Lionel Messi: ಸೌದಿ ಪ್ರವಾಸಕ್ಕೆ ಕ್ಷಮೆಯಾಚಿಸಿದ ಲಿಯೋನೆಲ್‌ ಮೆಸ್ಸಿ - Vistara News

ಕ್ರೀಡೆ

Lionel Messi: ಸೌದಿ ಪ್ರವಾಸಕ್ಕೆ ಕ್ಷಮೆಯಾಚಿಸಿದ ಲಿಯೋನೆಲ್‌ ಮೆಸ್ಸಿ

ಅನುಮತಿ ಇಲ್ಲದೆ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡಿದ್ದಕ್ಕೆ ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ(Lionel Messi) ಅವರು ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Lionel Messi apologises
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಕತಾರ್​ ಫಿಫಾ ವಿಶ್ವ ಕಪ್‌ ವಿಜೇತ ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ, ಪ್ಯಾರಿಸ್‌ ಸೇಂಟ್‌ ಜರ್ಮೈನ್‌ನ (ಪಿಎಸ್‌ಜಿ) ಪ್ರಮುಖ ಆಟಗಾರ ಲಿಯೋನೆಲ್‌ ಮೆಸ್ಸಿ(Lionel Messi) ಅವರು ಕ್ಲಬ್​ನ ಅನುಮತಿ ಇಲ್ಲದೆ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಲಿಯೋನೆಲ್‌ ಮೆಸ್ಸಿ ಅವರು ಅನಧಿಕೃತವಾಗಿ ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಪಿಎಸ್‌ಜಿ ಗಂಭೀರವಾಗಿ ಪರಿಗಣಿಸಿ ಅವರಿಗೆ ಎರಡು ವಾರಗಳ ಕಾಲ ನಿಷೇಧ ಹೇರಿತ್ತು. ಇದೀಗ ಮೆಸ್ಸಿ ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ​ ವಿಡಿಯೊ ಮೂಲಕ ಕ್ಷಮೆಯಾಚಿಸಿರುವ ಮೆಸ್ಸಿ “ನಾನು ಮಾಡಿದ ತಪ್ಪಿಗೆ ಕ್ಲಬ್​ ಬಳಿಕ ಕ್ಷಮೆ ಕೇಳುತ್ತೇನೆ. ಆ ದೇಶದ ಪ್ರವಾಸೋದ್ಯಮ ಕಚೇರಿಯ ಗುತ್ತಿಗೆ ಅನ್ವಯ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳದೆ ನನಗೆ ಬೇರೆ ದಾರಿ ಇರಲಿಲ್ಲ. ಆದರೆ ಈ ವಿಚಾರವನ್ನು ನಾನು ಕ್ಲಬ್​ ಬಳಿ ಹೇಳದೆ ಇರುವುದು ನನ್ನ ತಪ್ಪು” ಎಂದು ಮೆಸ್ಸಿ ಹೇಳಿದ್ದಾರೆ.

ಸದ್ಯ ಮೆಸ್ಸಿ ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿರುವುದರಿಂದ ಕ್ಲಬ್​ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಲಿದೆಯಾ ಎಂದು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ ಮೆಸ್ಸಿ ಕೆಲವು ಪಂದ್ಯಗಳು ಪಿಎಸ್‌ಜಿ ಪರ ಆಡುವುದಿಲ್ಲ. ಮೇ 21ರಂದು ಆಕ್ಷೆರ್‌ ತಂಡದ ವಿರುದ್ಧ ನಡೆಯುವ ಪಂದ್ಯದ ಮೂಲಕ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಲಿಯೋನೆಲ್​ ಮೆಸ್ಸಿ

ವೃತ್ತಿ ಜೀವನದ ಅತ್ಯಂತ ಮಹತ್ವದಾದ ಫಿಫಾ ವಿಶ್ವಕಪ್ ಗೆದ್ದ ಬಳಿಕ ಇನ್ನೇನು ಹೆಚ್ಚಿನ ಆಸೆ ಉಳಿದಿಲ್ಲ ಎಂದು ಹೇಳುವ ಮೂಲಕ ಲಿಯೋನೆಲ್​ ಮೆಸ್ಸಿ(Lionel Messi) ಅವರು ಕೆಲ ತಿಂಗಳುಗಳ ಹಿಂದೆ ನಿವೃತ್ತಿಯ ಸುಳಿವು ನೀಡಿದ್ದರು. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ವೈಯಕ್ತಿಕವಾಗಿ ವೃತ್ತಿಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಇನ್ನೇನು ಬಯಕೆ ನನ್ನ ಮುಂದೆ ಇಲ್ಲ ಹೀಗೆ ಹೇಳುವ ಮೂಲಕ ಮೆಸ್ಸಿ ಫುಟ್ಬಾಲ್​ಗೆ ಗುಡ್​ ಬೈ ಹೇಳುವ ಸುಳಿವು ನೀಡಿದ್ದರು.

ಇದನ್ನೂ ಓದಿ Lionel Messi: ‘ನಿಮಗಾಗಿ ಕಾಯುತ್ತಿದ್ದೇವೆ’; ಲಿಯೋನೆಲ್​ ಮೆಸ್ಸಿಗೆ ಬೆದರಿಕೆ ಹಾಕಿದ ಅಪರಿಚಿತ ಬಂದೂಕುಧಾರಿಗಳು

“ಫುಟ್ಬಾಲ್​ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್​ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್​ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಮೆಸ್ಸಿ ಹೇಳಿದ್ದರು. ಸದ್ಯ ಅವರು ತಮ್ಮ ಈ ನಿರ್ಧಾರವನ್ನು ಅಧಿಕೃತವಾಗಿ ಯಾವಾಗ ತಿಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

VISTARANEWS.COM


on

IPL 2024
Koo

ಬೆಂಗಳೂರು: ಪೃಥ್ವಿ ಶಾ ಅವರ ಗೆಳತಿ ನಿಧಿ ತಪಾಡಿಯಾ ಮಹಾರಾಷ್ಟ್ರ ಮೂಲದವರಾಗಿದ್ದು, ಪಂಜಾಬಿ ಹಾಡುಗಳಾದ ಜಟ್ಟಾ ಕೋಕಾ ಮತ್ತು ಯಾದ್ ಕರಕೆ ಸೇರಿದಂತೆ ಅನೇಕ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವುದರಿಂದ ಐಪಿಎಲ್ 2024 ರಲ್ಲಿ (IPL 2024) ರಿಷಭ್ ಪಂತ್ ನೇತೃತ್ವದ ಡೆಲ್ಲಿ ತಂಡವು ಆಡಿದಾಗಲೆಲ್ಲಾ ಅವರು ಅಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಜತೆಯಾಗಿ ಓಡಾಡುತ್ತಿರುವುದು ಕೂಡ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಅವರು ಓಡಾಡುತ್ತಿರುವ ಹಲವಾರು ವಿಡಿಯೊಗಳು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.

ಡೆಲ್ಲಿ ಇತ್ತೀಚೆಗೆ ಈಡನ್ ಗಾರ್ಡನ್ಸ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿತು. ಅಲ್ಲಿ ಪರ್ಪಲ್ ಮತ್ತು ಗೋಲ್ಡ್ ಬ್ರಿಗೇಡ್ನ ಸಹ ಮಾಲೀಕರಲ್ಲಿ ಒಬ್ಬರಾದ ಶಾರುಖ್ ಖಾನ್ ಕೂಡ ಸ್ಟ್ಯಾಂಡ್ಗಳಲ್ಲಿದ್ದರು. ಕೆಕೆಆರ್ 24 ರನ್ಗಳಿಂದ ಪಂದ್ಯವನ್ನು ಗೆದ್ದ ನಂತರ, ಶಾರುಖ್ ಆಗಾಗ್ಗೆ ತಮ್ಮ ತಂಡದ ಆಟಗಾರರನ್ನು ಅಭಿನಂದಿಸಿದರು ಮತ್ತು ಎದುರಾಳಿಗಳನ್ನು ಸಮಾಧಾನಪಡಿಸಿದರು.

ಇದನ್ನೂ ಓದಿ ;IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

ನಂತರ, ಎಲ್ಲಿಂದಲೋ, ತಪಾಡಿಯಾ ಅವನನ್ನು ಭೇಟಿಯಾಗಲು ಬಂದನು. ಅವನನ್ನು ತಬ್ಬಿಕೊಳ್ಳುವಾಗ ಅವಳು ಫ್ಯಾನ್ ಗರ್ಲ್ ನಂತೆ ವರ್ತಿಸುತ್ತಿದ್ದಳು, ಮತ್ತು ಶಾರುಖ್ ಅವರ ಇಡೀ ಸಂಭಾಷಣೆಯ ಸಮಯದಲ್ಲಿ ಎಂದಿನಂತೆ ತುಂಬಾ ತಳಮಟ್ಟದ ಮತ್ತು ಸೌಮ್ಯವಾಗಿ ಕಾಣುತ್ತಿದ್ದರು.

ತಪಾಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ಕ್ಷಣವನ್ನು ಪೋಸ್ಟ್ ಮಾಡಿದ್ದಾರೆ: ‘ಮೈ ಆಗರ್ ಕಹೂನ್ ತುಮ್ಸಾ ಹಸೀನ್, ಕೇನಾತ್ ಮೇ ನಯೀ ಹೈ ಕಹಿನ್!’ – ಇದು ಎಸ್ಆರ್ಕೆ ಅವರ ಪ್ರಸಿದ್ಧ ಚಲನಚಿತ್ರ ಓಂ ಶಾಂತಿ ಓಂ ಅವರ ಹಾಡುಗಳ ಸಾಲುಗಳಲ್ಲಿ ಒಂದಾಗಿದೆ. ಅವರು ವಿಶ್ವ ಎಮೋಜಿಯೊಂದಿಗೆ ‘ಈ ಕ್ಷಣಕ್ಕಾಗಿ ಧನ್ಯವಾದಗಳು’ ಎಂದು ಕಾಮೆಂಟ್ ಮಾಡಿದ್ದಾರೆ, ನಟಿ ಅವನನ್ನು ಎಷ್ಟು ಆರಾಧಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಶಾರುಖ್ ಖಾನ್ ಬಗ್ಗೆ ನಿಧಿ ತಪಾಡಿಯಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಹೃದಯಗಳನ್ನು ಕರಗಿಸುತ್ತದೆ

ನಾಳೆ (ಮೇ 7) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದ್ದು, ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

ಬೆಂಗಳೂರು: ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ತಮ್ಮ ಪತ್ನಿ ಸಂಜನಾ ಗಣೇಶನ್ (Sanjana Ganesan) ಅವರ ಹುಟ್ಟುಹಬ್ಬದ (Happy Birthday) ಪ್ರಯುಕ್ತ ರೊಮ್ಯಾಂಟಿಕ್​​ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಹೆಂಡತಿಗಾಗಿ ರೊಮ್ಯಾಂಟಿಕ್ ಹುಟ್ಟುಹಬ್ಬದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಪತ್ನಿ ಹಾಗೂ ಮಗನ ಕುರಿತು ಹೊಗಳಿಕೆಯ ಮಾತನ್ನು ಆಡಿದ್ದಾರೆ.

ಬೌಲರ್ ಪತ್ನಿಗಾಗಿ ಹಾಕಿರುವ ಹುಟ್ಟುಹಬ್ಬದ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿತ್ತು. ಪೋಸ್ಟ್​ನಲ್ಲಿ ಬುಮ್ರಾ ಸಂಜನಾಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ನನ್ನವಳಿಗೆ ಜನ್ಮದಿನದ ಶುಭಾಶಯಗಳು, ನನ್ನನ್ನು ಪೂರ್ಣಗೊಳಿಸಿದವರು ನೀವು. ನಿಮ್ಮ ಪಕ್ಕದಲ್ಲಿ ಈ ಜಗತ್ತು ಅದ್ಭುತ ಸ್ಥಳವಾಗಿದೆ. ಅಂಗದ್ ಮತ್ತು ನಾನು ನಮ್ಮಿಂದ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇವೆ. ನಿಮಗೆ ಜನ್ಮದಿನದ ಶುಭಕಾಮನೆಗಳು ಎಂದು ಬರೆದುಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

IPL 2024: ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

VISTARANEWS.COM


on

IPL 2024
Koo

ಧರ್ಮಶಾಲಾ: ಇಲ್ಲಿ ಭಾನುವಾರ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) 28 ರನ್​ಗಳ ನಿರ್ಣಾಯಕ ಗೆಲುವು ಸಾಧಿಸಿದೆ. ಚೆಪಾಕ್​​ನಲ್ಲಿ ಸಿಎಸ್​ಕೆ ವಿರುದ್ಧದ ಗೆಲುವು ಸೇರಿದಂತೆ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಪಿಬಿಕೆಎಸ್ ತನ್ನ ಆವೇಗವನ್ನು ಉಳಿಸಿಕೊಳ್ಳಲು ವಿಫಲವಾಯಿತು ಮತ್ತು 169/9 ಗುರಿಯನ್ನು ಬೆನ್ನಟ್ಟುವಾಗ 139/9 ಕ್ಕೆ ಸೀಮಿತಗೊಂಡಿತು.

ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

ಎಂ.ಎಸ್.ಧೋನಿ ಗೋಲ್ಡನ್ ಡಕ್ ಔಟ್ ಆದ ನಂತರ, ಧರ್ಮಶಾಲಾದಲ್ಲಿ ಪ್ರೇಕ್ಷಕರು ಮೌನವಾದರು. ಆದಾಗ್ಯೂ, ಪಿಬಿಕೆಎಸ್ ಸಹ ಮಾಲೀಕರಾದ ಪ್ರೀತಿ ಜಿಂಟಾ ಸ್ಟ್ಯಾಂಡ್​ಗಳಲ್ಲಿ ಕುಳಿತು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಅವರು ಮುಗುಳ್ನಕ್ಕು ಹರ್ಷಲ್ ಅವರ ಪ್ರಯತ್ನಗಳಿಗೆ ಚಪ್ಪಾಳೆ ತಟ್ಟಿದರು.

ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ 28 ರನ್​ಗಳ ಗೆಲುವು ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಮೊದಲ ಎಸೆತದಲ್ಲೇ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​(Dhoni golden duck) ಸಂಕಟಕ್ಕೆ ಸಿಲುಕಿದರು. ಇದನ್ನು ಕಂಡು ಅವರ ಅಭಿಮಾನಿಗಳು ಭಾರೀ ನಿರಾಸೆಗೊಂಡರು. ಇದರ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ: Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಶೂನ್ಯಕ್ಕೆ ಔಟ್​ ಆಗುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಧೋನಿ ಔಟಾಗುತ್ತಿದ್ದಂತೆ ಅವರ ಅಭಿಮಾನಿಗಳು ಬೇಸರದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತರ. ಈ ವಿಡಿಯೊ ವೈರಲ್​ ಆಗುತ್ತಿದೆ.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ 19ನೇ ಓವರ್​ನಲ್ಲಿ ಧೋನಿ ಅವರು ಹರ್ಷಲ್​ ಪಟೇಲ್​ ಎಸೆದ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆದರೆ ಕೀಪಿಂಗ್​ನಲ್ಲಿ ಧೋನಿ ಒಂದು ಸೊಗಸಾದ ಕ್ಯಾಚ್​ ಹಿಡಿದು ಮಿಂಚಿದರು. ಜಿತೇಶ್​ ಶರ್ಮ ಅವರ ಕ್ಯಾಚ್​ ಇದಾಗಿತ್ತು.

Continue Reading

ಪ್ರಮುಖ ಸುದ್ದಿ

Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

Jasprit Bumrah: ನನ್ನವಳಿಗೆ ಜನ್ಮದಿನದ ಶುಭಾಶಯಗಳು, ನನ್ನನ್ನು ಪೂರ್ಣಗೊಳಿಸಿದವರು ನೀವು. ನಿಮ್ಮ ಪಕ್ಕದಲ್ಲಿ ಈ ಜಗತ್ತು ಅದ್ಭುತ ಸ್ಥಳವಾಗಿದೆ. ಅಂಗದ್ ಮತ್ತು ನಾನು ನಮ್ಮಿಂದ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇವೆ. ನಿಮಗೆ ಜನ್ಮದಿನದ ಶುಭಕಾಮನೆಗಳು ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Jasprit Bumrah
Koo

ಬೆಂಗಳೂರು: ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ತಮ್ಮ ಪತ್ನಿ ಸಂಜನಾ ಗಣೇಶನ್ (Sanjana Ganesan) ಅವರ ಹುಟ್ಟುಹಬ್ಬದ (Happy Birthday) ಪ್ರಯುಕ್ತ ರೊಮ್ಯಾಂಟಿಕ್​​ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಹೆಂಡತಿಗಾಗಿ ರೊಮ್ಯಾಂಟಿಕ್ ಹುಟ್ಟುಹಬ್ಬದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಪತ್ನಿ ಹಾಗೂ ಮಗನ ಕುರಿತು ಹೊಗಳಿಕೆಯ ಮಾತನ್ನು ಆಡಿದ್ದಾರೆ.

ಬೌಲರ್ ಪತ್ನಿಗಾಗಿ ಹಾಕಿರುವ ಹುಟ್ಟುಹಬ್ಬದ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿತ್ತು. ಪೋಸ್ಟ್​ನಲ್ಲಿ ಬುಮ್ರಾ ಸಂಜನಾಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ನನ್ನವಳಿಗೆ ಜನ್ಮದಿನದ ಶುಭಾಶಯಗಳು, ನನ್ನನ್ನು ಪೂರ್ಣಗೊಳಿಸಿದವರು ನೀವು. ನಿಮ್ಮ ಪಕ್ಕದಲ್ಲಿ ಈ ಜಗತ್ತು ಅದ್ಭುತ ಸ್ಥಳವಾಗಿದೆ. ಅಂಗದ್ ಮತ್ತು ನಾನು ನಮ್ಮಿಂದ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇವೆ. ನಿಮಗೆ ಜನ್ಮದಿನದ ಶುಭಕಾಮನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

ಸಂಜನಾ ಗಣೇಶನ್ ಪ್ರಸಿದ್ಧ ಟಿವಿ ನಿರೂಪಕರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಗಮನಾರ್ಹ ಆ್ಯಂಕರಿಂಗ್​ ಕೌಶಲ್ಯದಿಂದ ಖ್ಯಾತಿಯನ್ನು ಮತ್ತು ಹೆಸರನ್ನು ಗಳಿಸಿದ್ದಾರೆ. ಈ ಜೋಡಿ 2013-14ರ ಐಪಿಎಲ್ ಋತುವಿನಲ್ಲಿ ಸಂದರ್ಶನವೊಂದರಲ್ಲಿ ಪರಸ್ಪರ ಭೇಟಿಯಾಗಿದ್ದರು. ಆ ಬಳಿಕದಿಂದ ಪ್ರೀತಿಸಲು ಆರಂಭಿಸಿದ್ದರು.

ಈ ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು ಅಂತೆಯೇ ಮಾರ್ಚ್ 15, 2021 ರಂದು ಗೋವಾದಲ್ಲಿ ಭವ್ಯ ಮತ್ತು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ದಂಪತಿ ಆಗಸ್ಟ್ 2023 ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದೆ.

ಐಪಿಎಲ್ 2024ರಲ್ಲಿ ಜಸ್ಪ್ರೀತ್ ಬುಮ್ರಾ ಪ್ರದರ್ಶನ


ಕ್ರಿಕೆಟ್ ರಂಗದಲ್ಲಿ, ಜಸ್ಪ್ರೀತ್ ಬುಮ್ರಾ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಉನ್ನತ ಮಟ್ಟದ ಫಾರ್ಮ್​​ನಲ್ಲಿದ್ದಾರೆ. ಅವರು 11 ಪಂದ್ಯಗಳಲ್ಲಿ 6.25 ಎಕಾನಮಿಯಲ್ಲಿ 17 ವಿಕೆಟ್​​ಗಳನ್ನು ಪಡೆದಿದ್ದಾರೆ. ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಸೋತಿದೆ. ಆದಾಗ್ಯೂ, ಬುಮ್ರಾ ಅವರ ಪ್ರಸ್ತುತ ಫಾರ್ಮ್ ಟಿ 20 ವಿಶ್ವಕಪ್ 2024 ರಲ್ಲಿ ಮೆನ್ ಇನ್ ಬ್ಲೂಗೆ ಉತ್ತಮ ಸೂಚನೆಯಾಗಿದೆ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಮೇ 6, 2024 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಜೆರ್ಸಿಯ(India’s T20 World Cup Jersey) ಫೋಟೊ ವೈರಲ್​ ಆಗಿದೆ. ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್​ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್​ ಆಡಲಿದೆ ಎಂದು ಬರೆದುಕೊಂಡಿದೆ.

ವೈರಲ್​ ಆಗಿರುವ ಟೀಮ್​ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್​ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

Continue Reading

ಕ್ರೀಡೆ

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

India’s T20 World Cup Jersey: ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ

VISTARANEWS.COM


on

India's T20 World Cup Jersey
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಜೆರ್ಸಿಯ(India’s T20 World Cup Jersey) ಫೋಟೊ ವೈರಲ್​ ಆಗಿದೆ. ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್​ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್​ ಆಡಲಿದೆ ಎಂದು ಬರೆದುಕೊಂಡಿದೆ.

ವೈರಲ್​ ಆಗಿರುವ ಟೀಮ್​ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್​ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Continue Reading
Advertisement
Lok Sabha Election-2024
ಕರ್ನಾಟಕ14 mins ago

ನಾಳೆ ಎರಡನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ55 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

IPL 2024
ಕ್ರೀಡೆ55 mins ago

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

CM Siddaramaiah
ಪ್ರಮುಖ ಸುದ್ದಿ1 hour ago

CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

Arvind Kejriwal
ದೇಶ1 hour ago

Arvind Kejriwal: ಖಲಿಸ್ತಾನಿ ಉಗ್ರರಿಂದ ದೇಣಿಗೆ; ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು!

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Female foeticide
ಪ್ರಮುಖ ಸುದ್ದಿ2 hours ago

Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Summer Holiday Fashion
ಫ್ಯಾಷನ್2 hours ago

Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

Woman
ಪ್ರಮುಖ ಸುದ್ದಿ2 hours ago

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ55 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌