Site icon Vistara News

UEFA| ರಿಯಲ್‌ ಮ್ಯಾಡ್ರಿಡ್‌ 14ನೇ ಬಾರಿ ಕಿರೀಟ ಧರಿಸುವ ಅವಕಾಶ: ಲಿವರ್‌ಪೂಲ್‌ ವಿರುದ್ಧ ಸೆಣೆಸಾಟ

ಯುರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ(UEFA) ನಡೆಸುವ ಈ ಬಾರಿಯ ಚಾಂಪಿಯನ್‌ಶಿಪ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ ಹಾಗೂ ಲಿವರ್‌ಪೂಲ್‌ ತಂಡ ಮುಖಾಮುಖಿಯಾಗಲಿದೆ. ಮೇ 28ರಂದು ಫ್ರಾನ್ಸ್‌ನಲ್ಲಿರುವ ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಈ ಎರಡೂ ತಂಡಗಳು ಸಿದ್ಧವಾಗಿದೆ.

ಕಳೆದ ಬಾರಿ 2017-18ರ ಲೀಗ್‌ನಲ್ಲಿ ಕೂಡ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು ರಿಯಲ್‌ ಮ್ಯಾಡ್ರಿಡ್‌ ತಂಡ 3 ಗೋಲ್‌ ಹೊಡೆದು ಭರ್ಜರಿ ಗೆಲುವು ಸಾಧಿಸಿತ್ತು. ಆಗ ‌ಗರೆಥ್‌ ಬಲೆ ಹಾಗೂ ಕರೀಮ್‌ ಬೆನ್‌ಝೆಮ ರಿಯಲ್‌ ಮಯಾಡ್ರಿಡ್‌ ತಂಡದ ಸಗೋಲ್‌ ಮಷಿನ್‌ಗಳಾಗಿದ್ದರು. ಆದರೆ ಲಿವರ್‌ಪೂಲ್‌ ತಂಡದ ಪರವಾಗಿ ಸಡಿಯೋ ಮನೆ ಒಂದು ಗೋಲ್‌ ಮಾತ್ರ ಹೊಡೆದಿತ್ತು. ಲಿವರ್‌ಪೂಲ್‌ ವಿರುದ್ಧ ಗೆಲುವು ಸಾಧಿಸಿ 13ನೇ ಬಾರಿ ಚಾಂಪಿಯನ್‌ ಪಟ್ಟವನ್ನು ತನ್ನದಾಗಿಸಿತ್ತು.‌

ಕಳೆದ ಬಾರಿಯ ತಂಡ:

ರಿಯಲ್‌ ಮ್ಯಾಡ್ರಿಡ್ಲಿವರ್‌ಪೂಲ್
Keylor NavasLoris Karius
Dani CarvajalTrent Alexander
Raphael Varane Dejan Lovren
Sergio Ramos Virgil van Dijk
Marcelo Andrew Robertson
CasemiroGeorginio Wijnaldum
Luka Modric James Milner
Toni KroosJordan Henderson
Isco Mohamed Salah
Cristiano RonaldoRoberto Firmino
Karim BenzemaSadio Mane
Gareth Bale Adam Lallana
Marco Asensio Emre Can

ಈ ಬಾರಿ ರಿಯಲ್‌ ಮ್ಯಾಡ್ರಿಡ್‌ 14ನೇ ಬಾರಿ ಚಾಂಪಿಯನ್ ಕಿರೀಟ ಧರಿಸಬಹುದೇ?

ಈಗಲೂ ಇದೇ ಆಟಗಾರರು ಆಟವಾಡುವ ಸಾಧ್ಯತೆಯಿದ್ದು, ಯಾರು ಕಪ್‌ ಗೆಲ್ಲಬಹುದು ಎಂಬ ಕುತೂಹಲವಿದೆ.

ಈ ಬಾರಿಯ ಲಿವರ್‌ಪೂಲ್‌ ತಂಡದವರ ಆಟವನ್ನು ಗಮನಿಸಿದಾಗ ಲಿವರ್‌ಪೂಲ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಲಾಜಿಕ್‌ ಪ್ರಕಾರವೂ ಲಿವರ್‌ಪೂಲ್‌ ಗೆಲ್ಲಬಹುದು ಎಂದು ತಿಳಿಸಲಾಗಿದೆ. ರಿಯಲ್‌ ಮ್ಯಾಡ್ರಿಡ್‌ ತಂಡದ ಸ್ಟಾರ್‌ ಆಟಗಾರರಾದ ಕರೀಮ್‌ ಹಾಗೂ ಲುಕಾ ಮೊಡ್ರಿಕ್‌ ಅವರನ್ನು ಲಿವರ್‌ಪೂಲ್‌ ತಂಡದ ವಿರ್ಗಿಲ್‌ ವಾನ್‌ಡಿಕ್‌ ಹಾಗೂ ಥಿಯಾಗೊ ಅಲ್ಕಾಂತರಾ ಬ್ಲಾಕ್‌ ಮಾಡಬಹುದು. ಹಾಗೂ ಫಾರ್ವರ್ಡ್‌ ಲೈನ್‌ನಲ್ಲಿ ಮೊಹಮ್ಮದ್‌ ಸಲಾಹ್‌, ಸದಿಯೋ ಮನೆ, ಲೂಯಿಸ್‌ ದಿಯಾಝ್‌ ಹಾಗೂ ದಿಯಾಗೋ ಜೊಟಾ ಈವರೆಗೆ ರೋಮಾಂಚನಕಾರಿ ಪೈಪೋಟಿ ನಡೆಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಕಂಡಾಗ ಲಿವರ್‌ಪೂಲ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಹಾಗೂ 7ನೇ ಬಾರಿ ಚಾಂಪಿಯನ್‌ ಆಗಹಬಹುದು.

ಇದನ್ನೂ ಓದಿ: ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

Exit mobile version