Site icon Vistara News

6G Technology | 6ಜಿ ಟೆಕ್ನಾಲಜಿ ಕನಸು ಬಿತ್ತಿದ ಮೋದಿ ಸರ್ಕಾರ, ದಶಕದ ಅಂತ್ಯಕ್ಕೆ ಆಗಲಿದೆ ಸಾಕಾರ

PM Modi Goa

ನವ ದೆಹಲಿ: ಭಾರತದಲ್ಲಿ 5ಜಿ ಸೇವೆ ಆರಂಭಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 6G Technology ಕನಸು ಬಿತ್ತಿದ್ದಾರೆ. ಈ ದಶಕದ ಅಂತ್ಯಕ್ಕೆ ಭಾರತವು 6ಜಿ ತಂತ್ರಜ್ಞಾನದ ಹೊಂದಿದ ರಾಷ್ಟ್ರವಾಗಲಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ 2022ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ, ಮೋದಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಡ್ರೋನ್ ಟೆಕ್ನಾಲಜಿಯನ್ನು ಬಳಸಿಕೊಳ್ಳುವ ಬಗ್ಗೆ ಹೊಸ ಐಡಿಯಾಗಳನ್ನು ಯುವಕರು ನೀಡಬೇಕು. ಈ ದಶಕದ ಅಂತ್ಯಕ್ಕೆ ನಾವು 6ಜಿ ತಂತ್ರಜ್ಞಾನವನ್ನು ಪರಿಚಯಿಸಬಹುದು. ಭಾರತ ಸರ್ಕಾರವು ಇಂಡಿಯನ್ ಗೇಮಿಂಗ್ ಮತ್ತು ಎಂಟರ್ಟೈನ್ಮೆಂಟ್ ಪರಿಹಾರಗಳಿಗೆ ಬೆಂಬಲ ನೀಡಲಿದೆ. ಸರ್ಕಾರದ ಬಂಡಾವಳ ಹೂಡಿಕೆಯಿಂದ ದೇಶದ ಎಲ್ಲ ಯುವಕರು ಲಾಭವನ್ನು ಮಾಡಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಶೀಘ್ರವೇ 5ಜಿ ತಂತ್ರಜ್ಞಾನ
ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ತಂತ್ರಜ್ಞಾನದ ಸೇವೆ ಆರಂಭವಾಗಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ಒದಗಿಸಲಿವೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 5ಜಿ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದು ಐಟಿ ಸಚಿವ ಅಶ್ವನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಯಾವ ನಗರಗಳಲ್ಲಿ 5ಜಿ
ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ 5ಜಿ ನೆಟ್ವರ್ಕ್ ಗ್ರಾಹಕರಿಗೆ ದೊರೆಯಲಿದೆ. ಈಗಾಗಲೇ ಹೇಳಿದಂತೆ ಅಕ್ಟೋಬರ್‌ನಲ್ಲಿ ಸೇವೆ ದೊರೆಯಲಿದೆ. ಬೆಂಗಳೂರು ಸೇರಿದಂತೆ ದಿಲ್ಲಿ, ಕೋಲ್ಕೊತಾ, ಗುರುಗ್ರಾಮ್, ಚೆನ್ನೈ, ಪುಣೆ, ಜಾಮನಗರ್, ಚಂಡೀಗಢ, ಹೈದ್ರಾಬಾದ್, ಗಾಂಧಿ ನಗರ ಮತ್ತು ಲಖನೌ‌ ನಗರಗಳಲ್ಲಿ ಗ್ರಾಹಕರು ಈ 5ಜಿ ಸೇವೆಯನ್ನು ಪಡೆಯಲಿದ್ದಾರೆ.

ಇದನ್ನು ಓದಿ | 5G services | ದೇಶದಲ್ಲಿ ಅಕ್ಟೋಬರ್​ 12ರೊಳಗೇ ಶುರುವಾಗಲಿದೆ 5ಜಿ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

Exit mobile version