ನವದೆಹಲಿ: ಜಿಯೋ ಬಳಕೆದಾರರು (Jio Users) ಒಂದು ತಿಂಗಳಲ್ಲಿ 10 ಎಕ್ಸಾಬೈಟ್ ಅಥವಾ 10 ಬಿಲಿಯನ್ (ಒಂದು ಬಿಲಿಯನ್ ಅಂದರೆ ನೂರು ಕೋಟಿ) ಜಿಬಿ ಡೇಟಾವನ್ನು (10 Billion GB Data) ಬಳಸಿದ್ದಾರೆ. ಈ ಸಂಖ್ಯೆಯು ಈ ರೀತಿಯ ಬಳಕೆ ಮಾದರಿಯಲ್ಲಿ ಅತ್ಯಧಿಕವಾಗಿದೆ. 2016ನೇ ಇಸವಿಯಲ್ಲಿ ಜಿಯೋ ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಿದಾಗ ಭಾರತದಲ್ಲಿ ಬಳಕೆ 4.6 ಎಕ್ಸಾಬೈಟ್ ಆಗಿತ್ತು ಮತ್ತು ಅದು ಕೂಡ ಒಂದು ಇಡೀ ವರ್ಷದಲ್ಲಿ ಆಗುತ್ತಿದ್ದ ಬಳಕೆ! ಒಂದೇ ಟೆಲಿಕಾಂ ಕಂಪನಿಯ ಬಳಕೆಯು ಒಂದು ತಿಂಗಳಲ್ಲಿ 10 ಎಕ್ಸಾಬೈಟ್‌ಗಳನ್ನು ದಾಟಿದ ಮೊದಲ ನಿದರ್ಶನ ಇದಾಗಿದೆ. 2023 ಮಾರ್ಚ್ ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಡೇಟಾದ ಒಟ್ಟು ಬಳಕೆ 30.3 ಎಕ್ಸಾಬೈಟ್ ಆಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ತ್ರೈಮಾಸಿಕ ಫಲಿತಾಂಶಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಡೇಟಾ ಬಳಕೆ ಹೆಚ್ಚಳದಲ್ಲಿ ಜಿಯೋ ಟ್ರೂ 5ಜಿ ನಿರ್ಣಾಯಕ ಪಾತ್ರ ವಹಿಸಿದೆ. ಸರಾಸರಿ ಬಳಕೆದಾರರು ಪ್ರತಿ ತಿಂಗಳು 23.1 GB ಡೇಟಾವನ್ನು ಬಳಸುತ್ತಿದ್ದಾರೆ. ಕೇವಲ 2 ವರ್ಷಗಳ ಹಿಂದೆ ಈ ಅಂಕಿ- ಅಂಶವು 13.3 ಜಿಬಿ ಆಗಿತ್ತು. ಹಾಗಾಗಿ, ಕೇವಲ 2 ವರ್ಷಗಳಲ್ಲಿ, ಸರಾಸರಿ ಬಳಕೆದಾರರು ಒಂದು ತಿಂಗಳಲ್ಲಿ 10ಜಿಬಿ ಹೆಚ್ಚು ಡೇಟಾ ಬಳಸುತ್ತಿದ್ದಾರೆ. ಕುತೂಹಲಕಾರಿಯಾಗಿ, ಉದ್ಯಮದಲ್ಲಿನ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಜಿಯೋ ನೆಟ್‌ವರ್ಕ್‌ನಲ್ಲಿ ಬಳಕೆಯ ಸರಾಸರಿ ಹೆಚ್ಚಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಹಂಚಿಕೊಂಡ ಅಂಕಿ- ಅಂಶಗಳ ಪ್ರಕಾರ, ಜಿಯೋ ರಾಷ್ಟ್ರದಾದ್ಯಂತ 60,000 ಸೈಟ್‌ಗಳಲ್ಲಿ 3,50,000 ಕ್ಕೂ ಹೆಚ್ಚು 5ಜಿ ಸೆಲ್‌ಗಳನ್ನು ಸ್ಥಾಪಿಸಿದೆ. ಇಲ್ಲಿಯವರೆಗೆ, ಜಿಯೋ ಟ್ರೂ 5ಜಿ ಭಾರತದಾದ್ಯಂತ 2,300 ಪಟ್ಟಣಗಳು ಮತ್ತು ನಗರಗಳನ್ನು ಒಳಗೊಂಡಿದೆ. ಇದು ವಿಶ್ವದ ಅತ್ಯಂತ ವೇಗದ 5ಜಿ ಜಾರಿ ಆಗಿದೆ. 2023ರ ಅಂತ್ಯದ ವೇಳೆಗೆ ಭಾರತದಾದ್ಯಂತ 5ಜಿ ಸೇವೆಗಳನ್ನು ವಿಸ್ತರಿಸುವುದಾಗಿ ಕಂಪನಿ ಭರವಸೆ ನೀಡಿದೆ.
ಇದನ್ನೂ ಓದಿ: Jio True 5G: ಜಿಯೋ 5ಜಿ ಡೌನ್‌ಲೋಡ್ ವೇಗದಲ್ಲಿ ಮೈಲಿಗಲ್ಲು! ಬಳಕೆದಾರರಿಗೆ 315 ಎಂಪಿಬಿಎಸ್ ಸ್ಪೀಡ್ ಲಭ್ಯ
5ಜಿ ಜಾರಿಯ ಜೊತೆಗೆ, ಜಿಯೋ ಏರ್‌ಫೈಬರ್ ಅನ್ನು ಪ್ರಾರಂಭಿಸಲು ಸಹ ಸಿದ್ಧವಾಗಿದೆ. ಇದು ಮುಂದಿನ ಕೆಲವು ತಿಂಗಳಲ್ಲಿ ನಿರೀಕ್ಷಿಸಲಾಗಿದೆ. ಫೈಬರ್ ಮತ್ತು ಏರ್‌ಫೈಬರ್‌ನೊಂದಿಗೆ 100 ಮಿಲಿಯನ್ ಮನೆಗಳನ್ನು ಕವರ್ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.
ರಿಲಯನ್ಸ್ ಫಲಿತಾಂಶಗಳು ಇನ್ನೂ ಕೆಲವು ಆಸಕ್ತಿದಾಯಕ ಡೇಟಾವನ್ನು ಬಹಿರಂಗಪಡಿಸಿವೆ. ಜಿಯೋದ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ತಿಂಗಳಿಗೆ ರೂ. 178.8ಕ್ಕೆ ಹೆಚ್ಚಿದೆ. ಬಳಕೆದಾರರು ಪ್ರತಿದಿನ 1,459 ಕೋಟಿ ಧ್ವನಿ ನಿಮಿಷಗಳನ್ನು ಬಳಸುತ್ತಿದ್ದಾರೆ. ಇದರರ್ಥ ಸರಾಸರಿ ಬಳಕೆದಾರರು ಪ್ರತಿ ತಿಂಗಳು 1,003 ನಿಮಿಷಗಳ ಕಾಲ ಕರೆ ಮಾಡುತ್ತಿದ್ದಾರೆ.