Site icon Vistara News

Apple iPhone | ಐಫೋನ್ 14 ಸೇರಿ ಟಾಪ್ ಮಾಡೆಲ್‌ಗಳಿಗೆ ಈಗ 5ಜಿ ಸಪೋರ್ಟ್ ‌

apple iphone 14 @ 5G technology

ನವದೆಹಲಿ: ಭಾರತದಲ್ಲಿ 5ಜಿ ಸೇವೆ ಶುರುವಾಗಿದ್ದು, ಒಂದೊಂದೇ ಟೆಲಿಕಾಂ ಕಂಪನಿಗಳು ಈ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಅದಕ್ಕೆ ತಕ್ಕಂತೆ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಸಾಧನಗಳನ್ನು 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ರೀತಿಯಲ್ಲಿ ಉತ್ಪಾದಿಸುತ್ತಿವೆ. ಈ ಸಾಲಿಗೆ ಈಗ ಆ್ಯಪಲ್ ಕಂಪನಿ (Apple iPhone) ಕೂಡ ಸೇರ್ಪಡೆಯಾಗಿದೆ. ಆ್ಯಪಲ್ ತನ್ನ ಐಫೋನ್‌ಗಳಿಗೆ ಐಒಎಸ್ 16.2 ಅಪ್‌ಡೇಟ್ ಮಾಡಿದ್ದು, ಇದು 5ಜಿ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಹಾಗಾಗಿ, ಭಾರತದಲ್ಲಿ ಐಫೋನ್ 13, ಐಫೋನ್ 14, ಐಫೋನ್ ಎಸ್‌ಇ ಮತ್ತು ಐಫೋನ್ 12 ಬಳಕೆದಾರರು ಏರ್ಟೆಲ್ ಮತ್ತು ಜಿಯೋ 5ಜಿ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಭಾರತದಲ್ಲಿ ಅಕ್ಟೋಬರ್ 1ರಂದು 5ಜಿ ಸೇವೆಯನ್ನು ಆರಂಭಿಸಲಾಗಿದೆ. ಭಾರ್ತಿ ಏರ್ಟೆಲ್‌, ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಗಳು ಭಾರತದ ಸುಮಾರು 50 ನಗರಗಳಲ್ಲಿ 5ಜಿ ಸೇವೆಯನ್ನು ಒದಗಿಸುತ್ತಿವೆ. ಹೆಚ್ಚಿನ ಆಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಮೂಲ ಸಾಧನ ತಯಾರಕರಿಂದ (ಒಇಎಂಗಳು) ಅಪ್‌ಡೇಟ್ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಆ್ಯಪಲ್ ಬಳಕೆದಾರರಿಗೆ 5G ನೆಟ್‌ವರ್ಕ್ ಐಒಎಸ್ 16.2 ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಎಲ್ಲ ಬಳಕೆದಾರರಿಗೆ ದೊರೆಯುತ್ತಿದೆ.

5ಜಿ ತಂತ್ರಜ್ಞಾನ ಬೆಂಬಲ ಮಾತ್ರವಲ್ಲದೇ ಆ್ಯಪಲ್ ಐಒಎಸ್ 16.2 ಅಪ್‌ಡೇಟ್‌ನೊಂದಿಗೆ, ಆ್ಯಪಲ್ ಮ್ಯೂಸಿಕ್ ಸಿಂಗ್, ಹೊಸ ಹೋಮ್ ಅಪ್ಲಿಕೇಶನ್ ಆರ್ಕಿಟೆಕ್ಚರ್, ಡಿಸೇಬಲ್ ವಾಲ್‌ಪೇಪರ್ ಮತ್ತು ಡಿಸ್‌ಪ್ಲೇ ಮೇಲೆ ಯಾವಾಗಲೂ ಅಧಿಸೂಚನೆಗಳು ಕಾಣಿಸುವುದು, ಲಾಕ್ ಸ್ಕ್ರೀನ್ ಸ್ಲೀಪ್ ವಿಜೆಟ್, ಏರ್‌ಟ್ಯಾಗ್ ಎಚ್ಚರಿಕೆಗಳು, ಸಿರಿ ಮೌನ ಪ್ರತಿಕ್ರಿಯೆಗಳು ಮತ್ತು ಹಲವಾರು ಇತರ ಹೊಸ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಒದಗಿಸಲಾಗುತ್ತಿದೆ.

ಇದನ್ನೂ ಓದಿ | TATA Group | ಆ್ಯಪಲ್‌ ಐಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ನ ಕೋಲಾರದ ಘಟಕವನ್ನು ಖರೀದಿಸಲು ಟಾಟಾ ಮಾತುಕತೆ

Exit mobile version