ನವ ದೆಹಲಿ: ಸಂಪ್ರದಾಯದಂತೆ, ಹೊಸ ಐಫೋನ್ ಲಾಂಚ್ ಮಾಡುತ್ತಿದ್ದಂತೆ ಹಳೆಯ ಐಫೋನ್‌ಗಳ ಬೆಲೆ ಕಡಿತವನ್ನು ಆ್ಯಪಲ್ ಮುಂದುವರಿಸಿದೆ. ಐಫೋನ್ 14 ಹೊಸ ಫೋನ್ ಲಾಂಚ್ ಆಗುತ್ತಿದ್ದಂತೆ ಐಫೋನ್ 13 (iPhone 13) ಮತ್ತು ಐಫೋನ್ 12 (iPhone 12) ಬೆಲೆಯಲ್ಲಿ ಕಡಿತ ಮಾಡಿದೆ. ಐಫೋನ್ 11 ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಭಾರತದಲ್ಲೂ ಈಗ ಐಫೋನ್ 14 ಲಾಂಚ್ ಆಗಿದೆ. ಇದೇ ವೇಳೆ, ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 13 ಮತ್ತು ಐಫೋನ್ 12 ಫೋನ್ ಅತ್ಯಾಕರ್ಷಕ ಬೆಲೆಯಲ್ಲಿ ದೊರೆಯಲಿವೆ. ಐಫೋನ್ ಖರೀದಿಸಬೇಕು ಎನ್ನುವವರಿಗೆ ಇದು ಸುಸಮಯ. ಯಾಕೆಂದರೆ, ಮುಂದಿನ ವಾರದಲ್ಲಿ ಈ ಎರಡು ಫೋನುಗಳು ಇನ್ನಷ್ಟು ರಿಯಾಯ್ತಿ ದರದಲ್ಲಿ ಸಿಗಬಹುದು!
ಆ್ಯಪಲ್ ಕಂಪನಿಯು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಐಫೋನ್ 13 ಬೆಲೆಯನ್ನು 69,990 ರೂಪಾಯಿಗೆ ಇಳಿಕೆ ಮಾಡಿದೆ. ಈ ಫೋನ್ ಮೂಲ ಬೆಲೆ 79,000 ರೂ. ಇತ್ತು. ಅಂದರೆ, ಆ್ಯಪಲ್ ಕಂಪನಿಯೇ 10 ಸಾವಿರ ರೂಪಾಯಿ ಕಡಿಮೆ ಮಾಡಿದಂತಾಯಿತು. ಆದರೆ, ಮುಂದಿನ ವಾರದಲ್ಲಿ ಇನ್ನೂ ಕಡಿಮೆ ರೇಟಿಗೆ ಈ ಫೋನ್ ಸಿಗಬಹುದು. ಹೇಗೆ ಎಂದರೆ, ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭವಾಗಲಿದೆ. ಹಾಗಾಗಿ, ರಿಯಾಯ್ತಿ ದರದಲ್ಲಿ ಈ ಫೋನ್‌ಗಳು ಗ್ರಾಹಕರಿಗೆ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಆಪಲ್ ಆನ್‌ಲೈನ್ ಸ್ಟೋರಿನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ. ಅಂದರೆ, ಎಕ್ಸ್‌ಚೇಂಜ್ ಎಲ್ಲ ಸೇರಿ ಗ್ರಾಹಕರಿಗೆ 58,730 ರೂ. ವರೆಗೂ ಐಫೋನ್ 12 ಸಿಗಬಹುದು. ಅಲ್ಲಿಗೆ, ಹೆಚ್ಚು ಕಡಿಮೆ 17,000 ರೂ.ವರೆಗೆ ರಿಯಾಯ್ತಿ ದರದಲ್ಲಿ ಐಫೋನ್‌ಗಳು ಮಾರಾಟಕ್ಕೆ ಸಿಗಲಿವೆ.
ಇದೇ ವೇಳೆ, ಐಫೋನ್ 12 ಫೋನ್ ಕೂಡ ನಿಮಗೆ ಕಡಿಮೆ ಬೆಲೆಗೆ ಸಿಗಲಿದೆ. ಬೆಲೆ ಕಡಿತವಾದ ಬಳಿಕ ಈ ಫೋನ್ ದರಗಳು 59,990 ರೂ.ನಿಂದ ಆರಂಭವಾಗಲಿವೆ. ಈಗಾಗಲೇ ಅಮೆಜಾನ್ ಈ ಫೋನ್ (64 ಜಿಬಿ ಮಾಡೆಲ್) ಅನ್ನು 52,999 ರೂ.ಗೆ ಮಾರಾಟ ಮಾಡುತ್ತಿದೆ. 10,950 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ ಕೂಡ ಇದೆ.
ಇಧನ್ನೂ ಓದಿ | iOS 16 | ಐಫೋನ್ 14 ಆಯ್ತು, ಇನ್ನು ಐಒಎಸ್ 16 ಬಿಡುಗಡೆ ಮಾಡಲಿದೆ ಆ್ಯಪಲ್