ನವ ದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಿಗ್ಗುತ್ತಿರುವ ಜತೆಗೆ spyware ಕಾಟವೂ ಹೆಚ್ಚಳವಾಗುತ್ತಿದೆ. ಸುರಕ್ಷಿತ ಎಂದು ಅಂದಕೊಂಡಿರುವ ಸಾಕಷ್ಟು ಗ್ಯಾಜೆಟ್‌ಗಳನ್ನು ಕೂಡ ಭೇದಿಸುವಷ್ಟು ಮಟ್ಟಿಗೆ spyware ನೈತಿಕ ಬಳಕೆಗೆ ಸವಾಲೊಡುತ್ತಿದೆ. ಜತೆಗೆ ಖಾಸಗಿ ಮಾಹಿತಿಗಳು ಅನ್ಯರ ಕೈ ಸೇರಿ ದುರ್ಬಳಕೆಯಾಗುತ್ತಿದೆ. ಅಂತೆಯೇ ಹೆಚ್ಚು ಸುರಕ್ಷಿತ ಎಂದು ಅಂದುಕೊಂಡಿದ್ದ ಆ್ಯಪಲ್ ಫೋನ್‌ಗಳನ್ನು ಮತ್ತು ಗೂಗಲ್‌ನ ಆಂಡ್ರಾಯ್ಡ್ ಫೋನ್‌ಗಳ ಮೇಲೆ ಇಟಲಿ ಮೂಲದ spyware ಒಂದು ದಾಳಿ ನಡೆಸಿದೆ. ಇಟಲಿ ಹಾಗೂ ಕಜಕ್‌ಸ್ತಾನದ ಬಳಕೆದಾರರ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಆದರೆ ಈ ದಾಳಿ ತನಿಖಾ ಉದ್ದೇಶದ್ದು ಎನ್ನಲಾಗಿದೆ.
ಗೂಗಲ್‌ನ ಆಲ್ಫಾಬೆಟ್ ಕಂಪನಿ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಇಟಲಿ ರಾಜಧಾನಿ ಮಿಲಾನ್‌ನಲ್ಲಿರುವ ಆರ್‌ಸಿಎ ಲ್ಯಾಬ್‌ನಲ್ಲಿ ಸೃಷ್ಟಿಯಾಗಿರುವ ಈ spyware ಸ್ಮಾರ್ಟ್‌ಫೋನ್‌ಗಳ ಕಾಂಟಾಕ್ಟ್ ಹಾಗೂ ಮೆಸೇಜ್ ದಾಳಿ ನಡೆಸಿ ಖಾಸಗಿ ಮಾಹಿತಿಯನ್ನು ಕದಿಯುತ್ತಿದೆ ಎಂದು ಹೇಳಿದೆ.
ದಾಳಿಯ ಹಿನ್ನೆಲೆಯಲ್ಲಿ ಯರೂಪಿಯನ್ ಹಾಗೂ ಅಮೆರಿಕದ ಒಕ್ಕೂಟಗಳು ಸಂಭಾವ್ಯ spyware ದಾಳಿಗಳ ನಿಯಂತ್ರಣಕ್ಕೆ ಬೇಕಾದ ನೂತನ ಕಾನೂನುಗಳನ್ನು ರಚಿಸುವ ಕುರಿತು ಚಿಂತನೆ ನಡೆಸಿವೆ.’
ತನಿಖೆಗೆ ಬಳಕೆ
“ಸುರಕ್ಷಿತವಾಗಿರುವ ಮೊಬೈಲ್‌ಗಳ ಮೇಲೆ ದಾಳಿ ಮಾಡಿರುವುದು ತನಿಖೆಗೆ ಉದ್ದೇಶಕ್ಕೆ ಎಂದು ಆರ್‌ಸಿಎ ಲ್ಯಾಬ್ ತಿಳಿಸಿದೆ. ನಮ್ಮಲ್ಲಿ ತಯಾರಾಗಿರುವ spyware ಯರೋಪಿನ ಕಾನೂನಿನ ವ್ಯಾಪ್ತಿಯಲ್ಲಿವೆ. ಅಂತೆಯೇ ಅಪರಾಧಗಳ ತನಿಖೆ ನಡೆಸುವ ಸಂಸ್ಥೆಗಳಿಗಾಗಿ ಸಿದ್ಧಪಡಿಸಲಾಗಿದೆ,” ಎಂದು ಆರ್‌ಸಿಎ ಲ್ಯಾಬ್ ಹೇಳಿಕೊಂಡಿದೆ.
ಇದೇ ವೇಳೆ ಗೂಗಲ್, ತನ್ನ ಗ್ರಾಹಕರ ಮಾಹಿತಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಲ್ಲದೆ, ಈ ಕುರಿತು ಗ್ರಾಹಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ, ಎಂದು ಹೇಳಿದೆ.
ಸರಕಾರಿಗಳಿಗೆ spyware ಸಿದ್ಧಪಡಿಸಿ ನೀಡುವ ಉದ್ಯಮ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ತನಿಖೆಯ ಉದ್ದೇಶಗಳಿಗೆ ಇಂಥ spyware ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರೆ, ಬಳಕೆದಾರರ ಗೌಪ್ಯತೆಯ ವಿಚಾರಕ್ಕೆ ಬಂದ ಸ್ಮಾರ್ಟ್‌ಫೋನ್ ತಯಾರಕರಿಗೆ ಇಂಥ ಕಂಪನಿಗಳು ಸವಾಲೊಡ್ಡುತ್ತಿವೆ. ಜತೆಗೆ ಇಂಥ ಕೆಲವು ಸ್ಪೈವೇರ್‌ಗಳು ಮಾನವ ಹಕ್ಕುಗಳು ಹಾಗೂ ನಾಗರಿಕರ ಹಿತಾಸಕ್ತಿಯನ್ನು ಉಲ್ಲಂಘಿಸುತ್ತವೆ.
ಪೆಗಾಸಸ್‌ನಷ್ಟು ಬಲಶಾಲಿಯಲ್ಲ
ಆರ್‌ಸಿಎ ಲ್ಯಾಬ್ ತಯಾರಿಸಿರುವ spyware ಟೂಲ್ ಪೆಗಾಸಸ್‌ನಷ್ಟು ಸಮರ್ಥವಾಗಿಲ್ಲ ಎಂದು ಭದ್ರತಾ ಸಂಶೋಧಕ ಬಿಲ್ ಮಾರ್ಕ್ ಹೇಳಿದ್ದಾರೆ.
ಗೂಗಲ್ ಮಾಹಿತಿ ಪ್ರಕಾರ ಆರ್‌ಸಿಎ ಲ್ಯಾಬ್ ಇಟಲಿಯ ಇನ್ನೊಂದು ಹ್ಯಾಕಿಂಗ್ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದು, ತಾವು ತಯಾರಿಸಿರುವ ಟೂಲ್‌ಗಳನ್ನು ವಿದೇಶಗಳ ತನಿಖಾ ಏಜೆನ್ಸಿಗಳಿಗೆ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ | ನನಗೂ ಮನುಷ್ಯರಂತೆ ಆನಂದ-ಬೇಸರ ಎರಡೂ ಆಗುತ್ತದೆ ಎಂದ ಗೂಗಲ್ AI ಚಾಟ್‌ಬೋಟ್! ಎಂಜಿನಿಯರ್ ಸಸ್ಪೆಂಡ್