Site icon Vistara News

Lionel Messi: ಸೌದಿ ಅರೇಬಿಯಾ ಕ್ಲಬ್​ ಸೇರಲಿದ್ದಾರೆ ಲಿಯೋನೆಲ್​ ಮೆಸ್ಸಿ!

Lionel Messi

ಅರ್ಜೆಂಟೀನಾ: ಫುಟ್ಬಾಲ್​ ದಿಗ್ಗಜ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ(Lionel Messi) ಅವರು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡ ತೊರೆದು ಸೌದಿ ಅರೇಬಿಯಾ ಮೂಲದ ಕ್ಲಬ್‌ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಮೆಸ್ಸಿ ಅವರು ಇತ್ತೀಚೆಗಷ್ಟೆ ಅನಧಿಕೃತವಾಗಿ, ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಿಎಸ್‌ಜಿ ತಂಡ ಮೆಸ್ಸಿಗೆ ಎರಡು ವಾರಗಳ ನಿಷೇಧ ಹಾಕಲಾಗಿತ್ತು.

ಮೆಸ್ಸಿ ಅವರು ಸೌದಿ ಅರೇಬಿಯಾಕ್ಕೆ ತೆರಳಿದ ವೇಳೆಯೇ ಅವರು ಮುಂದಿನ ಮುಂದಿನ ಋತುವಿನಲ್ಲಿ ಸೌದಿ ತಂಡಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ ಎಂದು ಸುದ್ದಿ ಹಬ್ಬಿತ್ತು. ಜತೆಗೆ ಮೆಸ್ಸಿ ಅವರು ತಂಡ ಸೇರುವ ಕುರಿತು ಗಂಭೀರವಾಗಿಯೇ ಮಾತುಕತೆ ನಡೆಸಿದ್ದಾರೆಂದು ಕೆಲವು ಮೂಲಗಳು ಹೇಳಿತ್ತು. ಇದೀಗ ಮೆಸ್ಸಿ ಅವರು ಸೌದಿ ತಂಡ ಸೇರುವುದು ಖಚಿತ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಮೆಸ್ಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮೆಸ್ಸಿ ಅವರ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದೊಂದಿಗಿನ ಒಪ್ಪಂದ ಮುಂದಿನ ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಇದಾದ ಬಳಿಕ ಅವರು ತಮ್ಮ ಒಪ್ಪಂದವನ್ನು ಮುಂದುವರಿಸಲು ಆಸಕ್ತಿ ತೋರಿಲ್ಲ. ಹೀಗಾಗಿ ಅವರು ಸೌದಿ ತಂಡದತ್ತ ಮುಖಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಈ ಸುದ್ದಿ ನಿಜವಾದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರ ಬಳಿಕ ಮೆಸ್ಸಿ ಕೂಡ ಸೌದಿ ಅರೇಬಿಯ ತಂಡಕ್ಕೆ ವಲಸೆ ಹೋದಂತಾಗುತ್ತದೆ.

ಇದನ್ನೂ ಓದಿ Lionel Messi: ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಲಿಯೋನೆಲ್ ಮೆಸ್ಸಿ

ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಪಡೆದ ಮೆಸ್ಸಿ

ಲಿಯೋನೆಲ್‌ ಮೆಸ್ಸಿ ಅವರು ಇಂದು (ಮೇ 9, ಮಂಗಳವಾರ) ಪ್ರತಿಷ್ಠಿತ “ಲಾರೆಸ್‌ ಸ್ಪೋರ್ಟ್ಸ್ ಮ್ಯಾನ್‌ ಆಫ್​ದಿ ಇಯರ್​”(ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಗೆದ್ದ ಮೊತ್ತ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೂ ಅವರು ಪಾತ್ರರಾಗಿದ್ದಾರೆ. ಇದು ಮೆಸ್ಸಿ ಅವರಿಗೆ ಒಲಿದ ಎರಡನೇ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2020ರಲ್ಲಿ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜತೆ ಮೆಸ್ಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

Exit mobile version