Site icon Vistara News

Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ

Aadhaar update online is free; This facility is only till June 14

ಬೆಂಗಳೂರು, ಕರ್ನಾಟಕ: 12 ಅಂಕಿಗಳುಳ್ಳ ವಿಶಿಷ್ಟ ನಂಬರ್ ಆಧಾರ್ ಬಹಳ ಪ್ರಮುಖವಾದ ಒಂದು ದಾಖಲೆಯಾಗಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಈ ನಂಬರ್ ಅನ್ನು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು, ಯಾವುದೇ ರೀತಿಯ ದೃಢೀಕರಣಕ್ಕೆ ಬಳಸುತ್ತೇವೆ. ಆದರೆ, ಕೆಲವೊಮ್ಮೆ ನಾನಾ ಕಾರಣದಿಂದ ಮಾಹಿತಿಯ ತಪ್ಪಾಗಿದ್ದರೆ, ಅದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಆಧಾರ್ ಕೇಂದ್ರಗಳಿಗೆ ಹೋಗಿ ಅಪ್‌ಡೇಟ್ ಮಾಡುವುದಾದರೆ 50 ರೂ. ನೀಡಬೇಕಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ (Aadhaar Update) ಮಾಡಲು ಯಾವುದೇ ದುಡ್ಡಿಲ್ಲ. ಆಧರೆ, ಈ ಸೌಲಭ್ಯವು ಜೂನ್ 14ರವರೆಗೆ ಮಾತ್ರವೇ ಇದೆ ಎಂಬುದನ್ನು ನೆನಪಿಡಿ. ಹಾಗೆಯೇ, ಆಧಾರ್ ಅಪ್‌ಡೇಟ್ ಕಡ್ಡಾಯ ಕೂಡ ಅಲ್ಲ.

Aadhaar Update: ಏನೇನು ಅಪ್‌ಡೇಟ್ ಮಾಡಬಹುದು?

ಬಳಕೆದಾರರ ವಿವರಗಳನ್ನು ಮರುಮೌಲ್ಯಮಾಪನ ಮಾಡಲು ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ದಾಖಲೆಗಳನ್ನು ಆನ್ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್ ಪಡೆದು ದಶಕಗಳಾಗಿದ್ದರೆ, ಅಪ್‌ಡೇಟ್ ಮಾಡಿದರೆ ಒಳ್ಳೆಯವುದು. ಆದರೆ, ನೆನಪಿನಲ್ಲಿಡಿ ಅಪ್‌ಡೇಟ್ ಮಾಡುವುದೇನೂ ಕಡ್ಡಾಯವಲ್ಲ. ನಿಮ್ಮ ಮಾಹಿತಿ ಸರಿಯಾಗಿರಬೇಕು ಎಂದಾದರೆ ಅಥವಾ ಅಗತ್ಯ ಇದೆ ಎನ್ನುವುದಾದರೆ ಅಪ್‌ಡೇಟ್ ಮಾಡಿಕೊಳ್ಳಬಹುದು.

ಆನ್‌ಲೈನ್‌ನಲ್ಲಿಆಧಾರ್ ಅಪ್‌ಡೇಟ್ ಮಾಡುವುದು ತುಂಬ ಕಷ್ಟವೇನೂ ಅಲ್ಲ. ಕೇವಲ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಮೊದಲೇ ಸ್ಕ್ಯಾನ್ ಮಾಡಿಟ್ಟುಕೊಂಡಿರಬೇಕು. ಅಂದರೆ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಪುರಸ್ಕರಿಸುವ ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ, ಸೇವ್ ಮಾಡಿಟ್ಟುಕೊಂಡಿರಬೇಕು. ಆಗ, ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವುದು ಸುಲಭವಾಗುತ್ತದೆ.

ಇದನ್ನೂ ಓದಿ: Aadhaar Update | ಹೊಸ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ….

Exit mobile version