ನವ ದೆಹಲಿ: ಯುಪಿಐ ಪೇಮೆಂಟ್ಗಳು ಚಾಲ್ತಿಗೆ ಬಂದ ಬಳಿಕ ಹಣ ಪಾವತಿ ಸಿಕ್ಕಾಪಟ್ಟೆ ಸರಳ ಎನಿಸಿಕೊಂಡಿದೆ. ಜತೆಗೆ ನೋಟುಗಳ ಚಿಂತೆಯಿಲ್ಲದೆ ಎಲ್ಲಿಗೆ ಬೇಕಾದರೂ ಹೋಗಬಹದು. ಪರ್ಸ್ ಮನೆಯಲ್ಲಿ ಬಿಟ್ಟು ಹೋಗಿದ್ದರೂ ಚಿಂತೆಯಿಲ್ಲದೆ ವಹಿವಾಟು ಮುಗಿಸಬಹುದು. ಆದಾಗ್ಯೂ ಯುಪಿಐ ಪೇಮೆಂಟ್ (UPI Payment) ಮಾಡುವಾಗ ನಿರ್ದಿಷ್ಟ ಮೊತ್ತದ ವಹಿವಾಟಿಗೆ ಮಿತಿ ಹಾಕಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಗೂಗಲ್ ಕಂಪನಿಯ ಜಿಪೆ (Gpay) ಇತ್ತೀಚೆಗೆ ಹೊಸ ಪಟ್ಟಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ ಯಾವ ಯಾವ ಬ್ಯಾಂಕ್ಗಳು ಎಷ್ಟು ಮೊತ್ತದ ಮಿತಿ ನಿಗದಿ ಮಾಡಿದೆ ಎಂಬುದಾಗಿ ತಿಳಿಸಲಾಗಿದೆ. ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ, ಐಸಿಸಿ ಸೇರಿದಂತೆ ಹಲವು ಬ್ಯಾಂಕ್ಗಳ ಪಟ್ಟಿಯನ್ನು ನೀಡಿದೆ. ತಕ್ಷಣವೇ ನಿಮ್ಮ ಬ್ಯಾಂಕ್ನಲ್ಲಿ ಒಂದು ಬಾರಿಗೆ ಎಷ್ಟು ಕಳುಹಿಸಲು ಸಾಧ್ಯ ಇದೆ ಎಂಬುದನ್ನು ಅರಿತುಕೊಳ್ಳಿ.
ಇದನ್ನೂ ಓದಿ : Mann Ki Baat: ಇ ಸಂಜೀವಿನಿ ಆ್ಯಪ್, ಯುಪಿಐ ಕುರಿತು ಮನ್ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ
ಒಂದು ಮೊಬೈಲ್ ಆ್ಯಪ್ ಮೂಲಕ ಹಲವಾರು ಬ್ಯಾಂಕ್ಗಳ ಖಾತೆಯನ್ನು ನಿರ್ವಹಣೆ ಮಾಡುವುದಕ್ಕೆ ಯುಪಿಐ (Unified Payment Interface) ಎಂದು ಕರೆಯುತ್ತೇವೆ. ಇದರಲ್ಲಿ ಮರ್ಚೆಂಟ್ ಪೇಮೆಂಟ್, ಹಣಕಾಸಿನ ವರ್ಗಾವಣೆ ಸೇರಿದಂತೆ ಹಲವಾರು ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಆ್ಯಪ್ ಮೂಲಕ ಹಣವನ್ನು ಕಳುಹಿಸುವ ಜತೆಗೆ ಹಣ ಬೇಡಿಕೆ ಇಟ್ಟು ಮನವಿ ಕೂಡ ಮಾಡಲು ಸಾಧ್ಯವಿದೆ.
ಜಿಪೇ ಬಿಡುಗಡೆ ಮಾಡಿರುವ ಬ್ಯಾಂಕ್ವಾರು ಪಟ್ಟಿ ಇಲ್ಲಿದೆ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಒಂದು ಬಾರಿ 1 ಲಕ್ಷ ರೂಪಾಯಿ ಕಳುಹಿಸಬಹುದು. ದಿನವೊಂದಕ್ಕೆ ಗರಿಷ್ಠ 1 ಲಕ್ಷ ರೂ. ವಹಿವಾಟು ಮಾತ್ರ ನಡೆಸಲು ಸಾಧ್ಯ.
- ಎಚ್ಡಿಎಫ್ಸಿ ಬ್ಯಾಂಕ್: ಒಂದು ಬಾರಿಗೆ ಗರಿಷ್ಠ 1 ಲಕ್ಷ ರೂಪಾಯಿ ಕಳುಹಿಸಬಹುದು. ಆದರೆ, ಮೊದಲ ಬಾರಿಗೆ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ 5000 ರೂಪಾಯಿ ಮಿತಿ ನಿಗದಿ ಮಾಡಲಾಗಿದೆ. ದಿನವೊಂದಕ್ಕೆ ಗರಿಷ್ಠ 1 ಲಕ್ಷ ರೂಪಾಯಿ ವಹಿವಾಟು ಮಾಡುವ ಅವಕಾಶ ನೀಡಿದೆ.
- ಐಸಿಐಸಿಐ ಬ್ಯಾಂಕ್: ಯುಪಿಐ ವರ್ಗಾವಣೆ ಮಿತಿ ಹಾಗೂ ದೈನಂದಿನ ಮಿತಿ ಒಂದು ಲಕ್ಷ ರೂಪಾಯಿ.
- ಆಕ್ಸಿಸ್ ಬ್ಯಾಂಕ್: ಯುಪಿಐಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ಕಳುಹಿಸಬಹುದು ಹಾಗೂ ದೈನಂದಿನ ಮಿತಿಯೂ 1 ಲಕ್ಷ ರೂಪಾಯಿ.
- ಬ್ಯಾಂಕ್ ಆಫ್ ಬರೋಡಾ: ಈ ಬ್ಯಾಂಕ್ನ ಗ್ರಾಹಕರಿಗೆ ಒಂದು ಬಾರಿಯ ಹಣ ವರ್ಗಾವಣೆ ಮಿತಿ 25000 ರೂಪಾಯಿ. ಆದರೆ, ದೈನಂದಿನ ಮಿತಿಯನ್ನು ಇನ್ನೂ ನಿಗದಿ ಮಾಡಿಲ್ಲ.
ಇನ್ನಷ್ಟು ಬ್ಯಾಂಕ್ಗಳ ಖಾತೆದಾರರ ಮಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಎಷ್ಟು ಹಣಕ್ಕೆ ಮನವಿ ಸಲ್ಲಿಸಬಹುದು?
ತುರ್ತು ಅಗತ್ಯಕ್ಕೆ ಹಣ ಬೇಕಾದಾಗ ನಿಮ್ಮ ಆಪ್ತರಿಗೆ ಜಿಪೇ ಮೂಲಕವೇ ಮನವಿ ಸಲ್ಲಿಸಲು ಸಾಧ್ಯವಿದೆ. ಗರಿಷ್ಠ 2000 ರೂಪಾಯಿ ಮಾತ್ರ ಕಳುಹಿಸಲು ಕೋರಲು ಸಾಧ್ಯವಿದೆ. ಅದನ್ನು ಹೇಗೆ ಮಾಡುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
- ಗೂಗಲ್ ಪೇ ಆ್ಯಪ್ ಓಪನ್ ಮಾಡಿ.
- ಕಾಂಟಾಕ್ಟ್ ಲಿಸ್ಟ್ಗೆ ಹೋಗಿ, ಯಾರಿಂದ ಹಣ ಪಡೆಯಬೇಕೊ ಅವರ ನಂಬರ್ ಮೇಲೆ ಟ್ಯಾಪ್ ಮಾಡಿ.
- ಕೆಳಗೆ ಇರುವ ರಿಕ್ವೆಸ್ಟ್ (Request) ಆಯ್ಕೆಯನ್ನು ಒತ್ತಿ.
- ಹಣ ಹಾಗೂ ಅಗತ್ಯ ಮಾಹಿತಿಯನ್ನು ಟೈಪ್ ಮಾಡಿ.
- ರಿಕ್ವೆಸ್ಟ್ ಕಳುಹಿಸಿ.
- ಒಂದು ವೇಳೆ ನೀವು ಕಳುಹಿಸಿದ ವ್ಯಕ್ತಿ ಅದನ್ನು ತಿರಸ್ಕರಿಸಿದರೆ ನಿಮಗೊಂದು ನೋಟಿಫಿಕೇಷನ್ ಬರುತ್ತದೆ. ಹಣ ಬಂದರೆ ಅದರ ಸಂದೇಶವೂ ಸಿಗುತ್ತದೆ.