Site icon Vistara News

French Open : ಟೆನಿಸ್​ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ದಿಗ್ಗಜ ನೊವಾಕ್​ ಜೊಕೊವಿಕ್​

Novak Djokovic

#image_title

ಪ್ಯಾರಿಸ್​: ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ 2023ರ (French Open) ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ಅವರನ್ನು 7-6, 6-3, 7-5 ಸೆಟ್​​ಗಳಿಂದ ಸೋಲಿಸಿ ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟರು. ಇದು ರೋಲ್ಯಾಂಡ್ ಗ್ಯಾರೋಸ್​​ನಲ್ಲಿ ಜೊಕೊವಿಕ್ ಅವರ ಮೂರನೇ ಪ್ರಶಸ್ತಿ. ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ಗೆದ್ದ ನಂತರ ವರ್ಷದ ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಭಾಜನರಾದರು. ಅಲ್ಲಿ ಅವರು ಫೈನಲ್​​ನಲ್ಲಿ ಸ್ಟೆಫಾನೋಸ್ ಸಿಸಿಪಾಸ್​ ಅವರನ್ನು ಸೋಲಿಸಿದ್ದರು.. ಪ್ಯಾರಿಸ್​ನ ಗೆಲುವಿನೊಂದಿಗೆ ಜೊಕೊವಿಕ್ ತನ್ನ ದೀರ್ಘಕಾಲದ ಸಮಕಾಲೀನ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರ22 ಗ್ರ್ಯಾಂಡ್ ಸ್ಲ್ಯಾಮ್​​ ಟ್ರೋಫಿಗಳ ದಾಖಲೆಯನ್ನು ಮುರಿದರು. ಅವರೀಗ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂಬ ಐತಿಹಾಸಿಕ ದಾಖಲೆ ಮಾಡಿದರು.

ಭಾನುವಾರ ನಡೆದ ಫೈನಲ್​ ಪಂದ್ಯದ ಆರಂಭಿಕ ಸೆಟ್​​ನಲ್ಲಿ ಜೊಕೊವಿಕ್ ಮತ್ತು ಕಾಸ್ಪರ್​ ರುಡ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತು. ಈ ಸೆಟ್​ ಟೈ-ಬ್ರೇಕರ್ ಮೂಲಕ ನಿರ್ಧಾರಗೊಂಡಿತು ಟೈ ಬ್ರೇಕರ್​ನ್ಲ್ಲಿ ಉತ್ತಮ ಪ್ರದರ್ಶನ ನೀಡಿದ ಜೊಕೊವಿಕ್ 7-6 ಅಂತರದಲ್ಲಿ ಸೆಟ್ ತಮ್ಮದಾಗಿಸಿಕೊಂಡುತ. ಜೊಕೊವಿಕ್​ ಎರಡನೇ ಸೆಟ್ ನಲ್ಲಿ 3-0 ಮುನ್ನಡೆ ಸಾಧಿಸಿದರು. ರುಡ್ ಪುನರಾಗಮನದ ಚಿಹ್ನೆಗಳನ್ನು ತೋರಿಸಿದರು ಆದರೆ ಸರ್ಬಿಯಾದ ಆಟಗಾರನ ಆಕ್ರಮಣಶೀಲಗೆಗೆ ಸರಿಸಾಟಿಯಾಗಲು ಕಾಸ್ಪರ್​ ವಿಫಲರಾದರು. 6-3ರಿಂದ ಸೆಟ್​ ಜೊಕೊವಿಕ್​ ವಶವಾಯಿತು.

ಅಂತಿಮ ಸೆಟ್​​ನಲ್ಲಿ ರುಡ್ 1-0 ಮುನ್ನಡೆ ಸಾಧಿಸಿದರು. ಜೊಕೊವಿಕ್ ಅದನ್ನು 1-1ರಿಂದ ಸಮಬಲಗೊಳಿಸಿದರು. ಈ ವೇಳೆ ರುಡ್​ ಪ್ರತಿರೋಧ ತೋರಲು ಮುಂದಾದರು ಹಾಗೂ 3-2 ರಿಂದ ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ಟೈಬ್ರೇಕರ್​ ಮೊರೆ ಹೋಗಬೇಕಾಯಿತು. ಅಲ್ಲೂ ನಾರ್ವೆಯ ರುಡ್​ಗೆ ಸೋಲುಂಟಾಯಿತು.

ಜೊಕೊವಿಕ್ ಅವರಿಗಿಂತ 12 ವರ್ಷ ಕಿರಿಯರಾಗಿದ್ದರೂ, 2022ರ ಯುಎಸ್ ಓಪನ್ ಫೈನಲ್​ನ್ಲಲಿ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಸೋತ ರುಡ್ ಪ್ರತಿ ಹಂತದಲ್ಲೂ ಜೊಕೊವಿಕ್​​ಗೆ ಸ್ಪರ್ಧೆಯೊಡ್ಡಿದರು.

23 ಗ್ರ್ಯಾಂಡ್ ಸ್ಲಾಮ್ ಗಳನ್ನು ಗೆದ್ದಿರುವುದು ನನ್ನ ಅದೃಷ್ಟ. ಇದು ನಂಬಲಾಗದ ಅನುಭವ ಎಂದು ಕ್ಯಾಸ್ಪರ್ ರುಡ್ ಅವರನ್ನು ನೇರ ಸೆಟ್ ಗಳಲ್ಲಿ ಸೋಲಿಸಿ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದ ಜೊಕೊವಿಕ್ ಹೇಳಿದ್ದಾರೆ. ಪ್ಯಾರಿಸ್ನಲ್ಲಿ ನಾನು 23ನೇ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವುದು ಕಾಕತಾಳೀಯ. ಈ ಪಂದ್ಯಾವಳಿಯನ್ನು ಗೆಲ್ಲುವುದು ಯಾವಾಗಲೂ ನನಗೆ ಕಠಿಣವಾಗಿರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ : US Open | ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಮಹಿಳೆಯರ ಸಿಂಗಲ್ಸ್ ಚಾಂಪಿಯನ್‌, ಜೇಬರ್‌ ರನ್ನರ್‌ಅಪ್‌

ಫ್ರೆಂಚ್ ಓಪನ್ 2023 ಪ್ರಶಸ್ತಿ ಗೆದ್ದ ಜೊಕೊವಿಕ್ ಅವರನ್ನು ಮಾಜಿ ವಿಶ್ವ ನಂ.1 ರಾಫೆಲ್ ನಡಾಲ್ ಅಭಿನಂದಿಸಿದ್ದಾರೆ. “ಈ ಅದ್ಭುತ ಸಾಧನೆಗೆ ಅನೇಕ ಅಭಿನಂದನೆಗಳು @DjokerNole 23 ಕೆಲವು ವರ್ಷಗಳ ಹಿಂದೆ ಯೋಚಿಸಲು ಅಸಾಧ್ಯವಾದ ಸಂಖ್ಯೆಯಾಗಿತ್ತು ನೀವು ಅದನ್ನು ಸಾಧಿಸಿದ್ದೀರಿ. ನಿಮ್ಮ ಕುಟುಂಬ ಮತ್ತು ತಂಡದೊಂದಿಗೆ ಅದನ್ನು ಆನಂದಿಸಿ! ” ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ.

Exit mobile version