ನವದೆಹಲಿ: ಭಾರತದ ವಿವಿಧ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿರುವ ರಿಲಯನ್ಸ್ ಜಿಯೋ (Reliance Jio) ಇದೀಗ, ಗುಜರಾತ್‌ನ ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 5ಜಿ ಸೇವೆಯನ್ನು ಕಲ್ಪಿಸಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಕಂಪನಿಯು, ಎಲ್ಲ ಜಿಲ್ಲೆಗಳಲ್ಲಿ ಜಿಯೋ ಸೇವೆಯನ್ನು ಪಡೆದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಗುಜರಾತ್ ಪಾತ್ರವಾಗಿದೆ ಎಂದು ಹೇಳಿದೆ.
ಜಿಯೋ ತನ್ನ ಟ್ರೂ-5G ವ್ಯಾಪ್ತಿಯನ್ನು ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ ವಿಸ್ತರಿಸುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ. ಆ ಮೂಲಕ ಶೇ.100ರಷ್ಟು ಜಿಲ್ಲಾ ಕೇಂದ್ರಗಳಲ್ಲಿ ಜಿಯೋ ಟ್ರೂ 5G ಕವರೇಜ್ ಪಡೆಯುವ ಭಾರತದ ಮೊದಲ ರಾಜ್ಯ ಗುಜರಾತ್ ಆಗಿದೆ. ರಿಲಯನ್ಸ್‌ನ ಜನ್ಮಭೂಮಿಯೂ ಗುಜರಾತ್ ಆಗಿರುವುದರಿಂದ ಅದು ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
5ಜಿ ಸೇವೆಯೊಂದಿಗೆ ರಿಲಯನ್ಸ್ ಎಜುಕೇಷನ್ ಫಾರ್ ಆಲ್ ಎಂಬ ಹೊಸ ಇನಿಶಿಯೇಟಿವ್ ಕೂಡ ಶುರು ಮಾಡಿದೆ. ರಿಲಯನ್ಸ್ ಫೌಂಡೇಷನ್ ಮತ್ತು ಜಿಯೋ ಜತೆಗೂಡಿ, ಗುಜರಾತ್‌ನ 100 ಶಾಲೆಗಳನ್ನು ಡಿಜಿಟಿಲೈಸ್ ಮಾಡಲಿವೆ. ಎಜುಕೇಷನ್ ಫಾರ್ ಆಲ್ ಇನಿಶಿಯೇಟಿವ್‌ನಲ್ಲಿ ಜಿಯೋದ ಟ್ರೂ5ಜಿ ಮೂಲಕ ಆಯ್ದ ಎಲ್ಲ ಶಾಲೆಗಳನ್ನು ಕನೆಕ್ಟ್ ಮಾಡಲಾಗುವುದು. ಅತ್ಯಾಧನಿಕ ಕಂಟೆಂಟ್ ಪ್ಲಾಟ್‌ಫಾರ್ಮ್, ಟೀಚರ್-ಸ್ಟೂಡೆಂಟ್ ಜಂಟಿ ಫ್ಲಾಟ್‌ಫಾರ್ಮ್ ಮತ್ತು ಸೂಕ್ಲ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್‌ಗಳನ್ನು ಇದರಡಿಯಲ್ಲಿ ಕನೆಕ್ಟ್ ಮಾಡಲಾಗಿರುತ್ತದೆ. ಈ ವಾರದ ಆರಂಭದಲ್ಲಿ ಪುಣೆಯಲ್ಲಿ ತನ್ನ 5ಜಿ ಸೇವೆಯನ್ನು ಆರಂಭಿಸಿದ್ದಾಗಿ ಜಿಯೋ ಹೇಳಿಕೊಂಡಿತ್ತು.
ಇದನ್ನೂ ಓದಿ | Reliance Jio | ರಿಲಯನ್ಸ್ ಜಿಯೋಗೆ ಇಎಸ್‌ಜಿ ಪರ್ಫಾರ್ಮೆನ್ಸ್ ಇನ್ ಟೆಲಿಕಾಂ ಸೆಕ್ಟರ್ ಅವಾರ್ಡ್