ನವದೆಹಲಿ: ಮೇಲಿಂದ ಮೇಲೆ ಅಪ್‌ಡೇಟ್‌ಗಳನ್ನು (WhatsApp Updates) ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಈಗ ಮತ್ತೊಂದು ಫೀಚರ್ (New Feature) ಲಾಂಚ್ ಮಾಡಿದೆ. ಈ ಹೊಸ ಫೀಚರ್ ವಿಡಿಯೋ ಕಾಲಿಂಗ್ ಅನುಭವನ್ನು ಮತ್ತಷ್ಟು ವಿಶಿಷ್ಟಗೊಳಿಸಲಿದೆ. ವಾಟ್ಸಾಪ್ ಈಗ ಬಿಡುಗಡೆ ಮಾಡಿರುವ ಫೀಚರ್ (WhatsApp New Feature) ಮೂಲಕ ಬಳಕೆದಾರರು 32 ಜನರವರೆಗೂ ವಿಡಿಯೋ ಕಾಲಿಂಗ್ ಮಾಡಬಹುದು. ಈ ಹೊಸ ವೈಶಿಷ್ಟ್ಯವು ಆಡಿಯೊ ಕರೆಗಳ ಹಿಂದಿನ ಮಿತಿಯ ಮುಂದಿನ ಆವೃತ್ತಿಯಾಗಿದೆ. ಆಗಲೂ ಗರಿಷ್ಠ 32 ಜನರ ವಿಡಿಯೋ ಕಾಲಿಂಗ್‌ಗೆ ಬೆಂಬಲಿಸುತ್ತಿತ್ತು. WABetaInfo ವರದಿಯ ಪ್ರಕಾರ, ವಿಂಡೋಸ್ ಪಿಸಿಗಳಲ್ಲಿ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುತ್ತಿದೆ. ಸದ್ಯ ಇದು ಬೀಟಾ ವರ್ಷನ್‌ನಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ಬಹು ಪಾಲ್ಗೊಂಡವರಿಗೆ ಈ ಹಿಂದೆ ವಾಟ್ಸಾಪ್‌ನಲ್ಲಿ ಆಡಿಯೋ ಕಾಲ್ ಮಾಡಲು ಅವಕಾಶವಿತ್ತು. ಆದರೆ, ಈಗ ಹೊಸ ಅಪ್‌ಡೇಟ್ ಮೂಲಕ, ದೂಡ್ಡ ಗ್ರೂಪ್‌ಗಳೊಂದಿಗೆ ವಿಡಿಯೋ ಕಾಲ್ ಕೂಡ ಮಾಡಬಹುದು. ಆರಂಭದಲ್ಲಿ, ವಿಂಡೋಸ್ ಅಪ್‌ಡೇಟ್‌ಗಾಗಿ ಆಯ್ದ ಬೀಟಾ ಪರೀಕ್ಷಕರಿಗೆ ಈ ಕಾರ್ಯವನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಇದನ್ನು ಕ್ರಮೇಣ ಎಲ್ಲ ಬಳಕೆದಾರರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ವಾಟ್ಸಾಪ್ ಕಂಪನಿಯ ಒಡೆತನವನ್ನು ಹೊಂದಿರುವ ಮೆಟಾ ಸಿಇಒ ಮಾರ್ಕ್‌ಜುಕರ್‌ಬರ್ಗ್ ಅವರು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಸೇವೆಯನ್ನು ಲಾಂಚ್ ಮಾಡುವ ಘೋಷಣೆ ಮಾಡುತ್ತಿದ್ದರು. ಈಗ ಆ ಘೋಷಣೆಯನ್ನು ವಾಟ್ಸಾಪ್ ಪೂರೈಸುತ್ತಿದೆ.
WhatsApp New Feature : ಸ್ಪ್ಯಾಮ್ ಕಾಲ್ ಮ್ಯೂಟ್ ಮಾಡಿ…
ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಈಗ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಜಾರಿಗೆ ತಂದಿದೆ (WhatsApp New Feature). ಈ ಹೊಸ ಫೀಚರ್ ಬಳಕೆದಾರರಿಗೆ, ಇನ್‌ಕಮಿಂಗ್ ಕಾಲ್‍ಗಳ ಹೆಚ್ಚು ನಿಯಂತ್ರಣ ಸಾಧಿಸಲು ನೆರವು ಒದಗಿಸುತ್ತದೆ. ಅಂದ ಹಾಗೆ, ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಈ ಹೊಸ ಫೀಚರ್ ಘೋಷಣೆ ಮಾಡಿದ್ದಾರೆ.
ಮೆಟಾ ಒಡೆತನದ ವಾಟ್ಸಾಪ್ ಜಾರಗೆ ತಂದಿರುವ ಈ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ಸ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಅಪರಿಚಿತ ಜನರಿಂದ ಬರುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಕರೆಗಳನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಔಟ್ ಮಾಡಲು ಸಾಧಅಯವಾ ಮಾಡಲು ಇದು ಸಹಾಯ ಮಾಡುತ್ತದೆ. ಇನ್ನೂ ಹೆಚ್ಚಿನ ಗೌಪ್ಯತೆ ಮತ್ತು ನಿಯಂತ್ರಣಕ್ಕಾಗಿ ನೀವು ಈಗ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸ್ವಯಂಚಾಲಿತವಾಗಿ ನಿಶ್ಯಬ್ದಗೊಳಿಸಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು!
ವಾಟ್ಸಾಪ್‌ನ ಸೈಲೆನ್ಸ್ ಅನ್‌ನೋನ್ ಕಾಲರ್ಸ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಒಳಬರುವ ಕರೆಗಳ ನಿಯಂತ್ರಣವನ್ನು ನೀಡುತ್ತದೆ. ಅಂಥ ಕರೆಗಳು ಅವರ ಫೋನ್‌ಗಳಲ್ಲಿ ರಿಂಗ್ ಆಗುವುದಿಲ್ಲ, ಆದರೆ ಯಾರಾದರೂ ಪ್ರಮುಖರ ಕರೆಯಾಗಿದ್ದರೆ ಅದು ಕಾಲ್ ಪಟ್ಟಿಯಲ್ಲಿ ಕಾಣುತ್ತದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.