Lionel Messi: ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಲಿಯೋನೆಲ್ ಮೆಸ್ಸಿ - Vistara News

ಕ್ರೀಡೆ

Lionel Messi: ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರು ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.

VISTARANEWS.COM


on

Lionel Messi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಫಿಫಾ ವಿಶ್ವ ಕಪ್‌ ವಿಜೇತ ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಅವರು ಪ್ರತಿಷ್ಠಿತ “ಲಾರೆಸ್‌ ಸ್ಪೋರ್ಟ್ಸ್ ಮ್ಯಾನ್‌ ಆಫ್​ದಿ ಇಯರ್​”(ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಮೆಸ್ಸಿ ಅವರಿಗೆ ಒಲಿದ ಎರಡನೇ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2020ರಲ್ಲಿ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜತೆ ಮೆಸ್ಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

ಕತಾರ್‌ನಲ್ಲಿ ನಡೆದ ಫಿಫಾ ವಿಶ್ವ ಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೆಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.
36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್ ಗೆದ್ದು ಸುದೀರ್ಘ ಬರವನ್ನು ನೀಗಿಸಿಕೊಂಡಿತ್ತು. ತಮ್ಮ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದ ಮೆಸ್ಸಿ, ಪ್ರಶಸ್ತಿ ಕನಸನ್ನು ನನಸಾಗಿಸಿಕೊಂಡಿದ್ದರು. ಇದೀಗ ಅವರಿಗೆ ಲಾರೆಸ್‌ ಸ್ಪೋರ್ಟ್ಸ್ ಮ್ಯಾನ್‌ ಆಫ್​ದಿ ಇಯರ್ ಪ್ರಶಸ್ತಿ ಒಲಿದಿದೆ.

ಇದನ್ನೂ ಓದಿ Lionel Messi: ಸೌದಿ ಪ್ರವಾಸಕ್ಕೆ ಕ್ಷಮೆಯಾಚಿಸಿದ ಲಿಯೋನೆಲ್‌ ಮೆಸ್ಸಿ

ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಗೆದ್ದ ಮೊತ್ತ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆ ಬಳಿಕ ಪ್ರತಿಕ್ರಿಯೆ ನೀಡಿದ ಮೆಸ್ಸಿ, “ನನ್ನ ಕನಸಿನ ಫಿಫಾ ವಿಶ್ವ ಕಪ್​ ಗೆದ್ದ ಬಳಿಕ ಜೀವನದಲ್ಲಿ ಅನೇಕ ಸಂತಸದ ಕ್ಷಣಗಳನ್ನು ಆನಂದಿಸುವಂತಾಗಿದೆ. ಇದೀಗ ಈ ಸಾಲಿಗೆ ಲಾರೆಸ್​ ಗೌರವವೂ ಸೇರಿದೆ. ಕ್ರೀಡಾ ದಿಗ್ಗಜರಾದ ನಡಾಲ್​, ಫೆಡರರ್​, ಜೋಕೊವಿಕ್​​, ಬೌಲ್ಟ್​ ಸೇರಿದಂತೆ ಅನೇಕರ ಸಾಲಿನಲ್ಲಿ ನಾನು ಕೂಡ ಗುರುತಿಸಿಕೊಂಡಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ನನ್ನ ತಂಡಕ್ಕೆ ಸಮರ್ಪಿಸುತ್ತೇನೆ” ಎಂದು ಹೇಳಿದರು.

ಫಿಫಾ ವರ್ಷದ ಆಟಗಾರ ಪ್ರಶಸ್ತಿ

ಕೆಲ ತಿಂಗಳುಗಳ ಹಿಂದೆ ಮೆಸ್ಸಿ ಅವರು ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಕತಾರ್​ನಲ್ಲಿ ನಡೆದ 2022ನೇ ಸಾಲಿನ ಫಿಫಾ ವಿಶ್ವ ಕಪ್​ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟ ಸಾಧನೆನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಮತ್ತೊಂದು ಪ್ರಶಸ್ತಿ ಗರಿಮೆ ಅವರಿಗೆ ಲಭಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2024

IPL 2024: ಎಸ್‌ಆರ್‌ಎಚ್‌ ಫ್ಯಾನ್ಸ್‌ ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡ ಆರ್‌ಸಿಬಿ ಫ್ಯಾನ್ಸ್;‌ ವಿಡಿಯೊ ವೈರಲ್

IPL 2024: IPL 2024: ಹೈದರಾಬಾದ್‌ನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಇದರ ಮಧ್ಯೆಯೇ, ಹೈದರಾಬಾದ್‌ ಫ್ಯಾನ್ಸ್‌ಗೆ ಆರ್‌ಸಿಬಿ ಫ್ಯಾನ್ಸ್‌ ತಿರುಗೇಟು ನೀಡಿದ್ದಾರೆ.

VISTARANEWS.COM


on

IPL 2024
Koo

ಹೈದರಾಬಾದ್:‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಎಂದರೆ, ಅದು ಸ್ಟೇಡಿಯಂನಲ್ಲಿ ಕೇವಲ ಆಟಗಾರರ ನಡುವಿನ ಕಾಳಗ ಅಲ್ಲ. ಮೈದಾನದಲ್ಲಿ ಪಂದ್ಯ ಕುತೂಹಲ ಹಂತ ತಲುಪಿದಾಗ, ಯಾವುದೇ ತಂಡ ಸೋತಾಗ ಎದುರಾಳಿ ತಂಡದ ಅಭಿಮಾನಿಗಳು ಕೂಡ ತಿರುಗೇಟು ನೀಡುತ್ತಾರೆ. ಅದರಲ್ಲೂ, ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮೈದಾನದಲ್ಲೂ ಅಥವಾ ಹೊರಗೂ ಜೋರಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು (RCB Fans) ಎಸ್‌ಆರ್‌ಎಚ್‌ ಅಭಿಮಾನಿಗಳ (SRH Fans) ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡಿದ್ದಾರೆ.

ಹೌದು, ಪ್ರಸಕ್ತ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಎಸ್‌ಆರ್‌ಎಚ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದಾಗ ಎಸ್‌ಆರ್‌ಎಚ್‌ ಅಭಿಮಾನಿಗಳು ಸುಮ್ಮನಿರಿ, ಬಾಯಿಮುಚ್ಚಿ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದರು. ಇದು ಸಹಜವಾಗಿಯೇ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ಗುರುವಾರ (ಏಪ್ರಿಲ್‌ 25) ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದಾದ ಬಳಿಕ ಆರ್‌ಸಿಬಿ ಅಭಿಮಾನಿಗಳು ಕೂಡ ಗಪ್‌ ಚುಪ್‌ ಎಂಬ ಸನ್ನೆ ಮಾಡುವ ಮೂಲಕ ಎಸ್‌ಆರ್‌ಎಚ್‌ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು. ಬೌಲಿಂಗ್‌ನಲ್ಲಿ ಪರಾಕ್ರಮ ತೋರಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 35 ರನ್‌ಗಳ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Continue Reading

ಪ್ರಮುಖ ಸುದ್ದಿ

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

IPL 2024: ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು.

VISTARANEWS.COM


on

IPL 2024
Koo

ಹೈದರಾಬಾದ್​: ಆರ್​ಸಿಬಿ ತಂಡದ ದುರ್ಬಲ ಬೌಲಿಂಗ್ ವಿಭಾಗ ಕೊನೆಗೂ ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ತನ್ನ ಪ್ರತಾಪ ತೋರಿಸಿತು. ಹೀಗಾಗಿ ಬೆಂಗಳೂರು ಮೂಲದ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ 2ನೇ ವಿಜಯಕ್ಕೆ ಪಾತ್ರವಾಯಿತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 35 ರನ್​ಗಳ ಭರ್ಜರಿ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಇದು ಆರ್​ಸಿಬಿ ತಂಡಕ್ಕೆ ಸತತ ಆರು ಸೋಲುಗಳ ಬಳಿಕ ಸಿಕ್ಕ ಗೆಲುವಿನ ಓಯಸಿಸ್​. ಗೆದ್ದ ಆರ್​​ಸಿಬಿ ತಂಡದ ಆಟಗಾರರ ಮುಖದಲ್ಲಿ ನಗು ಮೂಡಿರಲಿಲ್ಲ. ಆದರೆ, ಆರ್​​ಸಿಬಿಯನ್ನೇ ನೆಚ್ಚಿನ ತಂಡವಾಗಿ ಆಯ್ಕೆ ಮಾಡಿಕೊಂಡಿದ್ದ ಲಕ್ಷಾಂತರ ಅಭಿಮಾನಿಗಳ ಮುಖಯದಲ್ಲಿ ಖುಷಿಯ ಛಾಯೆ ಕಂಡು ಬಂತು.

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು. ಆದಾಗ್ಯೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ 10ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಎಸ್​ಆರ್​ಎಚ್​ ಟೂರ್ನಿಯಲ್ಲಿ 3ನೇ ಸೋಲಿಗೆ ಒಳಗಾಯಿತು ಹಾಗೂ ಮೂರನೇ ಸ್ಥಾನದಲ್ಲಿ ಉಳಿಯಿತು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು.

ಇದನ್ನೂ ಓದಿ: World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

ಬ್ಯಾಟಿಂಗ್​ನಲ್ಲಿ ಭರ್ಜರಿ ಶಕ್ತಿ ಹೊಂದಿದ್ದ ಎಸ್​ಆರ್​ಎಚ್​ ತಂಡಕ್ಕೆ ಈ ಮೊತ್ತ ಸವಾಲು ಆಗಿರಲಿಲ್ಲ. ಆದಾಗ್ಯೂ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆರ್​ಸಿಬಿ ಬೌಲರ್​ಗಳಾದ ಸ್ವಪ್ನಿಲ್​ ಸಿಂಗ್​, ಕರಣ್​ ಶರ್ಮಾ ಹಾಗೂ ಕ್ಯಾಮೆರಾನ್​ ಗ್ರೀನ್​ ಅವರ ತಲಾ 2 ವಿಕೆಟ್​ಗಳ ಬಲದಿಂದಾಗಿ ಆರ್​​ಸಿಬಿ ಎದುರಾಳಿ ತಂಡದ ಬಲವನ್ನು ಕುಗ್ಗಿಸಿರು. ಶಹಬಾಜ್​ ಅಹಮದ್​ 40 ರನ್ ಬಾರಿಸಿ ಎಸ್ಆರ್​ಎಚ್​ ಪರ ಗರಿಷ್ಠ ಸ್ಕೋರರ್​​ ಎನಿಸಿಕೊಂಡರು.

Continue Reading

ಕ್ರೀಡೆ

TCS World 10K Run : ಈ ದಿನದಂದು ಮೆಟ್ರೊ ರೈಲು ಸೇವೆ ಬೆಳಗ್ಗೆ 4.10ಕ್ಕೆ ಆರಂಭ

TCS World 10K Run : ಮೆಟ್ರೊ ರೈಲಿನ ಎಲ್ಲ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರದಿಂದ ರೇಷ್ಮೆ ಸಂಸ್ಥೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ವರೆಗೆ ರೈಲುಗಳು ಸಂಚರಿಸಲಿವೆ. ಮುಂಜಾನೆ 03.35 ರಿಂದ 04.25 ಗಂಟೆಯ ಸಮಯದಲ್ಲಿ 10 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿದೆ ಎಂದು ನಮ್ಮ ಮೆಟ್ರೊ ಮಾಹಿತಿ ನೀಡಿದೆ.

VISTARANEWS.COM


on

Namma metro
Koo

ಬೆಂಗಳೂರು: ಏಪ್ರಿಲ್​ 28ರಂದು (ಭಾನುವಾರ) ಬೆಂಗಳೂರಿನ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್​ ಷಾ ಪರೇಡ್ ಮೈದಾನದಿಂದ ನಡೆಯಲಿರುವ TCS ವರ್ಲ್ಡ್ 10K ರನ್ (TCS World 10K Run ) ಪ್ರಯುಕ್ತ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ರೈಲು ಸೇವೆ ಯನ್ನು 07:00 ಗಂಟೆಗೆ ಬದಲಾಗಿ ಮುಂಜಾನೆ 03:35 ಕ್ಕೆ ಆರಂಭಗೊಳ್ಳಲಿದೆ ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೊ ರೈಲಿನ ಎಲ್ಲ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರದಿಂದ ರೇಷ್ಮೆ ಸಂಸ್ಥೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ವರೆಗೆ ರೈಲುಗಳು ಸಂಚರಿಸಲಿವೆ. ಮುಂಜಾನೆ 03.35 ರಿಂದ 04.25 ಗಂಟೆಯ ಸಮಯದಲ್ಲಿ 10 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿದೆ ಎಂದು ನಮ್ಮ ಮೆಟ್ರೊ ಮಾಹಿತಿ ನೀಡಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಗ್ಗೆ 04.10 ಗಂಟೆಗೆ ಪ್ರಾರಂಭವಾಗಲಿದೆ. ನಂತರ 10 ನಿಮಿಷಗಳ ಅಂತರದಿಂದ ಬೆಳಿಗ್ಗೆ 5.00 ಗಂಟೆಯವರೆಗೆ ರೈಲುಗಳು ಸಂಚರಿಸಲಿದೆ. ಆ ನಂತರ ರೈಲುಗಳು ಜನರ ದಟ್ಟಣೆಯ ಅನುಗುಣವಾಗಿ ಚಲಿಸುತ್ತವೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: Namma Metro : ನಮ್ಮ ಮೆಟ್ರೊ ವಿಸ್ತೃತ ನೇರಳೆ ಮಾರ್ಗ ಲೋಕಾರ್ಪಣೆ ಮಾಡಿದ ಮೋದಿ; ಏನಿದರ ವಿಶೇಷತೆ?

10K ಓಟದಲ್ಲಿ ಭಾಗವಹಿಸಲು ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮೆಟ್ರೊ ಅಧಿಕಾರಿಗಳು ವಿನಿಂತಿ ಮಾಡಿದ್ದಾರೆ. ಸಾರ್ವಜನಿಕರು ನಗದು ರಹಿತ QR ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸುವಂತೆ ಬಿ.ಎಂ.ಆರ್.ಸಿ.ಎಲ್ ಹೇಳಿದೆ.

ಮತದಾನದ ದಿನದಂದು ನಮ್ಮ ಮೆಟ್ರೋ ಸೇವೆ ಹೀಗಿದೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಮೆಟ್ರೊ ರೈಲಿನ ಸಂಚಾರ ಅವಧಿ ರಾತ್ರಿ 11.55ರ ಬದಲಿಗೆ 12.35ರವರೆಗೆ ವಿಸ್ತರಣೆಗೊಳ್ಳಲಿದೆ. ಮತದಾನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಏಪ್ರಿಲ್ 26, 2024 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ತನ್ನ ನಾಲ್ಕು ಪ್ರಮುಖ ನಿಲ್ದಾಣಗಳಾದ ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್, ಚಲ್ಲಘಟ್ಟ, ವೈಟ್ಫೀಲ್ಡ್ (ಕಾಡುಗೋಡು) ನಿಂದ ತನ್ನ ಕೊನೆಯ ರೈಲು ಸೇವೆಗಳನ್ನು 23.55 ಬದಲಿಗೆ (ರಾತ್ರಿ 11.55) 12.35ರವರೆಗೆ ವಿಸ್ತರಿಸುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಕ್ರೀಡೆ

World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

World Record: ರೋಹ್ಮಾಲಿಯಾ ರೋಮಾಲಿಯಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಐದನೇ ಟಿ 20 ಐ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಇಂಡೋನೇಷ್ಯಾ ತಂಡಕ್ಕೆ ಗೆಲುವು ತಂದುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡೋನೇಷ್ಯಾ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ನಿ ಪುಟು ಆಯು ನಂದಾ ಸಕಾರಿನಿ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಉತ್ತರವಾಗಿ ಮಂಗೋಲಿಯಾ 16.2 ಓವರ್ ಗಳಲ್ಲಿ 24 ರನ್ ಗಳಿಗೆ ಆಲೌಟ್ ಆಯಿತು.

VISTARANEWS.COM


on

world record
Koo

ಬೆಂಗಳೂರು: ಇಂಡೋನೇಷ್ಯಾದ ಮಹಿಳಾ ಕ್ರಿಕೆಟ್ ತಂಡದ (Indonesian women’s cricket team) ಯುವ ಬೌಲರ್ ರೋಹ್ಮಾಲಿಯಾ ರೊಹ್ಮಾಲಿಯಾ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಇತಿಹಾಸ (World Record) ಬರೆದಿದ್ದಾರೆ. ಮಂಗೋಲಿಯಾ ವಿರುದ್ಧದ ನಾಲ್ಕನೇ ಟಿ 20ಐ ಪಂದ್ಯದಲ್ಲಿ 17 ವರ್ಷದ ಆಫ್-ಸ್ಪಿನ್ನರ್ 3.2-3-0-7 ಅಂಕಿ ಅಂಶಗಳೊಂದಿಗೆ ದಾಖಲೆ ಮಾಡಿದ್ದಾರೆ. 2021ರಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಯುರೋಪ್ ರೀಜನ್ ಕ್ವಾಲಿಫೈಯರ್​ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-2-3-7 ಬೌಲಿಂಗ್ ಸಾಧನೆ ಮಾಡಿದ್ದ ನೆದರ್ಲ್ಯಾಂಡ್ಸ್​​ನ ಫ್ರೆಡೆರಿಕ್ ಓವರಿಡ್ಜಿಕ್​ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆಯಾಗಿ, ರೋಹ್ಮಾಲಿಯಾ ಟಿ 20 ಐ ಪಂದ್ಯದಲ್ಲಿ 7 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರ್ಜೆಂಟೀನಾದ ಅಲಿಸನ್ ಸ್ಟಾಕ್ಸ್, ಮಲೇಷ್ಯಾದ ಸಯಾಜ್ರುಲ್ ಎಜಾತ್ ಇಡ್ರಸ್ ಇತರ ಇಬ್ಬರು ಸಾಧಕರು.

2019 ರಲ್ಲಿ ಮಾಲ್ಡೀವ್ಸ್ ವಿರುದ್ಧ ನೇಪಾಳದ ಅಂಜಲಿ ಚಂದ್ ಅವರ 2.1-2-0-6 (ರನ್​ ನೀಡದೇ 6 ವಿಕೆಟ್ ಉರುಳಿಸಿದ್ದು) ಸಾಧನೆಯನ್ನು ರೋಹ್ಮಾಲಿಯಾ ಮೀರಿಸಿದ್ದಾರೆ.

ಟಿ 20 ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಪುರುಷರು ಮತ್ತು ಮಹಿಳೆಯರು):

  • ರೋಹ್ಮಾಲಿಯಾ ರೊಹ್ಮಾಲಿಯಾ (ಇಂಡೋನೇಷ್ಯಾ ಮಹಿಳೆಯರ ತಂಡ): ಮಂಗೋಲಿಯಾ ವಿರುದ್ಧ 3.2-3-0-7 (2024ರಲ್ಲಿ)
  • ಫ್ರೆಡೆರಿಕ್ ಓವರ್ಡಿಜ್ಕ್ (ನೆದರ್ಲ್ಯಾಂಡ್ಸ್ ಮಹಿಳಾ ತಂಡ): ಫ್ರಾನ್ಸ್ ವಿರುದ್ಧ 4-2-3-7 (2021ರಲ್ಲಿ)
  • ಅಲಿಸನ್ ಸ್ಟಾಕ್ಸ್ (ಅರ್ಜೆಂಟೀನಾ ಮಹಿಳೆಯರ ರಂಡ): ಪೆರು ವಿರುದ್ಧ 3.4-0-3-7, (2022 ರಲ್ಲಿ)
  • ಸಯಾಜ್ರುಲ್ ಎಜಾತ್ ಇದ್ರಸ್ (ಮಲೇಷ್ಯಾ ಪುರುಷರು): ಚೀನಾ ವಿರುದ್ಧ 4-1-8-7, (2023ರಲ್ಲಿ)

ರೋಹ್ಮಾಲಿಯಾ ರೋಮಾಲಿಯಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಐದನೇ ಟಿ 20 ಐ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಇಂಡೋನೇಷ್ಯಾ ತಂಡಕ್ಕೆ ಗೆಲುವು ತಂದುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡೋನೇಷ್ಯಾ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ನಿ ಪುಟು ಆಯು ನಂದಾ ಸಕಾರಿನಿ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಉತ್ತರವಾಗಿ ಮಂಗೋಲಿಯಾ 16.2 ಓವರ್ ಗಳಲ್ಲಿ 24 ರನ್ ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ: Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

ಏಪ್ರಿಲ್ 27 ರಂದು ಕೀರ್ತಿಪುರದಲ್ಲಿ ಪ್ರಾರಂಭವಾಗುವ ಆತಿಥೇಯರ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಮುಂಚಿತವಾಗಿ ವೆಸ್ಟ್ ಇಂಡೀಸ್ ‘ಎ’ ಕ್ರಿಕೆಟ್ ತಂಡ ಬುಧವಾರ ನೇಪಾಳಕ್ಕೆ ಆಗಮಿಸಿದೆ. ಆದಾಗ್ಯೂ, ಕಠ್ಮಂಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಆಟಗಾರರೇ ಲಗೇಜ್​ಗಳನ್ನು ವಿಲೋಡ್ ಮಾಡುವ ಪರಿಸ್ಥಿತಿ ಎದುರಾಯಿತು.

ವೈರಲ್ ಆಗಿರುವ ವೀಡಿಯೊದಲ್ಲಿ, ವೆಸ್ಟ್ ಇಂಡೀಸ್ ಆಟಗಾರರು ಕಿಟ್ ಬ್ಯಾಟ್​​ಗಳು ಮತ್ತು ಸೂಟ್​ಕೇಸ್​ಗಳನ್ನು ಒಂದರ ಮೇಲೊಂದರಂತೆ ರಾಶಿ ಹಾಕುತ್ತಿದ್ದ ದೃಶ್ಯ ಕಂಡು ಬಂತು.

Continue Reading
Advertisement
Congress election camapaign meeting in haliyala
ರಾಜಕೀಯ11 mins ago

Lok Sabha Election 2024: ಬಿಜೆಪಿಯವರಿಂದ ಹಿಂದೂ ಧರ್ಮಕ್ಕೆ ಅಪಾಯ ಎಂದ ಅಂಜಲಿ ನಿಂಬಾಳ್ಕರ್

Modi in Karnataka PM Modi to address rally in Bengaluru Here live video
ಪ್ರಮುಖ ಸುದ್ದಿ16 mins ago

PM Narendra Modi: “ಇವಿಎಂ ಅಪಪ್ರಚಾರ ಮಾಡುವವರಿಗೆ ಕಪಾಳಮೋಕ್ಷ…” ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರಧಾನಿ ಸ್ವಾಗತ

Palki Sharma
ದೇಶ29 mins ago

Palki Sharma: ಬ್ರಿಟನ್‌ನಲ್ಲಿ ಭಾರತದ ಏಳಿಗೆ ಬಿಚ್ಚಿಟ್ಟ ಪತ್ರಕರ್ತೆ ಪಾಲ್ಕಿ ಶರ್ಮಾಗೆ ಮೋದಿ ಮೆಚ್ಚುಗೆ!

Lok sabha Election 2024
Lok Sabha Election 202433 mins ago

Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

Lok Sabha Election 2024 sandalwood celebrities reaction
Lok Sabha Election 202440 mins ago

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

ಕರ್ನಾಟಕ48 mins ago

Lok sabha Election 2024: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನೇರವಾಗಿ ಮತಗಟ್ಟೆಗೆ ಬಂದ ನಾರಾಯಣ ಮೂರ್ತಿ

Lok Sabha Election 2024: Karnataka records 38.23% voter turnout; highest in Dakshina Kannda
ಕರ್ನಾಟಕ1 hour ago

Lok Sabha Election: ರಾಜ್ಯಾದ್ಯಂತ 1 ಗಂಟೆ ವೇಳೆಗೆ 38.23% ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

Lok Sabha Election 2024 Kannada Celeb vote Pictures
ಸ್ಯಾಂಡಲ್ ವುಡ್1 hour ago

Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

Lok Sabha Election 2024 DK brothers distribute Rs 505 in Bengaluru Rural constituency HD Kumaraswamy allegations
Lok Sabha Election 20241 hour ago

Lok Sabha Election 2024: ಕನಕಪುರದಲ್ಲಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ; ಎಚ್‌ಡಿಕೆ ಗಂಭೀರ ಆರೋಪ

Lok sabha election 2024
Lok Sabha Election 20242 hours ago

Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ3 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20243 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20244 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ10 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ23 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ23 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌