್ದರು.
ಒಟ್ಟು ಐದು ಬಾರಿ ಚಾಂಪಿಯನ್ ಆಗಿದ್ದ ಮುಂಬೈ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಮೊದಲ ಎಂಟು ಪಂದ್ಯಗಳಲ್ಲಿ ಸೋತಿರುವ ಮೊದಲ ತಂಡ ಎಂಬ ಹೊಸ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಬರೆದಿದೆ.
ಇದನ್ನೂ ಓದಿ: IPL 2022 | ಐಪಿಎಲ್‌ನಲ್ಲಿ ಹಿಟ್ ವಿಕೆಟ್ ಆಗಿದ್ದು ಸಾಯಿ ಸುದರ್ಶನ್ ಮೊದಲಿಗರಲ್ಲ: ಇಲ್ಲಿದೆ ಪಟ್ಟಿ