ನವದೆಹಲಿ: ಸುಮಾರು 5.4 ಮಿಲಿಯನ್ ಟ್ವಿಟರ್ ಬಳಕೆದಾರರ ದಾಖಲೆಗಳನ್ನು (Twitter User’s Data) ಇಂಟರ್ನಲ್ ಬಗ್ ಮೂಲಕ ಕದ್ದು, ಹ್ಯಾಕರ್ ಆನ್‌ಲೈನ್ ಫೋರಮ್‌ನಲ್ಲಿ ಷೇರ್ ಮಾಡಿ, ಮಾರಾಟಕ್ಕೆ ಇಡಲಾಗಿದೆ. ಇದರ ಜತೆಗೆ, ಬೇರೆ ಬೇರೆ ಟ್ವಿಟರ್ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(ಎಪಿಐ) ಬಳಸಿಕೊಂಡು 1.4 ಟ್ವಿಟರ್ ಪ್ರೊಫೈಲ್‌ಗಳನ್ನು ಸಂಗ್ರಹಿಸಲಾಗಿದೆ ಮತ್ತು ಇವುಗಳನ್ನು ಖಾಸಗಿಯಾಗಿ ಕೆಲವು ಜನರ ಮಧ್ಯೆ ಷೇರ್ ಮಾಡಲಾಗಿದೆ.
ಸಾರ್ವಜನಿಕವಾಗಿ ಲಭ್ಯವಿರುವ ಟ್ವಿಟರ್ ಐಡಿಗಳು, ಹೆಸರು, ಲಾಗಿನ್ ನೇಮ್, ಸ್ಥಳಗಳು, ವೆರಿಫೈಡ್ ಸ್ಟೇಟಸ್ ಮಾಹಿತಿಯ ಜತೆಗೆ, ಖಾಸಗಿಯಾಗಿರಬೇಕಾದ ಫೋನ್ ನಂಬರ್ಸ್ ಮತ್ತು ಇ ಮೇಲ್ ಐಡಿಗಳನ್ನು ಬಗ್ ಬಳಸಿಕೊಂಡು ಕದ್ದು, ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಡೇಟಾಗೆ ಕನ್ನ ಹಾಕಿರುವ ಮಾಹಿತಿಯನ್ನು ಸೆಕ್ಯುರಿಟಿ ಎಕ್ಸ್‌ಪರ್ಟ್ ಚಾಡ್ ಲೋಡೆರ್ ಅವರು ಮೊದಲಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡರು ಎಂದು ತಿಳಿದು ಬಂದಿದೆ.
5.4 ಮಿಲಿಯನ್ ಟ್ವಿಟರ್ ಬಳಕೆದಾರರ ಮಾಹಿತಿ ಕನ್ನ ಹಾಕಿರುವ ವಿಷಯಕ್ಕೆ ಇದವರೆಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಶೇಷವಾಗಿ ಅಮೆರಿಕ ಮತ್ತು ಯುರೋಪ್ ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಕದಿಯಲಾಗಿದೆ. ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್‌ನ ಬಳಕೆದಾರರ ಫೋನ್ ನಂಬರ್ಸ್ ಸಹಿತ ಇತರ ಮಾಹಿತಿಯನ್ನು ಕದ್ದು ಮಾರಾಟ ಮಾಡಿದ ಸುದ್ದಿಯಾಗಿತ್ತು.
ಇದನ್ನೂ ಓದಿ | WhatsApp Hack | 50 ಕೋಟಿ ವಾಟ್ಸ್ಆ್ಯಪ್ ಸಕ್ರಿಯ ಬಳಕೆದಾರರ ಫೋನ್ ನಂಬರ್ಸ್‌ಗೆ ಕನ್ನ, ಡಾಲರ್ ಲೆಕ್ಕದಲ್ಲಿ ಮಾರಾಟ!