ನವ ದೆಹಲಿ: ಭಾರತ ತನ್ನ ಆಟೊಮೊಬೈಲ್ ಉದ್ದಿಮೆಯ ಗಾತ್ರವನ್ನು 2024ರ ಅಂತ್ಯದ ವೇಳೆಗೆ ಎರಡು ಪಟ್ಟು ವೃದ್ಧಿಸಲು ಉದ್ದೇಶಿಸಿದೆ. 15 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ (Nitin Gadkari ) ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮುಂದಿನ ವರ್ಷ 5 ಲಕ್ಷ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿದೆ. ಇದರಲ್ಲಿ ಎರಡು ಲಕ್ಷ ಕೋಟಿ ಸರ್ಕಾರದ ಕಡೆಯಿಂದ ಬರಲಿದ್ದರೆ, ಉಳಿದ ಹಣ ಬಂಡವಾಳ ಮಾರುಕಟ್ಟೆಯಿಂದ ಬರಲಿದೆ ಎಂದರು.
ಪ್ರಸ್ತುತ ಆಟೊಮೊಬೈಲ್ ಇಂಡಸ್ಟ್ರಿ 7.5 ಲಕ್ಷ ಕೋಟಿ ರೂ. ಗಾತ್ರವಿದ್ದು, ಇದನ್ನು 2024ರ ಅಂತ್ಯ ವೇಳೆಗೆ 15 ಲಕ್ಷ ಕೋಟಿ ರೂ.ಗೆ ಏರಿಸಲು ಬಯಸುತ್ತಿದ್ದೇವೆ. ಇದರೊಂದಿಗೆ ಭಾರತ ಜಗತ್ತಿನ ಅತಿ ದೊಡ್ಡ ಆಟೊಮೊಬೈಲ್ ತಯಾರಕಗಳಲ್ಲಿ ಒಂದು ಎನ್ನಿಸಲಿದೆ. ಇದು ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ವಿವರಿಸಿದರು.