ಮುಂಬೈ: ದೇಶದಲ್ಲಿ ಇಂಟರ್‌ನೆಟ್ ಕ್ರಾಂತಿಗೆ ಕಾರಣವಾದ ರಿಲಯನ್ಸ್ ಜಿಯೋ ಈಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಫೈಬರ್ ಆಪ್ಟಿಕ್ ಇಂಟರ್‌ನೆಟ್ (Fiber Internet) ವೇಗದಲ್ಲಿಯೇ ಅಂತರ್ಜಾಲ ಒದಗಿಸುವ ವೈಫೈ ಹಾಟ್‌ಸ್ಪಾಟ್ “ಜಿಯೋ ಏರ್ ಫೈಬರ್” (Jio Air Fiber) ಎಂಬ ಹೊಸ ಸೇವೆ ಘೋಷಣೆ ಮಾಡಿದೆ.
ಜಿಯೋ ಚೇರ್ಮನ್ ಆಕಾಶ್ ಅಂಬಾನಿ ಅವರು ಹೊಸ ಯೋಜನೆ ಘೋಷಿಸಿದ್ದಾರೆ. ಫೈಬರ್ ಆಪ್ಟಿಕ್ ಇಂಟರ್‌ನೆಟ್ ವೇಗದಲ್ಲಿಯೇ ಜಿಯೋ ಏರ್ ಫೈಬರ್ ಹಾಟ್‌ಸ್ಪಾಟ್‌ನಿಂದ ಅಂತರ್ಜಾಲ ಸೇವೆ ಸಿಗಲಿದೆ. ಯಾವುದೇ ವೈರ್ ಕನೆಕ್ಷನ್ ಇಲ್ಲದೆ ಮನೆ ಅಥವಾ ಕಚೇರಿಯಲ್ಲಿ ಒಂದೇ ಡಿವೈಸ್ ಮೂಲಕ ಗಿಗಾಬೈಟ್ ವೇಗದಲ್ಲಿ ಇಂಟರ್‌ನೆಟ್ ಲಭ್ಯವಾಗಲಿದೆ.
ಮುಂಬೈನಲ್ಲಿ ನಡೆಯುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ೪೫ನೇ ವಾರ್ಷಿಕ ಸಭೆಯಲ್ಲಿ ೫ಜಿ ಸೇವೆ ಸೇರಿ ಹಲವು ಘೋಷಣೆ ಮಾಡಲಾಗಿದೆ. ಜಿಯೋ ಏರ್ ಫೈಬರ್‌ನಲ್ಲಿ ೫ಜಿ ಸೇವೆಯೂ ಲಭ್ಯವಿರಲಿದೆ. ೫ಜಿ ಸೇವೆಗಾಗಿ ರಿಲಯನ್ಸ್ ೨ ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.
ಇದನ್ನೂ ಓದಿ | Reliance AGM | ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ದೀಪಾವಳಿಗೆ 5G ಸೇವೆ ಆರಂಭ