Site icon Vistara News

WhatsApp New Feature: ನಿಮ್ಮ ಖಾತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂರು ಫೀಚರ್ ಲಾಂಚ್ ಮಾಡಿದ ವಾಟ್ಸಾಪ್

Secret code for WhatsApp chat lock on desktops

ಬೆಂಗಳೂರು, ಕರ್ನಾಟಕ: ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ವಾಟ್ಸಾಪ್ (WhatsApp New Feature) ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತದೆ. ಆ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಈಗ ವಾಟ್ಸಾಪ್ ಮತ್ತೆ ಮೂರು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಅಕೌಂಟ್ ಪ್ರೊಟೆಕ್ಟ್ (Account Protect), ಡಿವೈಸ್ ವೆರಿಫಿಕೇಷನ್ (Device Verification) ಮತ್ತು ಆಟೊಮೆಟಿಕ್ ಸೆಕ್ಯುರಿಟಿ ಕೋಡ್ಸ್ (Automatic Security Codes). ಬಳಕೆದಾರರ ಹಿತದೃಷ್ಟಿಯಿಂದ ಈ ಮೂರು ಫೀಚರ್‌ಗಳು ಮಹತ್ವದ್ದಾಗಿವೆ.

ಅಕೌಂಟ್ ಪ್ರೊಟೆಕ್ಟ್

ನಿಮ್ಮ ವಾಟ್ಸಾಪ್ ಖಾತೆಯನ್ನು ಹೊಸ ಸಾಧನಕ್ಕೆ ಬದಲಾಯಿಸಬೇಕಾದರೆ – ಇದು ನಿಜವಾಗಿಯೂ ನೀವೇ ಎಂದು ನಾವು ಎರಡು ಬಾರಿ ಪರಿಶೀಲಿಸಲಾಗುತ್ತದೆ. ಈ ಹೊರ ಫೀಚರ್ ಅನ್ವಯ ನೀವು ಈ ಹಂತವನ್ನು ಹೆಚ್ಚುವರಿ ಭದ್ರತಾ ಪರಿಶೀಲನೆಯಾಗಿ ತೆಗೆದುಕೊಳ್ಳಲು ಬಯಸುತ್ತೀರಿ ಎಂಬುದನ್ನು ಪರಿಶೀಲಿಸಲು ನಿಮ್ಮ ಹಳೆಯ ಸಾಧನದಲ್ಲಿ ವಾಟ್ಸಾಪ್ ನಿಮ್ಮನ್ನು ಕೇಳಬಹುದಾಗಿದೆ. ನಿಮ್ಮ ಖಾತೆಯನ್ನು ಮತ್ತೊಂದು ಸಾಧನಕ್ಕೆ ಸೇರಿಸಲು ಯಾರಾದರೂ ಅಕ್ರಮ ಪ್ರಯತ್ನ ಮಾಡಿದರೆ, ಈ ಫೀಚರ್ ಅಂಥದ್ದರ ಕುರಿತು ನಿಮ್ಮನ್ನು ಎಚ್ಚರಿಸುತ್ತದೆ. ಡಬಲ್ ಚೆಕ್ ಮೂಲಕ ನಿಮ್ಮ ಖಾತೆಯನ್ನು ಇದು ಸುರಕ್ಷಿತವಾಗಿಡಲು ಪ್ರಯತ್ನಿಸುತ್ತದೆ.

ಡಿವೈಸ್ ವೆರಿಫಿಕೇಷನ್

ಮೊಬೈಲ್ ಡಿವೈಸ್ ಮಾಲ್ವೇರ್ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ನಿಮ್ಮ ಅನುಮತಿ ಇಲ್ಲದೇ ಇದು ನಿಮ್ಮ ಸಾಧನವನ್ನು ಪ್ರವೇಶಿಸಿ, ನಿಮ್ಮ ವಾಟ್ಸಾಪ್‌ ಬಳಸಿಕೊಂಡು ಅನಗತ್ಯ ಸಂದೇಶಗಳನ್ನು ನಿಮ್ಮ ಸಂಪರ್ಕದಲ್ಲಿರುವ ನಂಬರ್‌ಗಳಿಗೆ ಕಳುಹಿಸಬಹುದು. ಈ ಅಕ್ರಮವನ್ನು ತಡೆಯುವುದಕ್ಕಾಗಿ ವಾಟ್ಸಾಪ್ ಈಗ ಡಿವೈಸ್ ವೆರಿಫಿಕೇಷನ್ ಫೀಚರ್ ಜಾರಿಗೆ ತಂದಿದೆ. ಈ ಫೀಚರ್ ಅನ್ವಯ ಖಾತೆಯನ್ನು ದೃಢೀಕರಿಸಲು ಸಹಾಯ ಮಾಡಲು ನಾವು ಚೆಕ್‌ಗಳನ್ನು (Checks) ಸೇರಿಸಲಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ಏನಾದರೂ ಮಾಲ್ವೇರ್‌ಗೆ ಒಳಗಾಗಿದ್ದರೆ, ಅದರ ಸುರಕ್ಷತೆಯು ಇದರಿಂದ ಸಾಧ್ಯವಾಗಲಿದೆ. ವಾಟ್ಸಾಪ್ ಅನ್ನು ಅಡೆತಡೆಯಿಲ್ಲದೆ ಬಳಸುವುದನ್ನು ಮುಂದುವರಿಸಲು, ಈ ಫೀಚರ್ ನಿಮ್ಮ ಅನುಮತಿಯನ್ನು ಕೇಳುತ್ತದೆ.

ಆಟೊಮೆಟಿಕ್ ಸೆಕ್ಯುರಿಟಿ ಕೋಡ್ಸ್

ವಾಟ್ಸಾಪ್ ಪರಿಚಯಿಸುತ್ತಿರುವ ಮೂರನೇ ಫೀಚರ್ ಇದು. ಸೆಕ್ಯುರಿಟಿ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಬಳಕೆದಾರರು ವಾಟ್ಸಾಪ್‌ನ ಸೆಕ್ಯುರಿಟಿ ಕೋಡ್ಸ್ ವೆರಿಫಿಕೇಷನ್ ಫೀಚರ್ ಲಾಭ ಪಡೆದುಕೊಳ್ಳಲು ಸಾಧ್ಯವಾಗಿದೆ. ನೀವು ಉದ್ದೇಶಿತ ವ್ಯಕ್ತಿಯ ಜತೆಯೇ ಜೊತೆ ಚಾಟ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಈ ಫೀಚರ್ ಸಹಾಯ ಮಾಡುತ್ತದೆ. ವಾಟ್ಸಾಪ್‌ನ ಕಾಂಟಾಕ್ಟ್ ಇನ್ಫೋಗೆ ಹೋಗಿ ನೀವು ಪರೀಕ್ಷಿಸಿಕೊಳ್ಳಬಹುದು.

ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಎಲ್ಲರಿಗೂ ಹೆಚ್ಚು ಲಭ್ಯವಾಗುವಂತೆ ಮಾಡಲು, ನೀವು ಸುರಕ್ಷಿತ ಸಂಪರ್ಕವನ್ನು ಹೊಂದಿರುವಿರಾ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲು ನಿಮಗೆ ಅನುಮತಿಸುವ ಕೀ ಪಾರದರ್ಶಕತೆ (Key Transparency) ಎಂಬ ಪ್ರಕ್ರಿಯೆಯ ಆಧಾರದ ಮೇಲೆ ವಾಟ್ಸಾಪ್ ಹೊಸ ಫೀಚರ್ ಜಾರಿಗೆ ತಂದಿದೆ. ಇದರ ಅರ್ಥವೇನೆಂದರೆ, ನೀವು ಎನ್‌ಕ್ರಿಪ್ಶನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ನಿಮ್ಮ ವೈಯಕ್ತಿಕ ಸಂಭಾಷಣೆಯು ಸುರಕ್ಷಿತವಾಗಿದೆ ಎಂದು ನೀವು ತಕ್ಷಣ ಪರಿಶೀಲಿಸಲು ಈ ಫೀಚರ್‌ನಿಂದ ಸಾಧ್ಯವಾಗುತ್ತದೆ.

Exit mobile version