ಹೊಸ ಐಟಿ ನಿಯಮಗಳು (New IT Rules) ಬಂದಾಗಿನಿಂದ ದೇಶದಲ್ಲಿ (Alternative to Whatsapp) ವಾಟ್ಸಾಪ್ ನಿಷೇಧವಾಗುವ (Whatsapp Shutdown) ಆತಂಕ ಎದುರಾಗಿದೆ. 53.58 ಕೋಟಿಗಿಂತಲೂ ಹೆಚ್ಚು ಭಾರತೀಯ ಗ್ರಾಹಕರು (Indian customers) ಬಳಸಲ್ಪಡುತ್ತಿರುವ ವಾಟ್ಸಾಪ್ (whatsapp) ಒಂದು ವೇಳೆ ನಿಷೇಧಿಸಲ್ಪಟ್ಟರೆ ಮುಂದೇನು ಎನ್ನುವ ಚಿಂತೆ ಹೆಚ್ಚಿನವರನ್ನು ಕಾಡಲಾರಂಭಿಸಿದೆ.
ವಾಟ್ಸಾಪ್ ಭಾರತಕ್ಕೆ ಬಂದಾಗಿನಿಂದ ಜನರು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಅದು ಪಠ್ಯ ಸಂದೇಶಗಳು ಅಥವಾ ಆಡಿಯೋ, ವಿಡಿಯೋ ಹೀಗೆ ಎಲ್ಲವನ್ನೂ ಸುಲಭವಾಗಿ ಹಂಚಿಕೊಳ್ಳಲು ವೇದಿಕೆಯನ್ನು ಸೃಷ್ಟಿಸಿತ್ತು. ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ವಾಟ್ಸಾಪ್ ನಿಷೇಧವಾಗುವ ಬೆದರಿಕೆ ಹಾಕಲಾಗಿತ್ತು. ಒಂದು ವೇಳೆ ವಾಟ್ಸಾಪ್ ನಿಷೇಧಿಸಲ್ಪಟ್ಟರೆ ಭಾರತೀಯರಿಗೆ ಇರುವ ಮುಂದಿನ ಆಯ್ಕೆ ಏನು?
ವಾಟ್ಸಾಪ್ ದೇಶದಲ್ಲಿ ಸ್ಥಗಿತಗೊಂಡರೆ ಗ್ರಾಹಕರು ಉಳಿದ ಚಾಟಿಂಗ್ ಆಪ್‌ಗಳತ್ತ ಹೊರಳುವ ಸಾಧ್ಯತೆ ಇದೆ. ಭಾರತದಲ್ಲಿ ವಾಟ್ಸಾಪ್‌ಗೆ ಪರ್ಯಾಯವಾಗಿ ಹಲವು ಆಯ್ಕೆಗಳಿವೆ.
ಟೆಲಿಗ್ರಾಮ್
ಟೆಲಿಗ್ರಾಮ್ ವಾಟ್ಸಾಪ್‌ಗೆ ಪರ್ಯಾಯವಾಗಿರಬಹುದು. ಟೆಲಿಗ್ರಾಮ್ ಚಾಟಿಂಗ್, ಗ್ರೂಪ್ ಚಾಟ್, ಧ್ವನಿ, ವಿಡಿಯೋ ಕರೆಗಳು ಮತ್ತು ವಾಟ್ಸಾಪ್‌ನಂತೆಯೇ ಫೈಲ್ ಹಂಚಿಕೆಯಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಟೆಲಿಗ್ರಾಮ್ ಚಾನೆಲ್ ಮೂಲಕ ಹೆಚ್ಚಿನ ಜನರನ್ನು ಸಂಪರ್ಕಿಸುವುದು ಸಾಧ್ಯವಿದೆ.
ಸಿಗ್ನಲ್
ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದು ಭಾರತದಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದು ವಾಟ್ಸಾಪ್ ನಂತೆಯೇ ಹಲವು ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ.
ಸ್ನ್ಯಾಪ್ ಚಾಟ್
ವಾಟ್ಸಾಪ್‌ಗೆ ಪರ್ಯಾಯವಾಗಿ ಸ್ನ್ಯಾಪ್ ಚಾಟ್ ಅನ್ನು ಅತ್ಯುತ್ತಮ ಆಯ್ಕೆಯಾಗಿ ಇರಿಸಬಹುದು. ಇದರ ಮೂಲಕ ಪರಸ್ಪರ ಚಿತ್ರಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಬಹುದು.
ಇದನ್ನೂ ಓದಿ: Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್ ಆಗುತ್ತಾ ವಾಟ್ಸ್‌ಆ್ಯಪ್? ಕೇಂದ್ರ ಸರ್ಕಾರ ಹೇಳೋದೇನು?
ವಾಟ್ಸಾಪ್ ಸ್ಥಗಿತವಾದರೆ ಏನು ಸಮಸ್ಯೆ?
ಭಾರತದಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದರೆ ಗ್ರಾಹಕರು ಮುಖ್ಯವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಈ ಆಪ್ ಅನ್ನು ಸಾಕಷ್ಟು ಗ್ರಾಹಕರು ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇದರಿಂದ ಬೇರೆ ಆಪ್ ಗೆ ಹೊಂದಿಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಆಗ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಆದರೂ ಪರ್ಯಾಯ ಆಪ್‌ಗಳಿಗೆ ಜನ ಕ್ರಮೇಣ ಒಗ್ಗಿಕೊಳ್ಳಬಹುದು.