ನವ ದೆಹಲಿ: ಮಕ್ಕಳು ಕಾರುಗಳ ಒಳಗೆ ಲಾಕ್ ಆಗುವುದು ಹೊಸ ಘಟನೆಯಲ್ಲ. ಕಾರು ತಯಾರಕರು ಸೆಂಟ್ರಲ್ ಲಾಕಿಂಗ್ ಅನ್ನು ಪರಿಚಯಿಸಿದಾಗಿನಿಂದ, ಭಾರತ ಸೇರಿದಂತೆ ವಿಶ್ವದಾದ್ಯಂತ ನಾನಾ ಕಡೆ ಈ ರೀತಿಯ ಹಲವಾರು ಘಟನೆಗಳು ವರದಿಯಾಗಿವೆ. ಪಂಜಾಬ್ನ ಲೂಧಿಯಾನದಲ್ಲೂ ಇದೇ ರೀತಿಯ ಪ್ರಸಂಗವೊಂದು ನಡೆದಿದ್ದು. ಫೋಕ್ಸ್ ವ್ಯಾಗನ್ ಟಿ-ರಾಕ್ ಕಾರಿನೊಳಗೆ ಲಾಕ್ ಆಗಿದ್ದ ಮಗುವನ್ನು ಅಪ್ಪ ಗಾಜು ಒಡೆದು ರಕ್ಷಿಸಿದ್ದಾರೆ. ಕಾರಿನ ಮಾಲೀಕ ಸುಂದರ್ದೀಪ್ ಈ ಭಯಾನಕ ಘಟನೆಯನ್ನು (Viral News) ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಇದು ಪೋಷಕರಿಗೆ ಎಚ್ಚರಿಕೆಯ ವಿಷಯ ಎಂದು ಬರೆದುಕೊಂಡಿದ್ದಾರೆ.
ಸುಂದರ್ದೀಪ್ ಅವರು ತಮ್ಮ ಹೆಂಡತಿ ಮತ್ತು ಮಗುವಿಗಾಗಿ ಕಾರಿನಿಂದ ಇಳಿದು ಕಾಯುತ್ತಿದ್ದ ಇನ್ನೊಂದು ಮೂರು ವರ್ಷದ ಮಗು ಅವರ ಕೈಯಿಂದ ಕೀಲಿಯನ್ನು ಕಸಿದುಕೊಂಡು ಕಾರಿನೊಳಗೆ ನುಗ್ಗಿತ್ತು. ಅಲ್ಲದೆ ಒಳಗೆ ಹೋಗಿ ಬೇಗನೆ ಬಾಗಿಲುಗಳನ್ನು ಮುಚ್ಚಿ ಕಾರನ್ನು ಲಾಕ್ ಮಾಡಿಕೊಂಡಿದೆ. ಎಲ್ಲಾ ಕಿಟಕಿಗಳನ್ನು ಮುಚ್ಚಿ ಕಾರು ಲಾಕ್ ಆಗಿದ್ದನ್ನು ಸುಂದರ್ದೀಪ್ ಗಮನಿಸಿದ್ದಾರೆ. ಮಗುವಿನ ಬಳಿ ಹೋಗಿ ಕಾರಿನ ಲಾಕ್ ತೆಗೆಯುವಂತೆ ಹೇಳಿದ್ದಾರೆ. ಆದರೆ, ಗಾಜು ಮುಚ್ಚಿದ್ದ ಕಾರಣ ಮಗುವಿಗೆ ಸುಂದರ್ದೀಪ್ ಹೇಳುವುದು ಕೇಳಿಸಲಿಲ್ಲ. ಎಷ್ಟೇ ಹೇಳಿದರೂ ಅನ್ಲಾಕ್ ಬಟನ್ ಒತ್ತಲು ಅದಕ್ಕೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಮಗು ಗೊಂದಲಕ್ಕೆ ಬಿದ್ದು ಅಳಲು ಆರಂಭಿಸಿತು. ಪದೇಪದೇ ಲಾಕ್ ಬಟನ್ ಅನ್ನೇ ಒತ್ತಿತು. ಹೀಗಾಗಿ ಭದ್ರತಾ ಅಲಾರಂ ಅನ್ನು ಬಾರಿಸಲು ಶುರವಾಯಿತು. ಇದು ಮಗುವಿನ ಭೀತಿ ಭೀತಿಯನ್ನು ಮತ್ತಷ್ಟು ಹೆಚ್ಚಿಸಿತು.
ಮಗು ಅಳಲು ಪ್ರಾರಂಭಿಸುತ್ತಿದ್ದಂತೆ, ಸ್ಥಳೀಯರು ಸಹಾಯ ಮಾಡಲು ಜಮಾಯಿಸಿದರು. ಸುಂದರ್ದೀಪ್ ಹತ್ತಿರದ ಪಂಕ್ಚರ್ ಅಂಗಡಿಯನ್ನು ಗಮನಿಸಿದರು. ಸೀದಾ ಅಲ್ಲಿಗೆ ಹೋಗಿ ಸ್ಲೆಡ್ಜ್ ಹ್ಯಾಮರ್ ಬಳಸಿ ಹಿಂಭಾಗದ ಕ್ವಾರ್ಟರ್ ಗ್ಲಾಸ್ ಅನ್ನು ಮುರಿಯುವಲ್ಲಿ ಯಶಸ್ವಿಯಾದರು. ಕಿಲೀ ಕೈ ಪಡೆದುಕೊಂಡು ಮಗುವನ್ನು ರಕ್ಷಿಸಿದರು.
ಇದನ್ನೂ ಓದಿ : Electric Scooter with Highest Range : ಒಂದು ಚಾರ್ಜ್ಗೆ ಗರಿಷ್ಠ ಕಿಲೋಮೀಟರ್ ಓಡುವ ಇವಿ ಸ್ಕೂಟರ್ಗಳಿವು
ಸುಂದರ್ದೀಪ್ ತಮ್ಮ ಕಾರಿನಲ್ಲಿ ಗ್ಲಾಸ್ ಬ್ರೇಕರ್ ಕೂಡ ಇಟ್ಟುಕೊಂಡಿದ್ದರು. ಆದರೆ, ಅದು ಗ್ಲೋವ್ ಬಾಕ್ಸ್ ಒಳಗೆ ಇತ್ತು. ಆಧುನಿಕ ದಿನದ ಕಾರು ಗ್ಲಾಸ್ಗಳು ಲ್ಯಾಮಿನೇಟೆಡ್ ಆಗಿರುತ್ತವೆ. ಹೀಗಾಗಿ ಮುರಿಯುವುದು ತುಂಬಾ ಕಷ್ಟ. ಇವು ತೀಕ್ಷ್ಣವಾದ ಅಂಚುಗಳನ್ನು ಸೃಷ್ಟಿಸದ ಸುರಕ್ಷತಾ ಗಾಜುಗಳಾಗಿವೆ.
ಅಪಾಯಕಾರಿ ಘಟನೆ
ಭಾರತದಲ್ಲಿ ಈ ರೀತಿಯ ಘಟನೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಲಾಕ್ ಮಾಡಿದ ವಾಹನದೊಳಗೆ ಮಗು ಅಥವಾ ಸಾಕುಪ್ರಾಣಿಯನ್ನು ಬಿಡುವುದು, ಎಸಿ ಚಾಲನೆಯಿಲ್ಲ ವೇಳೆ ಅತ್ಯಂತ ಅಪಾಯಕಾರಿ. ಎಸಿ ಆಫ್ ಮಾಡಿ ಕಿಟಕಿಗಳನ್ನು ಮುಚ್ಚಿಕೊಂಡು ವಾಹನವನ್ನು ಬಿಸಿಲಲ್ಲಿ ನಿಲ್ಲಿಸಿದಾಗ, ಹಸಿರುಮನೆ ಪರಿಣಾಮದಿಂದಾಗಿ ಒಳಗಿನ ಉಷ್ಣತೆ ಏರಬಹುದು. ಬಿಸಿಲಲ್ಲಿ ವಾಹನ ಪಾರ್ಕ್ ಮಾಡಿದ್ದರೆ ಒಳಗಿನ ತಾಪಮಾನವು ಕೇವಲ 10 ನಿಮಿಷಗಳಲ್ಲಿ 20 ಡಿಗ್ರಿಗಳಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಒಂದು ಗಂಟೆಯ ನಂತರ, ತಾಪಮಾನವು 40 ಡಿಗ್ರಿಗಳಷ್ಟು ಹೆಚ್ಚಾಗಬಹುದು, ಇದು ಕ್ಯಾಬಿನ್ ಒಳಗೆ ಮಿತಿಮೀರಿದ ಬಿಸಿ ಮತ್ತು ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತದೆ.
ಮಕ್ಕಳ ದೇಹದ ಉಷ್ಣತೆಯೂ ಬೇಗ
ವಯಸ್ಕರಿಗೆ ಹೋಲಿಸಿದರೆ ಮಗುವಿನ ದೇಹದ ತಾಪಮಾನವು ವೇಗವಾಗಿ ಬದಲಾಗುತ್ತದೆ. ಮಕ್ಕಳು ತಮ್ಮ ದೇಹದಲ್ಲಿ ತಾಪಮಾನವನ್ನು ತ್ವರಿತವಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಇರವುದಿಲ್ಲ. ಇದರಿಂದಾಗಿ ಅವರು ಹೀಟ್ ಸ್ಟ್ರೋಕ್ ಗೆ ಹೆಚ್ಚು ಗುರಿಯಾಗುತ್ತಾರೆ. ಹೀಗಾಗಿ ಅಂಬೆಗಾಲಿಡುವ ಮಕ್ಕಳು ತೀವ್ರ ಶಾಖದ ಆಘಾತದಿಂದ ಬಳಲುತ್ತಾರೆ ಮತ್ತು ಪ್ರಾಣ ಕಳೆದುಕೊಳ್ಳುತ್ತಾರೆ. ಬಿಸಿ ವಾಹನಗಳಲ್ಲಿ ಬಿಟ್ಟು ಹೋದ ಸಾಕುಪ್ರಾಣಿಗಳಿಗೂ ಇದು ಅನ್ವಯಿಸುತ್ತದೆ. ಏಕೆಂದರೆ ಅವುಗಳು ಸಹ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಸಾಯುತ್ತವೆ. .
ಮಕ್ಕಳೂ ಆಕಸ್ಮಿಕವಾಗಿ ಹ್ಯಾಂಡ್ ಬ್ರೇಕ್ ಅನ್ನು ನಿಷ್ಕ್ರಿಯಗೊಳಿಸಬಹುದಾದ ಅಪಾಯೂ ಇರುತ್ತದೆ. ಇದರಿಂದಾಗಿ ವಾಹನವು ತಾನಾಗಿಯೇ ಚಲಿಸಿ ಅಪಘಾತಕ್ಕೆ ಒಳಗಾಗಬಹುದು. ಕೆಲವು ಆಧುನಿಕ ಕಾರುಗಳು ಇ-ಪಾರ್ಕಿಂಗ್ ಬ್ರೇಕ್ ಗಳೊಂದಿಗೆ ಬರುತ್ತವೆ. ಇದನ್ನು ನಿಷ್ಕ್ರಿಯಗೊಳಿಸುವುದು ಮಕ್ಕಳಿಗೆ ಸುಲಭ. ಹೀಗಾಗಿ ಯಾವುದೇ ಪರಿಸ್ಥಿತಿಯಲ್ಲಿ, ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಕಾರಿನೊಳಗೆ ಗಮನಿಸದೆ ಬಿಡಬಾರದು.