Site icon Vistara News

Tyre Care : ಎಸ್‌ಯುವಿ ಕಾರುಗಳಿಗೆ ಯಾವ ರೀತಿಯ ಟೈರ್‌ಗಳು ಸೂಕ್ತ? ಇಲ್ಲಿವೆ ಕೆಲವು ಟಿಪ್ಸ್‌

Car Tyre

#image_title

ಬೆಂಗಳೂರು: ನಡೆಯಲು, ಟ್ರೆಕ್ಕಿಂಗ್‌ ಮಾಡಲು ಉತ್ತಮ ಶೂ ಅಥವಾ ಚಪ್ಪಲಿಗಳನ್ನು ಆಯ್ಕೆ ಮಾಡಿದಂತೆಯೇ ನೀವು ಪ್ರಯಾಣ ಮಾಡುವ ಕಾರುಗಳಿಗೆ ಉತ್ತಮ ಟೈರ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಹೊಂದಿಕೆಯಾಗದ ಟೈರ್‌ಗಳನ್ನು ಹಾಕಿಕೊಂಡರೆ ಪ್ರಯಾಣ ಸುಖಕರವಾಗಿರುವುದಿಲ್ಲ. ಕಾರು ಮತ್ತು ರಸ್ತೆಯ ನಡುವಿನ ಏಕೈಕ ಸಂಪರ್ಕವಾಗಿರುವುದರಿಂದ ಅದರ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗತ್ತದೆ. ಯಾಕೆಂದರೆ ಸುರಕ್ಷತೆ ವಿಚಾರ ಬಂದಾಗ ಟೈರ್‌ಗಳ ಆಯ್ಕೆಯೂ ಪ್ರಮುಖ ಸ್ಥಾನ ಪಡೆಯುತ್ತದೆ. ಈ ಲೇಖನದಲ್ಲಿ ನೀವು ಎಸ್‌ಯುವಿ ಕಾರುಗಳ ಮಾಲೀಕರಾಗಿದ್ದರೆ ಯಾವ ರೀತಿಯ ಟೈರ್‌ಗಳು ಸೂಕ್ತ ಎಂಬ ಮಾಹಿತಿ ಕೊಡಲಾಗಿದೆ.

ಇಂದು ಹೆಚ್ಚಿನ ಕಾರುಗಳು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುತ್ತವೆ. ಇನ್ನು ಕೆಲವು ಕಾರುಗಳು ಇನ್ನೂ ಟ್ಯೂಬ್ ಟೈರ್‌ಗಳನ್ನೇ ಹೊಂದಿವೆ. ಹೆಚ್ಚಿನ ಕಂಪನಿಗಳು ಈಗ ಟ್ಯೂಬ್‌ಲೆಸ್ ಟೈರ್‌ಗಳನ್ನೇ ಬಳಸುತ್ತಿವೆ. ಏಕೆಂದರೆ ಆ ಟೈರ್‌ಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತ, ಇದರಲ್ಲಿ ಗಾಳಿ ಒತ್ತಡವೂ ಬೇಗ ಕಡಿಮೆಯಾಗುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತವೆ. ಪ್ರಯಾಣದ ನಡುವೆ ಸುಲಭವಾಗಿ ಪಂಕ್ಚರ್ ಆಗುವುದಿಲ್ಲ. ಆದ್ದರಿಂದ, ನೀವು ಹೊಸ ಟೈರ್‌ಗಳಿಗಾಗಿ ಹುಡುಕಾಡುತ್ತಿದ್ದರೆ ಟ್ಯೂಬ್ ಲೆಸ್ ಟೈರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಅದಕ್ಕಿಂತ ಮೊದಲು ನಿಮ್ಮ ಕಾರಿನ ರಿಮ್‌ ಟ್ಯೂಬ್‌ಲೆಸ್‌ಗೆ ಹೊಂದಿಕೆಯಾಗುವುದೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯುವ ಬೃಹತ್‌ ಬೈಕ್‌ ರೇಸ್‌ನ ಟಿಕೆಟ್‌ ಮಾರಾಟ ಆರಂಭ; ದರ ಸಿಕ್ಕಾಪಟ್ಟೆ ದುಬಾರಿ!

ವಾತಾವರಣ

ಭಾರತದಲ್ಲಿ ಎಲ್ಲ ಕಡೆಯೂ ಒಂದೇ ರೀತಿಯ ಹವಾಮಾನ ಇರುವುದಿಲ್ಲ. ಪ್ರದೇಶದಿಂ ಪ್ರದೇಶಗಳಿಗೆ ವ್ಯತ್ಯಾಸವಾಗುತ್ತವೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ಎಲ್ಲ ಹವಾಗುಣಗಳಿಗೆ ಸೂಕ್ತವಾಗುವ ಟೈರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ, ಕೆಲವೊಂದು ಪ್ರದೇಶದಲ್ಲಿ ವಿಪರೀತ ಚಳಿ ಇರುತ್ತದೆ. ಇಂಥ ಕಡೆ ಚಳಿಗಾಲಕ್ಕೆ ಸೂಕ್ತವಾಗುವ ಟೈರ್‌ ಬಳಸಿ ಈ ಟೈರ್‌ಗಳಲ್ಲಿ ನೈಸರ್ಗಿಕ ರಬ್ಬರ್ ಹೆಚ್ಚಿರುತ್ತದೆ. ಇದು ಕಡಿಮೆ ತಾಪಮಾನದಲ್ಲಿ ಟೈರ್‌ ಮೃದುವಾಗಿರಲು ನೆರವು ನೀಡುತ್ತದೆ. ಹಿಮ ಪ್ರದೇಶಗಳಿಗೆ ಪ್ರಯಾಣ ಹೋಗುವುದಾದರೆ ಹೆಚ್ಚು ಥ್ರೆಡ್‌ ಹೊಂದಿರುವ ಟೈರ್‌ಗಳನ್ನು ಅಳವಡಿಸಿಕೊಳ್ಳಬೇಕಾಗುದೆ .

ಬಾಳಿಕೆ ಬಗ್ಗೆ ಗಮನವಿರಲಿ

ಟೈರ್ ತಯಾರಕರು ಉತ್ತಮ ಕಾರ್ಯಕ್ಷಮತೆ, ದಕ್ಷತೆ ಮತ್ತು ಬಾಳಿಕೆಗಾಗಿ ನೈಸರ್ಗಿಕ ಮತ್ತು ಸಂಶ್ಲೇಷಿತ ರಬ್ಬರ್, ಸಿಲಿಕಾ ಮತ್ತು ಕಾರ್ಬನ್ ಬ್ಲ್ಯಾಕ್ ಉತ್ಪಾದನೆ ವೇಳೆ ಬಳಸುತ್ತಾರೆ. ಈ ವಸ್ತುಗಳ ಕಠಿಣ ಮಿಶ್ರಣವು ದೀರ್ಘಾಯುಷ್ಯ ನೀಡುತ್ತದೆ. ಆದರೆ ಇದು ರಸ್ತೆ ಮೇಲೆ ಕಡಿಮೆ ಹಿಡಿತ ಹೊಂದಿರುತ್ತದೆ. ಬ್ರೇಕ್‌ ಹಾಕುವಾಗ ಜಾರು ಸಾಧ್ಯತೆ ಹೆಚಚು. ಹೀಗಾಗಿ ಟೈರ್ ಖರೀದಿಸುವಾಗ, ವಿವರಣೆಯನ್ನು ಓದಿಕೊಳ್ಳಬೇಕು.

ಥ್ರೆಡ್‌ಗಳು ಹೇಗಿರಬೇಕು?

ಮಣ್ಣಿನ ಭೂಪ್ರದೇಶ: ಹಾರ್ಡ್‌ ಕೋರ್‌ ಆಫ್ ರೋಡ್‌ಗಳಿಗಾಗಿ ನಿರ್ದಿಷ್ಟವಾದ ಈ ಟೈರ್‌ಗಳನ್ನು ಖರೀದಿಸಿ. ಅವರು ಚಂಕಿ ಥ್ರೆಡ್‌ನೊಂದಿಗೆ ಬರುತ್ತವೆ. ಮಣ್ಣು ಮತ್ತು ಕೆಸರಿಗೆ ಹೆಚ್ಚು ಸೂಕ್ತವಾಗಿರುತ್ತವೆ.

ಆಲ್‌ ಟೆರೈನ್‌: ಆಫ್-ರೋಡ್‌ಗೆ ಅಷ್ಟೊಂದು ಸೂಕ್ತವಲ್ಲ. ಆದರೆ, ಆದರೆ ಶುಷ್ಕ, ತೇವ ಮತ್ತು ಲಘು ಹಿಮದ ಪರಿಸ್ಥಿತಿಗಳು ಸೇರಿದಮತೆ ಸಾಮಾನ್ಯ ರಸ್ತೆಗಳಲ್ಲಿ ಸುರಕ್ಷಿತವಾಗಿ ಬಳಸಬಹುದು.

ಚಳಿಗಾಲ: ಹೆಚ್ಚಿನ ನೈಸರ್ಗಿಕ ರಬ್ಬರ್ ಇರುವ ಈ ಟೈರ್‌ಗಳು ಕಡಿಮೆ ತಾಪಮಾನದಲ್ಲಿ ಟೈರ್‌ ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಉತ್ತಮ ಟ್ರ್ಯಾಕ್ಷನ್‌ ಇರುತ್ತದೆ ಹಾಗೂ ಸಣ್ಣ ಕಂದಕಗಳು ಹಿಮ ಮತ್ತು ಕೆಸರಿಗೆ ಸೂಕ್ತವಾಗಿರುತ್ತದೆ.

ಏಕಮುಖ: ನೀರು ನಿಲ್ಲದಂತೆ ನೋಡಿಕೊಳ್ಳುತ್ತದೆ ಹಾಗೂ ರಸ್ತೆ ಮೇಲೇ ಪ್ರಯಾಣ ಮಾಡುವ ವೇಳೆ ಉಂಟಾಗುವ ಶಬ್ದವನ್ನು ಕಡಿಮೆ ಮಾಡುತ್ತದೆ.

ಸಾಂಪ್ರದಾಯಿಕ: ಆರ್ದ್ರ ಹವಾಮಾನ ಸೇರಿದಂತೆ ಎಲ್ಲ ಪರಿಸ್ಥಿತಿಗೆ ಸೂಕ್ತ. ಬ್ರೇಕಿಂಗ್ ದಕ್ಷತೆಯ ಹೆಚ್ಚಿರುತ್ತದೆ ಹಾಗೂ ವಾಹನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ.

ಅಸಿಮೆಟ್ರಿಕ್ ಟ್ರಿಡ್: ಕಾರ್ನರಿಂಗ್‌ ವೇಳೆ ರಸ್ತೆ ಮೇಲೆ ಹೆಚ್ಚು ಹಿಡಿತ ಸಾಧಿಸುವ ಟೈರ್‌ಗಳು ಇವು. ಇದು ಹೈಫರ್ಪಾಮೆನ್ಸ್‌ ಕಾರುಗಳಲ್ಲಿ ಬಳಕೆಯಾಗುತ್ತವೆ. ರೇಸ್‌ ಕಾರುಗಳಿಗೆ ಇದು ಸೂಕ್ತ.

ಲೋ ರೋಲಿಂಗ್‌ ರೆಸಿಸ್ಟೆನ್ಸ್‌: ಸುಲಭವಾಗಿ ರೋಲಿಂಗ್‌ ಆಗುವಂಥ ಟೈರ್‌ಗಳಿವು. ಇದು ಹೆಚ್ಚು ಇಂಧನ ದಕ್ಷತೆ ಕೊಡುತ್ತವೆ. ಸಾಮಾನ್ಯವಾಗಿ ಇವಿ ಕಾರುಗಳಲ್ಲಿ ಬಳಸಲಾಗುತ್ತದೆ.

ಹೈವೆಗಳಿಗೆ: ದೂರದ ಪ್ರಯಾಣ ಮಾಡುವ ವಾಹನಗಳಿಗೆ ಸೂಕ್ತ. ಕಡಿಮೆ ಸವೆತ ಆಗುವ ಕಾರಣ ಬಾಳಿಕೆಯೂ ಹೆಚ್ಚು.

Exit mobile version