Site icon Vistara News

Vivo Study Report | ಫೋನ್ ಬಳಕೆಯಿಂದ ಸಂಬಂಧ ಹಾಳು! ಶೇ.88ರಷ್ಟು ಭಾರತೀಯ ದಂಪತಿ ಅಭಿಮತ

Vivo Study Reoprt

ನವದೆಹಲಿ: ಅತಿಯಾದ ಮೊಬೈಲ್ ಫೋನ್ ಬಳಕೆಯು ಸಂಬಂಧಗಳ ನಡುವೆ ಬಿರುಕಿಗೆ ಕಾರಣವಾಗುತ್ತಿದೆ ಎಂಬ ಆರೋಪ ಸಾಮಾನ್ಯವಾಗಿದೆ. ಈಗ ಅಧ್ಯಯನ ವರದಿಯೊಂದು ಈ ಸಾಮಾನ್ಯ ಆರೋಪಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸಿದೆ. ಭಾರತದಲ್ಲಿನ ಶೇ.88 ದಂಪತಿಗಳು, ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದಾಗಿ ತಮ್ಮ ನಡುವಿನ ಸಂಬಂಧಕ್ಕೆ ಧಕ್ಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚೀನಾ ಮೂಲದ ವಿವೋ ಕಂಪನಿ ಕೈಗೊಂಡ ಅಧ್ಯಯನ ವರದಿಯಲ್ಲಿ (Vivo Study Report) ಈ ಮಾಹಿತಿಯು ವ್ಯಕ್ತವಾಗಿದೆ.

ವಿವೋ ಕಂಪನಿಯ ಸ್ವಿಚ್ ಆಫ್ ಅಧ್ಯಯನದ 4ನೇ ಆವೃತ್ತಿ, ಸಂಗಾತಿ ಸಂಬಂಧಗಳ ಮೇಲೆ ಸ್ಮಾರ್ಟ್‌ಫೋನ್‌ಗಳ ಪರಿಣಾಮ ಶೀರ್ಷಿಕೆಯಡಿ ಅಧ್ಯಯನ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ, ಶೇ.90ರಷ್ಟು ಜನರು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುವ ಸಮಯವು ತಾವು ರಿಲ್ಯಾಕ್ಸ್ ಆಗಲು ಕಂಡುಕೊಂಡ ಆದ್ಯತೆಯ ಮಾರ್ಗವಾಗಿದೆ ಎಂದು ಹೇಳಿಕೊಂಡಿದ್ದಾರೆ. ‌

ಸಮೀಕ್ಷೆಗೆ ಒಳಪಟ್ಟ ಶೇ.84ರಷ್ಟು ಜನರು ಸ್ಮಾರ್ಟ್‌ಫೋನ್ ತಮ್ಮ ಶರೀರದ ಭಾಗವೇ ಆಗಿದೆ ಎಂದು ಭಾವಿಸಿಕೊಂಡಿದ್ದು, ಅವುಗಳಿಂದ ಪ್ರತ್ಯೇಕಗೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಹೆಂಡತಿ ಮತ್ತು ಗಂಡಂದಿರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಸರಾಸರಿ 4.7 ಗಂಟೆಗಳ ಕಾಲ ಕಳೆಯುತ್ತಾರೆ ಎಂಬ ಮಾಹಿತಿಯೂ ವರದಿಯಲ್ಲಿ ಇದೆ.

ದಿಲ್ಲಿ, ಮುಂಬೈ, ಕೋಲ್ಕೊತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಪುಣೆಗಳಲ್ಲಿ ಆಲ್ಮೋಸ್ಟ್ ಸಾವಿರ ದಂಪತಿಗಳನ್ನು ಮಾತನಾಡಿಸಿ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿವೋ ಕಂಪನಿ ತಿಳಿಸಿದೆ.

ಇದನ್ನೂ ಓದಿ | Social Media ಬಳಕೆಗೆ ಇಲ್ಲಿವೆ ಸೈಬರ್‌ ಸುರಕ್ಷತೆ ಸಲಹೆಗಳು

Exit mobile version