Site icon Vistara News

Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ

Cricket news

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತ ನಂತರ ಬೇಸರದಲ್ಲಿದೆ. ಆದರೆ, ಹೆಚ್ಚು ದಿನ ಅದೇ ಮೂಡ್​ನಲ್ಲಿ ಇರಲು ಅವಕಾಶವಿಲ್ಲ. ಟೀಮ್ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರಲಿದೆ. ನಿರಂತರ ವೇಳಾಪಟ್ಟಿಯನ್ನು ಹೊಂದಿರುವುದರಿಂದ ತ್ವರಿತವಾಗಿ ಮರು ಸಂಘಟನೆಗೊಳ್ಳಬೇಕಾಗಿಎ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅದಕ್ಕೀಗ ತಂಡ ಪ್ರಕಟಗೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಇದಲ್ಲದೆ, ಭಾರತವು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲಿದೆ. ನಂತರ ಜನವರಿ ಕೊನೆಯ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಟಿ20ಗೆ ಆದ್ಯತೆ

ಮುಂಬರುವ ಪ್ರವಾಸಗಳು ಟಿ 20 ಪಂದ್ಯಗಳಿಂದಲೇ ತುಂಬಿರುತ್ತವೆ. ಏಕೆಂದರೆ ತಂಡದ ಪ್ರಮುಖ ಗಮನವು ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ಮೇಲೆ ಇರುತ್ತದೆ. ಇದಲ್ಲದೆ, ನಿರ್ಣಾಯಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​​ನಲ್ಲಿ ನಿರ್ಣಾಯಕ ಅಂಕಗಳನ್ನು ಸಂಗ್ರಹಿಸಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಭಾರತ ತಂಡ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಪೇಕ್ಷಿತ ಗದೆ ರೂಪದ ಟ್ರೋಫಿಗೆ ಗೆಲ್ಲಲು ಸಿದ್ಧವಾಗಬೇಕಿದೆ.

ಇದನ್ನೂ ಓದಿ: Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಪಂತ್​ಗಾಗಿ ಕಾಯುವಿಕೆ

ಪ್ಯಾಕ್ ಆಗಿರುವ ವೇಳಾಪಟ್ಟಿಯ ಹೊರತಾಗಿ, 2022 ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದ ಬಳಿಕ ಸುಧಾರಿಸಿಕೊಳ್ಳುತ್ತಿರುವ ಮತ್ತು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದ ರಿಷಭ್ ಪಂತ್ ಮತ್ತೆ ಭಾರತೀಯ ತಂಡಕ್ಕೆ ಮರಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಐಪಿಎಲ್ 2024 ರಲ್ಲಿ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಪುನರಾಗಮನವು ಫೆಬ್ರವರಿ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.

Exit mobile version