2023ರಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ನಡೆದಿವೆ. ಅದರಲ್ಲೂ ಇವಿ ವಾಹನಗಳ ಮಾರುಕಟ್ಟೆಯಲ್ಲಿ ಸಂಚಲನವೇ ಉಂಟಾಗಿದೆ. ಅನೇಕ ಕಂಪನಿಗಳು ಬ್ಯಾಟರಿ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಇಳಿಸಿವೆ. ಎಲ್ಲ ಕಂಪನಿಗಳು ಆಯಾಯ ಪ್ರದೇಶಗಳಲ್ಲಿ ಛಾಪು ಮೂಡಿಸಿದೆ. ಏತನ್ಮಧ್ಯೆ, ಕೆಲವೊಂದು ಬ್ರಾಂಡ್ನ ವಾಹನಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಅಂಥ ಐದು ಕಾರುಗಳ ವಿವರ ಇಲ್ಲಿದೆ.
ಆಟೋಮೋಟಿವ್ ಕ್ಷೇತ್ರವು ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳ (ಇವಿ) ಕಡೆಗೆ ಪರಿಣಾಮವಾರಿಯಾಗಿ ಮಗ್ಗಲು ಬದಲಾಯಿಸುತ್ತಿದೆ. ಪರಿಸರ ಸ್ನೇಹಿ ಗುಣವನ್ನು ಹೊಂದಿರುವ ಈ ವಾಹನಗಳು ಕೆಲವು ನವೀನ ಮತ್ತು ಪ್ರಭಾವಶಾಲಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಕಾರಣವಾಗಿದೆ. ಟೆಸ್ಲಾ ದಿಂದ ಹಿಡಿದು ರೋಲ್ಸ್ ರಾಯ್ಸ್ ಸ್ಪೆಕ್ಟರ್ ವರೆಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳನ್ನು ನೀಡಿದೆ.
ಕಿಯಾ ಇವಿ9
2023ರಲ್ಲಿ ಭಾರತಕ್ಕಾಗಿ ಅನಾವರಣಗೊಳಿಸಿದ ತನ್ನ ಎಲೆಕ್ಟ್ರಿಕ್ ಎಸ್ ಯುವಿಯನ್ನು ಕಿಯಾ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಬಿಡುಗಡೆ ಮಾಡಿದೆ. ಇದು ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕರ ಕಂಪನಿಯಿಂದ ಬಂದಿರುವ ಮೂರನೇ ಇವಿ ಇದು ತನ್ನದೇ ಬ್ರಾಂಡ್ ನ ವಿಶಿಷ್ಟ ಸ್ಟೈಲಿಂಗ್ ಅನ್ನು ಹೊಂದಿದೆ. ಇಂಟೀರಿಯರ್ನಲ್ಲಿ ಇದು ಡ್ಯುಯಲ್-ಡಿಸ್ಪ್ಲೇ ಕಾಕ್ಪೀಟ್ ಅನ್ನು ಪಡೆಯುತ್ತದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಇದು 99.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಆಲ್-ವೀಲ್ ಡ್ರೈವ್ ಮತ್ತು ರಿಯರ್-ವೀಲ್ ಡ್ರೈವ್ ಎರಡೂ ಆಯ್ಕೆಯದೆ. ಆಲ್ ವೀಲ್ ಡ್ರೈವ್ ನೊಂದಿಗೆ ಕ್ಲೈಮ್ ರೇಂಜ್ 563 ಕಿ.ಮೀ. ಇದ್ದರೆ, ಎಡಬ್ಲ್ಯುಡಿ 512 ಕಿ.ಮೀ ರೇಂಜ್ ಹೊಂದಿದೆ.
ಹ್ಯುಂಡೈ ಐಯಾನಿಕ್ 5
ಹ್ಯುಂಡೈ ಕಂಪನಿಯು ತನ್ನ ಐಯಾನಿಕ್ 5 ಎಸ್ ಯುವಿಯನ್ನು 2023ರ ಜನವರಿಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಎಸ್ ಯುವಿ ಆಧುನಿಕ ಮತ್ತು ರೆಟ್ರೊ ಲುಕ್ ನೊಂದಿಗೆ ರಸ್ತೆಗೆ ಇಳಿಸಿದೆ. ಪ್ಯಾರಾಮೆಟ್ರಿಕ್ ಪಿಕ್ಸೆಲ್ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಇದು ಹೊಂದಿದೆ. ಎಲೆಕ್ಟ್ರಿಕ್ ಎಸ್ ಯುವಿ 72.6 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ಲಭ್ಯವಿದೆ. ಇದು ಸಿಂಗಲ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಎಂಜಿನ್ 217 ಬಿ ಹೆಚ್ ಪಿ ಪವರ್ ಮತ್ತು 350 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 631 ಕಿ.ಮೀ ಪ್ರಯಾಣ ಮಾಡಬಹುದು.
ಟೆಸ್ಲಾ ಸೈಬರ್ ಟ್ರಕ್
ಟೆಸ್ಲಾ ಸೈಬರ್ ಟ್ರಕ್ 2019 ರಲ್ಲಿ ಅನಾವರಣಗೊಂಡಾಗಿನಿಂದ ಬಹುನಿರೀಕ್ಷಿತ ವಾಹನಗಳಲ್ಲಿ ಒಂದಾಗಿದೆ. ಆದಾಗ್ಯೂ, ವಾಹನದ 2023 ರಲ್ಲಿ ಬಿಡುಗಡೆ ಮಾಡಲಾಯಿತು. ಎಲೆಕ್ಟ್ರಿಕ್ ಪಿಕಪ್ ಟ್ರಕ್ ಸ್ಟೀಲ್ ಬಾಡಿಯೊಂದಿಗೆ ವಿಶಿಷ್ಟ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಬುಲೆಟ್ ಪ್ರೂಫ್ ಎಂದು ಹೇಳಲಾಗುತ್ತದೆ. ಇದು ಅಂದಾಜು 320 ಮೈಲಿ (514 ಕಿ.ಮೀ) ರೇಂಜ್ ನೀಡುತ್ತದೆ. 2.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಹೆಚ್ಚಿಸುತ್ತದೆ. ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 209 ಕಿ.ಮೀ. ಇದು ಭಾರತದ ಮಾರುಕಟ್ಟೆಗೆ ಪರಿಚಿತವಲ್ಲ.
ವೋಲ್ವೋ ಇಎಕ್ಸ್30
ವೋಲ್ವೋ ಇಎಕ್ಸ್ 30 2023ರಲ್ಲಿ ಬಿಡುಗಡೆಗೊಂದು ಅತ್ಯಂತ ಪರಿಸರ ಸ್ನೇಹಿ ವಾಹನಗಳಲ್ಲಿ ಒಂದು. ಈ ಕಾರಿನಲ್ಲಿ ಯುವಿ 25 ಪ್ರತಿಶತ ಮರುಬಳಕೆಯ ಅಲ್ಯೂಮಿನಿಯಂ ಮತ್ತು 75 ಪ್ರತಿಶತ ಮರುಬಳಕೆಯ ಉಕ್ಕನ್ನು ಬಳಸಲಾಗಿದೆ. ಫ್ಲೋರ್ ಮ್ಯಾಟ್ ಗಳಂತಹ ಕಾರಿನ ಕೆಲವು ಒಳಾಂಗಣ ಭಾಗಗಳನ್ನು ಮರುಬಳಕೆ ಮಾಡಿದ ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತದೆ. ಟಾಪ್-ಸ್ಪೆಕ್ ಟ್ವಿನ್-ಮೋಟಾರ್ ಆವೃತ್ತಿಯಲ್ಲಿ, ಇವಿ 587 ಕಿ.ಮೀ ರೇಂಜ್ ನೀಡುತ್ತದೆ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ಸೆಟಪ್ ಬಳಸಿ 26.5 ನಿಮಿಷಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದು. ಸಾಮಾನ್ಯ ಚಾರ್ಜರ್ ನಲ್ಲಿ ಇದು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ : Year Ender 2023: ಈ ವರ್ಷ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಸೌತ್ ನಿರ್ದೇಶಕರಿವರು
ರೋಲ್ಸ್ ರಾಯ್ಸ್ ಸ್ಪೆಕ್ಟರ್
ರೋಲ್ಸ್ ರಾಯ್ಸ್ ಸ್ಪೆಕ್ಟರ್ ಐಷಾರಾಮಿ ಕಾರು ತಯಾರಕ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನ. ಪ್ರಕಾಶಮಾನವಾದ ಗ್ರಿಲ್ ಗಳೊಂದಿಗೆ ಬ್ರಾಂಡ್ ನ ಸಿಗ್ನೇಚರ್ ಸ್ಟೈಲಿಂಗ್ ನೊಂದಿಗೆ ಬರುತ್ತದೆ. ಅಂತೆಯೇ, ಒಳಭಾಗದಲ್ಲಿ, ಇದು ರೋಲ್ಸ್ ರಾಯ್ಸ್ ಬ್ಯಾಡ್ಜ್ ಹೊಂದಿದೆ. ಈ ಕಾರು 577 ಬಿ ಹೆಚ್ ಪಿ ಪವರ್ ಮತ್ತು 900 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲದರ ಜೊತೆಗೆ, ಐಷಾರಾಮಿ ಇವಿ 418 ಕಿ.ಮೀ ರೇಂಜ್ ನೀಡುತ್ತದೆ.