Site icon Vistara News

FIFA World Cup | ಯಾರಿಗೆ ಸಿಕ್ಕಿತು ಗೋಲ್ಡನ್​ ಬೂಟ್​, ಗೋಲ್ಡನ್​ ಗ್ಲವ್​​​, ಗೋಲ್ಡನ್ ಬಾಲ್​?

FIFA World Cup

ದೋಹಾ : ಅರ್ಜೆಂಟೀನಾ ತಂಡ ಫಿಫಾ ವಿಶ್ವ ಕಪ್​ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಭಾನುವಾರ ರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ತಂಡವನ್ನು 4-2 ಪೆನಾಲ್ಟಿ ಗೋಲ್​ಗಳಿಂದ ಸೋಲಿಸಿದ ಲಿಯೋನೆಲ್​ ಮೆಸ್ಸಿ ನೇತೃತ್ವದ ಬಳಗ ಟ್ರೋಫಿಗೆ ಮುತ್ತಿಟ್ಟಿತು. ಇದೇ ವೇಳೆ ಟೂರ್ನಿಯಲ್ಲಿ ವೈಯುಕ್ತಿ ಸಾಧನೆ ಮಾಡಿದ ಆಟಗಾರರಿಗೂ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಆ ಸಾಧಕರ ಪಟ್ಟಿ ಇಲ್ಲಿದೆ.

ಫೈನಲ್​ ಪಂದ್ಯದಲ್ಲಿ ಹ್ಯಾಟ್ರಿಕ್​ ಗೋಲ್​ ಸೇರಿದಂತೆ ಒಟ್ಟಾರೆ 8 ಗೋಲ್​ಗಳನ್ನು ಬಾರಿಸಿದ ಫ್ರಾನ್ಸ್​ನ ಕೈಲಿಯಾನ್​ ಎಂಬಾಪೆ ಗೋಲ್ಡನ್ ಬೂಟ್​ ತಮ್ಮದಾಗಿಸಿಕೊಂಡರು. ಅರ್ಜೆಂಟೀನಾ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಲಿಯೋನೆಲ್​ ಮೆಸ್ಸಿ ಟೂರ್ನಮೆಂಟ್​ನ ಉತ್ತಮ ಆಟಗಾರ ಪ್ರಶಸ್ತಿ ಗೆದ್ದರು. ಅವರಿಗೆ ಗೋಲ್ಡನ್​ ಬಾಲ್​ ಪ್ರಶಸ್ತಿ ಲಭಿಸಿತು.

ಫೈನಲ್​ ಪಂದ್ಯದ ಪೆನಾಲ್ಟಿ ಶೂಟೌಟ್ ಎರಡು ಗೋಲ್​ ತಡೆದು ಅರ್ಜೆಂಟೀನಾದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ ಜತೆಗೆ ಟೂರ್ನಿಯುದ್ದಕ್ಕೂ ಗೋಲ್​ ಕೀಪಿಂಗ್​ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಮಿ ಮಾರ್ಟಿನೆಜ್​ಗೆ ಗೋಲ್ಡನ್​ ಗ್ಲವ್​ ಪ್ರಶಸ್ತಿ ಲಭಿಸಿತು. ಇದೇ ವೇಳೆ ಅರ್ಜೆಂಟೀನಾ ತಂಡದ ಯುವ ಆಟಗಾರ ಎಂಜೊ ಫೆರ್ನಾಂಡೆಜ್​ಗೆ ಟೂರ್ನಿಯ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಲಭಿಸಿತು.

ಇದನ್ನೂ ಓದಿ | FIFA World Cup | ಮೆಸ್ಸಿಗೆ ವಿಜಯದ ವಿದಾಯ; ಅರ್ಜೆಂಟೀನಾ ತಂಡ ಚಾಂಪಿಯನ್​

Exit mobile version