ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ (Sania-Shoaib) ದಾಂಪತ್ಯದ ನಡುವೆ ಬಿರುಕು ಬಿಟ್ಟಿದ್ದು, ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕಳೆದ ಎರಡು ದಿನಗಳಿಂದ ಜೋರಾಗಿದೆ. ಆದರೆ, ಸಾನಿಯಾ ಮತ್ತು ಶೋಯೆಬ್ ಜತೆಗೂಡಿ ತಮ್ಮದೇ ಆದ ಸ್ವಂತ, ‘ದಿ ಮಿರ್ಜಾ ಮಲಿಕ್ ಟಾಕ್ ಶೋ’ (The Mirza Malik Talk Show) ಆರಂಭಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಬಗೆಗಿನ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಿ ಮಿರ್ಜಾ ಮಲಿಕ್ ಟಾಕ್ ಶೋ ಶೀಘ್ರವೇ ಪಾಕಿಸ್ತಾನದ ಉರ್ದುಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಹೊಸ ಟಾಕ್ ಶೋ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಫ್ಯಾನ್ಸ್ ಗೊಂದಲಕ್ಕಿಡಾಗಿದ್ದಾರೆ. ಮಿರ್ಜಾ ಮತ್ತು ಮಲಿಕ್ ತಮ್ಮ ಟಾಕ್ ಶೋ ಪಬ್ಲಿಷಿಟಿಗಾಗಿ ಡಿವೋರ್ಸ್ ಸುದ್ದಿ ಹರಿಬಿಟ್ಟಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಇದೊಂದು ಕೀಳು ಪಬ್ಲಿಸಿಟಿ ಎಂದು ಜರಿದಿದ್ದಾರೆ.
ಆದರೆ ಮತ್ತೊಂದಿಷ್ಟು ಜನರು, ಇಬ್ಬರು ಸೇರಿ ತಮ್ಮದೇ ಆದ ಸ್ವಂತ ಟಾಕ್ ಶೋ ಆರಂಭಿಸುತ್ತಿರುವುದನ್ನು ಕಂಡು ಖುಷಿಯಾಗಿದ್ದಾರೆ. ಇವರಿಬ್ಬರೂ ಜೋಡಿ ಹೀಗೆಯೇ ಸದಾ ಖುಷಿಯಿಂದ ಇರಲಿದೆ ಎಂದು ಹಾರೈಸಿದ್ದಾರೆ. ಇತ್ತೀಚೆಗಷ್ಟೇ, ಸಾನಿಯಾ-ಶೋಯೆಬ್ ಮಲಿಕ್ ಜೋಡಿ ಡಿವೋರ್ಸ್ ಆಗಲಿದೆ ಎಂಬ ಸುದ್ದಿ ಬಹಳ ಸದ್ದು ಮಾಡಿತ್ತು.
ಇದನ್ನೂ ಓದಿ | ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು? – ಪತಿ ಶೋಯೆಬ್ರಿಂದ ದೂರವಾಗುವ ಮುನ್ಸೂಚನೆಯಾ ಈ ಇನ್ಸ್ಟಾ ಪೋಸ್ಟ್?