Viral News : ಶೋರೂಮ್​ನಿಂದ ಫೋಕ್ಸ್​ವ್ಯಾಗನ್​ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ! Vistara News

ಆಟೋಮೊಬೈಲ್

Viral News : ಶೋರೂಮ್​ನಿಂದ ಫೋಕ್ಸ್​ವ್ಯಾಗನ್​ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ!

ಕಾರಿನಲ್ಲಿ ನಂಬರ್​ಪ್ಲೇಟ್ ಇಲ್ಲದಿರುವುದನ್ನು ಗಮನಿಸಿದ ಪೆಟ್ರೋಲ್ ಬಂಕ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳ ಸಿಕ್ಕಿ ಬೀಳುವಮತೆ ಮಾಡಿದ್ದಾರೆ.

VISTARANEWS.COM


on

Viral news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರ: ವಾಹನ ಕಳ್ಳತನವು ಇಂದಿಗೂ ಭಾರತದಲ್ಲಿ ಒಂದು ಪ್ರಮುಖ ಸಮಸ್ಯೆ. ವಾಹನಗಳು ಅತ್ಯಾಧುನಿಕ ತಾಂತ್ರಿಕತೆಯನ್ನು ಹೊಂದಿರುವ ಹೊರತಾಗಿಯೂ ಕಳ್ಳರು ಈಗ ವಾಹನಗಳನ್ನು ಕದಿಯಲು ಆಧುನಿಕ ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ, ಕೇರಳದಲ್ಲಿ ಕಳ್ಳನೊಬ್ಬ ಡೀಲರ್​ಶಿಪ್​ನಿಂದ ಹೊಚ್ಚ ಹೊಸ ಫೋಕ್ಸ್ ವ್ಯಾಗನ್ ಟೈಗುನ್ ಅನ್ನು ಕದ್ದ ಘಟನೆ ನಡೆದಿದ್ದು, ಪೆಟ್ರೋಲ್​ ಹಾಕಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ಎಸ್​​ಯುವಿ ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು (Viral News) ಈಗಾಗಲೇ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿವೆ.

ಈ ವಿಡಿಯೋವನ್ನು ಮನೋರಮಾ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡಿದೆ. ಈ ವರ್ಷದ ಜುಲೈ 28ರಂದು ಈ ಘಟನೆ ನಡೆದಿದೆ. ಎರ್ನಾಕುಲಂನ ಕುಂದನ್ನೂರ್ ಪ್ರದೇಶದ ಫೋಕ್ಸ್​​​ವ್ಯಾಗನ್ ಡೀಲರ್​​ಶಿಪ್​​ನಿಂದ ಕಾರನ್ನು ಕಳವು ಮಾಡಲಾಗಿದೆ. ಕಾರನ್ನು ಕದ್ದ ನಂತರ, ಕಳ್ಳನು ಮುಂಜಾನೆ 3 ಗಂಟೆ ಸುಮಾರಿಗೆ ಹತ್ತಿರದ ಪೆಟ್ರೋಲ್ ಪಂಪ್​​ಗೆ ಹೋಗಿದ್ದ. ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸಲು ಅವರು ಸಿಬ್ಬಂದಿಯನ್ನು ಕೇಳಿದ್ದ. ಸಿಬ್ಬಂದಿ ಹಣ ಕೇಳಿದಾಗ ವ್ಯವಸ್ಥಾಪಕರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದ.

ಘಟನೆಯ ಸಮಯದಲ್ಲಿ ಪೆಟ್ರೋಲ್ ಬಂಕ್​ನಲ್ಲಿ ಇಬ್ಬರು ಇದ್ದರು. ಅವರು ಎಸ್ ಯುವಿಯನ್ನು ಗಮನಿಸಿದಾಗ ನೋಂದಣಿ ಫಲಕ ಇಲಿಲ್ಲ. ಹೀಗಾಗಿ ಅವರಿಗೆ ಅನುಮಾನ ಮೂಡಿತು. ಪಾವತಿಯನ್ನು ದೃಢೀಕರಿಸಲು ವ್ಯವಸ್ಥಾಪಕರನ್ನು ಕರೆಯಬೇಕಾಗಿದೆ ಎಂದು ಕಳ್ಳನಿಗೆ ತಿಳಿಸಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಬುದ್ಧಿವಂತಿಕೆಯಿಂದ ಸಂಪರ್ಕಿಸಿದ್ದಾರೆ.

ಪೊಲೀಸರು ತಕ್ಷಣ ಪೆಟ್ರೋಲ್ ಬಂಕ್​ಗೆ ಬಂದು ಕಳ್ಳರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೆಟ್ರೋಲ್​ ಹಣವನ್ನೂ ಉಳಿಸಲು ಹೋದ ಕಳ್ಳರು ಕಾರು ಸಮೇತ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತ ಹಣವನ್ನು ಪಾವತಿಸಿದ್ದರೆ ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಅನುಮಾನ ಬರುತ್ತಿರಲಿಲ್ಲ.

ವಾಹನವನ್ನು ಕದ್ದ ವ್ಯಕ್ತಿಯ ನಿಖರವಾದ ವಿವರಗಳು ಲಭ್ಯವಿಲ್ಲ. ಅವನು ಚಾಳಿ ಹಿಡಿದ ಅಪರಾಧಿಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಕಳ್ಳನು ಡೀಲರ್​​ಶಿಪ್​​ನಿಂದ ಹೊಚ್ಚ ಹೊಸ ವಾಹನವನ್ನು ಕದಿಯಲು ಹೇಗೆ ಸಾಧ್ಯವಾಯಿತು ಎಂಬುದೂ ಆಶ್ಚಯರ್ಯ. ಸಾಮಾನ್ಯವಾಗಿ, ಡೀಲರ್​​ಶಿಪ್​​ಗಳು ರಾತ್ರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯದಲ್ಲಿ ಇರಿಸಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅಂತಹ ಭದ್ರತಾ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕಳ್ಳನು ಕಳ್ಳತನವನ್ನು ನಿಖರವಾಗಿ ಯೋಜಿಸಿದ್ದನೇ ಅಥವಾ ಇದು ಕ್ಷಣಿಕ ನಿರ್ಧಾರವೇ ಎಂಬುದು ಸಹ ತಿಳಿದಿಲ್ಲ.

ಇದನ್ನೂ ಓದಿ : Self Harming :ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ

ಮೋಟರ್ ಸೈಕಲ್​​ಗಳು ಅಥವಾ ದ್ವಿಚಕ್ರ ವಾಹನಗಳು ಹೆಚ್ಚಾಗಿ ಕಳ್ಳರ ಮೊದಲ ಟಾರ್ಗೆಟ್​​. ಆದರೆ, ಕಾರುಗಳು ಕಳ್ಳತನದಿಂದ ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದನ್ನು ನೆನಪಿನಲ್ಲಿಡುವುದು ಅತ್ಯಗತ್ಯ. ಈ ಹಿಂದೆ ಲಕ್ಷಾಂತರ ಮೌಲ್ಯದ ಕದ್ದ ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಹಲವಾರು ಪ್ರಕರಣಗಳು ಅಸ್ತಿತ್ವದಲ್ಲಿವೆ. ನೀವು ಕಾರನ್ನು ಹೊಂದಿದ್ದರೆ ಅದನ್ನು ಪಾರ್ಕಿಂಗ್ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳಿವೆ. ಮೊದಲನೆಯದಾಗಿ ನಿಮ್ಮ ವಾಹನದಲ್ಲಿ ಜಿಪಿಎಸ್ ಟ್ರ್ಯಾಕರ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನವನ್ನು ಉತ್ತಮ ಬೆಳಕಿನ ಪ್ರದೇಶಗಳಲ್ಲಿ ನಿಲ್ಲಿಸಲು ಪ್ರಯತ್ನಿಸಿ ಮತ್ತು ಗೇರ್ ಲಾಕ್ ಗಳು ಅಥವಾ ಸ್ಟೀರಿಂಗ್ ಲಾಕ್ ಗಳಂತಹ ಹೆಚ್ಚುವರಿ ಸುರಕ್ಷತಾ ಸಾಧನಗಳನ್ನು ಉಪಯೋಗಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಟೋಮೊಬೈಲ್

EV Charger Station: 7 ಸಾವಿರ ಚಾರ್ಜರ್‌ ಸ್ಥಾಪಿಸಲಿವೆ ಭಾರತ್ ಪೆಟ್ರೋಲಿಯಂ, ಟಿಪಿಇಎಂ

EV Charger Station: 7000 ಚಾರ್ಜರ್‌ಗಳನ್ನು ಸ್ಥಾಪಿಸಲು ಭಾರತ್ ಪೆಟ್ರೋಲಿಯಂ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ನಡುವೆ ಒಪ್ಪಂದ ಏರ್ಪಟ್ಟಿದೆ.

VISTARANEWS.COM


on

BPCL and TPEM will start 7000 EV Charger station across India
Koo

ಬೆಂಗಳೂರು: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEM) ಭಾರತದಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು(EV Charger Stations) ಸ್ಥಾಪಿಸುವ ಸಲುವಾಗಿ ಸಹಯೋಗ ಸಾಧಿಸುವ ಎಂಓಯುಗೆ ಸಹಿ ಹಾಕಿದೆ. ಟಾಟಾ ಇವಿ ಮಾಲೀಕರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳಲ್ಲಿ ಚಾರ್ಜರ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಹಯೋಗವು ಬಿಪಿಸಿಎಲ್‌ನ ವ್ಯಾಪಕವಾದ ಇಂಧನ ಕೇಂದ್ರಗಳ ಜಾಲವನ್ನು ಮತ್ತು ಭಾರತೀಯ ರಸ್ತೆಯಲ್ಲಿ ಓಡಾಡುತ್ತಿರುವ 1.15 ಲಕ್ಷಕ್ಕೂ ಹೆಚ್ಚು ಟಾಟಾ ಇವಿಗಳಿಂದ ದೊರೆಯುವ ಟಿಪಿಎಂನ ಒಳನೋಟಗಳನ್ನು ಬಳಸಿಕೊಳ್ಳುವಲ್ಲಿ ನೆರವಾಗಲಿದೆ. ಹೆಚ್ಚುವರಿಯಾಗಿ, ಬಿಪಿಸಿಎಲ್ ಗ್ರಾಹಕರ ಅನುಭವವನ್ನು ಸುಧಾರಿಸಲು ಚಾರ್ಜರ್ ಬಳಕೆಯ ಮಾಹಿತಿ ಮತ್ತು ಒಳನೋಟಗಳನ್ನು ಸಂಗ್ರಹಿಸಲಿದೆ.

ಟಿಪಿಇಎಂ ಮತ್ತು ಬಿಪಿಸಿಎಲ್ ನಡುವಿನ ಈ ಒಪ್ಪಂದವು ಭಾರತದಾದ್ಯಂತ ಇರುವ ಇವಿ ಮಾಲೀಕರ ಒಟ್ಟಾರೆ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಟಾಟಾ ಇವಿ ಬಳಕೆದಾರರಿಗೆ ಪಾವತಿ ಮಾಡುವುದನ್ನು ಸುಲಭಗೊಳಿಸಲು ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಹೆಚ್ಚಿನ ಜನರನ್ನು ಉತ್ತೇಜಿಸಲು, ಈ ಎರಡು ಕಂಪನಿಗಳು ಕೋ-ಬ್ರಾಂಡೆಡ್ ಆರ್‌ಎಫ್‌ಐಡಿ ಕಾರ್ಡ್ ಮೂಲಕ ಅನುಕೂಲಕರ ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿವೆ.

ಬಿಪಿಸಿಎಲ್ ರಾಷ್ಟ್ರವ್ಯಾಪಿ 21,000 ಇಂಧನ ಕೇಂದ್ರಗಳ ಜಾಲವನ್ನು ಹೊಂದಿದೆ ಮತ್ತು ಕಾರ್ಯತಂತ್ರ, ಹೂಡಿಕೆಗಳು ಮತ್ತು ಪರಿಸರ ಗುರಿಗಳನ್ನು ಸಂಯೋಜಿಸುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಬದ್ಧವಾಗಿದೆ. ಮುಂದಿನ ಐದು ವರ್ಷಗಳಲ್ಲಿ, ಕಂಪನಿಯು ಸುಮಾರು 7,000 ಇಂಧನ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನ ಮಾಲೀಕರ ಆತಂಕಗಳನ್ನು ನಿವಾರಿಸಲು, ಬಿಪಿಸಿಎಲ್ ರಾಷ್ಟ್ರದಾದ್ಯಂತ 90 ಎಲೆಕ್ಟ್ರಿಕ್ ವೆಹಿಕಲ್ ಫಾಸ್ಟ್ ಚಾರ್ಜಿಂಗ್ ಹೈವೇ ಕಾರಿಡಾರ್‌ಗಳನ್ನು ಪ್ರಾರಂಭಿಸಿದೆ. ಪ್ರಮುಖ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಸುಮಾರು ಪ್ರತಿ 100 ಕಿಲೋಮೀಟರ್‌ಗಳಿಗೆ ಈ ವೇಗದ ಚಾರ್ಜಿಂಗ್ ಸ್ಟೇಷನ್ ಒದಗಲಿದೆ. ಈ ಕಾರಿಡಾರ್‌ಗಳು ವಿವಿಧ ಹೆದ್ದಾರಿಗಳಲ್ಲಿ 30,000 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ಲಭ್ಯವಿದ್ದು, ಇವಿಗಳಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತದೆ.

ಬಿಪಿಸಿಎಲ್ ರಿಟೇಲ್‌ನ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡುತ್ತಾ, ‘2040ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ರಾಷ್ಟ್ರದ ದೃಷ್ಟಿಗೆ ಅನುಗುಣವಾಗಿ ಬಿಪಿಸಿಎಲ್ ನಿರಂತರವಾಗಿ ಶ್ರಮಿಸುತ್ತಿದೆ. ಬಿಪಿಸಿಎಲ್ ಸುಸ್ಥಿರ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಆದ್ಯತೆ ನೀಡಲು ಸಮಗ್ರವಾದ ಡಿಕಾರ್ಬೊನೈಸೇಶನ್ ಕಾರ್ಯತಂತ್ರದ ಭಾಗವಾಗಿ ನಮ್ಮ 7000 ಸಾಂಪ್ರದಾಯಿಕ ಚಿಲ್ಲರೆ ಔಟ್‌ಲೆಟ್‌ಗಳನ್ನು ಶಕ್ತಿ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯತ್ತ ಸ್ಥಿರವಾಗಿ ಚಲಿಸುತ್ತಿದೆ. ಬಿಪಿಸಿಎಲ್ ಈಗಾಗಲೇ ಹೆದ್ದಾರಿಗಳಾದ್ಯಂತ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳ ದೊಡ್ಡ ಜಾಲವನ್ನು ಸ್ಥಾಪಿಸಿದೆ. ಇವಿ ಎಂಬುದು ಸಹಯೋಗದ ಕ್ಷೇತ್ರವಾಗಿದ್ದು, ಟಿಪಿಇಎಂ ಜೊತೆಗೆ ಕೈಜೋಡಿಸುವುದರಿಂದ ಬಿಪಿಸಿಎಲ್ ಮತ್ತು ಟಿಪಿಇಎಂನ ಇವಿ ಕೆಲಸಗಳು ಮತ್ತೊಂದು ಹಂತಕ್ಕೆ ಏರಲಿದೆ’ ಎಂದು ಹೇಳಿದ್ದಾರೆ.

ಟಿಪಿಇಎಂ ಭಾರತದ ಇವಿಗಳಲ್ಲಿ ಮಾರುಕಟ್ಟೆ ನಾಯಕರಾಗಿದ್ದು, ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳಲ್ಲಿ ಶೇ.71ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಭಾರತೀಯ ರಸ್ತೆಗಳಲ್ಲಿರುವ 115,000ಕ್ಕೂ ಹೆಚ್ಚು ಟಾಟಾ ಇವಿಗಳಲ್ಲಿ ಶೇ.75ರಷ್ಟು ಪ್ರಾಥಮಿಕ ಬಳಕೆಯ ವಾಹನಗಳಾಗಿದ್ದು, ಟಿಪಿಇಎಂ ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ರಾಂತಿಯಲ್ಲಿ ಮುನ್ನಡೆ ಸಾಧಿಸಿದ್ದಕ್ಕೆ ಪುರಾವೆಯಾಗಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, ‘ಭಾರತದ ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಇವಿ ಅಳವಡಿಕೆಯು ಒಂದು ಪ್ರಮುಖ ಮಾರ್ಗವಾಗಿದೆ. ವ್ಯಾಪಕವಾಗಿ ಹರಡಿರುವ ಮತ್ತು ವಿಶ್ವಾಸಾರ್ಹ ಚಾರ್ಜಿಂಗ್ ಮೂಲಸೌಕರ್ಯವು ಭಾರತದಲ್ಲಿ ಇವಿ ಬಳಕೆಯನ್ನು ಹೆಚ್ಚುಗೊಳಿಸಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ, ಇ-ಮೊಬಿಲಿಟಿಯ ಭಾರತದ ಪ್ರಯಾಣವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಬಿಪಿಸಿಎಲ್ ಜೊತೆಗೆ ನಮ್ಮ ಕಾರ್ಯತಂತ್ರದ ಸಹಯೋಗವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬೆಳೆಯುತ್ತಿರುವ ಇವಿ ಗ್ರಾಹಕರ ನೆಲೆಯನ್ನು ಬಲಗೊಳಿಸುವ ಮೂಲಸೌಕರ್ಯ ಒದಗಿಸುವ ಮೂಲಕ ಈ ಸಹಭಾಗಿತ್ವದ ಪಾಲುದಾರಿಕೆಯು ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುವ ನಮ್ಮ ದೂರದೃಷ್ಟಿಯನ್ನು ಸಾರುತ್ತದೆ. ಟಿಪಿಇಎಂನ ಸಾಟಿಯಿಲ್ಲದ ಇವಿ ಬಳಕೆಯ ಒಳನೋಟಗಳು ಮತ್ತು ಬಿಪಿಸಿಎಲ್ ನ ಅಸಾಧಾರಣ ರಾಷ್ಟ್ರವ್ಯಾಪಿ ನೆಟ್‌ವರ್ಕ್‌ನ ಪ್ರಯೋಜನ ಇದರಿಂದ ದೊರೆಯಲಿದೆ. ಈ ಸಹಯೋಗ ದೇಶದಲ್ಲಿ ಮೂಲಸೌಕರ್ಯಗಳನ್ನು ಚಾರ್ಜಿಂಗ್ ಕ್ಷೇತ್ರವನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ’ ಎನ್ನುತ್ತಾರೆ.

ಪ್ರಪಂಚದಾದ್ಯಂತ ನಡೆದ ಅಧ್ಯಯನಗಳು ಇವಿ ಅಳವಡಿಕೆಯನ್ನು ಚಾಲನೆ ಮಾಡಲು ಸಮಗ್ರ ಮತ್ತು ಅನುಕೂಲಕರವಾದ ಚಾರ್ಜಿಂಗ್ ಮೂಲಸೌಕರ್ಯ ಅವಶ್ಯವಾಗಿದೆ ಮತ್ತು ಚಾರ್ಜಿಂಗ್ ಮೂಲಸೌಕರ್ಯದಲ್ಲಿನ ಬೆಳವಣಿಗೆಯು ಇವಿ ಅಳವಡಿಕೆಯಲ್ಲಿ ಹೆಚ್ಚಿನ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಎರಡು ಪ್ರಮುಖ ಕಂಪನಿಗಳ ನಡುವಿನ ಸಹಯೋಗವು ದೇಶದಲ್ಲಿನ ಚಾರ್ಜಿಂಗ್ ಮೂಲಸೌಕರ್ಯದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಇದರಿಂದಾಗಿ ಭಾರತದಲ್ಲಿ ಮುಖ್ಯವಾಹಿನಿಯಲ್ಲಿ ಇವಿ ಅಳವಡಿಕೆಗೆ ಕೊಡುಗೆ ನೀಡುತ್ತದೆ.

ಈ ಸುದ್ದಿಯನ್ನೂ ಓದಿ: Ev Charging Station | ಬೆಂಗಳೂರಿನಲ್ಲಿ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಆರಂಭಿಸಿದ ಶೆಲ್‌

Continue Reading

ಆಟೋಮೊಬೈಲ್

India Yamaha: 3 ಹೊಸ ಬ್ಲೂಸ್ಕ್ವೇರ್ ಶೋ ರೂಮ್ ತೆರೆದ ಯಮಹಾ

India Yamaha: ಬೆಂಗಳೂರು ಸುತ್ತ ಮುತ್ತ ಮೂರು ಹೊಸ ಶೋ ರೂಮ್‌ಗಳನ್ನು ಯಮಹಾ ಕಂಪನಿ ತೆರೆದಿದೆ.

VISTARANEWS.COM


on

India Yamaha Motor pvt opened new blue Square show rooms
Koo

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (India yamaha motor pvt ltd) ಪ್ರೈ. ಲಿಮಿಟೆಡ್ ಇಂದು ಕರ್ನಾಟಕದಲ್ಲಿ ಮೂರು ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್‌ಗಳ (Blue Square Show room) ಉದ್ಘಾಟನೆಯನ್ನು ಘೋಷಿಸಿದೆ. ಕೆಆರ್ ಪುರಂನಲ್ಲಿ (KR Puram) 8,945 ಚದರ ಅಡಿ ವಿಸ್ತಾರದ ‘ಐ ಆಟೋಮೊಬೈಲ್ಸ್ ಪ್ರೈ. ಲಿಮಿಟೆಡ್’, ಹೊಸಕೋಟೆಯಲ್ಲಿ (Hosakote) 4,071 ಚದರ ಅಡಿ ಜಾಗದ ‘ಗರುಡ ವೀಲ್ಸ್’, ಮಂಡ್ಯದಲ್ಲಿ (Mandya) 5,800 ಚದರ ಅಡಿ ಜಾಗದಲ್ಲಿ ‘ಚಿರಾಗ್ ಮೋಟಾರ್ಸ್’- ಎಂಬ ಮೂರು ಹೊಸ ಎಕ್ಸ್‌ಕ್ಲೂಸಿವ್‌ ಔಟ್‌ಲೆಟ್‌ಗಳನ್ನು ಯಮಹಾ ಬೆಂಗಳೂರಿನ ಸುತ್ತಮುತ್ತ ತೆರೆದಿದೆ. ಹೊಸ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳನ್ನು ಹೆಚ್ಚು ವೈಯಕ್ತೀಕರಿಸಿದ ವಿಧಾನದ ಮೂಲಕ ಸಂಪೂರ್ಣ ಮಾರಾಟ, ಸೇವೆ ಮತ್ತು ನೆರವಿನ ಜೊತೆಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಯಮಹಾ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳನ್ನು ಬ್ರ್ಯಾಂಡ್‌ನ ನಿಜವಾದ ಚೈತನ್ಯವನ್ನು ತಲುಪಿಸುವಂತೆ ಮತ್ತು ಗ್ರಾಹಕರಿಗೆ ಸಂಪೂರ್ಣ ಉತ್ತಮವಾದ ಅನುಭವ ಒದಗಿಸುವಂತೆ ನಿಖರವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲಿ ವೈಯಕ್ತೀಕರಿಸಿದ ವಿಧಾನದ ಮೂಲಕ ಪ್ರತಿಯೊಬ್ಬ ಗ್ರಾಹಕರು ಮೌಲ್ಯಯುತ ಮತ್ತು ತೃಪ್ತಿದಾಯಕ ಸೇವೆ ಪಡೆಯಲಿದ್ದಾರೆ. ಈ ವಿಶೇಷವಾದ ಔಟ್‌ಲೆಟ್‌ಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

ಈ ಪ್ರೀಮಿಯಂ ಔಟ್‌ಲೆಟ್‌ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಆಳವಾಗಿ ತೊಡಗಿಸಿಕೊಂಡಿರುವ ಈ ಜಾಗತಿಕ ಬ್ರ್ಯಾಂಡ್‌ ಜೊತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಈ ಫಿಲಾಸಫಿಯಿಂದ ಮಾರ್ಗದರ್ಶನ ಪಡೆದಿರುವ ಯಮಹಾ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ(ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ, ಸ್ಪೋರ್ಟಿ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ತ್ವರಿತ ಸಂಪರ್ಕವನ್ನು ಸಾಧಿಸಿದೆ.

ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜೊತೆಗೆ, ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಎರಡು ಹೊಸ ಔಟ್‌ಲೆಟ್‌ಗಳನ್ನು ಒಳಗೊಂಡಂತೆ, ಯಮಹಾ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ 20 ವಿಶೇಷ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಮತ್ತು ಪ್ಯಾನ್ ಇಂಡಿಯಾದಲ್ಲಿ 270 ಔಟ್‌ಲೆಟ್‌ಗಳನ್ನು ಹೊಂದಿದೆ.

ಯಮಹಾದ ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್ 155 ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್‌-ಆರ್‌15 ವಿ4 (155ಸಿಸಿ), ವೈಝಡ್‌ಎಫ್‌-ಆರ್15ಎಸ್‌ ವಿ3 (155ಸಿಸಿ), ಎಂಟಿ-15 ವಿ2 (155ಸಿಸಿ), ಬ್ಲೂಕೋರ್ ತಂತ್ರಜ್ಞಾನ ಆಧರಿತ ಮಾದರಿಗಳಾದ ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 4.0 (149ಸಿಸಿ), ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್‌-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್‌-ಎಕ್ಸ್ (149ಸಿಸಿ), ಮತ್ತು ಸ್ಕೂಟರ್‌ಗಳಾದ ಫ್ಯಾಸಿನೋ 125 ಎಫ್‌ಐ ಹೈಬ್ರಿಡ್‌ (125ಸಿಸಿ), ರೇ ಝಡ್‌ಐರ್‌ 125 ಎಫ್‌ಐ ಹೈಬ್ರಿಡ್ (125ಸಿಸಿ), ರೇ ಝಡ್‌ಐರ್‌ ಸ್ಟ್ರೀಟ್ ರ್‍ಯಾಲಿ 125 ಎಫ್‌ಐ ಹೈಬ್ರಿಡ್ (125ಸಿಸಿ) ಸೇರಿದಂತೆ ನವೀಕರಿಸಲ್ಪಟ್ಟ 2023ನೇ ಸಾಲಿನ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುತ್ತವೆ. ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾo ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.

ಈ ಸುದ್ದಿಯನ್ನೂ ಓದಿ: Yamaha Scooter : ಯಮಹಾದ 125 ಸಿಸಿ ಸ್ಕೂಟರ್​ಗಳು ಮಾರುಕಟ್ಟೆಗೆ ಬಿಡುಗಡೆ

Continue Reading

ಆಟೋಮೊಬೈಲ್

Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

Bhavani Revanna: ಭವಾನಿ ರೇವಣ್ಣ ಅವರು ಸುಖಕರ ಪ್ರಯಾಣಕ್ಕೆ ಬಳಸಿದ್ದ ಕಾರಿನ ಕಿಮ್ಮತ್ತು ಏನು ಎಂಬುದ ಮಾಹಿತಿ ಇಲ್ಲಿದೆ.

VISTARANEWS.COM


on

Toyoto Vellfire
Koo

ಹಾಸನ: ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಸೊಸೆ, ಮಾಜಿ ಸಚಿವ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ (Bhavani Revanna) ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾರಿಗೆ ಗುದ್ದಿದ ಬೈಕ್​ ಸವಾರನೊಬ್ಬನಿಗೆ ಅವಾಚ್ಯ ಪದಗಳಿಂದ ಬೈಯುವ ಮೂಲಕ ಅವರು ಜನಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಸುಖಾಂತ್ಯ ಮಾಡಲು ದೊಡ್ಡಗೌಡರ ಫ್ಯಾಮಿಲಿ ಶ್ರಮ ವಹಿಸುತ್ತಿದೆ. ಏತನ್ಮಧ್ಯೆ, ಭವಾನಿ ರೇವಣ್ಣ ಅವರು ಬೈಗುಳದ ನಡುವೆ ನನ್ನ 1.5 ಕೋಟಿ ರೂಪಾಯಿಯ ಕಾರಿಗೆ ಡ್ಯಾಮೇಜ್​ ಆಗಿದೆ. ನ್ಯಾಯ ಮಾತನಾಡೋರು ರಿಪೇರಿ ಮಾಡೋದಕ್ಕೆ 50 ಲಕ್ಷ ರೂಪಾಯಿ ಕೊಡಿ ಎಂದು ಹೇಳಿದ್ದರು. ಹೀಗಾಗಿ ಇದ್ಯಾವ ಕಾರು ಎಂಬ ಕುತೂಹಲ ಮೂಡಿದೆ. ಹೀಗಾಗಿ ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದನ್ನು ನೋಡೋಣ.

ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್​ ಟೊಯೋಟಾ ವೆಲ್​ಫೈರ್ (Toyoto Vellfire)​​. ಇದು ಜಪಾನ್ ಮೂಲಕ ಟೋಯೋಟಾ ಕಂಪನಿಯು ನಿರ್ಮಿಸುವ ಕಾರು. ಜಪಾನ್​ ತಾಂತ್ರಿಕತೆಯೊಂದಿಗೆ ಟೋಯೋಟಾ ಕಂಪನಿಯು ಭಾರತದಲ್ಲಿ ಮಾರುತ್ತಿರುವ ಅತ್ಯಂತ ದುಬಾರಿ ಬೆಲೆಯ ಕಾರು. ಅಂದ ಹಾಗೆ ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಂಪನಿಯ ನಿರ್ಮಾಣ ಘಟಕದಲ್ಲಿಯೇ ಈ ಕಾರನ್ನು ಉತ್ಪಾದಿಸಲಾಗುತ್ತದೆ. ಫೆಬ್ರವರಿ 26, 2020 ರಂದು ಸುಮಾರು 80 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯೊಂದಿಗೆ ಮೊಟ್ಟ ಮೊದಲ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಸುಧಾರಿತ ಆವೃತ್ತಿ (ಫೇಸ್​ಲಿಫ್ಟ್​) ಸೆಪ್ಟೆಂಬರ್ 2023ರಲ್ಲಿ ಬಿಡುಗಡೆ ಮಾಡಲಾಗಿದೆ.

ಸೆಲೆಬ್ರಿಟಿಗಳ ಕಾರು

ಇದು ಎಂಪಿವಿ (ಮಲ್ಟಿ ಪರ್ಪಸ್​ ವೆಹಿಕಲ್​) ಮಾಡೆಲ್​ನ ಕಾರು. ಟೊಯೊಟಾದ ಇನ್ನೋವಾ ಕೂಡ ಎಂಪಿವಿ ವರ್ಗಕ್ಕೆ ಸೇರಿದ ಕಾರು. ಆದರೆ, ಐಷಾರಾಮಿ ಫೀಚರ್​ಗಳು ಹಾಗೂ ವಿಶಾಲವಾದ ಜಾಗ ಹಾಗೂ ಸುಖಮಯ ಪ್ರಯಾಣದ ಕಾರಣಕ್ಕೆ ವೆಲ್​ಫೈರ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಜತೆಗೆ ಬೆಲೆಯೂ ಹೆಚ್ಚು. ಹೀಗಾಗಿ ಇದನ್ನು ಹೆಚ್ಚಾಗಿ ಸೆಲೆಬ್ರಿಟಿಗಳೇ ಖರೀದಿ ಮಾಡುತ್ತಿದ್ದಾರೆ. ಬಾಲಿವುಡ್​ ತಾರೆಯರು ಸೇರಿದಂತೆ ಭಾರತದ ಶ್ರೀಮಂತರು ಈ ಕಾರಿನ ಟಾರ್ಗೆಟ್ ಕಸ್ಟಮರ್ಸ್​​. ರಾಜಕಾರಣಿಗಳ ಕುಟುಂಬದ ಸೊಸೆಯಾಗಿರುವ ಭವಾನಿ ಅವರು ಅರ್ಹವಾಗಿ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಹೊಸ ಟೊಯೊಟಾ ವೆಲ್ಫೈರ್ ವಿನ್ಯಾಸ

ಇತ್ತೀಚೆಗೆ ಬಿಡುಗಡೆಯಾದ ವೆಲ್ ಫೈರ್ ಬಹುತೇಕ ಹಳೆಯ ನೋಟವನ್ನೇ ಉಳಿಸಿಕೊಂಡಿದೆ ಅಂದರೇ ಒಂದು ರೀತಿ ಸಣ್ಣ ವ್ಯಾನ್ ಮಾದರಿಯ ಐಷಾರಾಮಿ ನೋಟ. ಟೊಯೊಟಾ ಮುಂಭಾಗದಲ್ಲಿ ಆರು-ಸ್ಲಾಟ್ ಗ್ರಿಲ್ ಗಳಿದ್ದು. ಮಧ್ಯದಲ್ಲಿ ಟೊಯೋಟಾ ಲೋಗೋವನ್ನು ಅಳವಡಿಸಲಾಗಿದೆ. ಇದು ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳಿಂದ ಹೊಂದಿದೆ. ಹೆಡ್ ಲ್ಯಾಂಪ್ ಗಳ ಕೆಳಭಾಗದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿವೆ. ಯು-ಆಕಾರದ ಕ್ರೋಮ್ ಸ್ಟ್ರಿಪ್ ಎರಡು ಹೆಡ್ ಲ್ಯಾಂಪ್ ಗಳನ್ನು ಸಂಪರ್ಕಿಸುವ ಬಂಪರ್ ನಡುವೆ ಸಾಗಿದೆ.

ವೆಲ್​ಫೈರ್​​ನ ಗ್ಲಾಸ್ ಹೌಸ್ ಕ್ರೋಮ್ ಔಟ್ ಲೈನ್ ಹೊಂದಿದೆ. ಹಿಂಭಾಗದಲ್ಲಿ ವಿ-ಆಕಾರದ ಟೈಲ್ ಲ್ಯಾಂಪ್ ಆವರಣವನ್ನು ಹೊಂದಿದ್ದು, ವಿಸ್ತ್ರತ ಕ್ರೋಮ್ ಟ್ರಿಮ್ ಇದೆ. ವೆಲ್ಫೈರ್ ಬ್ಯಾಡ್ಜಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೊಟಾ ಲೋಗೊವನ್ನು ಹೊಂದಿದೆ.

ಇಂಟೀರಿಯರ್ ವಿಶೇಷತೆ

ಹೊಸ ವೆಲ್ ಫೈರ್​ನಲ್ಲಿ ಕಡಿಮೆ ಬಟನ್ ಇರುವ ಮತ್ತು ಅತ್ಯಂತ ಸರಳವಾಗಿ ಕಾಣುವ ಡ್ಯಾಶ್ ಬೋರ್ಡ್ ನೀಡಲಾಗಿದೆ. ಬಹುತೇಕ ಕೆಲಸವನ್ನು ದೊಡ್ಡ, 14-ಇಂಚಿನ ಟಚ್ ಸ್ಕ್ರೀನ್ ನಲ್ಲಿ ಅಳವಡಿಸಲಾಗಿದೆ. ಹೆಚ್ಚು ಆರಾಮದಾಯಕ ಸೀಟ್ ವಿನ್ಯಾಸವನ್ನು ಇದು ಹೊಂದಿದೆ. ದೊಡ್ಡ ಓವರ್ ಹೆಡ್ ಕನ್ಸೋಲ್, ಹಲವು ಎಸಿ ವೆಂಟ್ ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಪುಲ್-ಡೌನ್ ಸನ್ ಶೇಡ್​ ಈ ಕಾರಿನಲ್ಲಿದೆ.

ಟಾಪ್ ಎಂಡ್​ ವೆಲ್​ಫೈರ್​ ವಿಐಪಿ ಟ್ರಿಮ್​ನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ಪ್ಯಾಕೇಜ್​ ಜತೆ ನೀಡಲಾಗುತ್ತದೆ. ಈ ಕಾರಿನ ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್​ಗಳು ಮಾತ್ರ ಇರುತ್ತವೆ. ಪ್ರತ್ಯೇಕ ಕಂಟ್ರೋಲ್​ ಯೂನಿಟ್​ ಕೂಡ ಇದೆ. ಇದು ಹಿಂಬದಿ ಪ್ರಯಾಣಿಕರಿಗೆ ಮೀಡಿಯಾ ಮತ್ತು ಕ್ಲೈಮೇಟ್​ ಕಂಟ್ರೋಲ್​ ಸೆಟ್ಟಿಂಗ್​​ಗಳನ್ನು ಮತ್ತು ಸನ್​​ಶೇಡ್​ಗಳನ್ನು ನೀಡುತ್ತದೆ.

ಇದನ್ನೂ ಓದಿ : Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ

ಹೆಡ್ಸ್-ಅಪ್ ಡಿಸ್​ಪ್ಲೇ ವೈರ್​ಲೆಸ್​ ಚಾರ್ಜರ್, ಎರಡನೇ ಸಾಲಿನ ಸೀಟುಗಳಿಗೆ ಒಟ್ಟೋಮನ್ (ಹೈ ಟ್ರಿಮ್) ಮತ್ತು ಎಂಟು ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತಿತರ ವೈಶಿಷ್ಟ್ಯಗಳನ್ನು ನೀಡಲಾಗಿದೆ.. ಟೊಯೊಟಾ 60 ಕ್ಕೂ ಹೆಚ್ಚು ಕನೆಕ್ಟೆಡ್​ ವಿಶೇಷತೆಗಳನ್ನು ಹೊಂದಿದೆ.\

ಸಿಕ್ಕಾಪಟ್ಟೆ ಸೇಫ್​ ಕಾರು

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ವೆಲ್​ಫೈರ್​ ಎಂಪಿವಿ ಟೊಯೊಟಾ ಸೇಫ್ಟಿ ಸೆನ್ಸ್ ಅಡಾಸ್​​ ಸಿಸ್ಟಮ್ ಅನ್ನು ಹೊಂದಿದೆ. ಇದು ಅಪಘಾತದ ಮೊದಲಿನ ಸುರಕ್ಷತಾ ವ್ಯವಸ್ಥೆ, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್​ನೊಂದಿಗೆ ಬರುತ್ತದೆ. ಇದಲ್ಲದೆ, ಇದು ಆರು ಏರ್ ಬ್ಯಾಗ್​​ಗಳು, ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಕೂಡ ಪಡೆಯುತ್ತದೆ.

ಎಂಜಿನ್ ಪವರ್​ ಏನಿದೆ?

ವೆಲ್ ಫೈರ್ ಟೊಯೊಟಾದ ಮಾಡ್ಯುಲರ್ ಟಿಎನ್​​ಜಿಎ-ಕೆ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದೆ. ಇದು 4,995 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,950 ಎಂಎಂ ಎತ್ತರ ಮತ್ತು 3,000 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ವೆಲ್ ಫೈರ್ 193 ಬಿಹೆಚ್​​ಪಿ, 240 ಎನ್ಎಂ ಪವರ್​ ಸೃಷ್ಟಿಸುವ 2.5-ಲೀಟರ್​ನ ನಾಲ್ಕು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಹೊಂದಿದೆ. ಇದರಲ್ಲಿ ಇ ಸಿವಿಟಿ ಗೇರ್​ಬಾಕ್ಸ್​ ಇದೆ. ವೆಲ್​ಫೈರ್​ ಪ್ರತಿ ಲೀಟರ್​ ಪೆಟ್ರೋಲ್​ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ.

ಒಂದೂವರೆ ಕೋಟಿ ಬೆಲೆ ಇರೋದು ಹೌದಾ?

ಖಂಡಿತಾ. ಭವಾನಿ ರೇವಣ್ಣ ಅವರು ಕೋಪದ ಭರದಲ್ಲಿ ಕೆಟ್ಟದಾಗಿ ಬೈದಿರಬಹುದು. ಆದರೆ, ರೇಟ್​ ಬಗ್ಗೆ ಸುಳ್ಳು ಹೇಳಿಲ್ಲ. ಈ ಕಾರಿನ ಬೆಲೆ 1. 5 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ಕಾರು ಕೇವಲ 2 ವೇರಿಯೆಂಟ್​ಗಳಲ್ಲಿ ಮಾತ್ರ ಲಭ್ಯವಿದೆ. ಬೇಸ್​ ಮಾಡೆಲ್​ ಹೈ (hi) ಎಂಬ ಹೆಸರಿನೊಂದಿಗೆ ಲಭ್ಯವಿದ್ದರೆ, ಇನ್ನೊಂದು ಮಾಡೆಲ್​ ವಿಐಪಿ ಎಕ್ಸೆಕ್ಯುಟಿವ್​ ಲಾಂಜ್​ (VIP Executive Lounge) ರೂಪದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬೇಸ್​ ಮಾಡೆಲ್​ ಕಾರಿನ ಆನ್​ ರೋಡ್ ಬೆಲೆ 1,48,58,511 ರೂಪಾಯಿ (1.48 ಕೋಟಿ). ಇನ್ನೊಂದು ವೇರಿಯೆಂಟ್​ಗೆ 1,60,94,733 ಕೋಟಿ ರೂಪಾಯಿ. ಅಂದರೆ ಭವಾನಿ ರೇವಣ್ಣ ಅವರು ಹೇಳಿದ್ದಕ್ಕಿಂತ ಇನ್ನೂ 10 ಲಕ್ಷ ರೂಪಾಯಿ ಅಧಿಕ. ಇಲ್ಲಿಗೆ ಮುಗಿದಿಲ್ಲ. 1.5 ಕೋಟಿ ಇದ್ದ ತಕ್ಷಣವೇ ಈ ಕಾರು ತಗೊಂಡು ಬರೋದಿಕ್ಕೆ ಆಗುವುದಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಈ ಕಾರಿನ ವೇಟಿಂಗ್ ಪಿರಿಯೆಡ್​ (ಕಾಯುವಿಕೆಯ ಅವಧಿ) 14 ತಿಂಗಳು. ಅಂದರೆ, ಕಾರು ಬುಕ್ ಮಾಡಿ 1 ವರ್ಷಕ್ಕೂ ಅಧಿಕ ದಿನಗಳು ಕಾಯಬೇಕು.

Continue Reading

ಆಟೋಮೊಬೈಲ್

ಮಾರುತಿ ಸುಜುಕಿ ಕಾರುಗಳನ್ನು ಈಗ್ಲೇ ಖರೀದಿಸಿ; ಜನವರಿಯಿಂದ ಆಗಲಿವೆ ತುಟ್ಟಿ!

Maruti Suzuki: ಮಾರುತಿ ಸುಜುಕಿ ಕಂಪನಿಯು 2024 ಜನವರಿಯಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

VISTARANEWS.COM


on

Maruti suzuki cars price will be hike in January 2024
Koo

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಮುಂದಿನ ವರ್ಷದಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವ (Car Price Hike) ನಿರ್ಧಾರ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ (Inflation) ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿಯು ಸೋಮವಾರ ಷೇರು ಮಾರುಕಟ್ಟೆಗೆ ತಿಳಿಸಿದೆ. ಹಾಗಿದ್ದೂ, ಎಷ್ಟರ ಮಟ್ಟಿಗೆ ದರ ಏರಿಕೆಯಾಗಲಿದೆ ನಿಖರ ಮಾಹಿತಿಯನ್ನು ಕಂಪನಿಯೇನೂ ನೀಡಿಲ್ಲ. ಆದರೆ, ಎಲ್ಲ ಮಾದರಿ ಕಾರುಗಳ ಬೆಲೆ ಏರಿಕೆಯಾಗಲಿದೆ.

ಒಟ್ಟಾರೆ ಹಣದುಬ್ಬರ ಮತ್ತು ಸರಕು ಬೆಲೆಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2024ರಿಂದ ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕುರಿತು ಕಂಪನಿ ಪ್ಲ್ಯಾನ್ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, ಕಂಪನಿಯು ಹೆಚ್ಚುತ್ತಿರುವ ವೆಚ್ಚವನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದೆ.

ಮಾರುತಿ ಸುಜುಕಿ ತನ್ನ ಅತಿ ಹೆಚ್ಚು ಮಾಸಿಕ ಮಾರಾಟವನ್ನು ಅಕ್ಟೋಬರ್‌ನಲ್ಲಿ 1.99 ಲಕ್ಷ ಯುನಿಟ್‌ಗಳಲ್ಲಿ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಬೆಳವಣಿಗೆಯಾಗಿದೆ. ಏತನ್ಮಧ್ಯೆ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.80.3 ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಉತ್ತಮ ಮಾರಾಟ, ಸರಕುಗಳ ಬೆಲೆಗಳನ್ನು ಕಡಿಮೆ ಮತ್ತು ವೆಚ್ಚ ಕಡಿತದ ಪ್ರಯತ್ನಗಳ ಫಲವಾಗಿ ಆದಾಯ ಹೆಚ್ಚಾಗಿದೆ.

ಮುಂದಿನ 2-3 ವರ್ಷಗಳಲ್ಲಿ ಹೆಚ್ಚುತ್ತಿರುವ ಜನರ ಆದಾಯದ ಮಟ್ಟಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ, ಕೈಗೆಟುಕುವ ಸಣ್ಣ ಕಾರುಗಳ ಮತ್ತೆ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಹೆಚ್ಚಿನ ಮಾರಾಟದ ಪ್ರಮಾಣ ಮತ್ತು ಉತ್ಪನ್ನ ಮಿಶ್ರಣದ ಕಾರಣದಿಂದಾಗಿ ಕಂಪನಿಯು ಹಿಂದಿನ ಹಣಕಾಸು ವರ್ಷದ ಅದೇ ತ್ರೈಮಾಸಿಕದಲ್ಲಿ 28,543.50 ಕೋಟಿ ರೂ.ಗಳ ವಿರುದ್ಧ 35,535.1 ಕೋಟಿ ರೂ.ಗಳ ನಿವ್ವಳ ಮಾರಾಟವನ್ನು ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Maruti Suzuki: ಇನ್‌ಕಮ್‌ ಟ್ಯಾಕ್ಸ್‌ ನೋಟೀಸ್‌, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ

Continue Reading
Advertisement
Madhu Bangarappa Beluru Gopalakrishna
ಅಂಕಣ11 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ11 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ26 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ8 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌