Site icon Vistara News

Viral News : ಶೋರೂಮ್​ನಿಂದ ಫೋಕ್ಸ್​ವ್ಯಾಗನ್​ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ!

Viral news

ತಿರುವನಂತಪುರ: ವಾಹನ ಕಳ್ಳತನವು ಇಂದಿಗೂ ಭಾರತದಲ್ಲಿ ಒಂದು ಪ್ರಮುಖ ಸಮಸ್ಯೆ. ವಾಹನಗಳು ಅತ್ಯಾಧುನಿಕ ತಾಂತ್ರಿಕತೆಯನ್ನು ಹೊಂದಿರುವ ಹೊರತಾಗಿಯೂ ಕಳ್ಳರು ಈಗ ವಾಹನಗಳನ್ನು ಕದಿಯಲು ಆಧುನಿಕ ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ, ಕೇರಳದಲ್ಲಿ ಕಳ್ಳನೊಬ್ಬ ಡೀಲರ್​ಶಿಪ್​ನಿಂದ ಹೊಚ್ಚ ಹೊಸ ಫೋಕ್ಸ್ ವ್ಯಾಗನ್ ಟೈಗುನ್ ಅನ್ನು ಕದ್ದ ಘಟನೆ ನಡೆದಿದ್ದು, ಪೆಟ್ರೋಲ್​ ಹಾಕಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ಎಸ್​​ಯುವಿ ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು (Viral News) ಈಗಾಗಲೇ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿವೆ.

ಈ ವಿಡಿಯೋವನ್ನು ಮನೋರಮಾ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡಿದೆ. ಈ ವರ್ಷದ ಜುಲೈ 28ರಂದು ಈ ಘಟನೆ ನಡೆದಿದೆ. ಎರ್ನಾಕುಲಂನ ಕುಂದನ್ನೂರ್ ಪ್ರದೇಶದ ಫೋಕ್ಸ್​​​ವ್ಯಾಗನ್ ಡೀಲರ್​​ಶಿಪ್​​ನಿಂದ ಕಾರನ್ನು ಕಳವು ಮಾಡಲಾಗಿದೆ. ಕಾರನ್ನು ಕದ್ದ ನಂತರ, ಕಳ್ಳನು ಮುಂಜಾನೆ 3 ಗಂಟೆ ಸುಮಾರಿಗೆ ಹತ್ತಿರದ ಪೆಟ್ರೋಲ್ ಪಂಪ್​​ಗೆ ಹೋಗಿದ್ದ. ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸಲು ಅವರು ಸಿಬ್ಬಂದಿಯನ್ನು ಕೇಳಿದ್ದ. ಸಿಬ್ಬಂದಿ ಹಣ ಕೇಳಿದಾಗ ವ್ಯವಸ್ಥಾಪಕರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದ.

ಘಟನೆಯ ಸಮಯದಲ್ಲಿ ಪೆಟ್ರೋಲ್ ಬಂಕ್​ನಲ್ಲಿ ಇಬ್ಬರು ಇದ್ದರು. ಅವರು ಎಸ್ ಯುವಿಯನ್ನು ಗಮನಿಸಿದಾಗ ನೋಂದಣಿ ಫಲಕ ಇಲಿಲ್ಲ. ಹೀಗಾಗಿ ಅವರಿಗೆ ಅನುಮಾನ ಮೂಡಿತು. ಪಾವತಿಯನ್ನು ದೃಢೀಕರಿಸಲು ವ್ಯವಸ್ಥಾಪಕರನ್ನು ಕರೆಯಬೇಕಾಗಿದೆ ಎಂದು ಕಳ್ಳನಿಗೆ ತಿಳಿಸಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಬುದ್ಧಿವಂತಿಕೆಯಿಂದ ಸಂಪರ್ಕಿಸಿದ್ದಾರೆ.

ಪೊಲೀಸರು ತಕ್ಷಣ ಪೆಟ್ರೋಲ್ ಬಂಕ್​ಗೆ ಬಂದು ಕಳ್ಳರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೆಟ್ರೋಲ್​ ಹಣವನ್ನೂ ಉಳಿಸಲು ಹೋದ ಕಳ್ಳರು ಕಾರು ಸಮೇತ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತ ಹಣವನ್ನು ಪಾವತಿಸಿದ್ದರೆ ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಅನುಮಾನ ಬರುತ್ತಿರಲಿಲ್ಲ.

ವಾಹನವನ್ನು ಕದ್ದ ವ್ಯಕ್ತಿಯ ನಿಖರವಾದ ವಿವರಗಳು ಲಭ್ಯವಿಲ್ಲ. ಅವನು ಚಾಳಿ ಹಿಡಿದ ಅಪರಾಧಿಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಕಳ್ಳನು ಡೀಲರ್​​ಶಿಪ್​​ನಿಂದ ಹೊಚ್ಚ ಹೊಸ ವಾಹನವನ್ನು ಕದಿಯಲು ಹೇಗೆ ಸಾಧ್ಯವಾಯಿತು ಎಂಬುದೂ ಆಶ್ಚಯರ್ಯ. ಸಾಮಾನ್ಯವಾಗಿ, ಡೀಲರ್​​ಶಿಪ್​​ಗಳು ರಾತ್ರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯದಲ್ಲಿ ಇರಿಸಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅಂತಹ ಭದ್ರತಾ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕಳ್ಳನು ಕಳ್ಳತನವನ್ನು ನಿಖರವಾಗಿ ಯೋಜಿಸಿದ್ದನೇ ಅಥವಾ ಇದು ಕ್ಷಣಿಕ ನಿರ್ಧಾರವೇ ಎಂಬುದು ಸಹ ತಿಳಿದಿಲ್ಲ.

ಇದನ್ನೂ ಓದಿ : Self Harming :ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ

ಮೋಟರ್ ಸೈಕಲ್​​ಗಳು ಅಥವಾ ದ್ವಿಚಕ್ರ ವಾಹನಗಳು ಹೆಚ್ಚಾಗಿ ಕಳ್ಳರ ಮೊದಲ ಟಾರ್ಗೆಟ್​​. ಆದರೆ, ಕಾರುಗಳು ಕಳ್ಳತನದಿಂದ ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದನ್ನು ನೆನಪಿನಲ್ಲಿಡುವುದು ಅತ್ಯಗತ್ಯ. ಈ ಹಿಂದೆ ಲಕ್ಷಾಂತರ ಮೌಲ್ಯದ ಕದ್ದ ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಹಲವಾರು ಪ್ರಕರಣಗಳು ಅಸ್ತಿತ್ವದಲ್ಲಿವೆ. ನೀವು ಕಾರನ್ನು ಹೊಂದಿದ್ದರೆ ಅದನ್ನು ಪಾರ್ಕಿಂಗ್ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳಿವೆ. ಮೊದಲನೆಯದಾಗಿ ನಿಮ್ಮ ವಾಹನದಲ್ಲಿ ಜಿಪಿಎಸ್ ಟ್ರ್ಯಾಕರ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನವನ್ನು ಉತ್ತಮ ಬೆಳಕಿನ ಪ್ರದೇಶಗಳಲ್ಲಿ ನಿಲ್ಲಿಸಲು ಪ್ರಯತ್ನಿಸಿ ಮತ್ತು ಗೇರ್ ಲಾಕ್ ಗಳು ಅಥವಾ ಸ್ಟೀರಿಂಗ್ ಲಾಕ್ ಗಳಂತಹ ಹೆಚ್ಚುವರಿ ಸುರಕ್ಷತಾ ಸಾಧನಗಳನ್ನು ಉಪಯೋಗಿಸಿ.

Exit mobile version