ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ನಲ್ಲಿ 2023ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿರಾಟ್ ಕೊಹ್ಲಿ (Virat kohli) ಹೊರಹೊಮ್ಮಿದ್ದಾರೆ. ಗೂಗಲ್ ಟ್ರೆಂಡ್ಸ್ನಿಂದ ಪಡೆದ ಮಾಹಿತಿಯ ಪ್ರಕಾರ, ಕೊಹ್ಲಿ ಏಷ್ಯಾದ ಕೆಲವು ಪ್ರಸಿದ್ಧ ವ್ಯಕ್ತಿಗಳನ್ನು ಮೀರಿಸಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಜೂನ್ನಲ್ಲಿ ಬಿಡುಗಡೆಯಾದ ಪಟ್ಟಿಯ ಪ್ರಕಾರ, ಕೊರಿಯಾದ ಪಾಪ್ ಗುಂಪು ಬಿಟಿಎಸ್ ವಿ 2023 ರ ಮೊದಲಾರ್ಧದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯಾದ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಬಲಗೈ ಬ್ಯಾಟರ್ 2023ರಲ್ಲಿ ಇಲ್ಲಿಯವರೆಗೆ ಹೆಚ್ಚು ಗೂಗಲ್ ಹುಡುಕಾಟಗಳನ್ನು ಪಡೆದ ತಾರೆಯಾಗಿ ಪಾಪ್ ಗುಂಪನ್ನು ಹಿಂದಿಕ್ಕಿದ್ದಾರೆ. ಭಾರತದ ಮಾಜಿ ನಾಯಕ, ಬಿಟಿಎಸ್ ಸದಸ್ಯರಾದ ಜಂಗ್ ಕೂಕ್ ಮತ್ತು ವಿ ಅವರನ್ನು ಮೀರಿಸಿದ್ದಾರೆ. ಕಳೆದ ವರ್ಷದ ಗೂಗಲ್ ಪಟ್ಟಿಯ ಪ್ರಕಾರ ಏಷ್ಯನ್ ವರ್ಲ್ಡ್ವೈಡ್ 2022ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನೂ ಕೊಹ್ಲಿ ಹಿಂದಿಕ್ಕಿದ್ದಾರೆ. ಇದರೊಂದಿಗೆ ಕತ್ರಿನಾ ಹೆಸರಲ್ಲಿದ್ದ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಗೂಗಲ್ ಟ್ರೆಂಡ್ನಿಂದ ಪಡೆದ ಈ ಅಂಕಿ ಅಂಶವು ಏಷ್ಯಾದ ಐಕಾನ್ಗಳು ಮತ್ತು ಪ್ರಸಿದ್ಧ ಹೆಸರುಗಳಲ್ಲಿ ವಿರಾಟ್ ಕೊಹ್ಲಿಯನ್ನು ಅಗ್ರಸ್ಥಾನದಲ್ಲಿರಿಸಿದೆ. ಇದು ವಿಶ್ವದಾದ್ಯಂತದ ಎಲ್ಲಾ ವಯಸ್ಸಿನ ಮತ್ತು ದೇಶಗಳ ಅಭಿಮಾನಿಗಳಲ್ಲಿ ಕೊಹ್ಲಿಯ ಕ್ರೇಜ್ ಮತ್ತು ಅಭಿಮಾನಿ ಬಳಗವನ್ನು ಸಾಬೀತುಪಡಿಸಿದೆ.
2023 ರಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ನರ್
1) ವಿರಾಟ್ ಕೊಹ್ಲಿ
2) ಬಿಟಿಎಸ್ನ ಜಂಗ್ಕೂಕ್
3) ಬಿಟಿಎಸ್ ವಿ
ಇತ್ತೀಚೆಗೆ ಗೂಗಲ್ ಟ್ರೆಂಡ್ಸ್ನಲ್ಲಿ ಕೊಹ್ಲಿಯ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದಾರೆ. ಅದಕ್ಕೆ ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ಅವರ ಬಂಪರ್ ಶತಕವೂ ಕಾರಣವಾಗಿದೆ. ಈ ಶತಕವು ಕೊಹ್ಲಿ ಅವರ 47 ನೇ ಏಕದಿನ ಶತಕವಾಗಿದ್ದು, ಈಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆ ಮುರಿಯಲುಕೇವಲ 2 ಶತಕಗಳು ಸಾಕು.
ಇದನ್ನೂ ಓದಿ : Rohit Sharma : ಏರ್ಪೋರ್ಟ್ಗೆ ಹೊರಡುವಾಗ ಪಾಸ್ಪೋರ್ಟ್ ಮರೆತು ಬಂದ ರೋಹಿತ್! ಎಲ್ಲರಿಗೂ ಪೀಕಲಾಟ
ದೆಹಲಿ ಮೂಲದ ಕ್ರಿಕೆಟಿಗ ಈಗ 77 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ, ಸಚಿನ್ ಅವರ 100 ಅಂತಾ ರಾಷ್ಟ್ರೀಯ ಶತಕಗಳ ದಾಖಲೆಯಿಂದ ಇನ್ನೂ 23 ಮೂರಂಕಿ ಮೊತ್ತದ ದೂರದಲ್ಲಿದ್ದಾರೆ.
ಏಷ್ಯಾ ಕಪ್ 2023 ರ ಬಗ್ಗೆ ಮಾತನಾಡುವುದಾದರೆ ಶ್ರೀಲಂಕಾ ವಿರುದ್ಧದ ಫೈನಲ್ನಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಭಾರತದ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರು 51 ರನ್ಗಳ ಸುಲಭ ಗುರಿಯನ್ನು ಔಟಾಗದೇ ಬೆನ್ನಟ್ಟಿದ್ದರು. ಅದಕ್ಕೂ ಮೊದಲು ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಸಾಹಸದ ಮೂಲಕ 21 ರನ್ಗಳಿಗೆ 6 ವಿಕೆಟ್ ಉರುಳಿಸಿ ಲಂಕಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿದ್ದರು.
ಫೈನಲ್ನಲ್ಲಿ ಸಿರಾಜ್ ಅವರ ಸ್ಮರಣೀಯ ಪ್ರಯತ್ನವು ಭಾರತಕ್ಕೆ 8ನೇ ಏಷ್ಯಾ ಕಪ್ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿತು.ಕೊಹ್ಲಿ ಮತ್ತು ಭಾರತದ ಮುಂದಿನ ಕಾರ್ಯಯೋಜನೆ ಸೆಪ್ಟೆಂಬರ್ 22 ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಸರಣಿಯಾಗಿದೆ.