ಕ್ರೀಡೆ
Virat kohli : ಬಾಲಿವುಡ್ ನಟಿ ಕತ್ರಿನಾ ಕೈಫ್ ಖ್ಯಾತಿಗೆ ಕುತ್ತು ತಂದ ಕೊಹ್ಲಿ; ಏನಾಯಿತು ಅವರಿಬ್ಬರ ನಡುವೆ?
2022ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ ವರ್ಲ್ಡ್ ವೈಡ್ ಪಟ್ಟಿಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ವಿರಾಟ್ ಕೊಹ್ಲಿ (Virat Kohli) ಹಿಂದಿಕ್ಕಿದ್ದಾರೆ.
ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ನಲ್ಲಿ 2023ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿರಾಟ್ ಕೊಹ್ಲಿ (Virat kohli) ಹೊರಹೊಮ್ಮಿದ್ದಾರೆ. ಗೂಗಲ್ ಟ್ರೆಂಡ್ಸ್ನಿಂದ ಪಡೆದ ಮಾಹಿತಿಯ ಪ್ರಕಾರ, ಕೊಹ್ಲಿ ಏಷ್ಯಾದ ಕೆಲವು ಪ್ರಸಿದ್ಧ ವ್ಯಕ್ತಿಗಳನ್ನು ಮೀರಿಸಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಜೂನ್ನಲ್ಲಿ ಬಿಡುಗಡೆಯಾದ ಪಟ್ಟಿಯ ಪ್ರಕಾರ, ಕೊರಿಯಾದ ಪಾಪ್ ಗುಂಪು ಬಿಟಿಎಸ್ ವಿ 2023 ರ ಮೊದಲಾರ್ಧದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯಾದ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಬಲಗೈ ಬ್ಯಾಟರ್ 2023ರಲ್ಲಿ ಇಲ್ಲಿಯವರೆಗೆ ಹೆಚ್ಚು ಗೂಗಲ್ ಹುಡುಕಾಟಗಳನ್ನು ಪಡೆದ ತಾರೆಯಾಗಿ ಪಾಪ್ ಗುಂಪನ್ನು ಹಿಂದಿಕ್ಕಿದ್ದಾರೆ. ಭಾರತದ ಮಾಜಿ ನಾಯಕ, ಬಿಟಿಎಸ್ ಸದಸ್ಯರಾದ ಜಂಗ್ ಕೂಕ್ ಮತ್ತು ವಿ ಅವರನ್ನು ಮೀರಿಸಿದ್ದಾರೆ. ಕಳೆದ ವರ್ಷದ ಗೂಗಲ್ ಪಟ್ಟಿಯ ಪ್ರಕಾರ ಏಷ್ಯನ್ ವರ್ಲ್ಡ್ವೈಡ್ 2022ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನೂ ಕೊಹ್ಲಿ ಹಿಂದಿಕ್ಕಿದ್ದಾರೆ. ಇದರೊಂದಿಗೆ ಕತ್ರಿನಾ ಹೆಸರಲ್ಲಿದ್ದ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಗೂಗಲ್ ಟ್ರೆಂಡ್ನಿಂದ ಪಡೆದ ಈ ಅಂಕಿ ಅಂಶವು ಏಷ್ಯಾದ ಐಕಾನ್ಗಳು ಮತ್ತು ಪ್ರಸಿದ್ಧ ಹೆಸರುಗಳಲ್ಲಿ ವಿರಾಟ್ ಕೊಹ್ಲಿಯನ್ನು ಅಗ್ರಸ್ಥಾನದಲ್ಲಿರಿಸಿದೆ. ಇದು ವಿಶ್ವದಾದ್ಯಂತದ ಎಲ್ಲಾ ವಯಸ್ಸಿನ ಮತ್ತು ದೇಶಗಳ ಅಭಿಮಾನಿಗಳಲ್ಲಿ ಕೊಹ್ಲಿಯ ಕ್ರೇಜ್ ಮತ್ತು ಅಭಿಮಾನಿ ಬಳಗವನ್ನು ಸಾಬೀತುಪಡಿಸಿದೆ.
2023 ರಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ನರ್
1) ವಿರಾಟ್ ಕೊಹ್ಲಿ
2) ಬಿಟಿಎಸ್ನ ಜಂಗ್ಕೂಕ್
3) ಬಿಟಿಎಸ್ ವಿ
ಇತ್ತೀಚೆಗೆ ಗೂಗಲ್ ಟ್ರೆಂಡ್ಸ್ನಲ್ಲಿ ಕೊಹ್ಲಿಯ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದಾರೆ. ಅದಕ್ಕೆ ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ಅವರ ಬಂಪರ್ ಶತಕವೂ ಕಾರಣವಾಗಿದೆ. ಈ ಶತಕವು ಕೊಹ್ಲಿ ಅವರ 47 ನೇ ಏಕದಿನ ಶತಕವಾಗಿದ್ದು, ಈಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆ ಮುರಿಯಲುಕೇವಲ 2 ಶತಕಗಳು ಸಾಕು.
ಇದನ್ನೂ ಓದಿ : Rohit Sharma : ಏರ್ಪೋರ್ಟ್ಗೆ ಹೊರಡುವಾಗ ಪಾಸ್ಪೋರ್ಟ್ ಮರೆತು ಬಂದ ರೋಹಿತ್! ಎಲ್ಲರಿಗೂ ಪೀಕಲಾಟ
ದೆಹಲಿ ಮೂಲದ ಕ್ರಿಕೆಟಿಗ ಈಗ 77 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ, ಸಚಿನ್ ಅವರ 100 ಅಂತಾ ರಾಷ್ಟ್ರೀಯ ಶತಕಗಳ ದಾಖಲೆಯಿಂದ ಇನ್ನೂ 23 ಮೂರಂಕಿ ಮೊತ್ತದ ದೂರದಲ್ಲಿದ್ದಾರೆ.
ಏಷ್ಯಾ ಕಪ್ 2023 ರ ಬಗ್ಗೆ ಮಾತನಾಡುವುದಾದರೆ ಶ್ರೀಲಂಕಾ ವಿರುದ್ಧದ ಫೈನಲ್ನಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಭಾರತದ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರು 51 ರನ್ಗಳ ಸುಲಭ ಗುರಿಯನ್ನು ಔಟಾಗದೇ ಬೆನ್ನಟ್ಟಿದ್ದರು. ಅದಕ್ಕೂ ಮೊದಲು ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಸಾಹಸದ ಮೂಲಕ 21 ರನ್ಗಳಿಗೆ 6 ವಿಕೆಟ್ ಉರುಳಿಸಿ ಲಂಕಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿದ್ದರು.
ಫೈನಲ್ನಲ್ಲಿ ಸಿರಾಜ್ ಅವರ ಸ್ಮರಣೀಯ ಪ್ರಯತ್ನವು ಭಾರತಕ್ಕೆ 8ನೇ ಏಷ್ಯಾ ಕಪ್ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿತು.ಕೊಹ್ಲಿ ಮತ್ತು ಭಾರತದ ಮುಂದಿನ ಕಾರ್ಯಯೋಜನೆ ಸೆಪ್ಟೆಂಬರ್ 22 ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಸರಣಿಯಾಗಿದೆ.
ಕ್ರಿಕೆಟ್
Team India : ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 3 ಮಾದರಿಯ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ
ಆಸ್ಟ್ರೆಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ತಂಡ (Team India) ವಿಶೇಷ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ.
ಮೊಹಾಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ನಂ.1 ಸ್ಥಾನಕ್ಕೇರಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನವನ್ನು ಅಗ್ರಸ್ಥಾನದಿಂದ ಕೆಳಗಿಳಿಸಲು ಟೀಮ್ ಇಂಡಿಯಾಗೆ ಜಯದ ಅಗತ್ಯವಿತ್ತು. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದ ಬಳಿಕ ಅಪರೂಪದ ದಾಖಲೆ ಮಾಡಿದೆ.
ಟೆಸ್ಟ್ ಹಾಗೂ ಟಿ20 ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ನಂ.1 ಸ್ಥಾನದಲ್ಲಿತ್ತು. ಈಗ ಅವರು ಏಕದಿನ ಪಂದ್ಯಗಳಲ್ಲಿಯೂ ನಂಬರ್ ಒನ್ ಆಗಿದ್ದಾರೆ. ವಿಶೇಷವೆಂದರೆ, ಮೆನ್ ಇನ್ ಬ್ಲೂ ಇತಿಹಾಸದಲ್ಲಿ ಎಲ್ಲಾ ಸ್ವರೂಪಗಳಲ್ಲಿ ನಂ.1 ಶ್ರೇಯಾಂಕವನ್ನು ಪಡೆದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ 2012ರ ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಈ ಸಾಧನೆ ಮಾಡಿತ್ತು. ಅದೇ ರೀತಿ ಈ ಸಾಧನೆ ಮಾಡಿರುವ ಏಷ್ಯಾದ ಮೊದಲ ತಂಡ ಎನಿಸಿಕೊಂಡಿದೆ.
ಐಸಿಸಿ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ಅಂಕ
- ಟೆಸ್ಟ್ – 264 ಅಂಕಗಳು
- ಟಿ20ಐ – 118 ಅಂಕ
- ಏಕದಿನ – 116 ಅಂಕ
ಪಾಕಿಸ್ತಾನ ಇನ್ನೂ ಪೈಪೋಟಿಯಲ್ಲಿದೆ
ವಿಶ್ವಕಪ್ ಪ್ರಾರಂಭವಾಗುವ ಮೊದಲು ಪಾಕಿಸ್ತಾನವು ಅಗ್ರಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗಿರುವುದರಿಂದ ಎಲ್ಲಗೂ ಇಲ್ಲಿಗೆ ಮುಗಿದಿಲ್ಲ. . ಆಸ್ಟ್ರೇಲಿಯಾ ಇನ್ನು ಮುಂದೆ ವಿಶ್ವಕಪ್‌ಗೆ ಹೋಗುವ ನಂ.1 ತಂಡವಾಗಲು ರೇಸ್ನಲ್ಲಿ ಇಲ್ಲವಾಧರೂ ಆಸ್ಟ್ರೇಲಿಯಾ ಭಾರತದ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನ ಇನ್ನೂ ನಂ.1 ಆಗಬಹುದು.
ಇದನ್ನೂ ಓದಿ : ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ
ಎಲ್ಲ ಮೂರು ಮಾದರಿಗಳಲ್ಲಿ ನಂಬರ್ 1 ಸ್ಥಾನ ಪಡೆದ ಭಾರತ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಭಾಶಯ ಸಲ್ಲಿಸಿದ್ದಾರೆ.
🇮🇳 Numero Uno in Test, ODI, and T20I cricket.
— Jay Shah (@JayShah) September 22, 2023
Heartiest congratulations to #TeamIndia for achieving this historic milestone. The rankings reflect the hard work put in by this team as they chase excellence on the field. This is fantastic achievement just ahead of the World Cup.… pic.twitter.com/wR4JDlqBJy
ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಟೀಮ್ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು. ಮೈದಾನದಲ್ಲಿ ಶ್ರೇಷ್ಠತೆಯನ್ನು ಬೆನ್ನಟ್ಟುವಾಗ ಈ ತಂಡವು ಮಾಡಿದ ಕಠಿಣ ಪರಿಶ್ರಮವನ್ನು ರ್ಯಾಂಕ್ಗಳನ್ನು ಪ್ರತಿಬಿಂಬಿಸುತ್ತವೆ. ವಿಶ್ವಕಪ್‌ಗೆ ಸ್ವಲ್ಪ ಮುಂಚಿತವಾಗಿ ಇದು ಅದ್ಭುತ ಸಾಧನೆಯಾಗಿದೆ. ಮೊಹಾಲಿಯಲ್ಲಿ ನಡೆದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧ 1-0 ಮುನ್ನಡೆ ಸಾಧಿಸಿದೆ. ಆವೇಗವನ್ನು ಮುಂದುವರಿಸೋಣ. ಎಂದು ಬರೆದಿದ್ದಾರೆ.
ಭಾರತ ತಂಡದ ಸಾಧನೆ ರೀ ರೀತಿ ಇದೆ
- ನಂ.1 ಟೆಸ್ಟ್ ತಂಡ – ಭಾರತ
- ನಂ.1 ಟಿ20 ತಂಡ- ಭಾರತ
- ನಂ.1 ಏಕದಿನ ತಂಡ – ಭಾರತ
- ನಂ.1 ಟಿ20 ಬ್ಯಾಟ್ಸ್ಮನ್ – ಸೂರ್ಯ
- ನಂ.1 ಏಕದಿನ ಬೌಲರ್ – ಸಿರಾಜ್
- ನಂ.1 ಟೆಸ್ಟ್ ಬೌಲರ್ – ಅಶ್ವಿನ್
- ನಂ.1 ಟೆಸ್ಟ್ ಆಲ್ರೌಂಡರ್ – ಜಡೇಜಾ
- ನಂ.2 ಟೆಸ್ಟ್ ಆಲ್ರೌಂಡರ್ – ಅಶ್ವಿನ್
- ನಂ.2 ಏಕದಿನ ಬ್ಯಾಟ್ಸ್ಮನ್ – ಗಿಲ್
- ನಂ.2 ಟಿ20 ಆಲ್ರೌಂಡರ್- ಹಾರ್ದಿಕ್
- ನಂ.3 ಟೆಸ್ಟ್ ಬೌಲರ್ – ಜಡೇಜಾ
ಕ್ರಿಕೆಟ್
ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ
ಭಾರತ ತಂಡ ಗೆಲುವಿನ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ (ind vs aus) 1-0 ಮುನ್ನಡೆ ಪಡೆಯಿತು.
ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ (ind vs aus ) ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಈ ವಿಜಯದ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು.
ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಋತುರಾಜ್ ಗಾಯಕ್ವಾಡ್ ಹಾಗೂ ಶುಭ್ ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ಮೊದಲ ವಿಕೆಟ್ಗೆ 142 ರನ್ ಬಾರಿಸಿ ವಿಶ್ವಾಸ ಮೂಡಿಸಿತು. ಇವರಿಬ್ಬರೂ ಆಸ್ಟ್ರೇಲಿಯಾದ ಬೌಲರ್ಗಳನ್ನು ಹಿಮ್ಮಟ್ಟಿಸಿದರು.
ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶ್ರೇಯಸ್ ಅಯ್ಯರ್ ಮತ್ತೆ ವೈಫಲ್ಯ ಕಂಡರು. 3 ರನ್ಗೆ ಅವರು ರನ್ಔಟ್ ಆದರು. ಅನಗತ್ಯ ರನ್ ಕದಿಯಲು ಮುಂದಾದ ಅವರು ತಾವಿನ್ನೂ ಲಯ ಕಂಡುಕೊಂಡಿಲ್ಲ ಎಂಬುದನ್ನು ಸೂಚಿಸಿದಂತಿತ್ತು. ಅವರು ಔಟಾದ ಬಳಿಕ ಭಾರತಕ್ಕೆ ಸ್ವಲ್ಪ ಹಿನ್ನಡೆ ಉಂಟಾಯಿತು. ಆದರೆ ಈ ಇಬ್ಬರೂ ಬ್ಯಾಟರ್ಗಳು ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಅವರ ಎಸೆತಗಳಿವೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಇಶಾನ್ ಕಿಶನ್ ಭರವಸೆ ಮೂಡಿಸಿದರೂ 18 ರನ್ಗಳಿಗೆ ಔಟಾದರು. ಈ ವೇಳೆ ಭಾರತ ತಂಡ 185 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು.
ಈ ವೇಳೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಕೆ. ಎಲ್ ರಾಹುಲ್ ಅರ್ಧ ಶತಕಗಳನ್ನು ಬಾರಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರೂ 80 ರನ್ಗಳ ಜತೆಯಾಟ ಆಡಿದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಗರಿಷ್ಠ 52 ರನ್ ಗಳಿಸಿದರು. ಜೋಶ್ ಇಂಗ್ಲಿಷ್ 45, ಸ್ಟೀವ್ ಸ್ಮಿತ್ 41, ಮಾರ್ನಸ್ ಲಾಬುಷೇನ್ 39, ಕ್ಯಾಮರೂನ್ ಗ್ರೀನ್ 31, ಮಾರ್ಕಸ್ ಸ್ಪೋಯಿನಿಸ್ 29 ಮತ್ತು ನಾಯಕ ಪ್ಯಾಟ್ ಕಮಿನ್ಸ್ 21 ರನ್ ಗಳಿಸಿ ಔಟಾಗದೆ ಉಳಿದರು. ಸ್ಮಿತ್ ಹಾಗೂ ವಾರ್ನರ್ ಭಾರತ ತಂಡದ ಬೌಲರ್ಗಳನ್ನು ಕಾಡಿದರಲ್ಲದೆ, ದೊಡ್ಡ ಮೊತ್ತ ಪೇರಿಸುವ ಆತಂಕ ಮೂಡಿಸಿದರು. ಆದರೆ, ಮೊಹಮ್ಮದ್ ಶಮಿ ಭಾರತದ ಭಯವನ್ನು ದೂರ ಮಾಡಿದರು. ಬುಮ್ರಾ.ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಶಮಿಗೆ ಉತ್ತಮ ಬೆಂಬಲ ನೀಡಿದರು.
ಇದನ್ನೂ ಓದಿ: Mohammed Shami : ಬೌಲಿಂಗ್ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಪೂರ್ವ ಸಿದ್ಧತೆ ನಡೆಸಲು ಈ ಸರಣಿ ಭಾರತದ ಪಾಲಿಗೆ ಮಹತ್ವದನಿಸಿದೆ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ಕಲ್ಪಿಸಲಾಗಿದೆ.
ಕ್ರಿಕೆಟ್
Mohammed Shami : ಬೌಲಿಂಗ್ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) ಐದು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾವನ್ನು 50 ಓವರ್ಗಳಿಎಗ ಕೇವಲ 276 ರನ್ಗಳಿಗೆ ನಿಯಂತ್ರಿಸಲು ಸಹಾಯ ಮಾಡಿದರು.
ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ವೇಗದ ಬೌಲರ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶಗಳನ್ನು ದಾಖಲಿಸಿದ್ದಾರೆ. ಅವರು 51 ರನ್ಗಳಿಗೆ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಪ್ರವಾಸಿ ತಂಡವನ್ನು 50 ಓವರ್ಗಳಿಗೆ 276 ರನ್ಗಳಿಗೆ ಸೀಮಿತಗೊಳಿಸಲು ಸಹಾಯ ಮಾಡಿದರು. ಡೇವಿಡ್ ವಾರ್ನರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಶಮಿ ಆರಂಭಿಕ ಆಘಾತ ನೀಡಿದ್ದರು.
ಅದ್ಭುತ ಎಸೆತದಿಂದ ಮಾರ್ಷ್ ಔಟ್ ಆದರು. ಅವರು ವಿಕೆಟ್ನಿಂದ ಹೊರಕ್ಕೆ ಹೋಗುತ್ತಿದ್ದ ಚೆಂಡನ್ನು ಮುಟ್ಟಲು ಯತ್ನಿಸಿ ಶುಬ್ಮನ್ ಗಿಲ್ ಕ್ಯಾಚ್ ಹಿಡಿಯುವ ಮೂಲಕ ನಿರ್ಗಮಿಸಿದರು.
Mohammed Shami has made a strong case for his inclusion in India's starting XI for #CWC23 💥#INDvAUS pic.twitter.com/u1kAPL54kN
— ICC (@ICC) September 22, 2023
ಶಮಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರಿಗೂ ಆಘಾತ ನೀಡಿದರು. ಸ್ಮಿತ್ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಬಲಗೈ ವೇಗಿ ಶಮಿ ಅವರನ್ನು ಬೌಲ್ಡ್ ಮಾಡಿದರು. 33 ವರ್ಷದ ವೇಗಿ ಆ ಬಳಿಕ ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ಶಾರ್ಟ್ ಮತ್ತು ಸೀನ್ ಅಬಾಟ್ ಅವರನ್ನು ಔಟ್ ಮಾಡಿ ಅಂತಿಮ ಮೂರು ವಿಕೆಟ್ಗಳನ್ನು ಪಡೆದರು. ಈ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.
ಉತ್ತಮ ಸಾಧನೆ
2019ರ ವಿಶ್ವಕಪ್ನಲ್ಲಿ ಬರ್ಮಿಂಗ್ಹಮ್ನ ಎಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್ಗೆ 5 ವಿಕೆಟ್ ಪಡೆದಿದ್ದು ಅವರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಇದು ಏಕದಿನ ಕ್ರಿಕೆಟ್ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಅಮ್ರೋಹಾ ಮೂಲದ (ಉತ್ತರ ಪ್ರದೇಶ) ಬೌಲರ್ 50 ಓವರ್ಗಳ ಸ್ವರೂಪದಲ್ಲಿ ಒಂಬತ್ತು ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಪಂದ್ಯದಲ್ಲಿ ಶಮಿ ಗಳಿಸಿದ ಏಕೈಕ ದಾಖಲೆ ಮಾತ್ರವಲ್ಲ, ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಪಂದ್ಯವೊಂದರಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ ಭಾರತದ ಮಾಜಿ ವೇಗಿ ಮತ್ತು ಅಖಿಲ ಭಾರತ ಹಿರಿಯ ಪುರುಷರ ಆಯ್ಕೆ ಸಮಿತಿಯ ಪ್ರಸ್ತುತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್ಕೋಟ್ನಲ್ಲಿ ನಡೆಯಲಿದೆ.
ಕ್ರಿಕೆಟ್
T20 World Cup : 2024 ಟಿ20 ವಿಶ್ವ ಕಪ್ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ
ಅಮೆರಿಕದ ಮೂರು ಸ್ಥಳ ಹಾಗೂ ವೆಸ್ಟ್ ಇಂಡೀಸ್ನ 7 ಸ್ಥಳಗಳು ಸೇರಿ ಒಟ್ಟು 10 ಕಡೆ ವಿಶ್ವ ಕಪ್ (T20 World Cup) ಪಂದ್ಯಗಳು ಆಯೋಜನೆಗೊಳ್ಳಲಿವೆ.
ದುಬೈ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ (ಅಮೆರಿಕ) ಮುಂದಿನ ವರ್ಷ ಜೂನ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸಲಿದೆ. ಮೆಗಾ ಈವೆಂಟ್ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಐಸಿಸಿ ಬುಧವಾರ ಯುಎಸ್ಎಯಲ್ಲಿ ಪಂದ್ಯ ನಡೆಯಲಿರುವ ಮೂರು ಸ್ಥಳಗಳನ್ನು ಬಹಿರಂಗಪಡಿಸಿದೆ. ಕೆರಿಬಿಯನ್ ರಾಷ್ಟ್ರಗಳಿಂದ ಏಳು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.
ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಡೊಮಿನಿಕಾ, ಗಯಾನಾ, ಸೇಂಟ್ ಲೂಸಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ವೆಸ್ಟ್ ಇಂಡೀಸ್ನಿಂದ ಆಯ್ಕೆಯಾದ ಏಳು ಸ್ಥಳಗಳಾಗಿವೆ, ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಮತ್ತು ನ್ಯೂಯಾರ್ಕ್ನ ನಸ್ಸಾವು ಕೌಂಟಿ ಯುಎಸ್ಎಯಲ್ಲಿ ವಿಶ್ವ ಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
All the venues for the ICC Men's #T20WorldCup 2024 have been locked in 🔒
— ICC (@ICC) September 22, 2023
More 👇
ಐಸಿಸಿ ಪುರುಷರ ಟಿ 20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಏಳು ಕೆರಿಬಿಯನ್ ಸ್ಥಳಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ, ಟ್ರೋಫಿಗಾಗಿ 20 ತಂಡಗಳು ಸ್ಪರ್ಧಿಸುತ್ತಿವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡೈಸ್ ಹೇಳಿದರು. ಅವೆಲ್ಲವೂ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಜನಪ್ರಿಯ ಸ್ಥಳಗಳಾಗಿವೆ. ಇದು ಈವೆಂಟ್ಗೆ ಅದ್ಭುತ ರೂಪ ಕೊಡಲಿದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ಗೆ ಮೂರನೇ ಆತಿಥ್ಯ
ಇದು ವೆಸ್ಟ್ ಇಂಡೀಸ್ ಆತಿಥ್ಯ ವಹಿಸುತ್ತಿರುವ ಮೂರನೇ ಐಸಿಸಿ ಹಿರಿಯ ಪುರುಷರ ಪಂದ್ಯಾವಳಿಯಾಗಿದೆ. ಈ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಕೆರಿಬಿಯನ್ ನಲ್ಲಿ ಕ್ರಿಕೆಟ್ ಅನ್ನು ಆನಂದಿಸುವ ವಿಶಿಷ್ಟ ಅನುಭವ ನೀಡಲಿದೆ. ಕ್ರೀಡೆಯ ಕಡೆಗೆ ನಮ್ಮ ನಿರಂತರ ಬದ್ಧತೆ ಮತ್ತು ಬೆಂಬಲಕ್ಕಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಏಳು ಆತಿಥೇಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಈ ಹಿಂದೆ 2007 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತು ನಂತರ 2010 ರಲ್ಲಿ ಟಿ 20 ವಿಶ್ವಕಪ್ ಅನ್ನು ಆಯೋಜಿಸಿತ್ತು. ಸಿಡಬ್ಲ್ಯುಐ ಮುಖ್ಯಸ್ಥ ಜಾನಿ ಗ್ರೇವ್ಸ್ ಅವರು ಮೆಗಾ ಐಸಿಸಿ ಈವೆಂಟ್ ಅನ್ನು ಆಯೋಜಿಸಲು ಮಂಡಳಿಯ ಉತ್ಸಾಹವನ್ನು ಪ್ರಕಟಿಸಿದ್ದಾರೆ ಆಯ್ಕೆಯಾದ ಎಲ್ಲಾ ಏಳು ಸ್ಥಳಗಳು ಮೇಲ್ದರ್ಜೆಗೇರುವ ಅರ್ಹತೆ ಹೊಂದಿವೆ ಎಂದು ಹೇಳಿದರು.
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ
ಇತಿಹಾಸದಲ್ಲಿ ಅತಿದೊಡ್ಡ ಐಸಿಸಿ ಟಿ 20 ವಿಶ್ವಕಪ್ ಆತಿಥ್ಯ ವಹಿಸಲು ಕೆರಿಬಿಯನ್ ಸ್ಥಳಗಳನ್ನು ನಾವು ಘೋಷಿಸುತ್ತಿರುವುದರಿಂದ ಇದು ರೋಮಾಂಚನಕಾರಿ ಕ್ಷಣ. ಮುಂದಿನ ವರ್ಷ ಜೂನ್ನಲ್ಲಿ 20 ತಂಡಗಳು 55 ಪಂದ್ಯಗಳಲ್ಲಿ ಆಡಲಿವೆ. ಒಂದು ತಲೆಮಾರುಗಳಿಂದ ವೆಸ್ಟ್ ಇಂಡೀಸ್ ನಲ್ಲಿ ನಡೆಯುವ ಅತ್ಯಂತ ಮಹತ್ವದ ಕ್ರೀಡಾಕೂಟವನ್ನು ಆಯೋಜಿಸಲು ಅನುವು ಮಾಡಿಕೊಟ್ಟ ವೆಸ್ಟ್ ಇಂಡೀಸ್ ನ ಸರ್ಕಾರಗಳಿಗೆ ನಾವು ಕೃತಜ್ಞರಾಗಿದ್ದೇವೆ. ಏಳು ಆತಿಥೇಯ ಸರ್ಕಾರಗಳು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಥಳಗಳು ಮತ್ತು ಅಭ್ಯಾಸ ಸೌಲಭ್ಯಗಳನ್ನು ನವೀಕರಿಸಲು ಬದ್ಧವಾಗಿವೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಹೆಮ್ಮೆಯ ಪರಂಪರೆಯನ್ನು ಬೆಂಬಲಿಸುವುದನ್ನು ಮತ್ತು ಸಂರಕ್ಷಿಸುವುದನ್ನು ಮುಂದುವರಿಸಿವೆ” ಎಂದು ಜಾನಿ ಗ್ರೇವ್ಸ್ ಹೇಳಿಕೊಂಡಿದ್ದಾರೆ.
-
ಪ್ರಮುಖ ಸುದ್ದಿ13 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ4 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ10 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ23 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್7 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ16 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!