Site icon Vistara News

iOS 16 | ಐಫೋನ್ 14 ಆಯ್ತು, ಇನ್ನು ಐಒಎಸ್ 16 ಬಿಡುಗಡೆ ಮಾಡಲಿದೆ ಆ್ಯಪಲ್

iOS 16

ಕ್ಯಾಲಿಫೋರ್ನಿಯಾ: ಐಫೋನ್ 14 ಸಿರೀಸ್ ರಿಲೀಸ್ ಮಾಡಿದ ಬೆನ್ನಲ್ಲೇ ಆ್ಯಪಲ್ ಕಂಪನಿಯು, ಐಒಎಸ್ 16 (iOS 16) ಕೂಡ ಸೆಪ್ಟೆಂಬರ್ 12ರಂದು ಲಾಂಚ್ ಮಾಡುವುದಾಗಿ ಹೇಳಿದೆ. ಹೊಸ ಆಪರೇಟಿಂಗ್ ಸಿಸ್ಟಂನೊಂದಿಗೆ ಒಳಗೊಂಡಿರುವ ವೈಶಿಷ್ಟ್ಯಗಳು ಗಮನಾರ್ಹವಾಗಿವೆ. ವಿಜೆಟ್‌ಗಳನ್ನು ಸ್ಥಾಪಿಸುವ ಮತ್ತು ಅವುಗಳ ನೋಟವನ್ನು ವೈಯಕ್ತೀಕರಿಸುವ ಸಾಮರ್ಥ್ಯ, ಹಾಗೆಯೇ ಎಚ್ಚರಿಕೆಗಳನ್ನು ಪ್ರದರ್ಶಿಸುವ ಹೊಸ ವಿಧಾನದಂತಹ ಲಾಕ್ ಸ್ಕ್ರೀನ್‌ಗೆ ಹಲವಾರು ವರ್ಧನೆಗಳೊಂದಿಗೆ ಹೊಸ ಆಪರೇಟಿಂಗ್ ಸಿಸ್ಟಮ್ ವಿಭಿನ್ನವಾಗಿದೆ. ಹೆಚ್ಚು ಬಳಕೆದಾರರಸ್ನೇಹಿಯಾಗಿದೆ.

ಹೊಸ ಆಪರೇಟಿಂಗ್ ಸಿಸ್ಟಮ್‌ನಿಂದಾಗಿ ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಪರಿಷ್ಕರಿಸಬಹುದು ಇಲ್ಲವೇ ಅವುಗಳ್ನು ಹಿಂದಕ್ಕೆ ಪಡೆಯಬಹುದು. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ಐಕ್ಲೌಡ್ ಶೇರ್ಡ್ ಫೋಟೋ ಲೈಬ್ರರಿಯನ್ನು ಬಳಸಿಕೊಳ್ಳಬಹುದು. ಲೈವ್ ಟೆಕ್ಸ್ಟ್ ಟೂಲ್ ಎಂಬ ಟೂಲ್ ಇದ್ದು, ಸಿನಿಮಾ ಮತ್ತು ಫೋಟೋಗಳಲ್ಲಿರುವ ಟೆಕ್ಸ್ಟ್ ಪಡೆಯಲು ಸಾಧ್ಯವಾಗಿಸುತ್ತದೆ.

ಫೋಕಸ್ ಮೋಡ್‌ಗೆ ಸಂಬಂಧಿಸಿದಂತೆ ಕೆಲವು ಹೊಂದಾಣಿಕೆಗಳನ್ನು ಮಾಡುತ್ತಿದೆ. ಕಂಟ್ರೋಲ್ ಸೆಂಟರ್ ಅಥವಾ ಆಟೋಮೇಟಿಂಗ್ ಪ್ರೊಸೆಸ್‌ ಸೇರಿದಂತೆ ಅನೇಕ ಹೊಂದಾಣಿಕೆಗಳನ್ನು ಫೋಕಸ್‌ಮೋಡ್‌ನಲ್ಲಿ ಕಾಣಬಹುದಾಗಿದೆ. ಅದೇ ರೀತಿ, ಫೋಕಸ್ ಫಿಲ್ಟರ್ಸ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಪಲ್ ತನ್ನ ಮ್ಯಾಪ್ಸ್ ಆಪ್‌ನಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. 3ಡಿ ರೀತಿ ವಿಷುಯಲ್ಸ್, ಮಲ್ಟಿಸ್ಟಾಪ್ ನ್ಯಾವಿಗೇಷನ್, ಸಾರ್ವಜನಿಕ ಸಾರಿಗೆ ದರ ಮಾಹಿತಿ ಪರೀಕ್ಷಿಸುವುದು ಸೇರಿದಂತೆ ಅನೇಕ ಫೀಚರ್ಸ್ ಸೇರಿಸಲಾಗಿದೆ.

ಐಫೋನ್ 14 ಫೋನ್ ಲಾಂಚ್
ಬಹು ನಿರೀಕ್ಷೆಯ Apple iPhone 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಆ್ಯಪಲ್‌ ಕಂಪನಿ ಸಿಇಒ ಟಿಮ್‌ ಕುಕ್‌ ಅವರು ಆ್ಯಪಲ್‌ 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ಭಾರತದ ಗ್ರಾಹಕರಿಗೆ ಐಫೋನ್‌ 14 (ಪ್ರೊ) ಬೆಲೆ 79,900 ರೂ. ಆಗಲಿದೆ. ಹಾಗೆಯೇ, ಐಫೋನ್‌ 14 ಪ್ಲಸ್‌ಗೆ (ಪ್ರೊ ಮ್ಯಾಕ್ಸ್‌) 89,900 ರೂ. ಆಗಲಿದೆ. ಐಫೋನ್‌ 14 ಸೆಪ್ಟೆಂಬರ್‌ 16ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಐಫೋನ್ 14 ಪ್ಲಸ್ ಅಕ್ಟೋಬರ್ 7ರಿಂದ ಲಭ್ಯವಾಗಲಿದೆ.

Exit mobile version