ವಾಷಿಂಗ್ಟನ್: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ಈ ಮಾತಿನಂತೆ ಆ್ಯಪಲ್ ಕಂಪನಿಯು ಸ್ಟೀವ್ ಜಾಬ್ಸ್ ಕಾಲದಿಂದಲೂ ಬದಲಾವಣೆಯೊಂದೇ ಶಾಶ್ವತ ಎಂಬಂತೆ ಮುಂದುವರಿದಿದೆ. ಈ ಮಾತಿಗೆ ನಿದರ್ಶನ ಎಂಬಂತೆ, ಸ್ಮಾರ್ಟ್ ವಾಚ್‌ಗಳ ಕ್ರಾಂತಿಗೆ ಆ್ಯಪಲ್ ಮುಂದಾಗಿದೆ. ಅಂದರೆ, ಶೀಘ್ರದಲ್ಲಿಯೇ ಆ್ಯಪಲ್ ಸ್ಮಾರ್ಟ್‌ವಾಚ್‌ಗಳಲ್ಲಿ (Apple Watch) ಕ್ಯಾಮೆರಾ ಅಳವಡಿಸುವುದು ಕಂಪನಿಯ ಉದ್ದೇಶವಾಗಿದೆ. ಇದರ ದಿಸೆಯಲ್ಲಿ ಕಂಪನಿಗೆ ಮುನ್ನಡೆಯೂ ಸಿಕ್ಕಾಗಿದೆ.
ಹೌದು, ಆ್ಯಪಲ್ ಕಂಪನಿಗೆ ಹೊಸ ಪೇಟೆಂಟ್ ಸಿಕ್ಕಿದೆ. ಆ್ಯಪಲ್ ಸ್ಮಾರ್ಟ್‌ವಾಚ್‌ಗಳಿಗೆ ಕ್ಯಾಮೆರಾ ಅಳವಡಿಸುವ ಕುರಿತು ಪೇಟೆಂಟ್ ಲಭ್ಯವಾಗಲಿದ್ದು, ಶೀಘ್ರದಲ್ಲಿಯೇ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಹಾಗಾಗಿ, ಸ್ಮಾರ್ಟ್‌ವಾಚ್ ಪ್ರಿಯರಲ್ಲಿ, ಅದರಲ್ಲೂ ಆ್ಯಪಲ್ ಬ್ರ್ಯಾಂಡ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಹಾಗೊಂದು ವೇಳೆ, ಆ್ಯಪಲ್ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಸೌಲಭ್ಯ ಅಳವಡಿಕೆಯಾದರೆ ಸ್ಮಾರ್ಟ್‌ವಾಚ್‌ಗಳಲ್ಲಿ ಇದು ಕ್ರಾಂತಿಯಾಗಲಿದೆ ಎಂದೇ ಟೆಕ್ ಲೋಕದ ತಜ್ಞರು ವಿಶ್ಲೇಷಿಸಿದ್ದಾರೆ.
ಆ್ಯಪಲ್ ಕಂಪನಿಯು ಮುಂಬರುವ ದಿನಗಳಲ್ಲಿ ಉತ್ಪಾದಿಸುವ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಮಾತ್ರವಲ್ಲ, ಇನ್ನೂ ಹತ್ತಾರು ಹೊಸ ಫೀಚರ್‌ಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಹೊಸ ವಾಚ್‌ಗಳಲ್ಲಿ ಯಾವೆಲ್ಲ ಫೀಚರ್‌ಗಳನ್ನು ನಿರೀಕ್ಷೆ ಮಾಡಬಹುದು? ಯಾವುದಕ್ಕೆಲ್ಲ ಪೇಟೆಂಟ್ ಸಿಕ್ಕಿವೆ ಎಂಬುದರ ಮಾಹಿತಿ ಇಲ್ಲಿದೆ.
ನಿರೀಕ್ಷಿಸಬಹುದಾದ ಫೀಚರ್‌ಗಳು
- ಹೊಸ ಸ್ಮಾರ್ಟ್‌ವಾಚ್‌ಗಳಲ್ಲಿ ಕ್ಯಾಮೆರಾ ಸೌಲಭ್ಯ. ಪಿಕ್ಸೆಲ್ ಕುರಿತು ಇದುವರೆಗೆ ಮಾಹಿತಿ ಲಭ್ಯವಿಲ್ಲ
- ಸ್ಕ್ರೀನ್‌ಅನ್ನು ಜೂಮ್ ಇನ್ ಹಾಗೂ ಜೂಮ್ ಔಟ್ ಮಾಡುವ ಸೌಲಭ್ಯ
- ಯಾವುದೇ ಆಬ್ಜೆಕ್ಟ್ ಮೇಲೆಯೂ ಜೂನ್ ಇನ್ ಮಾಡುವ ಫೀಚರ್
- ಎಲ್ಲ ಫೀಚರ್‌ಗಳು ಒಂದೇ ಶೇಡ್‌ನಲ್ಲಿ ಕಾಣುವ ಕಲರ್ ಮ್ಯಾನೇಜ್‌ಮೆಂಟ್ ಸಿಸ್ಟಂ
ಆ್ಯಪಲ್ ಕಂಪನಿಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ದಿಗ್ಗಜ ಎನಿಸಿದೆ. ಐಫೋನ್, ಐಪಾಡ್, ಐ ಮ್ಯಾಕ್ ಸೇರಿ ಹಲವು ಉತ್ಪನ್ನಗಳನ್ನು ಬಳಸುವುದೇ ಜನರಿಗೆ ಪ್ರತಿಷ್ಠೆಯಾಗಿದೆ. ಇದರ ಬೆನ್ನಲ್ಲೇ, ಸ್ಮಾರ್ಟ್‌ವಾಚ್‌ಗಳಿಗೆ ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ಆದರೆ, ಹೊಸ ಸ್ಮಾರ್ಟ್‌ವಾಚ್‌ಗಳು ಯಾವಾಗ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ? ಭಾರತದಲ್ಲಿ ಮಾರಾಟ ಆರಂಭ ಯಾವಾಗ? ಅವುಗಳ ಬೆಲೆ ಎಷ್ಟಿರಲಿದೆ ಎಂಬುದ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: WhatsApp New Feature: ನಿಮ್ಮ ಖಾತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂರು ಫೀಚರ್ ಲಾಂಚ್ ಮಾಡಿದ ವಾಟ್ಸಾಪ್